ರೇಸಿಂಗ್ ಸಲುವಾಗಿ ಸಿನಿಮಾಗಳಿಗೆ ಗುಡ್ ಬೈ ಹೇಳಲಿದ್ದಾರೆಯೇ ಥಲಾ ಅಜಿತ್ ಕುಮಾರ್?
ರೇಸಿಂಗ್ ಮೇಲೆ ಗಮನ ಕೊಡೋಕೆ ಅಜಿತ್ ಕುಮಾರ್ ಸಿನಿಮಾ ಇಂಡಸ್ಟ್ರಿ ಬಿಡ್ತಾರಾ? 15 ವರ್ಷಗಳ ನಂತರ ಮೋಟಾರ್‌ಸ್ಪೋರ್ಟ್‌ಗೆ ವಾಪಸ್ ಆಗಿರೋ ತಮಿಳು ಸ್ಟಾರ್, ತಮ್ಮ ರೇಸಿಂಗ್ ವೃತ್ತಿಜೀವನದ ಮೇಲೆ ಕೇಂದ್ರೀಕರಿಸಲು ವರ್ಷಕ್ಕೆ ಒಂದು ಚಿತ್ರವನ್ನ ಮಾಡೋಕೆ ನಿರ್ಧಾರ ಮಾಡಿದ್ದಾರೆ.
ಅಜಿತ್ ಕುಮಾರ್ 15 ವರ್ಷಗಳ ವಿರಾಮದ ನಂತರ ರೇಸಿಂಗ್‌ಗೆ ಮರಳುತ್ತಿದ್ದಾರೆ. ನಟನ ಆಪ್ತ ಮೂಲಗಳ ಪ್ರಕಾರ, ವಲಿಮೈ ಹೀರೋ ವರ್ಷಕ್ಕೆ ಕೇವಲ ಒಂದು ಪ್ರಮುಖ ಸಿನಿಮಾ ನಿರ್ಮಾಣಕ್ಕೆ ಬದ್ಧವಾಗುವ ಮೂಲಕ ತಮ್ಮ ಮೋಟಾರ್‌ಸ್ಪೋರ್ಟ್ಸ್ ಉತ್ಸಾಹವನ್ನು ತಮ್ಮ ನಟನಾ ವೃತ್ತಿಜೀವನದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ.
ಮೂಲಗಳ ಪ್ರಕಾರ, ಅಜಿತ್ ವರ್ಷಕ್ಕೆ ಎಷ್ಟು ಸಿನಿಮಾ ಮಾಡುತ್ತೇನೆ ಎನ್ನುವುದಕ್ಕಿಂತ ಎಷ್ಟು ಉತ್ತಮ ಚಿತ್ರ ಮಾಡುತ್ತೇನೆ ಎನ್ನುವುದರ ಬಗ್ಗೆ ಗಮನ ಕೇಂದ್ರೀಕರಿಸಲು ನಿರ್ಧಾರ ಮಾಡಿದ್ದಾರೆ. ಅವರು ನಟನೆಯಿಂದ ನಿವೃತ್ತಿ ಆಗುತ್ತಿಲ್ಲ. ಆದರೆ, ಸಿನಿಮಾಗಳ ಆಯ್ಕೆಯಲ್ಲಿ ಬಹಳ ಚ್ಯೂಸಿ ಆಗುತ್ತಿದ್ದಾರೆ. ಹೆಚ್ಚೆಂದರೆ ವರ್ಷಕ್ಕೆ ಒಂದು ಸಿನಿಮಾ ಮಾತ್ರವೇ ಮಾಡಬಹುದು. ಹೆಚ್ಚಿನ ಸಮಯವನ್ನು ಅವರು ರೇಸಿಂಗ್‌ನತ್ತ ಕಳೆಯಲು ನಿರ್ಧಾರ ಮಾಡಿದ್ದಾರೆ.
ಅಜಿತ್ ಅವರ ಈ ನಿರ್ಧಾರವು ಅವರ ರೇಸಿಂಗ್ ತಂಡದ ಲಾಂಚ್‌ನ ನಂತರ ಬಂದಿದೆ, ಇದರೊಂದಿಗೆ ಅವರು ಪ್ರಮುಖ ರೇಸಿಂಗ್ ಈವೆಂಟ್‌ಗಳಲ್ಲಿ ಸ್ಪರ್ಧಿಸಲು ಉದ್ದೇಶಿಸಿದ್ದಾರೆ. ಅವರು ಪ್ರಸಿದ್ಧ 24 ಅವರ್ಸ್ ಆಫ್ ದುಬೈ 2025 ಮತ್ತು ಪೋರ್ಷೆ 992 GT3 ಕಪ್ ವರ್ಗದಲ್ಲಿ ಯುರೋಪಿಯನ್ 24-ಅವರ್ ಸರಣಿ ಚಾಂಪಿಯನ್‌ಶಿಪ್‌ನಲ್ಲಿ ರೇಸ್ ಮಾಡಲಿದ್ದಾರೆ.
ನಟ ರೇಸಿಂಗ್ ಸರ್ಕ್ಯೂಟ್‌ಗೆ ಮರಳುತ್ತಿರುವುದರಿಂದ ಇದು ಅವರಿಗೆ ಒಂದು ಮಹತ್ವದ ಮೈಲಿಗಲ್ಲು, ಅವರು ನಟನೆ ಮತ್ತು ರೇಸಿಂಗ್ ಎರಡರಲ್ಲೂ ತಮ್ಮ ಆಕಾಂಕ್ಷೆಗಳನ್ನು ಮುಂದುವರಿಸುವುದು ಸಾಧ್ಯವಾಗಲಿದೆ.
ಅಲ್ಟಿಮೇಟ್ ಸ್ಟಾರ್ ಅಜಿತ್
ವೃತ್ತಿಪರ ರೇಸಿಂಗ್ ವಿಚಾರವಾಗಿ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ, ಅವರು ತಮ್ಮ ಅಭಿಮಾನಿಗಳ ವಿಚಾರದಲ್ಲಿ ಅತ್ಯುತ್ತಮ ಸಿನಿಮಾ ನೀಡಲು ಬದ್ಧರಾಗಿದ್ದಾರೆ. ಅಜಿತ್ 2025 ರಲ್ಲಿ ಬಿಡುಗಡೆಯಾಗಲಿರುವ ಎರಡು ಪ್ರಮುಖ ಸಿನಿಮಾಗಳ ಯೋಜನೆಗಳನ್ನು ಹೊಂದಿದ್ದಾರೆ. ಮೊದಲನೆಯದು ವಿದಾಮುಯಾರ್ಚಿ, ಇದನ್ನು ಮಗಿಜ್ ತಿರುಮೇನಿ ನಿರ್ದೇಶಿಸಿದ್ದಾರೆ ಮತ್ತು ಲೈಕಾ ಪ್ರೊಡಕ್ಷನ್ಸ್ ಅಡಿಯಲ್ಲಿ ಸುಬಾಸ್ಕರನ್ ಅಲ್ಲಿರಾಜಾ ನಿರ್ಮಿಸಿದ್ದಾರೆ.
ಈ ಚಿತ್ರದ ತಾರಾಗಣದಲ್ಲಿ ತ್ರಿಷಾ ಕೃಷ್ಣನ್, ಅರ್ಜುನ್ ಸರ್ಜಾ, ಆರವ್ ಮತ್ತು ರೆಜಿನಾ ಕ್ಯಾಸಂದ್ರಾ ಸೇರಿದ್ದಾರೆ. ಅವರು ಗುಡ್ ಬ್ಯಾಡ್ ಅಗ್ಲಿ ಚಿತ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ, ಇದನ್ನು ಅಧಿಕ್ ರವಿಚಂದ್ರನ್ ನಿರ್ದೇಶಿಸಿದ್ದಾರೆ ಮತ್ತು ಮೈತ್ರಿ ಮೂವೀ ಮೇಕರ್ಸ್ ನಿರ್ಮಿಸಿದ್ದಾರೆ.
ಚೆನ್ನಾಗಿ ಯೋಚನೆ ಮಾಡಿದ ಬಳಿಕ ರೇಸಿಂಗ್‌ಗೆ ಇಳಿಯಲು ಅಜಿತ್ ನಿರ್ಧಾರ ಮಾಡಿದ್ದಾರೆ. ರೇಸ್‌ಕೋರ್ಸ್ ಹಾಗೂ ಸಿಲ್ವರ್ ಸ್ಕ್ರೀನ್ ಎರಡರಲ್ಲೂ ಮಿಂಚುವ ವಿಶ್ವಾಸದಲ್ಲಿ ಅವರಿದ್ದಾರೆ. ತಾವು ಹಲವು ಕೌಶಲ್ಯಗಳ ವ್ಯಕ್ತಿ ಎಂದು ಮತ್ತೊಮ್ಮೆ ತೋರಿಸಿದ್ದಾರೆ.