MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • News
  • ಗ್ಲಾಸ್‌ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ ವಡಿವೇಲು, ಕಾಮಿಡಿ ಕಿಂಗ್‌ ಆಗಿದ್ದು ಹೇಗೆ?

ಗ್ಲಾಸ್‌ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ ವಡಿವೇಲು, ಕಾಮಿಡಿ ಕಿಂಗ್‌ ಆಗಿದ್ದು ಹೇಗೆ?

1960 ರಲ್ಲಿ ಜನಿಸಿದ ವಡಿವೇಲು, ಬಡತನದ ಹಿನ್ನೆಲೆಯಿಂದ ಬಂದು, ತಮ್ಮ ಹಾಸ್ಯ ಪ್ರತಿಭೆಯಿಂದ ಚಿತ್ರರಂಗದಲ್ಲಿ ಸ್ಥಾನ ಗಳಿಸಿದರು. ರಾಜ್ ಕಿರಣ್ ಅವರ ಸಹಾಯದಿಂದ ಅವಕಾಶ ಪಡೆದ ವಡಿವೇಲು, 'ವಿನ್ನರ್' ಸಿನಿಮಾದ 'ಕೈಪುಲ್ಲ' ಪಾತ್ರದ ಮೂಲಕ ಅಪಾರ ಜನಪ್ರಿಯತೆ ಗಳಿಸಿದರು.

3 Min read
Santosh Naik
Published : Sep 13 2024, 02:40 PM IST| Updated : Sep 13 2024, 02:42 PM IST
Share this Photo Gallery
  • FB
  • TW
  • Linkdin
  • Whatsapp
15
Vijay Vadivelu

Vijay Vadivelu

1960ರ ಅಕ್ಟೋಬರ್ 10 ರಂದು ಮಧುರೈನಲ್ಲಿ ಜನಿಸಿದ್ದ ವಡಿವೇಲು ಅವರ ತಂದೆ ನಟರಾಜನ್ ಗ್ಲಾಸ್‌ ಕಟರ್‌ ಆಗಿದ್ದರು. ಇವರ ಪ್ರತಿಭೆಯಿಂದ ಪ್ರಭಾವಿತರಾದ ಬ್ರಿಟಿಷರು ಕೊಡೈಕೆನಾಲ್‌ನಲ್ಲಿರುವ ತಮ್ಮ ಬಂಗಲೆಯಲ್ಲಿ ಕೆಲಸ ನೀಡಿದ್ದರು. ವಡಿವೇಲು ಅವರಿಗೆ 7ಮಂದಿ ಸಹೋದರರು. ಇದ್ದವರಿ ಪೈಕಿ ವಡಿವೇಲು ಅವರೇ ಸ್ವಲ್ಪ ಕಪ್ಪು. ಇತರ ಆರು ಜನ ಬೆಳ್ಳಗಿನ ಮೈಬಣ್ಣ ಹೊಂದಿದ್ದರು. ಶಾಲೆಯಲ್ಲಿದ್ದಾಗ ಅವರನ್ನು ಬ್ಲ್ಯಾಕ್‌ ಬಾಯ್‌ ಎಂದೇ ಕೀಟಲೆ ಮಾಡಲಾಗ್ತಿತ್ತು. ಇದರಿಂದಾಗಿ ಪ್ರಾಥಮಿಕ ಶಾಲೆಯ ನಂತರ ಶಿಕ್ಷಣವನ್ನು ನಿಲ್ಲಿಸಿದರು. ಮತ್ತೊಂದು ಶಾಲೆಯ ಬಳಿ ಹೋಗದ ವಡಿವೇಲು ಹಳ್ಳಿಯ ನಾಟಕಗಳಲ್ಲಿ ನಟಿಸೋಕೆ ಆರಂಭಿಸಿದರು. ಒಮ್ಮೆ ದೀಪಾವಳಿಯ ಸಮಯದಲ್ಲಿ ಅವರ ತಂದೆ ಎದೆನೋವಿನಿಂದ ಮೂರ್ಛೆ ಹೋದಾಗ ಅವರು ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ, ಶಸ್ತ್ರಚಿಕಿತ್ಸೆಗೆ 1 ಲಕ್ಷ ರೂಪಾಯಿ ವೆಚ್ಚವಾಗುತ್ತದೆ ಎಂದು ವೈದ್ಯರು ಆಗ ತಿಳಿಸಿದ್ದರು.

25
Vadivelu

Vadivelu

ತಂದೆಯನ್ನು ಉಳಿಸಲು ಹಣವನ್ನು ಹೇಗೆ ವ್ಯವಸ್ಥೆ ಮಾಡಬಹುದು ಎಂದು ಯೋಚಿಸುತ್ತಾ ಕುಳಿತಿದ್ದ ವಡಿವೇಲುಗೆ, ತಮ್ಮ ಕುಟುಂಬವನ್ನು ಪೋಷಣೆ ಮಾಡುವ ಸಲುವಾಗಿ ಗ್ಲಾಸ್‌ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದರು. ಗ್ಲಾಸ್‌ಗಳಿಗೆ ಫ್ರೇಮ್‌ ಮಾಡುವ ಕೆಲಸ ಮಾಡ್ತಿದ್ದರು. ಆ ಸಮಯದಲ್ಲಿ, ಮದುವೆಗಾಗಿ ಮಧುರೈಗೆ ಬಂದಿದ್ದ ರಾಜ್‌ಕಿರಣ್ ಅವರನ್ನು ಭೇಟಿಯಾಗಿ ಸಿನಿಮಾದಲ್ಲಿ ಅವಕಾಶ ಕೇಳಿದ್ದರು. ಅವರ ಎದುರು ಕೆಲವು ಹಾಸ್ಯ ದೃಶ್ಯಗಳನ್ನೂ ಕೂಡ ಪ್ರದರ್ಶನ ಮಾಡಿದ್ದ ವಡಿವೇಲುಗೆ ಚೆನ್ನೈಗೆ ಬಂದು ನೋಡುವಂತೆ ಹೇಳಿದ್ದಾರೆ ಎನ್ನಲಾಗಿದೆ. ಚೆನ್ನೈಗೆ ಪ್ರಯಾಣಿಸಲು ಹಣವಿಲ್ಲದೆ, ವಡಿವೇಲು ತನ್ನ ಮನೆಯಿಂದ ಎರಡು ಮಡಕೆಗಳನ್ನು 100 ರೂಪಾಯಿಗೆ ಅಡವಿಟ್ಟು ಆ ಹಣದೊಂದಿಗೆ ಚೆನ್ನೈಗೆ ಹೊರಟಿದ್ದರು.

35
vadivelu

vadivelu

ಚೆನ್ನೈಗೆ ಲಾರಿಯಲ್ಲಿ ಪ್ರಯಾಣ ಮಾಡಲು ನಿರ್ಧಾರ ಮಾಡಿದ್ದ ವಡಿವೇಲುಗೆ, ಚಾಲಕನ ಪಕ್ಕದಲ್ಲಿ ಕುಳಿತುಕೊಳ್ಳಲು 25 ರೂಪಾಯಿ, ಮೇಲೆ ಕ್ಯಾಬಿನ್‌ನಲ್ಲಿ ಮಲಗಲು 15 ರೂಪಾಯಿ ವೆಚ್ಚವಾಗುತ್ತದೆ ಎಂದು ಎಂದು ಹೇಳಿದ್ದರು. 10 ರೂಪಾಯಿ ಉಳಿಸುವ ದೃಷ್ಟಿಯಿಂದ ಕ್ಯಾಬಿನ್‌ನಲ್ಲಿ ಮಲಗಲು ಆಯ್ಕೆ ಮಾಡಿಕೊಂಡರು. ರಾತ್ರಿಯ ಚಳಿ ತೀವ್ರಗೊಂಡಂತೆ, ಅವರು ಕೆಲ ಸಮಯ ಮಲಗಿದರು. ಎಚ್ಚರವಾದಾಗ ಅವರ ಜೇಬಿನಲ್ಲಿದ್ದ ಎಲ್ಲಾ ಹಣವು ಹಾರಿಹೋಗಿತ್ತು. ಊಟದ ವಿರಾಮಕ್ಕಾಗಿ ಲಾರಿಯನ್ನು ನಿಲ್ಲಿಸಿದಾಗ, ವಡಿವೇಲು ಕೆಳಗೆ ಇಳಿದು ತನ್ನ ಬಳಿ ಒಂದು ರೂಪಾಯಿಯೂ ಇಲ್ಲ ಅನ್ನೋದನ್ನ ಅರಿತುಕೊಂಡರು. ಈ ವೇಳೆ ಡ್ರೈವರ್‌ಗೆ ಈ ವಿಚಾರ ತಿಳಿಸಿದಾಗ, ರೆಸ್ಟೋರೆಂಟ್‌ಗೆ ತೆರಳಿ ವಡಿವೇಲುಗೆ ಪರೋಟಾಗಳನ್ನು ಖರೀದಿಸಿದರು. ಅವರು ತಾಂಬರಂ ತಲುಪಿದಾಗ ಖರ್ಚಿಗೆ 5 ರೂಪಾಯಿಗಳನ್ನು ಸಹ ನೀಡಿದರು.
 

45

ಅಲ್ಲಿಂದ ಎವಿಎಂ ಸ್ಟುಡಿಯೋಗೆ ಹೋದ ವಡಿವೇಲು ಅಲ್ಲಿನ ವಾಚ್‌ಮನ್‌ ಬಳಿ ಒಳಗೆ ಬಿಡಲು ಕೇಳಿದರು. ಈ ವೇಳೆ ವಾಚ್‌ಮನ್‌ ಕೂಡ ವಡಿವೇಲುವಿನ ಟ್ಯಾಲೆಂಟ್‌ ಏನು ಎಂದು ಕೇಳಿದಾಗ ಅವರ ಎದುರೂ ವಡಿವೇಲು ಹಾಸ್ಯ ನಟನೆ ಮಾಡಿದರು. ನಟನೆಯಿಂದ ಖುಷಿಯಾದ ವಾಚ್‌ಮನ್‌ ಒಳಗೆ ಬಿಟ್ಟಿದ್ದರು. ತಮ್ಮ ಅತ್ಯುತ್ತಮ ಪ್ರಯತ್ನದ ಹೊರತಾಗಿಯೂ ವಡಿವೇಲುಗೆ ಸಿನಿಮಾದಲ್ಲಿ ಅವಕಾಶ ಸಿಗಲಿಲ್ಲ. ನಟ ರಾಜ್‌ಕಿರಣ್ ಅವರ ಕಚೇರಿಯಲ್ಲಿ ಸಹಾಯಕರಾಗಿ ಕೆಲಸ ಮಾಡೋಕೆ ಆರಂಭಿಸಿದರು. ಚಹಾ ತರುವುದು, ಕಚೇರಿಯನ್ನು ಸ್ವಚ್ಛಗೊಳಿಸುವುದು - ಅವರಿಗೆ ನಿಯೋಜಿಸಲಾದ ಎಲ್ಲಾ ಕೆಲಸಗಳನ್ನು ಅವರು ಶ್ರದ್ಧೆಯಿಂದ ನಿರ್ವಹಿಸಿದರು. 'ಎನ್ ರಾಸವಿನ್ ಮನಸಿಲೆ' ಚಿತ್ರದ 'ಪೋಡ ಪೋಡ ಪುನ್ನಾಕು' ಹಾಡಿನ ಚಿತ್ರೀಕರಣದ ಸಮಯದಲ್ಲಿ, ಒಂದು ಪಾತ್ರವನ್ನು ನಿರ್ವಹಿಸಬೇಕಿದ್ದ ನಟ ಕಾಣಿಸಿಕೊಂಡಿಲ್ಲ. ರಾಜ್‌ಕಿರಣ್ ವಡಿವೇಲು ಅವರಿಗೆ  ಈ ಸ್ಥಾನ ತುಂಬಲು ಕೇಳಿಕೊಂಡರು. ಚಿತ್ರ ಬಿಡುಗಡೆಯಾದ ನಂತರ, ವಡಿವೇಲು ಅವರ ಸಾಮರ್ಥ್ಯವನ್ನು ಗುರುತಿಸಿದ ನಿರ್ದೇಶಕ ಆರ್.ವಿ.ಉದಯಕುಮಾರ್ ಅವರಿಗೆ ತಮ್ಮ 'ಚಿನ್ನ ಗೌಂಡರ್' ಚಿತ್ರದಲ್ಲಿ ಅವಕಾಶ ನೀಡಿದರು.

55

ಆ ಚಿತ್ರದಲ್ಲಿ, ಅವರು ವಿಜಯಕಾಂತ್ ಅವರಿಗೆ ಛತ್ರಿ ಹಿಡಿದ ವ್ಯಕ್ತಿಯ ಪಾತ್ರವನ್ನು ನಿರ್ವಹಿಸಿದ್ದರು. ವಿಜಯಕಾಂತ್ ವಡಿವೇಲು ಅವರನ್ನು ಕಮಲ್, ಪ್ರಭು ಮತ್ತು ಕಾರ್ತಿಕ್‌ರಂಥ ನಟರಿಗೆ ಪರಿಚಯಿಸಿದರು. 'ತೇವರ್ ಮಗನ್' ಚಿತ್ರದಲ್ಲಿ ವಡಿವೇಲು ಅವರ ಅಭಿನಯವನ್ನು ಮೆಚ್ಚಿದ ಶಿವಾಜಿ ಗಣೇಶನ್, ಕಮಲ್ ಅವರಿಗೆ ವಡಿವೇಲು ಕೇವಲ ಹಾಸ್ಯನಟನಲ್ಲ, ಒಬ್ಬ ಉತ್ತಮ ಪಾತ್ರಧಾರಿ ಎಂದು ಹೇಳಿದರು. ತಮ್ಮ ಹಾಸ್ಯ ಪಾತ್ರಗಳೊಂದಿಗೆ ಕ್ರಮೇಣ ಯಶಸ್ಸಿನ ಏಣಿಯನ್ನು ಏರಿದರು. ವಡಿವೇಲು ಅವರ ವೃತ್ತಿಜೀವನದಲ್ಲಿ ಅತ್ಯಂತ ಮರೆಯಲಾಗದ ಚಿತ್ರ 'ವಿನ್ನರ್'. ಈ ಚಿತ್ರದಲ್ಲಿ, ವಡಿವೇಲು ಕೈಪುಲ್ಲ ಪಾತ್ರವನ್ನು ನಿರ್ವಹಿಸಿದ್ದಾರೆ, 'ವೇಣಂ ವಾಲಿಕುತು ಅಳುಧುರ್ವೆನ್' ಎಂಬ ಸಾಲು ಸಖತ್‌ ವೈರಲ್‌ ಆಗಿತ್ತು. ಈ ನಿರ್ದಿಷ್ಟ ದೃಶ್ಯವು 16 ಟೇಕ್‌ಗಳನ್ನು ತೆಗೆದುಕೊಂಡಿತು. ಏಕೆಂದರೆ ದೃಶ್ಯವನ್ನು ಹಂಚಿಕೊಂಡ ನಟ ರಿಯಾಜ್ ಖಾನ್ ವಡಿವೇಲು ಅವರ ಸಂಭಾಷಣೆಯನ್ನು ಕೇಳಿ ನಗುವನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ ಎಂದಿದ್ದರು.
 

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ತಮಿಳು
ಕಾಲಿವುಡ್
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved