- Home
- Entertainment
- Movie Reviews
- ಮಲಯಾಳಂ ಕ್ರೈಂ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ; ಗುಮಾಸ್ತನ ಹಿಂದೆ ಬಿದ್ದ ಪೊಲೀಸರು!
ಮಲಯಾಳಂ ಕ್ರೈಂ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ; ಗುಮಾಸ್ತನ ಹಿಂದೆ ಬಿದ್ದ ಪೊಲೀಸರು!
2024ರಲ್ಲಿ ಬಿಡುಗಡೆಯಾದ ಮಲಯಾಳಂ ಕ್ರೈಂ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವಾಗಿದೆ. ಕಾನೂನಿನ ಜ್ಞಾನ ಬಳಸಿ ಪೊಲೀಸರಿಂದ ತಪ್ಪಿಸಿಕೊಳ್ಳುವ ಗುಮಾಸ್ತನ ರೋಚಕ ಕಥೆ ಇದಾಗಿದೆ. ಅಮೆಜಾನ್ ಪ್ರೈಮ್ ವಿಡಿಯೋ ಒಟಿಟಿಯಲ್ಲಿ ಈ ಚಿತ್ರ ವೀಕ್ಷಣೆಗೆ ಲಭ್ಯವಿದೆ.

ಕ್ಷಣ ಕ್ಷಣಕ್ಕೂ ರೋಚಕತೆ ಹೊಂದಿರೋ ಸಿನಿಮಾ
ಮಲಯಾಳಂ ಭಾಷೆಯ ಸಿನಿಮಾಗಳು ಪ್ರತ್ಯೇಕ ವೀಕ್ಷಕರ ಬಳಗವನ್ನು ಹೊಂದಿದ್ದು, OTTಯಲ್ಲಿ ಹೆಚ್ಚು ವೀಕ್ಷಣೆಗೆ ಒಳಪಡುತ್ತವೆ. ಇಂದು ನಾವು ನಿಮಗೆ ಹೇಳುತ್ತಿರುವ ಕ್ರೈಂ ಆಂಡ್ ಥ್ರಿಲ್ಲರ್ ಸಿನಿಮಾ ಕ್ಷಣ ಕ್ಷಣಕ್ಕೂ ರೋಚಕತೆಯನ್ನು ಹೊಂದಿದೆ. ಕಾನೂನಿನ ನೆರಳಿನಲ್ಲಿಯೇ ಇದ್ದವನು ಹೇಗೆ ಪೊಲೀಸರಿಂದ ತಪ್ಪಿಸಿಕೊಳ್ಳುತ್ತಾನೆ ಅನ್ನೋದು ಸಿನಿಮಾದ ಒನ್ ಲೈನ್ ಕಥೆ.
ಪ್ರೈಮ್ ವಿಡಿಯೋ ಒಟಿಟಿ
2024ರಲ್ಲಿ ಬಿಡುಗಡೆಯಾದ ಈ ಸಿನಿಮಾವನ್ನು ಪ್ರೈಮ್ ವಿಡಿಯೋ ಒಟಿಟಿ ಪ್ಲಾಟ್ಫಾರಂನಲ್ಲಿ ವೀಕ್ಷಣೆ ಮಾಡಬಹುದು. ಬಹುತಾರಾಗಳವುಳ್ಳ ಈ ಸಿನಿಮಾಗೆ ಅಮಲ್ ಕೆ.ಜೋಬಿ ಆಕ್ಷನ್ ಕಟ್ ಹೇಳಿದ್ರೆ ಮುಜಾಫಿರ್ ಅಬ್ದುಲ್ಲಾ ಬಂಡವಾಳ ಹಾಕಿದ್ದು, ರಿಯಾಜ್ ಇಸ್ಮತ್ ಕಥೆ ಬರೆದಿದ್ದಾರೆ.
ಯಾವುದು ಈ ಸಿನಿಮಾ?
Gumasthan-ಗುಮಾಸ್ತನ್ (2024) ಮಲಯಾಳಂ ಭಾಷೆಯ ಕ್ರೈಂ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ಬಿಬಿನ್ ಜಾರ್ಜ್, ದಿಲೀಶ್ ಪೋತನ್, ಜೈಸ್ ಜೋಸ್, ಅಜೀಸ್ ನೆಡುಮಂಗಡ್ ಸೇರಿದಂತೆ ಹಲವು ಕಲಾವಿದರು ಈ ಗುಮಾಸ್ತನ್ ಸಿನಿಮಾದಲ್ಲಿ ನಟಿಸಿದ್ದಾರೆ. 27 ಸೆಪ್ಟೆಂಬರ್ 2024ರಂದು ಬಿಡುಗಡೆಯಾದ ಈ ಸಿನಿಮಾ ಆರಂಭದಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಆದ್ರೆ OTTಯಲ್ಲಿ ಬಿಡುಗಡೆ ಬಳಿಕ ಪಾಸಿಟಿವ್ ರೆಸ್ಪಾನ್ಸ್ ಪಡೆದಿದೆ.
ಚಿತ್ರದ ಕಥೆ ಏನು?
ವಕೀಲರ ಕಚೇರಿಯಲ್ಲಿ ಗುಮಾಸ್ತನಾಗಿ ಕೆಲಸ ಮಾಡುವ ವ್ಯಕ್ತಿ, ಪತ್ನಿಯನ್ನು ಕೊ*ಲೆ ಮಾಡುತ್ತಾನೆ. ಕಾನೂನಿನ ನೆರಳಲ್ಲಿಯೇ ಕೆಲಸ ಮಾಡುತ್ತಿರುವ ಕಾರಣ, ಈ ಗುಮಾಸ್ತ ನ್ಯಾಯಾಲಯದ ಬಗ್ಗೆ ತುಂಬಾನೇ ಚೆನ್ನಾಗಿಯೇ ತಿಳಿದುಕೊಂಡಿರುತ್ತಾನೆ. ಪೊಲೀಸ್ ತನಿಖೆ ಆರಂಭವಾಗ್ತಿದ್ದಂತೆ ಕಥೆ ಟ್ವಿಸ್ಟ್ ಪಡೆದುಕೊಳ್ಳಲು ಆರಂಭಿಸುತ್ತದೆ.
ಗುಮಾಸ್ತನ ಚಾಣಾಕ್ಷತನ
ಕೊ*ಲೆ ವಿಷಯ ಪೊಲೀಸರು ಮತ್ತು ಸಾರ್ವಜನಿಕರಿಗೆ ತಿಳಿದಾಗ, ಆತನನ್ನು ಬಂಧಿಸಲು ಮುಂದಾಗುತ್ತಾರೆ. ಆದರೆ, ಯಾವುದೇ ಸುಳಿವು ಅಥವಾ ಸಾಕ್ಷ್ಯ ಸಿಗದಂತೆ ಆತ ಎಚ್ಚರಿಕೆ ವಹಿಸಿರುತ್ತಾನೆ. ಗುಮಾಸ್ತನ ಚಾಣಾಕ್ಷತನವನ್ನು ಮೀರಿ ಸತ್ಯವನ್ನು ಹೊರತೆಗೆಯುವುದು ಪೊಲೀಸರಿಗೆ ದೊಡ್ಡ ಸವಾಲಾಗುತ್ತದೆ. ಆತ ಮತ್ತು ಆತನ ಮನೆಯ ಸುತ್ತ ನಡೆಯುವ ನಿಗೂಢ ಘಟನೆಗಳೇ ಚಿತ್ರದ ಪ್ರಮುಖ ಆಕರ್ಷಣೆಯಾಗಿವೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.















