ITR ರಿಫಂಡ್ ಅಂದ್ರೆ ಬೋನಸ್ ಅಲ್ಲ, ಮೊಬೈಲ್ ಖರೀದಿ, ಪಾರ್ಟಿಗೆ ಖರ್ಚು ಮಾಡೋ ಬದಲು ಹೀಗೆ ಬಳಸಿ!
ಈ ವರ್ಷದ Income Tax Return ನೀವು ರಿಸೀವ್ ಮಾಡಿದ್ದೀರಾ? ಅಥವಾ ಮಾಡಿರದಿದ್ದರೆ ಶೀಘ್ರದಲ್ಲೇ ರಿಫಂಡ್ ಆಗಲಿರುವ ಹಣದ ಹೇಗೆ ಉಪಯೋಗಿಸುವೀರಿ? ರಿಫಂಡ್ ಆದ ಹಣವನ್ನು ಹೂಡಿಕೆ ಮಾಡುವೀರಾ ಅಥವಾ ಅದರಿಂದ ಎಂಜಾಯ್ ಮಾಡಿಬಿಡುವ ಪ್ಲಾನ್ ಮಾಡಿದ್ದೀರ?

Smart Ways to Use Your Tax Return Money
Income Tax Return: ಇತ್ತೀಚಿನ ವರ್ಷಗಳಲ್ಲಿ ಆದಾಯ ತೆರಿಗೆ ಇಲಾಖೆ ತುಂಬಾ ಸುಧಾರಣೆಯಾಗಿದೆ. ಅದರಲ್ಲೂ ಆನ್‌ಲೈನ್ ವ್ಯವಸ್ಥೆ ತುಂಬಾ ಸರಳಗೊಳಿಸಿದೆ. ಐಟಿಆರ್ ಅಪ್ಲೆ ಮಾಡೋದು ಮೊದಲಿನಷ್ಟು ಕಬ್ಬಿಣದ ಕಡೆಯಾಗಿಲ್ಲ. ಯಾವುದೇ ತೊಡಕಿಲ್ಲದೆ ಸುಲಭವಾಗಿ ಕೇವಲ ಒಂದೆರಡು ನಿಮಿಷದಲ್ಲಿ ಸಲ್ಲಿಸಬಹದಾಗಿ. ಅಷ್ಟೇ ಅಲ್ಲದೆ ಇನ್‌ಕಮ್ ಟ್ಯಾಕ್ಸ್ ರಿಟರ್ನ್ ಆಗಲಿಕ್ಕೂ ಮೊದಲಿನಂತೆ ತಿಂಗಳು ಕಾಯಬೇಕಿಲ್ಲ. ರಿಫಂಡ್ ಕೂಡ ಬೇಗ ಬರುತ್ತೆ. ನಿಜಕ್ಕೂ ಇಂಥ ಗಮನಾರ್ಹ ಬದಲಾವಣೆ ಮೆಚ್ಚುವಂತದ್ದು.
ಈ ವರ್ಷದ Income Tax Return ನೀವು ರಿಸೀವ್ ಮಾಡಿದ್ದೀರಾ? ಅಥವಾ ಮಾಡಿರದಿದ್ದರೆ ಶೀಘ್ರದಲ್ಲೇ ರಿಫಂಡ್ ಆಗಲಿರುವ ಹಣದ ಹೇಗೆ ಉಪಯೋಗಿಸುವೀರಿ? ರಿಫಂಡ್ ಆದ ಹಣವನ್ನು ಹೂಡಿಕೆ ಮಾಡುವೀರಾ ಅಥವಾ ಅದರಿಂದ ಎಂಜಾಯ್ ಮಾಡಿಬಿಡುವ ಪ್ಲಾನ್ ಮಾಡಿದ್ದೀರ?
Smart Ways to Use Your Tax Return Money: ತೆರಿಗೆ ರಿಟರ್ನ್ ಬೊನಸ್ ಅಲ್ಲ!
ಅನೇಕರು ಐಟಿಆರ್ ಅಪ್ಲೆ ಮಾಡಿದ ನಂತರ ಬರುವ ರಿಫಂಡ್ ಅಥವಾ ರಿಟರ್ನ್ ಹಣವನ್ನು ಅದು ತಮಗೆ ಬಂದಿರುವ ಬೋನಸ್ ಎಂದು ಭಾವಿಸುತ್ತಾರೆ. ಅದನ್ನ ಉಳಿತಾಯ ಅಥವಾ ಹೂಡಿಕೆ ಮಾಡುವ ಬದಲು ಏನಾದರೂ ಪಾರ್ಟಿ ಮಾಡಿಯೋ, ಹೊಸ ಮೊಬೈಲ್, ಬ್ರಾಂಡೆಡ್ ಬಟ್ಟೆನೋ ಅಥವಾ ಯಾವುದಾದ್ರೂ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಖರೀದಿಸಿ ಖರ್ಚು ಮಾಡಿಬಿಡಲು ಯೋಚನೆ ಮಾಡ್ತಾರೆ. ಅಷ್ಟೇ ಅಲ್ಲ ಬಹುತೇಕರು ಪ್ರತಿವರ್ಷ ಹೀಗೆಯೇ ಖರ್ಚು ಮಾಡುತ್ತಾರೆ.
ರಿಟರ್ನ್ ಹಣ ಬುದ್ಧಿವಂತಿಕೆಯಿಂದ ಉಪಯೋಗಿಸೋದು ಹೇಗೆ?
ಆದರೆ ನಿಮಗಿದು ತಿಳಿದಿರಲಿ ರಿಟರ್ನ್ ಹಣ ಬೋನಸ್ ಅಲ್ಲ! ಬದಲಿಗೆ ಸರ್ಕಾರ ನಿಮಗೆ ಹಿಂದಿರುಗಿಸುತ್ತಿರುವುದು ನಿಮ್ಮದೇ ಸ್ವಂತ ಹಣ, ನೀವು ಬೆವರು ಸುರಿಸಿ ದುಡಿದ ಹಣದ ಒಂದು ಭಾಗ ಎಂಬುದು ಅರ್ಥ ಮಾಡಿಕೊಳ್ಳೋದು ಮುಖ್ಯ. ಸ್ವಂತ ದುಡಿದ ಹಣವನ್ನ ಬೇಕಾಬಿಟ್ಟಿ ಖರ್ಚು ಮಾಡಲು ಮನಸು ಬರುತ್ತದಾ? ಇಲ್ಲ ತಾನೇ. ರಿಫಂಡ್ ಆದ ಹಣದಿಂದ ನಿಮ್ಮ ಆರ್ಥಿಕ ಸ್ಥಿತಿಯನ್ನ ಇನ್ನಷ್ಟು ಉತ್ತಮಗೊಳಿಸಲು ಬುದ್ಧಿವಂತಿಕೆಯಿಂದ ಬಳಸಬೇಕು.
ತೆರಿಗೆ ರಿಟರ್ನ್ ಹಣ ಎಲ್ಲಿ ಹೂಡಿಕೆ ಮಾಡಬೇಕು?
ತಜ್ಞರ ಹೇಳೋದೇನೆಂದರೆ. ನಿಮ್ಮ ಆದಾಯ ತೆರಿಗೆಯಿಂದ ಬಂದ ಹಣದಲ್ಲಿ ಪಾರ್ಟಿ ಮಾಡಿನೋ, ಬಟ್ಟೆ ಮೊಬೈಲ್ ಖರೀದಿ ಮಾಡಿ ಖರ್ಚು ಮಾಡುವುದಕ್ಕಿಂತ ಈ ಕೆಳಗಿನ ಉದ್ದೇಶಗಳಿಗಾಗಿ ಬಳಸುವುದು ಉತ್ತಮ
- ನೀವು ಎಲ್ಲಿಯಾದರೂ ಸಾಲ ಪಡೆದಿದ್ದರೆ ಅದನ್ನು ಪಾವತಿಸಿಬಿಡಿ.
- ವೈಯಕ್ತಿಕ ಸಾಲವಿದ್ದರೆ ಈ ಹಣ ಬಳಸಿ.
- ಎಮೆರ್ಜೆನ್ಸಿ ಫಂಡ್‌ಗೆ ತೆಗೆದಿಡಿ.
ತೆರಿಗೆ ರಿಟರ್ನ್ ಹಣ ಎಲ್ಲಿ ಹೂಡಿಕೆ ಮಾಡಬೇಕು?
ನಿಮ್ಮ ಗೃಹ ಸಾಲ ಇದ್ದರೆ ಮೊದಲೇ ಪಾವತಿಸಿ ಇದರಿಂದ ಬಡ್ಡಿ ಉಳಿಸುತ್ತೆ. ಅಷ್ಟೇ ಅಲ್ಲ ಲೋನ್ ಬೇಗ ಕಟ್ಟಲು ಸಹಾಯವಾಗುತ್ತೆ.
ಮ್ಯೂಚುವಲ್ ಫಂಡ್ ಹೂಡಿಕೆ ಮಾಡಿ
ರಿಟರ್ನ್ ಹಣವನ್ನ ಖರ್ಚು ಮಾಡುವ ಬದಲು ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಿ. ಭವಿಷ್ಯದಲ್ಲಿ ಇದು ದೊಡ್ಡ ಮೊತ್ತವಾಗಿ ನಿಮ್ಮ ಕೈಸೇರುತ್ತೆ. ಒಂದು ವೇಳೆ ನಿಮ್ಮದು ಒಂದು ಕನಸಿದ್ದರೆ ಅದನ್ನು ನನಸಾಗಿಸುವ ಮನಸಾದರೆ ಈ ಹಣದಲ್ಲಿ ಒಂದು ಭಾಗ ಮಾತ್ರ ಬಳಸಿ. ಇದರಲ್ಲಿ ದೊಡ್ಡ ಭಾಗ ಉಳಿಸಿ. ಇದರಿಂದ ನಿಮಗೆ ಆರ್ಥಿಕ ಭದ್ರತೆ ತರುತ್ತದೆ. ಕಳೆದ ವರ್ಷದ ರಿಟರ್ನ್ ಹಣ ಹೇಗೆ ಖರ್ಚು ಮಾಡಿದಿರಿ? ಕಾಮೆಂಟ್ ಮಾಡಿ.

