- Home
- Money
- Credit Card Bill Payment Guide: ಫೋನ್‌ಪೇನಲ್ಲಿ ಈ ಸಿಂಪಲ್ ಟಿಪ್ಸ್ ಬಳಸಿ, ಕ್ರೆಡಿಟ್ ಕಾರ್ಡ್ ಬಿಲ್ ಪೇಮೆಂಟ್ ಮಾಡೋದು ಹೇಗೆ?
Credit Card Bill Payment Guide: ಫೋನ್‌ಪೇನಲ್ಲಿ ಈ ಸಿಂಪಲ್ ಟಿಪ್ಸ್ ಬಳಸಿ, ಕ್ರೆಡಿಟ್ ಕಾರ್ಡ್ ಬಿಲ್ ಪೇಮೆಂಟ್ ಮಾಡೋದು ಹೇಗೆ?
ಇತ್ತೀಚಿನ ದಿನಗಳಲ್ಲಿ ಕ್ರೆಡಿಟ್ ಕಾರ್ಡ್ ಬಳಕೆ ತುಂಬ ಜಾಸ್ತಿ ಆಗಿದೆ. ಆದ್ರೆ ಕ್ರೆಡಿಟ್ ಕಾರ್ಡ್ ಬಿಲ್ ಪೇಮೆಂಟ್ ಮಾಡೋವಾಗ ಡ್ಯೂ ಡೇಟ್ ಮರೆತು ಹೋಗ್ತಾರೆ. ಆದ್ರೆ ಫೋನ್‌ಪೇ ಮೂಲಕ ತುಂಬ ಸುಲಭವಾಗಿ ಕ್ರೆಡಿಟ್ ಕಾರ್ಡ್ ಬಿಲ್ಸ್ ಪೇಮೆಂಟ್ ಮಾಡಬಹುದು ಅಂತ ನಿಮಗೆ ಗೊತ್ತಾ?

ಫೋನ್‌ಪೇನಲ್ಲಿ ಕ್ರೆಡಿಟ್ ಕಾರ್ಡ್ ಬಿಲ್ ಪೇಮೆಂಟ್ ಮಾಡೋದು ಹೇಗೆ?
* ಮೊದಲು ಫೋನ್‌ಪೇ ಆ್ಯಪ್ ಓಪನ್ ಮಾಡಿ.
* ‘Recharge & Pay Bills’ ಸೆಕ್ಷನ್‌ಗೆ ಹೋಗಿ.
* ಈ ವಿಭಾಗದಲ್ಲಿ ಬಿಲ್ಸ್ ಪೇಮೆಂಟ್ ಮಾಡೋ ಎಲ್ಲ ಆಪ್ಷನ್ಸ್ ಇರುತ್ತೆ.
* ‘Credit Card’ ಆಪ್ಷನ್ ಸೆಲೆಕ್ಟ್ ಮಾಡಿ. ಕ್ರೆಡಿಟ್ ಕಾರ್ಡ್ ಬಿಲ್ ಪೇಮೆಂಟ್ ಮಾಡೋಕೆ ಈ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
ಕಾರ್ಡ್ ಡೀಟೇಲ್ಸ್ ಕೊಡಬೇಕು.
* ಕಾರ್ಡ್ ನಂಬರ್, ಸಿವಿವಿ (CVV), ಟೋಟಲ್ ಪೇಮೆಂಟ್ ಅಮೌಂಟ್ ಕೊಡಿ.
* ಪೇಮೆಂಟ್ ಮೋಡ್ ಸೆಲೆಕ್ಟ್ ಮಾಡಿ. ಯುಪಿಐ, ಲಿಂಕ್ ಆದ ಬ್ಯಾಂಕ್ ಅಕೌಂಟ್ ಅಥವಾ ವ್ಯಾಲೆಟ್ ಮೂಲಕ ಪೇಮೆಂಟ್ ಮಾಡಬಹುದು.
* ಕೊನೆಯಲ್ಲಿ ಕನ್ಫರ್ಮ್ ಮಾಡಿ. ಡೀಟೇಲ್ಸ್ ಚೆಕ್ ಮಾಡಿ ತಪ್ಪಿದ್ರೆ ಸರಿ ಮಾಡಿ, ಪೇಮೆಂಟ್ ಕಂಪ್ಲೀಟ್ ಮಾಡಿ.
ಫೋನ್‌ಪೇನಲ್ಲಿ ಕ್ರೆಡಿಟ್ ಕಾರ್ಡ್ ಬಿಲ್ ಪೇಮೆಂಟ್ ಮಾಡಿದ್ರೆ ಏನು ಲಾಭ?
* ಎಲ್ಲಿಂದ ಬೇಕಾದ್ರೂ ಪೇಮೆಂಟ್ ಮಾಡಬಹುದು, ಕ್ಷಣಾರ್ಧದಲ್ಲಿ ಪೇಮೆಂಟ್ ಪೂರ್ಣಗೊಳ್ಳುತ್ತದೆ.
* ಯುಪಿಐ, ಬ್ಯಾಂಕ್ ಅಕೌಂಟ್, ವ್ಯಾಲೆಟ್ ಮೂಲಕ ಪೇಮೆಂಟ್ ಮಾಡಬಹುದು.
* ಸುರಕ್ಷಿತ ವ್ಯವಹಾರಗಳು. ಟೋಕನೈಸೇಶನ್, UPI ಪಿನ್‌ಗಳಿಂದ ಹೆಚ್ಚುವರಿ ಭದ್ರತೆ.
ಫೈನ್ ಕಟ್ಟಬೇಕಾಗಿಲ್ಲ
* ಬಿಲ್ ರಿಮೈಂಡರ್ ಫೀಚರ್ ಮೂಲಕ ಬಿಲ್ ಡ್ಯೂ ಡೇಟ್ ಮರೆಯುವುದಿಲ್ಲ. ಹೀಗಾಗಿ ಫೈನ್ ಕಟ್ಟಬೇಕಾಗಿಲ್ಲ.
* ಯಾವುದೇ ಪ್ರೊಸೆಸಿಂಗ್ ಫೀಸ್, ಹಿಡನ್ ಚಾರ್ಜಸ್ ಇಲ್ಲ.
ಫೋನ್‌ಪೇನಲ್ಲಿ ಕ್ರೆಡಿಟ್ ಕಾರ್ಡ್ ಉಪಯೋಗಿಸೋದು ಹೇಗೆ?
* ಫೋನ್‌ಪೇನಲ್ಲಿ ಯುಪಿಐ ಮೂಲಕ RuPay ಕ್ರೆಡಿಟ್ ಕಾರ್ಡ್ ಲಿಂಕ್ ಮಾಡಬಹುದು.
* ‘My Money’ ಟ್ಯಾಬ್‌ಗೆ ಹೋಗಿ ಕಾರ್ಡ್ ಆ್ಯಡ್ ಮಾಡಿ.
* ಯುಪಿಐ ಪಿನ್ ಸೆಟ್ ಮಾಡಿದ್ರೆ ಸಾಕು. QR ಕೋಡ್ ಸ್ಕ್ಯಾನ್ ಮಾಡಿ ಕ್ರೆಡಿಟ್ ಕಾರ್ಡ್‌ನಿಂದ ಪೇಮೆಂಟ್ ಮಾಡಬಹುದು.