MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Money
  • Chanakya Niti: ಶ್ರೀಮಂತರಾಗುತ್ತಿದ್ದಂತೆ ಈ 4 ವಿಷಯಗಳನ್ನು ಗುಟ್ಟಾಗಿಡಿ! ಚಾಣಕ್ಯ ನೀಡಿದ ಎಚ್ಚರಿಕೆಯ ಪಾಠ

Chanakya Niti: ಶ್ರೀಮಂತರಾಗುತ್ತಿದ್ದಂತೆ ಈ 4 ವಿಷಯಗಳನ್ನು ಗುಟ್ಟಾಗಿಡಿ! ಚಾಣಕ್ಯ ನೀಡಿದ ಎಚ್ಚರಿಕೆಯ ಪಾಠ

Chanakya Niti: ಹಣ ಸಂಪಾದಿಸುವುದು ಎಷ್ಟು ಮುಖ್ಯವೋ, ಅದನ್ನು ಸರಿಯಾಗಿ ನಿರ್ವಹಿಸುವುದೂ ಅಷ್ಟೇ ಮುಖ್ಯ. ಆಚಾರ್ಯ ಚಾಣಕ್ಯರ ನೀತಿಗಳು ಹಣಕಾಸಿನ ನಿರ್ವಹಣೆ, ಜೀವನಶೈಲಿ ಮತ್ತು ವೈಯಕ್ತಿಕ ನಡವಳಿಕೆಯ ಕುರಿತು ಹಲವು ಪಾಠಗಳನ್ನು ನೀಡುತ್ತವೆ. ಹಣ ಸಂಪಾದಿಸಿದ ನಂತರ ಏನು ಮಾಡಬೇಕು? ಇಲ್ಲಿದೆ ಮಾಹಿತಿ.

2 Min read
Author : Pavna Das
Published : Oct 17 2026, 08:30 PM IST
Share this Photo Gallery
  • FB
  • TW
  • Linkdin
  • Whatsapp
15
ಚಾಣಕ್ಯ ನೀತಿ
Image Credit : Gogle Gemini

ಚಾಣಕ್ಯ ನೀತಿ

ಹಣ ಸಂಪಾದಿಸುವುದು ಎಷ್ಟು ಕಷ್ಟವೋ, ಸಂಪಾದಿಸಿದ ಹಣವನ್ನು ಜೋಪಾನವಾಗಿ ಉಳಿಸಿಕೊಳ್ಳುವುದು ಅದಕ್ಕಿಂತಲೂ ದೊಡ್ಡ ಸವಾಲು. ಇದಕ್ಕಾಗಿ ಪರಿಶ್ರಮ, ವಿವೇಕ, ತಾಳ್ಮೆ ಮತ್ತು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅಗತ್ಯ. ಚಾಣಕ್ಯ ನೀತಿಯ ಪ್ರಕಾರ, ಕೈಯಲ್ಲಿ ಹಣ ಬರಲು ಆರಂಭವಾದಾಗ ಅಹಂಕಾರ, ಆಡಂಬರ ಮತ್ತು ಕೆಟ್ಟ ಅಭ್ಯಾಸಗಳಿಂದ ದೂರವಿರಬೇಕು. ಯಾವ ನಾಲ್ಕು ವಿಷಯಗಳನ್ನು ವ್ಯಕ್ತಿ ಮಾಡಬಾರದು ಅನ್ನೋದನ್ನು ನೋಡೋಣ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ನಿಮ್ಮ ಹಣ ಮತ್ತು ಸಂಪತ್ತನ್ನು ಎಲ್ಲರ ಮುಂದೆ ಪ್ರದರ್ಶಿಸಬೇಡಿ
Image Credit : Asianet News

ನಿಮ್ಮ ಹಣ ಮತ್ತು ಸಂಪತ್ತನ್ನು ಎಲ್ಲರ ಮುಂದೆ ಪ್ರದರ್ಶಿಸಬೇಡಿ

ಚಾಣಕ್ಯ ನೀತಿಯ ಪ್ರಕಾರ, ವ್ಯಕ್ತಿಯ ಕೈಗೆ ಹಣ ಬರಲು ಆರಂಭವಾದಾಗ ಕೆಲವರು ತಮ್ಮ ಸಂಪತ್ತನ್ನು ಪ್ರದರ್ಶಿಸಲು ಶುರುಮಾಡುತ್ತಾರೆ. ದುಬಾರಿ ವಸ್ತುಗಳನ್ನು ಖರೀದಿಸುವುದು, ಪ್ರತಿದಿನ ಹೊಸ ಹೊಸ ವಸ್ತುಗಳನ್ನು ಕೊಳ್ಳುವುದು, ಕೈಯಲ್ಲಿರುವ ನಗದನ್ನು ಇತರರಿಗೆ ತೋರಿಸುವುದು ಅಥವಾ ಸ್ನೇಹಿತರ ಮುಂದೆ ತಮ್ಮ ಆದಾಯದ ಬಗ್ಗೆ ಪದೇಪದೇ ಹೇಳಿಕೊಳ್ಳುವುದು ಮುಂತಾದವುಗಳ ಮೂಲಕ ಇತರರನ್ನು ಆಕರ್ಷಿಸಲು ಪ್ರಯತ್ನಿಸುತ್ತಾರೆ. ಆದರೆ ಇಂತಹ ನಡವಳಿಕೆಯು ಇತರರಲ್ಲಿ ಅಸೂಯೆ, ಅನಗತ್ಯ ಸ್ಪರ್ಧೆ ಮತ್ತು ಆರ್ಥಿಕ ಒತ್ತಡವನ್ನು ಹೆಚ್ಚಿಸಬಹುದು. ಆದ್ದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಖಾಸಗಿಯಾಗಿ ಇಟ್ಟುಕೊಳ್ಳುವುದು ಮತ್ತು ಅಗತ್ಯಕ್ಕೆ ತಕ್ಕಂತೆ ಹಣ ಖರ್ಚು ಮಾಡುವುದು ಬುದ್ಧಿವಂತಿಕೆಯ ಲಕ್ಷಣ.

Related Articles

Related image1
Chanakya Niti: ಚಾಣಕ್ಯ ತಿಳಿಸಿದ ಮನಿ ಮ್ಯಾಜಿಕ್ ರೂಲ್ಸ್… ಇದನ್ನ ತಿಳ್ಕೊಂಡ್ರೆ ನೀವು ಶ್ರೀಮಂತರಾಗೋದೆ!
Related image2
Chanakya Niti: ಪತಿ-ಪತ್ನಿಯ ಈ 5 ಅಭ್ಯಾಸಗಳು ಸುಖ ಸಂಸಾರವನ್ನೇ ಹಾಳುಮಾಡಬಹುದು
35
ಹೆಸರು ಮತ್ತು ಪ್ರತಿಷ್ಠೆಗಾಗಿ ಸಾಮರ್ಥ್ಯಕ್ಕಿಂತ ಹೆಚ್ಚು ದಾನ ಮಾಡಬೇಡಿ
Image Credit : chat gpt

ಹೆಸರು ಮತ್ತು ಪ್ರತಿಷ್ಠೆಗಾಗಿ ಸಾಮರ್ಥ್ಯಕ್ಕಿಂತ ಹೆಚ್ಚು ದಾನ ಮಾಡಬೇಡಿ

ಚಾಣಕ್ಯ ನೀತಿಯ ಪ್ರಕಾರ, ದಾನ ಮಾಡುವುದು ಒಳ್ಳೆಯ ಕಾರ್ಯ. ಆದರೆ ಸಮಾಜದಲ್ಲಿ ಹೆಸರು ಗಳಿಸಲು ಅಥವಾ ಇತರರ ಮುಂದೆ ಒಳ್ಳೆಯ ವ್ಯಕ್ತಿಯಂತೆ ಕಾಣಿಸಿಕೊಳ್ಳಲು ಸಾಮರ್ಥ್ಯಕ್ಕಿಂತ ಹೆಚ್ಚು ಹಣ ದಾನ ಮಾಡಬಾರದು. ಇತರರಿಗೆ ಸಹಾಯ ಮಾಡುವ ಮೊದಲು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಪರಿಶೀಲಿಸಬೇಕು. ಕುಟುಂಬದ ಜವಾಬ್ದಾರಿಗಳು, ದೈನಂದಿನ ಖರ್ಚುಗಳು ಮತ್ತು ಭವಿಷ್ಯದ ಉಳಿತಾಯದ ಬಗ್ಗೆಯೂ ಗಮನ ಹರಿಸಬೇಕು. ಕೇವಲ ಆಡಂಬರಕ್ಕಾಗಿ ದಾನ ಮಾಡಿದರೆ, ನಿಮ್ಮ ಸಂಪತ್ತಿನ ಪರಿಣಾಮ ಬೀರಬಹುದು.

45
ಇತರರನ್ನು ಮೆಚ್ಚಿಸಲು ದುಬಾರಿ ವಸ್ತುಗಳನ್ನು ಖರೀದಿಸಬೇಡಿ
Image Credit : chatgpt

ಇತರರನ್ನು ಮೆಚ್ಚಿಸಲು ದುಬಾರಿ ವಸ್ತುಗಳನ್ನು ಖರೀದಿಸಬೇಡಿ

ದುಬಾರಿ ಕಾರುಗಳು, ಬ್ರ್ಯಾಂಡೆಡ್ ಬಟ್ಟೆಗಳು ಮತ್ತು ಬೆಲೆಬಾಳುವ ಆಭರಣಗಳನ್ನು ಖರೀದಿಸುವುದು ಪ್ರತಿಯೊಬ್ಬರ ವೈಯಕ್ತಿಕ ಆಯ್ಕೆ. ಆದರೆ ಇತರರನ್ನು ಮೆಚ್ಚಿಸುವ ಉದ್ದೇಶದಿಂದ ಮಾತ್ರ ಇಂತಹ ವಸ್ತುಗಳನ್ನು ಖರೀದಿಸಲು ತಮ್ಮ ಆದಾಯಕ್ಕಿಂತ ಹೆಚ್ಚು ಖರ್ಚು ಮಾಡುವುದು ಸಾಲದ ಹೊರೆ ಮತ್ತು ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಬಹುದು.

55
ಮದ್ಯಪಾನ ಮತ್ತು ಇತರ ದುಶ್ಚಟಗಳಿಗೆ ದಾಸರಾಗಬೇಡಿ
Image Credit : chatgpt

ಮದ್ಯಪಾನ ಮತ್ತು ಇತರ ದುಶ್ಚಟಗಳಿಗೆ ದಾಸರಾಗಬೇಡಿ

ಆಚಾರ್ಯ ಚಾಣಕ್ಯರ ನೀತಿಯ ಪ್ರಕಾರ, ವ್ಯಸನಗಳು ವ್ಯಕ್ತಿಯ ಆರೋಗ್ಯ, ಸಂಬಂಧಗಳು ಮತ್ತು ಆರ್ಥಿಕ ಪರಿಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ವ್ಯಸನಗಳಿಂದ ಅನೇಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದು, ಹಲವರು ತಮ್ಮ ಸಂಪತ್ತನ್ನು ಕಳೆದುಕೊಂಡಿದ್ದಾರೆ ಮತ್ತು ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ್ದಾರೆ.ಮದ್ಯಪಾನ ಅಥವಾ ಇತರ ಮಾದಕ ವಸ್ತುಗಳ ಬಳಕೆಯಿಂದ ವ್ಯಕ್ತಿಯ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವೂ ಕುಂಠಿತವಾಗಬಹುದು. ಇದರಿಂದ ಅನಗತ್ಯ ಖರ್ಚು ಹೆಚ್ಚಾಗಿ, ಆರ್ಥಿಕ ಪರಿಸ್ಥಿತಿ ಹದಗೆಡಬಹುದು.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಚಾಣಕ್ಯ ನೀತಿ
ಜೀವನಶೈಲಿ
ಯಶಸ್ಸಿನ ಕಥೆ
ಅದೃಷ್ಟ
 

Latest Videos
Recommended Stories
Recommended image1
Sugarprice: ಸಕ್ಕರೆ ಬೆಲೆ ಮತ್ತೆ ದುಬಾರಿ; ಮಿಡಲ್ ಕ್ಲಾಸ್ ಜನರಿಗೆ ಸಿಹಿ ಇಲ್ಲದ ದಸರಾ-ಸಪ್ಪೆ ಪಟಾಕಿ ದೀಪಾವಳಿ!
Recommended image2
ಹಬ್ಬದ ಸೀಸನ್ ನಲ್ಲಿ ಗೂಗಲ್ ಪೇ ನೀಡ್ತಿದೆ ಭರ್ಜರಿ ಉಡುಗೊರೆ, ಗ್ರಾಹಕರಿಗೆ ಸಿಗ್ತಿದೆ ಹೆಚ್ಚಿನ ಕ್ಯಾಶ್‌ಬ್ಯಾಕ್
Recommended image3
ಇಲ್ಲಿ ಯಾವ ಕೆಲ್ಸವೂ ಚಿಕ್ಕದಲ್ಲ : ದಿನಕ್ಕೆ 500 ಬಟ್ಟೆ ಇಸ್ತ್ರಿ ಮಾಡುವವನ ತಿಂಗಳ ಆದಾಯ ಕೇಳಿದ್ರೆ ಶಾಕ್
Related Stories
Recommended image1
Chanakya Niti: ಚಾಣಕ್ಯ ತಿಳಿಸಿದ ಮನಿ ಮ್ಯಾಜಿಕ್ ರೂಲ್ಸ್… ಇದನ್ನ ತಿಳ್ಕೊಂಡ್ರೆ ನೀವು ಶ್ರೀಮಂತರಾಗೋದೆ!
Recommended image2
Chanakya Niti: ಪತಿ-ಪತ್ನಿಯ ಈ 5 ಅಭ್ಯಾಸಗಳು ಸುಖ ಸಂಸಾರವನ್ನೇ ಹಾಳುಮಾಡಬಹುದು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved