ವಾಟ್ಸಾಪ್ ಸೆಟ್ಟಿಂಗ್ಸ್ ಮೂಲಕ ಈಗಲೇ ನಿಮ್ಮ ಫೋನ್ ಸ್ಪೀಡ್ ಹೆಚ್ಚಿಸಿ!
ಮೊಬೈಲ್ ಫೋನ್‌ಗಳು ಇದ್ದಕ್ಕಿದ್ದಂತೆ ಸ್ಲೋ ಆಗುತ್ತವೆ. ಇದಕ್ಕೆ ಹಲವು ಕಾರಣಗಳಿವೆ. ನಿಮ್ಮ ಫೋನ್ ವಾಟ್ಸಾಪ್ (WhatsApp) ನಿಂದ ಸ್ಲೋ ಆಗಿದೆಯೇ ಎಂದು ತಿಳಿದುಕೊಳ್ಳಲು ಈ ಹಂತಗಳನ್ನು ಅನುಸರಿಸಿ. ಸಣ್ಣ ಸೆಟ್ಟಿಂಗ್‌ಗಳನ್ನು ಬದಲಾಯಿಸುವ ಮೂಲಕ ನಿಮ್ಮ ಫೋನ್ ಮತ್ತೆ ವೇಗವಾಗಿ ಕೆಲಸ ಮಾಡುವಂತೆ ಮಾಡಬಹುದು.
ಫೋನ್‌ನಲ್ಲಿ ಹೆಚ್ಚು ಆ್ಯಪ್‌ಗಳಿದ್ದರೆ ಸ್ಪೀಡ್ ಕಡಿಮೆಯಾಗುತ್ತದೆ. ಟೆಂಪರರಿ ಫೈಲ್‌ಗಳು ಹೆಚ್ಚಾದರೂ ಇದೇ ಸಮಸ್ಯೆ ಬರಬಹುದು. ಬೇಡದ ಆ್ಯಪ್‌ಗಳು, ಬಳಸದೇ ಇರುವ ಆ್ಯಪ್‌ಗಳು, ಹೀಗೆ ಫೋನ್ ಸ್ಲೋ ಆಗಲು ಹಲವು ಕಾರಣಗಳಿವೆ. ಅದೇ ರೀತಿ ವಾಟ್ಸಾಪ್ ಕೂಡ ಫೋನ್ ಸ್ಲೋ ಆಗಲು ಒಂದು ಕಾರಣ. ವಾಟ್ಸಾಪ್ ಹೇಗೆ ಫೋನ್ ಸ್ಪೀಡ್ ಕಡಿಮೆ ಮಾಡುತ್ತದೆ.
ಮೊಬೈಲ್ ಹೊಂದಿದವರು ಯಾರೇ ಆಗಲಿ ವಾಟ್ಸಾಪ್ ಇಲ್ಲದೆ ಇರಲ್ಲ. ಯಾವ ಕಂಪನಿಯ ಮೊಬೈಲ್ ಆದ್ರೂ ವಾಟ್ಸಾಪ್ ಇರುತ್ತೆ. ಇದರ ಬಳಕೆ ಕೂಡ ತುಂಬಾ ಜಾಸ್ತಿ. ಈಗಿನ ಕಾಲದಲ್ಲಿ ವಾಟ್ಸಾಪ್ ಇಲ್ಲದವರು ಯಾರೂ ಇರಲ್ಲ. ಯಾವ ಕಂಪನಿಯ ಫೋನ್ ಆದ್ರೂ ವಾಟ್ಸಾಪ್‌ಗೆ ಜಾಸ್ತಿ ಸ್ಟೋರೇಜ್ ಕೊಡುತ್ತದೆ. ಹೀಗೆ ವಾಟ್ಸಾಪ್ ಬಳಸ್ತಾನೆ ಇದ್ದರೆ ಸ್ಟೋರೇಜ್ ಫುಲ್ ಆಗಿ ಫೋನ್ ಸ್ಲೋ ಆಗುತ್ತದೆ.
ವಾಟ್ಸಾಪ್ ಸೆಟ್ಟಿಂಗ್ಸ್‌ನಲ್ಲಿ ‘ಸ್ಟೋರೇಜ್ ಮತ್ತು ಡೇಟಾ’ ಆಯ್ಕೆ ಇದೆ. ಇದರಿಂದ WhatsApp ಎಷ್ಟು ಸ್ಟೋರೇಜ್ ಬಳಸ್ತಿದೆ ಅಂತ ಗೊತ್ತಾಗುತ್ತೆ. ಯಾವ ಚಾಟ್ ಎಷ್ಟು ಸ್ಟೋರೇಜ್ ಬಳಸ್ತಿದೆ ಅಂತನೂ ನೋಡಬಹುದು. ಯಾರ ಜೊತೆ ಹೆಚ್ಚು ಡೇಟಾ ಶೇರ್ ಮಾಡಿದ್ದೀರಿ, ಎಷ್ಟು ಡೇಟಾ ಉಪಯೋಗಿಸಿದ್ದೀರಿ ಅಂತ ಕೂಡ ಗೊತ್ತಾಗುತ್ತದೆ.
1. WhatsApp ಓಪನ್ ಮಾಡಿ ಮೇಲೆ 3 ಡಾಟ್ಸ್ ಮೇಲೆ ಕ್ಲಿಕ್ ಮಾಡಿ.
2. ಸೆಟ್ಟಿಂಗ್ಸ್ ಓಪನ್ ಮಾಡಿ ‘Storage and Data’ ಓಪನ್ ಮಾಡಿ.
3. ಅಲ್ಲಿ ‘Manage Storage’ ಮೇಲೆ ಕ್ಲಿಕ್ ಮಾಡಿ.
4. WhatsApp ಎಷ್ಟು ಡೇಟಾ ಬಳಸಿದೆ, ಎಷ್ಟು ಜಾಗ ಖಾಲಿ ಇದೆ, ಚಾಟ್‌ಗಳಿಗೆ ಎಷ್ಟು ಡೇಟಾ ಬಳಸಿದ್ದೀರಿ ಅಂತ ಗೊತ್ತಾಗುತ್ತದೆ.
5. ಬೇಡದ ಡೇಟಾ ಡಿಲೀಟ್ ಮಾಡಿ. ಸ್ಟೋರೇಜ್ ಖಾಲಿ ಆಗುತ್ತೆ. ಫೋನ್ ಸ್ಪೀಡ್ ಕೂಡ ಹೆಚ್ಚಾಗುತ್ತದೆ.
ವಾಟ್ಸಾಪ್ ಸ್ಟೋರೇಜ್ ಫುಲ್ ಆಗಲು ಇನ್ನೊಂದು ಕಾರಣ ‘ಮೀಡಿಯಾ ವಿಜಿಬಿಲಿಟಿ’. ಈ ಆಯ್ಕೆ ಆನ್ ಇದ್ದರೆ ವಾಟ್ಸಾಪ್‌ನಲ್ಲಿ ಬರುವ ಫೋಟೋ, ವಿಡಿಯೋಗಳು ಗ್ಯಾಲರಿಯಲ್ಲಿ ಸೇವ್ ಆಗುತ್ತವೆ. ಹೀಗಾಗಿ ಫೋನ್ ಸ್ಟೋರೇಜ್ ಬೇಗ ಫುಲ್ ಆಗುತ್ತವೆ.
1. ಇದನ್ನ ಆಫ್ ಮಾಡಲು WhatsApp ನಲ್ಲಿ ಚಾಟ್ ಓಪನ್ ಮಾಡಿ ಮೇಲಿರುವ 3 ಡಾಟ್ಸ್ ಕ್ಲಿಕ್ ಮಾಡಿ.
2. ‘view Camtact’ ಅಥವಾ ‘Group info’ ಮೇಲೆ ಕ್ಲಿಕ್ ಮಾಡಿ.
3. ಅಲ್ಲಿ ‘Media visibility’ ಮೇಲೆ ಕ್ಲಿಕ್ ಮಾಡಿ.
4. ಈ ಆಯ್ಕೆ ಆನ್ ಇದ್ದರೆ ಆಫ್ ಮಾಡಿ. ಇನ್ಮೇಲೆ WhatsApp ಗೆ ಬರುವ ಫೋಟೋ, ವಿಡಿಯೋಗಳು ಗ್ಯಾಲರಿಯಲ್ಲಿ ಸೇವ್ ಆಗಲ್ಲ. ಇದರಿಂದ ನಿಮ್ಮ ಫೋನ್ ಮೆಮೊರಿ ಸೇವ್ ಆಗುತ್ತದೆ. ಫೋನ್ ಕೂಡ ಸ್ಪೀಡ್ ಆಗಿ ಕೆಲಸ ಮಾಡುತ್ತದೆ.