ವಾಟ್ಸಾಪ್‌ನಲ್ಲಿ ಡಿಲಿಟ್ ಮಾಡಿದ ಫೋಟೋ-ವಿಡಿಯೋಗಳನ್ನು ಹೀಗ್ ಪಡೀಬಹುದು!
ವಾಟ್ಸಾಪ್ ತನ್ನ ಬಳಕೆದಾರರಿಗೆ ಪ್ರತಿದಿನ ಹೊಸ ವೈಶಿಷ್ಟ್ಯಗಳನ್ನು ನೀಡುತ್ತಲೇ ಇರುತ್ತದೆ. ಕೆಲವು ಸಮಯದ ಹಿಂದೆ, ವಾಟ್ಸಾಪ್ ಡಿಲಿಟ್ ಫಾರ್ ಅಲ್ ಎಂಬ ಆಯ್ಕೆಯನ್ನು ನೀಡಿತ್ತು, ಸಂದೇಶವನ್ನು ಕಳುಹಿಸಿದ ನಂತರ, ಡಿಲಿಟ್ ಮಾಡಲು ಈ ಆಪ್ಷನ್ ಬಳಸಬಹುದು. ಅನೇಕ ಬಾರಿ, ಫೋಟೋ ವಿಡಿಯೋಗಳನ್ನು ಇದೇ ರೀತಿ ಕಳುಹಿಸಿದವರು ನೀವು ನೋಡುವ ಅಥವಾ ಸೇವ್ ಮಾಡಿಕೊಳ್ಳುವ ಮೊದಲೇ ಡಿಲಿಟ್ ಮಾಡಿದ್ದಲ್ಲಿ ನೀವು ಅದನ್ನು ಮತ್ತೆ ವಾವಸ್ಸು ಪಡೆಯಬಹುದು. ಹೇಗೆ? ಇಲ್ಲಿದೆ ವಿವರ.
ವಾಟ್ಸಾಪ್ ಡಿಲಿಟ್ ಫಾರ್ ಎವರಿವನ್ ಆಪ್ಷನ್ ನೀಡಿದಾಗಿನಿಂದ, ಬಳಕೆದಾರರು ಸಾಕಷ್ಟು ಅನುಕೂಲವನ್ನು ಪಡೆದಿದ್ದಾರೆ. ಗುಂಪಿಗೆ ಅಥವಾ ವೈಯಕ್ತಿಕ ಚಾಟ್‌ಗೆ ಮಿಸ್ ಆಗಿ ಕಳುಹಿಸಿದ ಮೇಸೆಜ್ ಸಂದೇಶವನ್ನು ಡಿಲಿಟ್ ಮಾಡಬಹುದು.
ವಾಟ್ಸಾಪ್‌ನಲ್ಲಿ ಅಳಿಸಿದ ಸಂದೇಶಗಳನ್ನು ಮತ್ತೆ ಓದಲಾಗುವುದಿಲ್ಲ.
ಇದು ಮಾತ್ರವಲ್ಲ, ವೀಡಿಯೊ ಅಥವಾ ಚಿತ್ರವನ್ನು ಕಳುಹಿಸಿ, ಅದನ್ನು ಡಿಲಿಟ್ ಮಾಡಿದರೆ ನಿಮ್ಮ ಗ್ಯಾಲರಿಯಿಂದಲೂ ಅವುಗಳು ಡಿಲೀಟ್ ಆಗುತ್ತವೆ. ನೀವು ಅದನ್ನು ಮತ್ತೆ ನೋಡಲಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಡಿಲಿಟ್ ಆದ ನಂತರವೂ ಅದನ್ನು ಮರುಪಡೆಯಬಹುದಾದ ವಿಧಾನವನ್ನು ನಾವು ಹೇಳುತ್ತೇವೆ ಕೇಳಿ.
ಇದನ್ನು ಮಾಡಲು ಒಂದು ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಇದು ಥರ್ಡ್ ಪಾರ್ಟಿ ಅಪ್ಲಿಕೇಶನ್ ಆಗಿದೆ. ಇದಕ್ಕಾಗಿ ನೀವು ಇನ್ನೊಂದು ಅಪ್ಲಿಕೇಶನ್‌ನ ಸಹಾಯವನ್ನು ತೆಗೆದುಕೊಳ್ಳಬೇಕಾಗುತ್ತದೆ.
ಡಿಲಿಟ್ ಆದ ಫೋಟೋ ವೀಡಿಯೊಗಳನ್ನು ಮರುಪಡೆಯಲು, Recover Deleted Messages, Status Saver – Chatspy ಎಂಬ ಆ್ಯಪ್ಸ್ ಡೌನ್‌ಲೋಡ್ ಮಾಡಬೇಕು.
ಈ ಅಪ್ಲಿಕೇಶನ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ. ಅಪ್ಲಿಕೇಶನ್ ಅನ್ನು ಇದುವರೆಗೆ 500k ಗಿಂತ ಹೆಚ್ಚು ಬಾರಿ ಡೌನ್‌ಲೋಡ್ ಮಾಡಲಾಗಿದ್ದು, ಪ್ಲೇ ಸ್ಟೋರ್‌ನಲ್ಲಿ 4.3 ರೇಟಿಂಗ್ ಅನ್ನು ಸಹ ಪಡೆದುಕೊಂಡಿದೆ.
ಚಾಟ್‌ಸ್ಪಿ ಡೌನ್‌ಲೋಡ್ ಮಾಡಿದ ನಂತರ ಅಪ್ಲಿಕೇಶನ್ ಓಪನ್ ಮಾಡಿ ನೋಟಿಫಿಕೆಷನ್ access ಪರ್ಮಿಷನ್ ಅನ್ನು ಆನ್ ಮಾಡಿ. ಇದರ ನಂತರ, ಆಟೋಸ್ಟಾರ್ಟ್‌ನ ಅನುಮತಿಯನ್ನು ಸಹ ಆನ್ ಮಾಡಿ.
ಈಗ ಡಿಲಿಟೆಡ್ ಮೀಡಿಯಾ ವಿಭಾಗಕ್ಕೆ ಹೋಗಿ ಅದರ ಅನುಮತಿಯನ್ನು ಆನ್ ಮಾಡಿ. ನಂತರ, ನಿಮ್ಮ ವಾಟ್ಸಾಪ್‌ಗೆ ಬನ್ನಿ. ಮೇಲಿನ ಮೂರು ಸಾಲುಗಳನ್ನು ಇಲ್ಲಿ ಕ್ಲಿಕ್ ಮಾಡಿ ಮತ್ತು data and storage ussageಗೆ ಹೋಗಿ.
ಈಗ ಮೊಬೈಲ್ ಡೇಟಾವನ್ನು ಬಳಸುವಾಗ ಮೀಡಿಯಾ ಆಟೋ ಡೌನ್‌ಲೋಡ್ ಸೆಟ್ಟಿಂಗ್ ಅನ್ನು ಬದಲಾಯಿಸಿ. ನೀವು ಇದನ್ನು ಮಾಡಿದ ತಕ್ಷಣ, ನಿಮ್ಮ ಫೋನ್‌ನಲ್ಲಿ ಫೋಟೋ ಅಥವಾ ವೀಡಿಯೊ ಬಂದ ಕೂಡಲೇ ಡೌನ್‌ಲೋಡ್ ಆಗುತ್ತದೆ. ನೀವು ಅದನ್ನು ಡೌನ್‌ಲೋಡ್ ಮಾಡಬೇಕಾಗಿಲ್ಲ.
ಈಗ ಯಾರಾದರೂ ನಿಮಗೆ ಸಂದೇಶ ಅಥವಾ ಫೋಟೋ-ವಿಡಿಯೋ ಕಳುಹಿಸಿದರೆ ಮತ್ತು ನೀವು ನೋಡುವ ಮೊದಲು ಅದನ್ನು ಡಿಲಿಟ್ ಮಾಡಿದರೆ ಟೆನ್ಷನ್ ತೆಗೆದುಕೊಳ್ಳುವ ಅಗತ್ಯವಿಲ್ಲ. ಅದು ನಿಮ್ಮ ಗ್ಯಾಲರಿಯಲ್ಲಿ ಸೇವ್ ಆಗಿರುತ್ತದೆ.