ಕೈಗೆಟುಕುವ ದರದಲ್ಲಿ ಬಣ್ಣ ಬದಲಾಯಿಸುವ ರಿಯಲ್‌ಮಿ 14 ಸೀರಿಸ್ ಫೋನ್ ಲಾಂಚ್
ನಿಮಗೆ ಫೋನ್ ಯಾವ ಬಣ್ಣದಲ್ಲಿ ಇರಬೇಕು, ಒಂದೊಂದು ದಿನ ಭಿನ್ನ ಬಣ್ಣದಲ್ಲಿ ಫೋನ್ ಇರಬೇಕು ಎಂದರೆ ಇಲ್ಲಿ ಆಯ್ಕೆ ಇದೆ. ಕಾರಣ ರಿಯಲ್‌ಮಿ ಇದೀಗ ಬಣ್ಣ ಬದಲಾಯಿಸುವ ಫೋನ್ ಬಿಡುಗಡೆ ಮಾಡಿದೆ. ಕೈಗೆಟುಕುವ ದರದಲ್ಲಿ ಈ ಫೋನ್ ಲಭ್ಯವಿದೆ

ಭಾರತದಲ್ಲಿ ಸ್ಮಾರ್ಟ್‌ಫೋನ್ ಮಾರುಕಟ್ಟೆ ವಿಸ್ತಾರಗೊಂಡಿದೆ. ಜೊತೆಗೆ ಹಲವು ಆಯ್ಕೆಗಳಿವೆ. ಇದೀಗ ಕೈಗೆಟುಕುವ ದರದಲ್ಲಿ ಹಲವು ಫೀಚರ್ಸ್ ನೀಡುವ ಫೋನ್‌ಗಳಿಗೆ ಭಾರಿ ಬೇಡಿಕೆ ಇದೆ. ಈ ಪೈಕಿ ರಿಯಲ್‌ಮಿ ಭಾರತದಲ್ಲಿ ಉತ್ತಮ ಮಾರುಕಟ್ಟೆ ಹೊಂದಿದೆ. ಇದೀಗ ರಿಯಲ್‌ಮಿ ಬಳಕೆದಾರರ ಬೇಡಿಕೆಗೆ ತಕ್ಕಂತೆ ಹೊಸ ರಿಯಲ್ ಮಿ 14 ಪ್ರೊ ಸೀರಿಸ್ 5ಜಿ ಸೀರಿಸ್ ಫೋನ್ ಹಾಗೂ ರಿಯಲ್ ಮಿ ಬಡ್ಸ್ ವೈರ್ ಲೆಸ್ 5 ANC ಬಿಡುಗಡೆ ಮಾಡಿದೆ.
ಇದು ಬಣ್ಣ ಬದಲಾಯಿಸುವ ಫೋನ್ ಆಗಿದೆ. ರಿಯಲ್ ಮಿ 14 ಪ್ರೊ ಸೀರಿಸ್ 5ಜಿ, ಮೆಚ್ಚುಗೆ ಪಡೆದ ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ನೊಂದಿಗೆ ಸಹ-ರಚಿಸಿದ ವಿಶ್ವದ ಮೊದಲ ಕೋಲ್ಡ್-ಸೆನ್ಸಿಟಿವ್ ಬಣ್ಣ ಬದಲಾಯಿಸುವ ವಿಶೇಷತೆ ಹೊಂದಿದೆ. ರಿಯಲ್ ಮಿ 14 ಪ್ರೊ + 5 ಜಿ ಮೂರು ಸೊಗಸಾದ ಬಣ್ಣಗಳಲ್ಲಿ ಲಭ್ಯವಿದೆ: ಪರ್ಲ್ ವೈಟ್, ಸ್ಯೂಡ್ ಗ್ರೇ, ಮತ್ತು ಭಾರತದ ವಿಶೇಷ ಬಣ್ಣ ರೂಪಾಂತರವಾದ ಬಿಕಾನೇರ್ ಪರ್ಪಲ್ ಮತ್ತು ಮೂರು ಸ್ಟೋರೇಜ್ ರೂಪಾಂತರಗಳನ್ನು ಸಹ ಪರಿಚಯಿಸುತ್ತದೆ: 8 GB + 128 GB ಬೆಲೆ 27,999 ರೂ., 8 GB + 256 GB ಬೆಲೆ 29,999 ರೂ ಮತ್ತು 12 GB + 256 GB ಬೆಲೆ ರೂ 30,999
ರಿಯಲ್ ಮಿ 14 ಪ್ರೊ 5 ಜಿ ಮೂರು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ: ಪರ್ಲ್ ವೈಟ್, ಸ್ಯೂಡ್ ಗ್ರೇ, ಮತ್ತು ಜೈಪುರ್ ಪಿಂಕ್ ಎಂಬ ಭಾರತದ ವಿಶೇಷ ಬಣ್ಣದ ರೂಪಾಂತರವನ್ನು ಸಹ ಪರಿಚಯಿಸುತ್ತದೆ, ಇದರ ಬೆಲೆ 8GB+128GB 22,999 ರೂ ಮತ್ತು 8GB+256GB 24,999 ರೂ.
ರಿಯಲ್ ಮಿ ಬಡ್ಸ್ ವೈರ್ ಲೆಸ್ 5 ANC ಮೂರು ಸ್ಟೈಲಿಶ್ ಬಣ್ಣಗಳಲ್ಲಿ ಲಭ್ಯವಿದೆ: ಮಿಡ್ ನೈಟ್ ಬ್ಲ್ಯಾಕ್, ಟ್ವಿಲೈಟ್ ಪರ್ಪಲ್ ಮತ್ತು ಡಾನ್ ಸಿಲ್ವರ್; ಬೆಲೆ 1,799 ರೂ ಮತ್ತು ರಿಯಾಯಿತಿಯ ನಂತರ ಇದು 1,599 ರೂ.ಗೆ ಲಭ್ಯವಿದೆ. ಜನವರಿ 23 ರಂದು ಮಧ್ಯಾಹ್ನ 12 ಗಂಟೆಯಿಂದ realme.com, ಫ್ಲಿಪ್‌ಕಾರ್ಟ್ , Amazon.in ಮತ್ತು ಮೇನ್ ಲೈನ್ ಚಾನೆಲ್ ಗಳಲ್ಲಿ ಮಾರಾಟ ಪ್ರಾರಂಭವಾಗುತ್ತದೆ
ರಿಯಲ್ ಮಿ 14 ಪ್ರೊ ಸರಣಿ 5 ಜಿ ಯ ಮೊದಲ ಮಾರಾಟವು ಜನವರಿ 23, ಮಧ್ಯಾಹ್ನ 12 ಗಂಟೆಯಿಂದ realme.com, ಫ್ಲಿಪ್‌ಕಾರ್ಟ್, ಮತ್ತು ಮೇನ್ ಲೈನ್ ಚಾನೆಲ್ ಗಳಲ್ಲಿ 4000 ರೂ.ಗಳವರೆಗೆ ಅತ್ಯಾಕರ್ಷಕ ಕೊಡುಗೆಗಳೊಂದಿಗೆ ಪ್ರಾರಂಭವಾಗುತ್ತದೆ. ರಿಯಲ್ ಮಿ 14 ಪ್ರೊ ಸರಣಿಯು ಜನವರಿ 16, 2025 ರಂದು ಮಧ್ಯಾಹ್ನ 1:15 ರಿಂದ ಜನವರಿ 23, ಮಧ್ಯಾಹ್ನ 12:00 ರವರೆಗೆ ಮುಂಗಡ ಬುಕಿಂಗ್ ಗೆ ಲಭ್ಯವಿರುತ್ತದೆ.