ವಾಟ್ಸಾಪ್‌ನಲ್ಲಿ ಡಿಲೀಟ್ ಆದ ಮೆಸೇಜ್ ರಿಕವರಿ ಮಾಡಿಕೊಳ್ಳೋದು ಹೇಗೆ?
ವಾಟ್ಸಾಪ್ ಬಹಳ ದೊಡ್ಡ ಸೋಶಿಯಲ್ ಶೇರಿಂಗ್ ವೇದಿಕೆಯಾಗಿದೆ. ಇಂದಿನ ಸಮಯದಲ್ಲಿ, ಪ್ರತಿಯೊಬ್ಬ ಸ್ಮಾರ್ಟ್ ಫೋನ್ ಬಳಕೆದಾರರು ವಾಟ್ಸಾಪ್ ಅನ್ನು ಬಳಸುತ್ತಾರೆ. ವಾಟ್ಸಾಪ್ ಆಗಾಗ ಹೊಸ ಅಪ್‌ಡೇಟ್‌ಗಳನ್ನು ಪರಿಚಯಿಸುತ್ತದೆ. ಕೆಲವು ಸಮಯದ ಹಿಂದೆ ವಾಟ್ಸಾಪ್ Delete For everyone ಎಂಬ ಫಿಚರ್ ಪರಿಚಯಿಸಿತು, ಇದು ಬಳಕೆದಾರರಿಗೆ ಕಳುಹಿಸಿದ ಸಂದೇಶಗಳನ್ನು ಅಳಿಸಲು ಅನುವು ಮಾಡಿಕೊಡುತ್ತದೆ. ಆದರೆ ಅಳಿಸಿದ ಸಂದೇಶಗಳನ್ನು ಮರು ಪಡೆಯಲು ಅನೇಕ ಮಾರ್ಗಗಳೂ ಇವೆ. ವಾಟ್ಸ್‌ಆ್ಯಪ್‌ನಲ್ಲಿ ಡಿಲೀಟ್ ಮಾಡಿದ ಮೆಸೇಜ್ ನೀವು ಹೇಗೆ ಓದಬಹುದು ಇಲ್ಲಿದೆ ನೋಡಿ.
ಕೆಲವೊಮ್ಮೆ ಮೀಸ್ ಆಗಿ ಕಳುಹಿಸಿದ ಮೆಸೇಜ್ ವಾಟ್ಸಾಪ್ ಬಳಕೆದಾರರು ಡೀಲೀಟ್ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ವಾಟ್ಸಾಪ್ ತನ್ನ ಯೂಸರ್ಸ್‌ಗಾಗಿ Delete For everyone ಅಪ್ಷನ್ ತಂದಿತು.
Delete For everyone ಮೂಲಕ ನೀವು ಅನಗತ್ಯ ಸಂದೇಶಗಳನ್ನು ಅಳಿಸಬಹುದು. ಆದರೆ ಸಂದೇಶ ಕಳುಹಿಸಿದ 13 ಗಂಟೆ 8 ನಿಮಿಷಗಳಲ್ಲಿ ಅದನ್ನು ಡಿಲೀಟ್ ಮಾಡಬೇಕಾಗಿದೆ ಇದರ ನಂತರ ಸಾಧ್ಯವಿಲ್ಲ.
ವಾಟ್ಸಾಪ್‌ನ ಈ ಫಿಚರ್‌ನಿಂದ ಬಳಕೆದಾರರು ತುಂಬಾ ಸಂತೋಷಪಟ್ಟಿದ್ದಾರೆ, ಆದರೆ ಇದು ಹೆಚ್ಚು ಯಶಸ್ವಿಯಾಗಲು ಸಾಧ್ಯವಿಲ್ಲ. ಏಕೆಂದರೆ ಅಳಿಸಿದ ಸಂದೇಶವನ್ನು ನೋಡಲು ಹಲವು ಮಾರ್ಗಗಳಿವೆ.
ಯಾರೊಬ್ಬರ ಡಿಲೀಟ್ ಮೆಸೇಜ್ ವಾಟ್ಸಾಪ್‌ನಲ್ಲಿ ನೋಡಲು ಬಯಸಿದರೆ, ಫೋನ್‌ನಲ್ಲಿ ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳಬೇಕು. ಅದರ ಸಹಾಯದಿಂದ, ನೀವು ಅಳಿಸಿದ ಯಾವುದೇ ಸಂದೇಶವನ್ನು ಬಹಳ ಸುಲಭವಾಗಿ ನೋಡಲು ಸಾಧ್ಯ.
ಮೊದಲನೆಯದಾಗಿ, ನಿಮ್ಮ ಫೋನ್‌ನ ಪ್ಲೇ ಸ್ಟೋರ್‌ನಿಂದ Notisave ಅಪ್ಲಿಕೇಶನ್ ಇನ್‌ಸ್ಟಾಲ್ ಮಾಡಿ. ಅದರ ನಂತರ ಈ ಅಪ್ಲಿಕೇಶನ್ ತೆರೆಯಿರಿ. ನಂತರ, ಪ್ರವೇಶಕ್ಕಾಗಿ ಅನುಮತಿಯನ್ನು ಕೇಳಲಾಗುತ್ತದೆ, ಅದನ್ನು ಅಲೋ ಮಾಡಿ.
ಈ ಅಪ್ಲಿಕೇಶನ್‌ನಲ್ಲಿ ನೀವು ಯಾರ ನೋಟಿಫಿಕೇಶನ್ ಉಳಿಸಲು ಬಯುತ್ತಿರೊ ಆಯ್ಕೆ ಮಾಡಿ. ನೀವು ಅದರಲ್ಲಿ ವಾಟ್ಸಾಪ್ ಅನ್ನು ಸಹ ಉಳಿಸಬಹುದು.
ಇದರ ನಂತರ, ವಾಟ್ಸಾಪ್ ಎಲ್ಲಾ ಸಂದೇಶಗಳನ್ನು ಈ ಅಪ್ಲಿಕೇಶನ್‌ನಲ್ಲಿ ಉಳಿಸಲಾಗುತ್ತದೆ. ನಂತರ, ಅಳಿಸಲಾದ ಸಂದೇಶಗಳಿದ್ದರೂ ಸಹ, ನೀವು ಅವುಗಳನ್ನು ಬಹಳ ಸುಲಭವಾಗಿ ನೋಡಲು ಸಾಧ್ಯವಾಗುತ್ತದೆ.
ನೋಟಿಸೆವ್‌ನ ಹೊರತಾಗಿ, ಇನ್ನೂ ಅನೇಕ ಅಪ್ಲಿಕೇಶನ್‌ಗಳು ಪ್ಲೇ ಸ್ಟೋರ್‌ನಲ್ಲಿವೆ, ಅವುಗಳಿಂದ ನೀವು ವಾಟ್ಸಾಪ್‌ನ ಅಳಿಸಿದ ಸಂದೇಶಗಳನ್ನು ಪ್ರಯತ್ನಿಸಬಹುದು ಮತ್ತು ಮರುಪಡೆಯಬಹುದು.