ರೆಸ್ಟ್ ರೂಮ್, ಬಾತ್ ರೂಮ್ ಮತ್ತು ವಾಶ್ ರೂಮ್ ನಡುವಿನ ವ್ಯತ್ಯಾಸವೇನು?
ರೆಸ್ಟ್ ರೂಮ್, ಬಾತ್ ರೂಮ್ ಮತ್ತು ವಾಶ್ ರೂಮ್ ಈ ಹೆಸರುಗಳ ಬಗ್ಗೆ ಹಲವರಿಗೆ ಗೊಂದಲವಿದೆ. ಯಾವ ಹೆಸರನ್ನು ಯಾಕಾಗಿ ಬಳಸುತ್ತಾರೆ ಎಂಬುದರ ಬಗ್ಗೆ ಬಹುತೇಕರು ತಪ್ಪು ತಿಳಿದುಕೊಂಡಿದ್ದಾರೆ. ಆ ಬಗ್ಗೆ ಸರಿಯಾದ ಮಾಹಿತಿ ಇಲ್ಲಿದೆ.

ಸಾಮಾನ್ಯವಾಗಿ ಶೌಚಾಲಯ, ಬಾತ್ ರೂಂ ಮತ್ತು ರೆಸ್ಟ್ ರೂಂಗಳ ಹೆಸರುಗಳ ಬಗ್ಗೆ ನಮಗೆ ತುಂಬಾ ಗೊಂದಲ ಉಂಟಾಗುತ್ತದೆ, ಯಾವುದಕ್ಕೆ ಯಾವ ಪದಗಳನ್ನು ಬಳಸಬೇಕು ಮತ್ತು ಈ ಮೂರರ ನಡುವಿನ ವ್ಯತ್ಯಾಸವೇನು ಎಂಬುದರ ಬಗ್ಗೆ ಎಲ್ಲರೂ ಗೊಂದಲಕ್ಕೊಳಗಾಗುತ್ತಾರೆ. ಹೀಗಾಗಿಯೇ ವಾಶ್ ರೂಮ್, ರೆಸ್ಟ್ ರೂಮ್ ಒಳಗೆ ಹೋದ ಬಳಿಕ ಗೊಂದಲಗಳು ಕಾಡುವುದು ಸಹಜ.
ಸ್ನಾನಗೃಹ
ಸ್ನಾನಗೃಹವು ಸ್ನಾನಕ್ಕಾಗಿ ಬಳಸುವ ಸ್ಥಳವಾಗಿದೆ. ಈ ಸ್ಥಳವು ಶವರ್, ಬಕೆಟ್, ಟ್ಯಾಪ್ ಮತ್ತು ಎಲ್ಲಾ ಸ್ನಾನದ ಪರಿಕರಗಳನ್ನು ಹೊಂದಿರುತ್ತದೆ. ಇಲ್ಲಿ ಬಾತ್ ಟಬ್ ಕೂಡ ಇರಬಹುದು. ಅನೇಕ ಜನರು ತಮ್ಮ ಮನೆಯಲ್ಲಿ ಶೌಚಾಲಯ ಮತ್ತು ಸ್ನಾನಗೃಹವನ್ನು ಜೊತೆಯಲ್ಲೇ ನಿರ್ಮಿಸುತ್ತಾರೆ. ಅದರಲ್ಲಿ ಟಾಯ್ಲೆಟ್ ಸೀಟ್‌ನ್ನು ಒಟ್ಟಿಗೇ ಜೋಡಿಸಿರಲಾಗಿರುತ್ತದೆ. ಆದರೆ ಅನೇಕ ಮನೆಗಳಲ್ಲಿ ಸ್ನಾನಗೃಹ ಮತ್ತು ಶೌಚಾಲಯ ಪ್ರತ್ಯೇಕವಾಗಿರುತ್ತವೆ.
ವಾಶ್‌ರೂಮ್
ವಾಶ್‌ರೂಮ್ ಎಂದರೆ ಸಿಂಕ್ ಮತ್ತು ಟಾಯ್ಲೆಟ್ ಸೀಟ್ ಎರಡೂ ಇರುವ ಸ್ಥಳ. ಆದರೆ ಇಲ್ಲಿ ಸ್ನಾನ ಮಾಡಲು ಮತ್ತು ಬಟ್ಟೆ ಬದಲಾಯಿಸಲು ಸ್ಥಳವಿಲ್ಲ. ಹೆಚ್ಚಿನ ರೆಸ್ಟೋರೆಂಟ್‌ಗಳು, ಮಾಲ್‌ಗಳು, ಕಛೇರಿಗಳು ವಾಶ್‌ರೂಮ್‌ಗಳನ್ನು ಹೊಂದಿವೆ. ಅಲ್ಲಿ ನೀವು ಶೌಚಾಲಯ ಮತ್ತು ಮೇಕ್ಅಪ್ ಮಾಡಬಹುದು.
ರೆಸ್ಟ್‌ರೂಮ್
ರೆಸ್ಟ್ ರೂಮ್ ಎಂದರೆ ವಿಶ್ರಾಂತಿ ಪಡೆಯುವ ಸ್ಥಳ ಎಂದಲ್ಲ, ಆದರೆ ಅಮೇರಿಕನ್ ಇಂಗ್ಲಿಷ್‌ನಲ್ಲಿ ವಾಶ್‌ರೂಮ್ ಅನ್ನು ರೆಸ್ಟ್ ರೂಂ ಎಂದು ಕರೆಯಲಾಗುತ್ತದೆ, ಹಾಗಾಗಿ ಮಾಲ್‌ನಲ್ಲಿ ವಾಶ್‌ರೂಮ್ ಬದಲಿಗೆ ರೆಸ್ಟ್ ರೂಂ ಎಂದು ಬರೆದರೆ, ಗೊಂದಲಗೊಳ್ಳಬೇಡಿ ಏಕೆಂದರೆ ಇಲ್ಲಿಯೂ ಟಾಯ್ಲೆಟ್ ಸೀಟ್ ಇರುತ್ತದೆ.
ಲ್ಯಾವೆಟರಿ
ಮೊದಲು ವಾಶ್‌ರೂಮ್‌ನ ಬದಲಿಗೆ ಲ್ಯಾವೆಟರಿ ಎಂಬ ಪದವನ್ನು ಬಳಸಲಾಗುತ್ತಿತ್ತು. ಇದು ಲ್ಯಾಟಿನ್ ಪದವಾಗಿದೆ, ಆದರೆ ಈಗ ಇದನ್ನು ವಾಶ್‌ರೂಮ್ ಬದಲಿಗೆ ಬಳಸಲಾಗುತ್ತಿದೆ. ಅನೇಕ ಸ್ಥಳಗಳಲ್ಲಿ, ರೈಲಿನಲ್ಲಿ ಅಥವಾ ವಿಮಾನದಲ್ಲಿ ವಾಶ್‌ರೂಮ್ ಬದಲಿಗೆ ಲ್ಯಾವೆಟರಿ ಎಂಬ ಪದವನ್ನು ಬರೆಯಲಾಗುತ್ತದೆ.
ಶೌಚಾಲಯ
ಇದು ಸಂಪೂರ್ಣವಾಗಿ ಮಲ, ಮೂತ್ರ ವಿಸರ್ಜನೆಗೆ ಇರುವ ಸ್ಥಳವಾಗಿದೆ. ಭಾರತೀಯ ಅಥವಾ ಪಾಶ್ಚಾತ್ಯ ಕಮೋಡ್ ಇರುವ ಸ್ಥಳವೇ ಶೌಚಾಲಯ. ಕೆಲವೊಮ್ಮೆ ಇದನ್ನು ಬಾತ್‌ರೂಮ್‌ನೊಂದಿಗೆ ಜೋಡಿಸಲಾಗುತ್ತದೆ ಮತ್ತು ಕೆಲವೊಮ್ಮೆ ಅದು ಪ್ರತ್ಯೇಕವಾಗಿರುತ್ತದೆ.
ಇನ್ಮುಂದೆ ಎಲ್ಲಿಯಾದರೂ ನೀವು ಹೋಗೋ ಮುನ್ನ ವಾಶ್ ರೂಮ್, ರೆಸ್ಟ್ ರೂಮ್, ಶೌಚಾಲಯದ ಕುರಿತಾದ ಮಾಹಿತಿನ್ನು ತಿಳಿದುಕೊಳ್ಳಿ. ಇದರಿಂದ ಮತ್ತೊಬ್ಬರಿಗೆ ಮಾಹಿತಿ ನೀಡುವಾಗಲೂ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ.