ದುರ್ಬಲ ಉಗುರು ಬಲಪಡಿಸಲು ಈ ಟಿಪ್ಸ್ ಪ್ರಯತ್ನಿಸಿ ನೋಡಿ
First Published Dec 11, 2020, 3:18 PM IST
ದುರ್ಬಲವಾದ ಮತ್ತು ಒಡೆದ ಉಗುರುಗಳನ್ನು ಯಾರೂ ಇಷ್ಟಪಡುವುದಿಲ್ಲ. ಪರಿಸರ ಕೆಲವು ಕ್ರಿಯೆಗಳಿಂದ ಹಿಡಿದು ರಾಸಾಯನಿಕಗಳಿಗೆ ಒಡ್ಡಿಕೊಳ್ಳುವವರೆಗೆ, ನಿಮ್ಮ ಉಗುರುಗಳ ಮೇಲೆ ಬಹಳಷ್ಟು ವಿಷಯಗಳು ಪರಿಣಾಮ ಬೀರುತ್ತವೆ. ಇದು ರಕ್ತಹೀನತೆ, ಥೈರಾಯ್ಡ್ ಕಾಯಿಲೆ ಮತ್ತು ಅಥೆರೋಸ್ಕಲೆರೊಸಿಸ್ ನಂತಹ ಕೆಲವು ಆರೋಗ್ಯ ಸಮಸ್ಯೆಗಳ ಪರಿಣಾಮವಾಗಿರಬಹುದು.

ನಿಮ್ಮ ಉಗುರುಗಳನ್ನು ನೋಡಿಕೊಳ್ಳುವುದು ಮುಖ್ಯ, ಆದರೆ ಮ್ಯಾನಿಕ್ಯೂರ್ ಒಂದೇ ಮಾರ್ಗವಲ್ಲ. ಕೆಲವು ಸರಳ ತಂತ್ರಗಳು ಸಹ ಉಗುರು ಗಟ್ಟಿಯಾಗಿರಲು ಸಹಾಯ ಮಾಡಬಹುದು. ಸುಲಭವಾಗಿ ಉಗುರುಗಳನ್ನು ಸರಿಪಡಿಸಲು ಮತ್ತು ಅವುಗಳನ್ನು ಆರೋಗ್ಯವಾಗಿಡಲು ಕೆಲವು ವಿಧಾನಗಳು ಇಲ್ಲಿವೆ.

ನಿಮ್ಮ ಉಗುರುಗಳನ್ನು ಡ್ರೈ ಹಾಗು ಸ್ವಚ್ಛವಾಗಿಡಿ : ನಿಮ್ಮ ಉಗುರುಗಳನ್ನು ಒಣಗಲು ಬಿಡಿ. ರೋಗಾಣುಗಳು ಮತ್ತು ಬ್ಯಾಕ್ಟೀರಿಯಾ ಸಂತಾನೋತ್ಪತ್ತಿ ಮಾಡುವುದನ್ನು ತಡೆಯಲು ನಿಯಮಿತವಾಗಿ ಸ್ವಚ್ಛಗೊಳಿಸಿ. ಇದು ಉಗುರುಗಳ ಕೆಳಗೆ ಕೊಳಕು ಸಂಗ್ರಹವಾಗುವುದನ್ನು ತಡೆಯುತ್ತದೆ. ನಿಮ್ಮ ಉಗುರುಗಳು ದುರ್ಬಲವಾಗದಿರಲು ನಿಮ್ಮ ಕೈಗಳನ್ನು ನೀರಿನಲ್ಲಿ ತುಂಬಾ ಹೊತ್ತು ಮುಳುಗಿಸುವುದನ್ನು ಸಹ ನೀವು ತಪ್ಪಿಸಬೇಕು. ತುಂಬಾ ಅಗತ್ಯವಿದ್ದರೆ, ಕೈಗವಸುಗಳನ್ನು ಧರಿಸಬಹುದು.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?