ಭೂಮಿ ಮೇಲಿನ ಸ್ವರ್ಗ 'ಮಾಯಾ ಬೇ': ಆದರೆ ಪ್ರವಾಸಿಗರಿಗಿಲ್ಲ ಪ್ರವೇಶ!

First Published 14, May 2019, 5:19 PM

ಥಾಯ್ಲೆಂಡ್ ತನ್ನ ಸುಂದರ ಪ್ರವಾಸಿ ತಾಣಗಳಿಗೇ ಫೇಮಸ್. ಇಲ್ಲಿ ಭೇಟಿ ನಿಡುವ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಇಲ್ಲಿ ಪ್ರವಾಸಿಗರನ್ನು ತನ್ನತ್ತ ಸೆಳೆಯುವ ಹಲವಾರು ವೀಚ್ ಗಳಿವೆ. ಇವುಗಳಲ್ಲಿ 'ಮಾಯಾ ಬೇ' ಕೂಡಾ ಒಂದು. ಆದರೆ ಈ ಬೀಚ್ ಗೆ ಪ್ರವೇಶ ಮಾತ್ರ ಇಲ್ಲ. ಕಾರಣವೇನು? ಇಲ್ಲಿದೆ ವಿವರ

'ಮಾಯಾ ಬೇ' ಥಾಯ್ಲೆಂಡ್ ನ ಫೀ ಫೀ ಲೇಹ್ ಎಂಬ ದ್ವೀಪದಲ್ಲಿದೆ. ಇಲ್ಲಿ ದಿನವೊಂದಕ್ಕೆ ಸುಮಾರು 5 ಸಾವಿರ ಮಂದಿ ಪ್ರವಾಸಿಗರು ಆಗಮಿಸುತ್ತಾರೆ. ಈ ಪ್ರವಾಸಿಗರ ಸಂಖ್ಯೆಯೇ ಈ ದ್ವೀಪದ ಸೌಂದರ್ಯ ಎಷ್ಟಿದೆ ಎಂಬುವುದಕ್ಕೆ ಉದಾಹರಣೆ.

ಇಲ್ಲಿಗಾಗಮಿಸುವ ಪ್ರವಾಸಿಗರು ಈ ದ್ವೀಪವನ್ನು ಭೂಮಿ ಮೇಲಿನ ಸ್ವರ್ಗ ಎಂದೇ ವರ್ಣಿಸುತ್ತಾರೆ.

ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವುದರಿಂದ ಇಲ್ಲಿನ ಪರಿಸರಕ್ಕೆ ಹಾನಿಯುಂಟಾಗಿತ್ತು.

ಪರಿಸರ ಹಾನಿ ಗಮನಿಸಿದ ಪ್ರವಾಸೋದ್ಯಮ ಇಲಾಖೆ ತಾತ್ಕಾಲಿಕವಾಗಿ ಸೆಪ್ಟೆಂಬರ್ ನಿಂದ 4 ತಿಂಗಳವರೆಗೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಿತ್ತು.

ಆದರೆ ಪ್ರವೇಶ ಮತ್ತೆ ಆರಂಭವಾಗುತ್ತಿದ್ದಂತೆಯೇ 'ಮಾಯಾ ಬೇ'ಗೆ ಆಗಮಿಸುವವರ ಸಂಖ್ಯೆ ಮತ್ತೆ ಹೆಚ್ಚಿದ್ದು, ಪರಿಸರ ಹಾನಿಯೂ ಆರಂಭವಾಯಿತು.

ಯಾವುದೇ ಸುಧಾರಣೆಯಾಗದ ಕಾರಣ ಇಲ್ಲಿನ ಸರ್ಕಾರ ಮುಂದಿನ 2 ವರ್ಷಗಳವರೆಗೆ 'ಮಾಯಾ ಬೇ' ಬೀಚ್ ಗೆ ಪ್ರವಾಸಿಗರ ಪ್ರವೇಶ ನಿಷೇಧಿಸಿದೆ.

ಇನ್ನು 'ಮಾಯಾ ಬೇ' ಬೀಚ್ ಗೆ ತೆರಳಬೇಕಾದರೆ ನೀವು 2021ರವರೆಗೆ ಕಾಯಲೇಬೇಕು.