ಬೇಸಿಗೆಯಲ್ಲಿ ಎಸಿ ಬಳಸಿದ್ರೂ ಕರೆಂಟ್ ಬಿಲ್ ಕಡಿಮೆ ಬರಬೇಕಾ? ಈ ಟಿಪ್ಸ್ ಫಾಲೋ ಮಾಡಿ!
ಬೇಸಿಗೆಯಲ್ಲಿ ಸಾಮಾನ್ಯವಾಗಿ ಎಸಿ ಬಳಕೆ ಜಾಸ್ತಿ ಬಳಕೆಯಾಗುತ್ತೆ ಇದರಿಂದ ಕರೆಂಟ್ ಬಿಲ್ ಜಾಸ್ತಿಯಾಗುತ್ತೆ. ಆದ್ರೆ ಕೆಲವು ಟಿಪ್ಸ್ ಬಳಸಿದ್ರೆ ಎಸಿ ಬಳಕೆ ಜಾಸ್ತಿಯಾದ್ರೂ ಕರೆಂಟ್ ಬಿಲ್ ಕಡಿಮೆ ಬರುತ್ತಂತೆ.. ಆ ಟಿಪ್ಸ್ ಏನು ಅಂತ ನೋಡೋಣ.

ಬೇಸಿಗೆಯಲ್ಲಿ ವಿದ್ಯುತ್ ಉಳಿತಾಯ ಸಲಹೆಗಳು
ಬೇಸಿಗೆ ಬಂದ್ರೆ ಜನ ಭಯಪಡ್ತಾರೆ. ಬಿಸಿಲು ಶುರುವಾಗುತ್ತೆ ಅನ್ನೋದು ಕೆಲವರ ಭಯ ಆದ್ರೆ ಈ ಬಿಸಿಲಿನಿಂದ ರಿಲೀಫ್ಗಾಗಿ ಬಳಕೆ ಮಾಡುವ ಫ್ಯಾನ್, ಕೂಲರ್, ಎಸಿಗಳಿಂದ ಕರೆಂಟ್ ಬಿಲ್ ಜಾಸ್ತಿಯಾಗುತ್ತೆ ಅನ್ನೋದು ತುಂಬಾ ಜನರ ಭಯ. ಮುಖ್ಯವಾಗಿ ಎಸಿಗಳ ಬಳಕೆಯಿಂದ ಕರೆಂಟ್ ಬಿಲ್ ತುಂಬಾ ಜಾಸ್ತಿ ಬರುತ್ತೆ.
ಎಸಿ ಯೂಸ್ ಮಾಡಿದ್ರೆ ಕರೆಂಟ್ ಬಿಲ್ ಜಾಸ್ತಿಯಾಗುತ್ತೆ...
ಬಿಸಿಲಿನಿಂದ ತಪ್ಪಿಸಿಕೊಳ್ಳೋಕೆ AC ಬಳಕೆ ಮಾಡಿದ್ರೆ ಆ ತಿಂಗಳ ಕರೆಂಟ್ ಬಿಲ್ ಬಿಸಿ ಗಾಳಿಗಿಂತ ಜಾಸ್ತಿ ಬರುತ್ತೆ. ಇದರಿಂದ ಏನ್ ಮಾಡೋದು ಅಂತ ಗೊತ್ತಾಗದೆ ಜನ ಕಷ್ಟಪಡ್ತಿದ್ದಾರೆ. ಒಂದು ಕಡೆ ಬಿಸಿಲು, ಬಿಸಿ ಗಾಳಿನು ತಡ್ಕೊಳ್ಳೋಕೆ ಆಗಲ್ಲ... ಇನ್ನೊಂದು ಕಡೆ ಕರೆಂಟ್ ಬಿಲ್ನ್ನು ಸಹಿಸಿಕೊಳ್ಳೋಕೆ ಆಗಲ್ಲ... ಅಂಥವರು ಎಸಿ ಯೂಸ್ ಮಾಡಿದ್ರೂ ಕರೆಂಟ್ ಬಿಲ್ ಕಡಿಮೆ ಬರಬೇಕು ಅಂದ್ರೆ ಈ ಟಿಪ್ಸ್ ಫಾಲೋ ಮಾಡಿ.
ಕರೆಂಟ್ ಬಿಲ್ ಕಡಿಮೆ ಮಾಡ್ಕೊಳ್ಳೋದು ಹೇಗೆ?
ಎಸಿನ 24 ಡಿಗ್ರಿಲಿ ಯೂಸ್ ಮಾಡಿದ್ರೆ ಕರೆಂಟ್ ಯೂಸೇಜ್ ಸ್ವಲ್ಪ ಕಡಿಮೆ ಆಗುತ್ತೆ... ಅದ್ರಿಂದ ಬಿಲ್ ಕಡಿಮೆ ಬರೋ ಚಾನ್ಸಸ್ ಇರುತ್ತೆ. ಇನ್ನು ಮನೇಲಿ ಯಾರೂ ಇಲ್ಲದೆ ಇರೋ ಟೈಮ್ನಲ್ಲಿ ಎಸಿನ ಆಫ್ ಮಾಡ್ಬೇಕು.. ಸುಮ್ನೆ ಎಸಿ ಬಳಕೆ ಮಾಡಬಾರ್ದು.
ಎಸಿ ಟೈಮರ್ ಸೆಟ್ ಮಾಡ್ಕೋಬೇಕು. ಅಂದ್ರೆ ಅವಶ್ಯಕತೆ ಇರೋ ಅಷ್ಟು ಹೊತ್ತು ಆನ್ನಲ್ಲಿ ಇಟ್ಟು ಆಟೋಮೆಟಿಕ್ ಆಗಿ ಆಫ್ ಆಗೋ ಹಾಗೆ ಟೈಮ್ ಸೆಟ್ ಮಾಡ್ಬೇಕು. ಅದ್ರಿಂದ ಎಸಿ ಯೂಸೇಜ್ ಕಡಿಮೆ ಆಗುತ್ತೆ.
ಎಸಿನ ರೆಗ್ಯುಲರ್ ಆಗಿ ಸರ್ವಿಸಿಂಗ್ ಮಾಡಿಸೋದ್ರಿಂದ ಅದರ ಕೆಲಸದ ರೀತಿ ಇಂಪ್ರೂವ್ ಆಗುತ್ತೆ. ಅದಕ್ಕೆ ಎಸಿನ ಕಡಿಮೆ ಟೆಂಪರೇಚರ್ನಲ್ಲಿ ಇಡೋ ಅವಶ್ಯಕತೆ ಇರಲ್ಲ. ಈ ತರನು ವಿದ್ಯುತ್ ಬರ್ಡನ್ ಕಡಿಮೆ ಆಗುತ್ತೆ.