ಭಯ ಇಲ್ಲದೇ ಗಬ್ಬೆದ್ದು ಹೋಗಿರುವ ಸ್ವಿಚ್ ಬೋರ್ಡ್ ಕ್ಲೀನ್ಗೆ ಈ ವಸ್ತು ಬಳಸಿ
ಮನೆಯಲ್ಲಿ ಹೆಚ್ಚು ನಿರ್ಲಕ್ಷ್ಯಕ್ಕೆ ಒಳಗಾಗೋದು ಎಲೆಕ್ಟ್ರಿಕಲ್ ಸ್ವಿಚ್ಬೋರ್ಡ್. ಅದನ್ನು ನಿತ್ಯವೂ ಬಳಸ್ತೀವಿ. ಆದರೆ ಅದರ ಮೇಲೆ ಅಂಟಿರುವ ಕೊಳೆಯನ್ನ ತೆಗೆಯುವ ಗೌಜಿಗೆ ಹೋಗೋದಿಲ್ಲ. ಭಯ ಬಿಟ್ಟಾಗಿ ಸಿಂಪಲ್ಲಾಗಿ ಕ್ಲೀನ್ ಮಾಡೋದು ಹೇಗೆ?
ಶಾಕ್ ಹೊಡೆಸಿಕೊಳ್ಳದೇ ಕ್ಲೀನ್ ಮಾಡಿ
ನಿತ್ಯ ಮನೆಯಲ್ಲಿ ಕ್ಲೀನಿಂಗ್ ನಡೆಯುತ್ತದೆ. ಸಿಕ್ಕಸಿಕ್ಕ ಜಾಗಗಳಲ್ಲಿ ಉಜ್ಜಿ, ತಿಕ್ಕಿ ತೊಳೆದು ಇವತ್ತು ಕ್ಲೀನಿಂಗ್ ಎಂದು ಹೇಳ್ತೇವೆ. ಆದರೆ.. ಪ್ರತಿ ಬಾರಿ ಕ್ಲೀನಿಂಗ್ ಅಂತಾ ಬಂದಾಗ ನಿರ್ಲಕ್ಷ್ಯಕ್ಕೆ ಒಳಗಾಗೋದು ಸ್ವಿಚ್ಬೋರ್ಡ್. ಮನೆಯಲ್ಲಿರುವ ವಿದ್ಯುತ್ ಲೈಟ್, ಆನ್ ಆಫ್ ಮಾಡುವ ಸ್ವಿಚ್ಗಳನ್ನ ನೀವು ಶಾಕ್ ಹೊಡೆಸಿಕೊಳ್ಳದೇ ಸುಲಭವಾಗಿ ಕ್ಲೀನ್ ಮಾಡಬಹುದು..
ಸ್ವಿಚ್ಬೋರ್ಡ್ ಯಾಕೆ ಕೊಳೆ ಆಗುತ್ತೆ?
ಸ್ವಿಚ್ ಬೋರ್ಡ್ ಕೊಳೆಯಾಗಲು ಕಾರಣ ನಿತ್ಯವೂ ಅದರ ಬಳಕೆ. ಮನೆಯಲ್ಲಿ ಇತರೆ ವಸ್ತುಗಳನ್ನ ಕ್ಲೀನ್ ಮಾಡುವಾಗ ಗೋಡೆ ಮೇಲಿರುವ ಸ್ವಿಚ್ ಬೋರ್ಡ್ ಅನ್ನು ನಿರ್ಲಕ್ಷ್ಯ ಮಾಡಿ ಬಿಡುತ್ತೇವೆ. ಜೊತೆಗೆ ಅದನ್ನು ನಾವು ಟಚ್ ಮಾಡುವಾಗ ನಮ್ಮ ಕೈಯಿಂದ ಎಣ್ಣೆಯಿಂದ ಕೂಡಿರುತ್ತೆ, ಧೂಳಿನಿಂದ ಮುಟ್ಟುತ್ತೇವೆ. ಜೊತೆಗೆ ಕೈಕೊಳಕು ಇದ್ದಾಗಲೂ ಅದನ್ನು ಟಚ್ ಮಾಡಿ ಇನ್ನಷ್ಟು ಗಬ್ಬೆಬ್ಬಿಸುತ್ತೇವೆ.
ಸುಲಭವಾಗಿ ಕ್ಲೀನ್ ಮಾಡೋದು ಹೇಗೆ?
- ಸ್ವಿಚ್ ಬೋರ್ಡ್ ಕ್ಲಿನಿಂಗ್ ಇಳಿಯುವ ಮೊದಲು ಮೀಟರ್ನಲ್ಲಿ ವಿದ್ಯುತ್ ಆಫ್ ಮಾಡಬೇಕು
- ಒಣಗಿದ ಅಥವಾ ಸ್ವಲ್ಪ ಒದ್ದೆಯಾದ ಬಟ್ಟೆಯನ್ನು ತೆಗೆದುಕೊಂಡು ನಿಧಾನಕ್ಕೆ ಒರೆಸಬೇಕು
- ಬಟ್ಟೆಗೆ ಸ್ವಲ್ಪ ಪ್ರಮಾಣದ ಶುಚಿಗೊಳಿಸುವ ವಸ್ತು ಬಳಸಿ ನಿಧಾನವಾಗಿ ಸ್ವಚ್ಛಗೊಳಿಸಿ
- ಬೆರಳಚ್ಚುಗಳು ಅಥವಾ ಗ್ರೀಸ್ ಇರುವಲ್ಲಿ ಮೃದುವಾದ ಬಟ್ಟೆಯಿಂದ ನಿಧಾನವಾಗಿ ಸ್ವಚ್ಛಗೊಳಿಸಿ
- ಕೆಲವು ಕಡೆಗಳಲ್ಲಿ ನೀವು ಬ್ರಷ್ ಬಳಸಿ ಸ್ವಚ್ಛಗೊಳಿಸಬಹು
- ಟೂತ್ ಪೇಸ್ಟ್ ಬಳಸಿ ಬೆಳಕಿನ ಕಲೆಗಳನ್ನು ನೀವು ತೆಗೆದುಹಾಕಬಹುದು
- ನಿಂಬೆ ಮತ್ತು ಉಪ್ಪನ್ನು ಸಹ ಬಳಸಿ ಸ್ವಿಚ್ ಬೋರ್ಡ್ ಕ್ಲೀನ್ ಮಾಡಬಹುದು
ನೇಲ್ ಪಾಲಿಷ್ ಬಳಸಬಹುದಾ?
ಶಾಯಿ, ಹಳೆಯ ಗೀರು ಗುರುತುಗಳನ್ನ ತೆಗೆಯೋದು ಕಷ್ಟ. ಅದಕ್ಕಾಗಿ ಕೆಲವರು ನೇಲ್ ಪಾಲಿಷ್ ಬಳಸುತ್ತಾರೆ. ನೇಲ್ ಪಾಲಿಷ್ನಲ್ಲಿ ಅಸಿಟೋನ್ ಇರೋದ್ರಿಂದ ಕಲೆ ತೆಗೆಯಲು ಸಹಾಯ ಮಾಡಬಹುದು. ಆದರೆ ಎಲ್ಲಾ ಕಲೆಗಳನ್ನ ತೆಗೆಯೋದಿಲ್ಲ. ಅಸಿಟೋನ್ ಪ್ಲಾಸ್ಟಿಕ್, ಬಣ್ಣ ಅಥವಾ ಕೆಲವು ವಸ್ತುಗಳನ್ನ ಹಾನಿ ಮಾಡುತ್ತವೆ.
ಎಚ್ಚರಿಕೆ ಏನು?
- ಸ್ವಿಚ್ಬೋರ್ಡ್ ಸ್ವಚ್ಛಗೊಳಿಸುವಾಗ ಸುರಕ್ಷತೆ ಅತ್ಯಂತ ಮುಖ್ಯ
- ಶುಚಿಗೊಳಿಸುವಿಕೆ ಪ್ರಾರಂಭಿಸುವ ಮೊದಲು ವಿದ್ಯುತ್ ಆಫ್ ಮಾಡಿ
- ಒದ್ದೆಯಾದ ಕೈಗಳಿಂದ ಸ್ವಿಚ್ಬೋರ್ಡ್ ಅನ್ನು ಮುಟ್ಟಬೇಡಿ
- ಆದಷ್ಟು ಒದ್ದೆಯಾದ ಬಟ್ಟೆ ಬಳಸೋದನ್ನು ತಪ್ಪಿಸಿ
- ನೇರವಾಗಿ ಯಾವುದೇ ದ್ರವವನ್ನು ಸಿಂಪಡಿಸಬೇಡಿ
- ಸ್ವಚ್ಛಗೊಳಿಸಿದ ನಂತರ ಬೋರ್ಡ್ ಸಂಪೂಣ ಒಣಗಲು ಬಿಡಿ
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.

