ಲಂಚ್ ಬ್ಯಾಗ್ ಗಬ್ಬು ನಾರ್ತಿದ್ಯಾ? ಕ್ಲೀನ್ ಮಾಡಲು ಸೂಪರ್ ಟ್ರಿಕ್ಸ್; Cleaning Hacks
ಪ್ರತಿದಿನವೂ ಬಳಕೆ ಮಾಡುವ ಲಂಚ್ ಬ್ಯಾಗ್‌ನಲ್ಲಿರುವ ಸಾಂಬಾರ್ ಕಲೆ, ಜಿಡ್ಡು ಮತ್ತು ಕೆಟ್ಟ ವಾಸನೆಯನ್ನು ಸುಲಭವಾಗಿ ನಿವಾರಿಸುವುದು ಹೇಗೆಂದು ತಿಳಿಯಿರಿ. ಲಂಚ್ ಬ್ಯಾಗ್ ಕ್ಲೀನಿಂಗ್ ಟಿಪ್ಸ್ ಇಲ್ಲಿದೆ.

ಲಂಚ್ ಬ್ಯಾಗ್ ಕ್ಲೀನಿಂಗ್
ಲಂಚ್ ಬ್ಯಾಗ್‌ನಲ್ಲಿ ಸಾಂಬಾರ್, ರಸಂ, ಮೊಸರು ಚೆಲ್ಲಿ ಕಲೆ, ಜಿಡ್ಡು, ವಾಸನೆ ಬರೋದು ಕಾಮನ್. ಬರೀ ಮೇಲ್ಗಡೆ ಒರೆಸಿದರೆ ಸಾಲದು, ಮೂಲೆಗಳಲ್ಲಿ ಕೊಳೆ ಹಾಗೇ ಉಳಿದು ಫಂಗಸ್ ಬರಬಹುದು. ಊಟ ಚೆಲ್ಲಿದ ತಕ್ಷಣ ಕ್ಲೀನ್ ಮಾಡೋದು ಬೆಸ್ಟ್. ಮೊದಲು ಬ್ಯಾಗ್ ಒಳಗಿರೋ ಕಸ ತೆಗೆದು, ಕಂಪನಿಯವರು ಕೊಟ್ಟಿರೋ ಸೂಚನೆ ಓದಿ. ಕೆಲವು ಬ್ಯಾಗ್‌ಗಳನ್ನ ನೀರಿನಲ್ಲಿ ತೊಳೆಯಬಹುದು, ಇನ್ನು ಕೆಲವನ್ನ ಒದ್ದೆ ಬಟ್ಟೆಯಲ್ಲಿ ಮಾತ್ರ ಒರೆಸಬೇಕು. ಒಳಗೆ ಇನ್ಸುಲೇಶನ್ ಅಥವಾ ಫೋಮ್ ಇದ್ರೆ ಹೆಚ್ಚು ನೀರು ಬಳಸಬೇಡಿ.
ಬ್ಯಾಗ್‌ನ ಮೂಲೆಗಳು ಮತ್ತು ಹೊಲಿಗೆ
ಬ್ಯಾಗ್‌ನ ಮೂಲೆಗಳು ಮತ್ತು ಹೊಲಿಗೆಗಳಲ್ಲಿ ಕೊಳೆ ಜಾಸ್ತಿ ಇರುತ್ತೆ. ಈ ಕೊಳೆ ತೆಗೆಯಲು ಸ್ವಲ್ಪ ಮೈಲ್ಡ್ ಸೋಪ್ ನೀರಿಗೆ ಹಾಕಿ, ಹಳೇ ಸಾಫ್ಟ್ ಟೂತ್‌ಬ್ರಷ್‌ನಿಂದ ನಿಧಾನವಾಗಿ ಉಜ್ಜಿ. ಜೋರಾಗಿ ಉಜ್ಜಿದರೆ ಬಟ್ಟೆ ಹಾಳಾಗಬಹುದು. ಆಮೇಲೆ ಒದ್ದೆ ಬಟ್ಟೆಯಿಂದ ಸೋಪ್ ಅಂಶ ಹೋಗುವಂತೆ ಒರೆಸಿ. ಎಣ್ಣೆ, ಸಾಂಬಾರ್ ಕಲೆಗಳಿದ್ದರೆ ತಕ್ಷಣ ಕ್ಲೀನ್ ಮಾಡಿ. ಸ್ಟೇನ್ ರಿಮೂವರ್ ಬಳಸುವ ಮುನ್ನ ಬ್ಯಾಗ್‌ನ ಒಂದು ಸಣ್ಣ ಮೂಲೆಯಲ್ಲಿ ಟೆಸ್ಟ್ ಮಾಡಿ ನೋಡಿ. ಬ್ಲೀಚ್‌ನಂತಹ ಸ್ಟ್ರಾಂಗ್ ಕೆಮಿಕಲ್ ಬಳಸಬೇಡಿ.
ಜಿಪ್ ಕ್ಲೀನ್ ಮಾಡೋದು ಹೇಗೆ?
ಬ್ಯಾಗ್ ಕ್ಲೀನ್ ಮಾಡುವಾಗ ಜಿಪ್ ಕಡೆ ನಾವು ಗಮನ ಕೊಡಲ್ಲ. ಜಿಪ್ ಮಧ್ಯೆ ಊಟದ ಕಣಗಳು, ಸಾಸ್ ಸಿಕ್ಕಿಹಾಕಿಕೊಂಡು ಜಿಪ್ ಹಾಕಲು ಕಷ್ಟವಾಗಬಹುದು. ಸ್ವಲ್ಪ ಸೋಪ್ ನೀರಲ್ಲಿ ಅದ್ದಿದ ಸಾಫ್ಟ್ ಬಟ್ಟೆ ಅಥವಾ ಇಯರ್ ಬಡ್ಸ್ ಬಳಸಿ ಜಿಪ್‌ನ ಎರಡು ಕಡೆ ನಿಧಾನವಾಗಿ ಒರೆಸಿ. ಆಮೇಲೆ ಒದ್ದೆ ಬಟ್ಟೆಯಿಂದ ಕ್ಲೀನ್ ಮಾಡಿ. ಜಿಪ್ ತೊಳೆಯಲು ಹೆಚ್ಚು ನೀರು ಹಾಕಬೇಡಿ. ಬ್ಯಾಗ್ ಬೇಗ ಕ್ಲೀನ್ ಆಗಲಿ ಅಂತ ಸ್ಟೀಮ್ ಬಳಸಬೇಡಿ, ಇದರಿಂದ ಪ್ಲಾಸ್ಟಿಕ್ ಅಥವಾ ಫೋಮ್ ಹಾಳಾಗಬಹುದು.
ಬ್ಯಾಗ್ ಒಣಗಿಸುವ ವಿಧಾನ
ಬ್ಯಾಗ್ ಕ್ಲೀನ್ ಮಾಡಿದ ಮೇಲೆ ಚೆನ್ನಾಗಿ ಒಣಗಿಸೋದು ಬಹಳ ಮುಖ್ಯ. ಸ್ವಲ್ಪ ತೇವಾಂಶ ಇದ್ದರೂ ಮತ್ತೆ ವಾಸನೆ, ಫಂಗಸ್ ಬರುತ್ತೆ. ಜಿಪ್ ಪೂರ್ತಿ ತೆಗೆದು, ಗಾಳಿಯಾಡುವ ಜಾಗದಲ್ಲಿ ಒಣಗಲು ಬಿಡಿ. ಕಂಪನಿಯ ಸೂಚನೆ ಇದ್ದರೆ ಮಾತ್ರ ಬಿಸಿಲಿನಲ್ಲಿ ಒಣಗಿಸಿ, ಇಲ್ಲದಿದ್ದರೆ ಬಣ್ಣ ಮಾಸಬಹುದು. ಪೂರ್ತಿ ಒಣಗಿದ ಮೇಲಷ್ಟೇ ಬ್ಯಾಗ್ ಮುಚ್ಚಿಡಿ. ದಿನಾ ಮನೆಗೆ ಬಂದ ತಕ್ಷಣ ಲಂಚ್ ಬಾಕ್ಸ್ ಹೊರತೆಗೆದು, ಏನಾದರೂ ಚೆಲ್ಲಿದೆಯಾ ಅಂತ ಚೆಕ್ ಮಾಡಿ ಒರೆಸಿದರೆ ಬ್ಯಾಗ್ ಲೈಫ್ ಹೆಚ್ಚಾಗುತ್ತೆ.
ದಿನನಿತ್ಯದ ನಿರ್ವಹಣೆ
ಲಂಚ್ ಬ್ಯಾಗ್ ಕ್ಲೀನ್ ಆಗಿಡಲು ದುಬಾರಿ ವಸ್ತುಗಳೇನೂ ಬೇಕಿಲ್ಲ. ಮೈಲ್ಡ್ ಸೋಪ್ ನೀರು, ಸಾಫ್ಟ್ ಬ್ರಷ್, ಕ್ಲೀನ್ ಬಟ್ಟೆ ಇದ್ರೆ ಸಾಕು. ವಾಸನೆ ಹೋಗದಿದ್ದರೆ ಅಥವಾ ಕಪ್ಪು ಕಲೆ, ಫಂಗಸ್ ಕಂಡರೆ ಕಂಪನಿಯ ಸೂಚನೆಗಳನ್ನು ಪಾಲಿಸಿ. ಬ್ಯಾಗ್‌ನ ಒಳಗಿನ ಲೇಯರ್ ಹಾಳಾಗಿದ್ದರೆ ಹೊಸ ಬ್ಯಾಗ್ ತಗೊಳ್ಳೋದು ಒಳ್ಳೇದು. ಲಂಚ್ ಬಾಕ್ಸ್ ಟೈಟ್ ಆಗಿ ಮುಚ್ಚುವುದು, ಸೋರದ ಡಬ್ಬಿಗಳನ್ನು ಬಳಸುವುದು ಮತ್ತು ಊಟ ಚೆಲ್ಲಿದ ತಕ್ಷಣ ಒರೆಸುವ ಅಭ್ಯಾಸ ಮಾಡಿಕೊಂಡರೆ ಬ್ಯಾಗ್ ಯಾವಾಗಲೂ ಫ್ರೆಶ್ ಆಗಿರುತ್ತೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
