ಮುಖೇಶ್ ಅಂಬಾನಿಗಿಂತ ದೊಡ್ಡ ಸಿರಿವಂತ ಈ ಬ್ಯಾಂಕ್ ಎಂಡಿ

First Published Jun 29, 2020, 6:33 PM IST

ಕಾರ್ಪೊರೇಟ್ ವಲಯದಲ್ಲಿ ಉನ್ನತ ಮಟ್ಟದ ಅಧಿಕಾರಿಗಳು ಹೆಚ್ಚಿನ ಸಂಬಳ ಪಡೆಯುವುದು ಕಾಮನ್. ಭಾರತ ಮಾತ್ರವಲ್ಲ, ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಎಂದು ಪರಿಗಣಿಸಲಾಗಿದೆ. ಜೊತೆಗೆ ಅವರು ವಿಶ್ವದ ಶ್ರೀಮಂತರಲ್ಲಿ 9ನೇ ಸ್ಥಾನದಲ್ಲಿದ್ದಾರೆ, ಆದರೆ ಅವರಿಗಿಂತ ಹೆಚ್ಚಿನ ಸಂಬಳ ಹೊಂದಿರುವ ವ್ಯಕ್ತಿ  ಭಾರತದಲ್ಲಿದ್ದಾರೆ, ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಮುಕೇಶ್ ಅಂಬಾನಿಗಿಂತ ಎಚ್‌ಡಿಎಫ್‌ಸಿ ಬ್ಯಾಂಕ್ ಎಂಡಿ ಮತ್ತು ಸಿಇಒ ಆದಿತ್ಯ ಪುರಿ ಹೆಚ್ಚಿನ ಸಂಬಳ ಪಡೆಯುತ್ತಾರೆ. ಎಚ್‌ಡಿಎಫ್‌ಸಿ ಬ್ಯಾಂಕ್ ಖಾಸಗಿ ವಲಯದ ಅತಿದೊಡ್ಡ ಬ್ಯಾಂಕ್ ಎಂಬ ಕೀರ್ತಿಗೆ ಪಾತ್ರವಾಗಿದೆ.