ಉಪ್ಪಿನಕಾಯಿ ಹಾಕೋಕೆ ಯಾವ ಡಬ್ಬಿ ಬೆಸ್ಟ್? ಪ್ಲಾಸ್ಟಿಕ್ Vs ಗಾಜು Vs ಭರಣಿ Vs ಮಡಿಕೆ
ಉಪ್ಪಿನಕಾಯಿಯನ್ನು ದೀರ್ಘಕಾಲದವರೆಗೆ ಸಂಗ್ರಹಿಸಲು ಯಾವ ಡಬ್ಬಿಗಳು ಸುರಕ್ಷಿತ ಎಂಬುದರ ಬಗ್ಗೆ ಬಹುತೇಕ ಗೊಂದಲವಿರುತ್ತದೆ. ಇಂದು ಮಾರುಕಟ್ಟೆಯಲ್ಲಿ ಉಪ್ಪಿನಕಾಯಿಗಳು ಹೆಚ್ಚಾಗಿ ಪ್ಲಾಸ್ಟಿಕ್, ಗಾಜಿನ ಡಬ್ಬಗಳಲ್ಲಿ ಬರುತ್ತವೆ.

ಉಪ್ಪಿನಕಾಯಿಗೆ ಯಾವ ಡಬ್ಬಿ ಬೆಸ್ಟ್?
ಉಪ್ಪಿನಕಾಯಿ ಅಂದ್ರೆ ಕಣ್ಮುಂದೆ ಭರಣಿಗಳು ಬರುತ್ತವೆ. ಆದ್ರೆ ಇತ್ತೀಚಿನ ದಿನಗಳಲ್ಲಿ ವ್ಯಾಪಾರಿಗಳು ಉಪ್ಪಿನಕಾಯಿಯನ್ನು ಪ್ಲಾಸ್ಟಿಕ್ ಅಥವಾ ಗಾಜಿನ ಬಾಟೆಲ್‌ಗಳಲ್ಲಿ ಹಾಕಿ ಸ್ಟೋರ್ ಮಾಡುತ್ತಾರೆ. ಇನ್ನು ಕೆಲ ಉಪ್ಪಿನಕಾಯಿಗಳು ಪ್ಲಾಸ್ಟಿಕ್ ಕವರ್‌ಗಳಲ್ಲಿ ಬರುತ್ತವೆ. ಉಪ್ಪಿನಕಾಯಿಯನ್ನು ದೀರ್ಘಕಾಲದವರೆಗೆ ಸ್ಟೋರ್ ಮಾಡೋದರಿಂದ ಪಾತ್ರೆ ಬಳಕೆ ಅತ್ಯಂತ ಮುಖ್ಯವಾಗುತ್ತದೆ. ಈ ಲೇಖನದಲ್ಲಿ ಯಾವ ಪಾತ್ರೆ ಉತ್ತಮ ಎಂದು ನೋಡೋಣ ಬನ್ನಿ.
ಪ್ಲಾಸ್ಟಿಕ್ ಬಾಕ್ಸ್/ಡಬ್ಬ
ದೀರ್ಘಕಾಲದವರೆಗೆ ಉಪ್ಪಿನಕಾಯಿ ಸಂಗ್ರಹಿಸಲು ಪ್ಲಾಸ್ಟಿಕ್ ಕಂಟೇನರ್ ಒಳ್ಳೆಯದಲ್ಲ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಒಂದು ವೇಳೆ ಅಂಗಡಿಯಿಂದ ಪ್ಲಾಸ್ಟಿಕ್ ಡಬ್ಬದಲ್ಲಿರುವ ಉಪ್ಪಿನಕಾಯಿ ತಂದ್ರೆ ಅದನ್ನು ಮತ್ತೊಂದು ಪಾತ್ರೆಗೆ ಬದಲಿಸೋದು ಒಳ್ಳೆಯದು. ಉಪ್ಪಿನಕಾಯಿಗಳು ಅಧಿಕ ಆಮ್ಲಗಳನ್ನು (ವಿನೆಗರ್,ಸಿಟ್ರಿಕ್, ಲ್ಯಾಕ್ಟಿಕ್, ಅಸಿಟಿಕ್) ಹೊಂದಿರುತ್ತವೆ. ಈ ಆಮ್ಲಗಳು ಪ್ಲಾಸ್ಟಿಕ್‌ನೊಂದಿಗೆ ಪ್ರತಿಕ್ರಿಯಿಸಿ ಹಾನಿಕಾರಕ ರಾಸಾಯನಿಕಗಳನ್ನು ಬಿಡುಗಡೆ ಮಾಡುವ ಸಾಧ್ಯತೆ ಇರುತ್ತದೆ. ಈ ರಾಸಾಯನಿಕ ಉಪ್ಪಿನಕಾಯಿಯಲ್ಲಿ ಸೇರಿ ಫುಡ್ ಪಾಯಿಸನ್ ಅಪಾಯವುಂಟು ಮಾಡಬಹುದು.
ಗಾಜಿನ ಜಾಡಿಗಳು
ಗಾಜಿನ ಜಾಡಿ ಅಥವಾ ಸೆರಾಮಿಕ್ ಜಾಡಿಗಳಲ್ಲಿ ಉಪ್ಪಿನಕಾಯಿಗಳನ್ನು ಸ್ಟೋರ್ ಮಾಡಬಹುದು. ಬಳಕೆದಾರರು ಉಪ್ಪಿನಕಾಯಿ ಸಂಗ್ರಹಣೆಗೆ ಉತ್ತಮ ಎಂದು ಪರಿಗಣಿಸುತ್ತಾರೆ. ಆಹಾರ ಸಂಗ್ರಹಿಸುವ ಉದ್ದೇಶದಿಂದಲೇ ಕೆಲವು ಗಾಜು ಬಳಕೆ ಮಾಡಲಾಗುತ್ತದೆ. ಗುಣಮಟ್ಟದ ಗಾಜುಗಳು ಉಪ್ಪಿನಕಾಯಿಯಲ್ಲಿರುವ ಆಮ್ಲಗಳು ಮತ್ತು ಲವಣಗಳೊಂದಿಗೆ ಪ್ರತಿಕ್ರಿಯಿಸುವುದಿಲ್ಲ. ಉಪ್ಪಿನಕಾಯಿ ಅಥವಾ ಸಂಗ್ರಹಿಸಿದ ಆಹಾರಕ್ಕೆ ಯಾವುದೇ ರಾಸಾಯನಿಕಗಳನ್ನು ಬಿಡುಗಡೆ ಮಾಡಲ್ಲ. ದೀರ್ಘಕಾಲದ ಉಪ್ಪಿನಕಾಯಿ ಸಂಗ್ರಹಣೆಗೆ ಗುಣಮಟ್ಟದ ಗಾಜಿನ ಜಾಡಿಗಳು ಸೂಕ್ತ ಎಂಬ ಅಭಿಪ್ರಾಯವಿದೆ.
ಭರಣಿಗಳು ಮತ್ತು ಮಡಿಕೆಗಳು
ಹಿಂದಿನಿಂದಲೂ ಉಪ್ಪಿನಕಾಯಿಗಳನ್ನು ಸೆರಾಮಿಕ್ಸ್ ಅಥವಾ ಪಿಂಗಾಣಿ ಮಾದರಿಯ ಭರಣಿಗಳನ್ನು ಬಳಕೆ ಮಾಡಲಾಗುತ್ತದೆ. ಈ ಭರಣಿಗಳು ಮಸಾಲೆಗಳ ಸಮೃದ್ಧ ಸುವಾಸನೆಯನ್ನು ಹೊರಗೆ ಹೋಗದಂತೆ ತಡೆಯುತ್ತದೆ. ಸಾಂಪ್ರದಾಯಿಕ ಮಡಿಕೆಗಳು ತಾಪಮಾನವನ್ನು ಸಮತೋಲನಗೊಳಿಸಲು ಮತ್ತು ನೈಸರ್ಗಿಕ ಪರಿಮಳವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಮಣ್ಣಿನ ಮಡಿಕೆಗಳು ಉಪ್ಪಿನಕಾಯಿ ರುಚಿಯನ್ನು ಫ್ರೆಶ್ ಆಗಿಡುತ್ತದೆ.
ಉಪ್ಪಿನಕಾಯಿ ಸಂಗ್ರಹಿಸುವಾಗ ಇರಲಿ ಮುನ್ನೇಚ್ಚರಿಕೆ
ಉಪ್ಪಿನಕಾಯಿ ಹಾಕುವ ಮುನ್ನ ಪಾತ್ರೆ ಅಥವಾ ಭರಣಿ ಸಂಪೂರ್ಣವಾಗಿ ಅಂದ್ರೆ ಶೇ.100ರಷ್ಟು ಒಣಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಒಂದೇ ಒಂದು ಹನಿ ನೀರು ಸಹ ನಿಮ್ಮ ಉಪ್ಪಿನಕಾಯಿಯನ್ನು ಹಾಳು ಮಾಡುತ್ತದೆ. ಪ್ರತಿಬಾರಿಯೂ ಸ್ವಚ್ಛವಾದ, ಒಣಗಿದ ಚಮಚವನ್ನು ಬಳಸಿ. ಉಪ್ಪಿನಕಾಯಿ ಡಬ್ಬವನ್ನು ಬಿಗಿಯಾಗಿ ಮುಚ್ಚಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

