ಬೇಸಿಗೆಯಲ್ಲಿ ಅಡುಗೆಮನೆ ಶಾಖದಿಂದ ಕೆಂಡವಾಗಿದ್ಯಾ? ಕಿಚನ್ ತಂಪಾಗಿಡುವ ಸರಳ ವಿಧಾನಗಳು
Kitchen Cooling Tips: ಬೇಸಿಗೆಯಲ್ಲಿ ಅಡುಗೆಮನೆಯನ್ನು ತಂಪಾಗಿರಿಸಲು ಕೆಲವು ಸರಳ ಉಪಾಯಗಳಿವೆ. ಕೆಲ ವಿಧಾನಗಳು ಬೇಸಿಗೆಯಲ್ಲಿ ನಿಮ್ಮ ಅಡುಗೆಮನೆಯ ಶಾಖವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಅಡುಗೆಮನೆ
ಅಡುಗೆಮನೆಯನ್ನು ಮನೆಯ ಹೃದಯ ಭಾಗ ಎಂದು ಕರೆಯಲಾಗುತ್ತದೆ. ಒಲೆ ಉರಿಸೋದರಿಂದ ಅಡುಗೆ ಸಮಯದಲ್ಲಿ ಕಿಚನ್ ಬೆಂಕಿಯುಂಡೆಯಾಗಿರುತ್ತದೆ. ಒಲೆಯ ಶಾಖದಿಂದ ಅಡುಗೆ ಮಾಡುವಾಗ ಬೆವರು ಬಂದು ಸುಸ್ತು ಆಗುತ್ತದೆ. ಬೇಸಿಗೆಯಲ್ಲಿ ಅಡುಗೆಮನೆಯನ್ನು ಹೇಗೆ ತಂಪಾಗಿರಿಸೋದು ಎಂದು ನೋಡೋಣ ಬನ್ನಿ.
ಅಡುಗೆ ಸಮಯ ಬದಲಾವಣೆ ಮಾಡ್ಕೊಳ್ಳಿ
ನೀವು ದಿನಕ್ಕೆ ಎರಡ್ಮೂರು ಬಾರಿ ಅಡುಗೆ ಮಾಡ್ತಿದ್ರೆ ಸರಿಯಾದ ಸಮಯವನ್ನು ಹೊಂದಾಣಿಕೆ ಮಾಡಿಕೊಳ್ಳಿ. ಬೆಳಗ್ಗೆ 10 ಗಂಟೆ ನಂತ್ರ ಬಿಸಿಲು ಹೆಚ್ಚಾಗುತ್ತದೆ. ಹಾಗಾಗಿ ಬೆಳಗ್ಗೆ 10 ಗಂಟೆ ಮುಂಚೆ ಮತ್ತು ಸಂಜೆ 6 ಗಂಟೆಯ ನಂತರ ಅಡುಗೆ ಮಾಡಿ. ಇದರಿಂದ ಅಡುಗೆಮನೆಯ ಬಿಸಿ ಕಡಿಮೆ ಮಾಡಬಹುದು.
ಕಡಿಮೆ ಸಮಯದಲ್ಲಿ ಸಿದ್ಧವಾಗುವ ಅಡುಗೆಗಳು
ಕಡಿಮೆ ಸಮಯದಲ್ಲಿ ಸಿದ್ದವಾಗುವ ಅಡುಗೆ ಮಾಡಲು ಪ್ರಯತ್ನಿಸಿ. ಹೀಗೆ ಮಾಡೋದರಿಂದ ಹೆಚ್ಚು ಸಮಯ ಅಡುಗೆಮನೆಯಲ್ಲಿ ನಿಲ್ಲೋದು ತಪ್ಪಲಿದೆ. ಹೆಚ್ಚು ಜಟಿಲವಲ್ಲದ ಅಡುಗೆ ಖಾದ್ಯಗಳನ್ನು ಆಯ್ಕೆ ಮಾಡಿಕೊಳ್ಳಿ. ದೀರ್ಘ ಸಮಯ ಒಲೆ ಇರದಿದ್ರೆ ಅಡುಗೆಮನೆಯ ತಾಪಮಾನ ಏರಿಕೆಯಾಗದೇ ಕೂಲ್ ಕೂಲ್ ಆಗಿರುತ್ತದೆ.
ಕಡಿಮೆ ಗ್ಯಾಸ್
ಕಡಿಮೆ ಸಮಯದಲ್ಲಿ ಸಿದ್ಧವಾಗುವ ಅಡುಗೆ ಜೊತೆಯಲ್ಲಿ ಗ್ಯಾಸ್ ಅತಿಯಾಗಿ ಬಳಕೆ ಮಾಡೋದನ್ನು ಕಡಿಮೆ ಮಾಡಿ. ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯವಾಗಿರುವ ಸಂದರ್ಭದಲ್ಲಿ ಇದೊಂದು ಒಳ್ಳೆಯ ಆಯ್ಕೆಯಾಗಲಿದೆ. ಊಟಕ್ಕಾಗಿ ಹಣ್ಣು, ಸಲಾಡ್, ಮಜ್ಜಿಗೆ, ಮೊಸರು, ಹಾಲು ಇಂತಹ ಆಹಾರ ಬಳಕೆ ಮಾಡೋದರಿಂದ ಗ್ಯಾಸ್ ಬಳಕೆ ಕಡಿಮೆಯಾಗಲಿದೆ.
ಸಿದ್ಧತೆ
ಅಡುಗೆ ತಯಾರಿಸುವ ಮೊದಲೇ ಎಲ್ಲಾ ಸಿದ್ದತೆಗಳನ್ನು ಮಾಡಿಟ್ಟುಕೊಳ್ಳಿ. ಒಲೆ ಆನ್ ಮಾಡ್ಕೊಂಡು ಸಿದ್ಧತೆ ಮಾಡಿಕೊಂಡ್ರೆ ಹೆಚ್ಚು ಗ್ಯಾಸ್ ಬಳಸಿದಂತೆ ಆಗುತ್ತದೆ. ಇದರ ಜೊತೆ ಅಡುಗೆಮನೆ ಬಿಸಿಯಾಗುತ್ತದೆ. ತರಕಾರಿ ಕತ್ತರಿಸುವುದು ಸೇರಿದಂತೆ ಎಲ್ಲಾ ಪೂರ್ವ ತಯಾರಿಗಳನ್ನು ಮಾಡಿಕೊಂಡು ಒಲೆ ಹಚ್ಚಿಕೊಳ್ಳಿ.
ಇದನ್ನೂ ಓದಿ: ಗಂಟೆಗಟ್ಟಲೆ ಉಜ್ಜೋದು ಬೇಡ, ಈ ಲಿಕ್ವಿಡ್ ಬಳಸಿದರೆ ಎಕ್ಸಾಸ್ಟ್ ಫ್ಯಾನ್ ಜಿಡ್ಡು ತಾನಾಗಿಯೇ ಬಿಡುತ್ತೆ
ಎಕ್ಸಾಸ್ಟ್ ಬಳಸಿ
ಇತ್ತೀಚಿನ ದಿನಗಳಲ್ಲಿ, ಪ್ರತಿಯೊಬ್ಬರ ಅಡುಗೆಮನೆಯಲ್ಲಿ ಚಿಮಣಿ ಇರುತ್ತದೆ. ಅಡುಗೆ ಮಾಡುವಾಗ ಯಾವಾಗಲೂ ಚಿಮಣಿಯನ್ನು ಬಳಸಿ. ಅಡುಗೆಮನೆಯ ಕಿಟಕಿಗಳನ್ನು ತೆರೆಯಿರಿ. ಈ ರೀತಿ ಮಾಡೋದರಿಂದ ಅಡುಗೆಮನೆ ಶಾಖ ಕಡಿಮೆಯಾಗೋದರ ಜೊತೆ ಕೊಳಕು, ತೇವಾಂಶ ಮತ್ತು ವಾಸನೆಯೂ ನಿವಾರಣೆಯಾಗುತ್ತದೆ. ಅಡುಗೆಮನೆಗೆ ಎಕ್ಸಾಸ್ಟ್ ಹಾಕಿಕೊಳ್ಳೋದರಿಂದ ವಾತಾವರಣ ತಂಪಾಗಿರಿಸುತ್ತದೆ.
ಇದನ್ನೂ ಓದಿ: ದೋಸೆ ಮಾಡೋಕೆ ಹೋದ್ರೆ ರಟ್ಟಿನ ತರ ಗಟ್ಟಿ ಆಗುತ್ತಿದೆಯೇ?, ಪರ್ಫೆಕ್ಟ್ ಆಗಿ ಬರಲು ಇಲ್ಲಿದೆ ಸೀಕ್ರೆಟ್ ಟಿಪ್
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

