ಕೊಪ್ಪಳ: ಬಸಂತಿ ಸಾಂಗ್‌ಗೆ ಭರ್ಜರಿ ಡ್ಯಾನ್ಸ್ ಮಾಡಿದ ಶಿಕ್ಷಕಿ..!
First Published Mar 24, 2021, 10:51 AM IST
ಕೊಪ್ಪಳ(ಮಾ.24): ಸ್ವಾತಂತ್ರ್ಯ ಹೋರಾಟಗಾರರಾದ ಸುಖದೇವ್, ರಾಜಗುರು ಹಾಗೂ ಭಗತ್‌ಸಿಂಗ್ ಅವರ ಬಲಿದಾನದ ದಿನವೇ ಶಿಕ್ಷಕಿಯೊಬ್ಬರು ಚಲನಚಿತ್ರದ ಹಾಡಿಗೆ ಭರ್ಜರಿಯಾಗಿ ಡ್ಯಾನ್ಸ್ ಮಾಡಿದ ಬಗ್ಗೆ ಪರ- ವಿರೋಧ ಚರ್ಚೆಯಾಗುತ್ತಿದೆ.

ಕೊಪ್ಪಳ ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ನಡೆದ ಘಟನೆ

ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸೇರಿದಂತೆ ವಿವಿಧ ಕಾರ್ಯಕ್ರಮಗಳ ನಿಮಿತ್ತ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮ

ಈ ಕಾರ್ಯಕ್ರಮದಲ್ಲಿ ಬಸಂತಿ ಹಾಡಿಗೆ ವಿದ್ಯಾರ್ಥಿಗಳೊಂದಿಗೆ ಹೆಜ್ಜೆ ಹಾಕಿದ ದೈಹಿಕ ಶಿಕ್ಷಣ ಶಿಕ್ಷಕಿ ಶೋಭಾ

ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್

ಇದೂ ಕೂಡ ಸುಖದೇವ್, ರಾಜಗುರು ಹಾಗೂ ಭಗತ್‌ಸಿಂಗ್ ಅವರ ಬಲಿದಾನದ ದಿನವೇ ಶಿಕ್ಷಕಿಯೊಬ್ಬರು ಈ ರೀತಿಯಾಗಿ ವಿದ್ಯಾರ್ಥಿಗಳೊಂದಿಗೆ ಹೆಜ್ಜೆಗೆ ಹಾಕಿದ ಬಗ್ಗೆ ಪರ- ವಿರೋಧ ಚರ್ಚೆ

ಶಿಕ್ಷಕಿಯ ನೃತ್ಯದಿಂದ ವಿದ್ಯಾರ್ಥಿಗಳಿಗೆ ಏನು ಸಂದೇಶ ನೀಡಿದಂತಾಗುತ್ತದೆ ಎನ್ನುವ ಕುರಿತು ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ