- Home
- Karnataka Districts
- ಲಕ್ಕುಂಡಿ ರಹಸ್ಯ ಭೇದಿಸಲು ಇಸ್ರೋ ಎಂಟ್ರಿ: ಸ್ಯಾಟಲೈಟ್ ಕಣ್ಣಲ್ಲಿ ನೂರೊಂದು ದೇಗುಲಗಳ ಹುಡುಕಾಟ!
ಲಕ್ಕುಂಡಿ ರಹಸ್ಯ ಭೇದಿಸಲು ಇಸ್ರೋ ಎಂಟ್ರಿ: ಸ್ಯಾಟಲೈಟ್ ಕಣ್ಣಲ್ಲಿ ನೂರೊಂದು ದೇಗುಲಗಳ ಹುಡುಕಾಟ!
ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ನೂರೊಂದು ಬಾವಿ ಮತ್ತು ದೇವಾಲಯಗಳನ್ನು ಪತ್ತೆಹಚ್ಚಲು ಇಸ್ರೋ ಸಹಯೋಗದೊಂದಿಗೆ ಸ್ಯಾಟಲೈಟ್ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಇತ್ತೀಚೆಗೆ ರಾಷ್ಟ್ರಕೂಟರ ಕಾಲದ ಅಪರೂಪದ ವೀರಗಲ್ಲೊಂದು ಪತ್ತೆಯಾಗಿದೆ.

ಸ್ಯಾಟಲೈಟ್ ಇಮೇಜಿಂಗ್ ತಂತ್ರಜ್ಞಾನ
ಗದಗ ಜಿಲ್ಲೆಯ ಐತಿಹಾಸಿಕ ಗ್ರಾಮ ಲಕ್ಕುಂಡಿ ಉತ್ಖನನಕ್ಕೆ ಸ್ಯಾಟಲೈಟ್ ತಂತ್ರಜ್ಞಾನ ಬಳಸುವ ಕುರಿತು ವಿಧಾನಸೌಧದಲ್ಲಿ ಸಭೆ ನಡೆಸಲಾಯ್ತು. ಪ್ರವಾಸೋದ್ಯಮ ಸಚಿವ ಹೆಚ್ ಕೆ ಪಾಟೀಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳು, ಇಸ್ರೋ ವಿಜ್ಞಾನಿಗಳು ಭಾಗಿಯಾಗಿದ್ದರು. ಸಚಿವ ಹೆಚ್ ಕೆ ಪಾಟೀಲ್ ಅವರು ಸ್ಯಾಟಲೈಟ್ ಇಮೇಜಿಂಗ್ ತಂತ್ರಜ್ಞಾನದ ಬಗ್ಗೆ ಸಚಿವ ಹೆಚ್ ಕೆ ಪಾಟೀಲ್ ಮಾಹಿತಿ ಪಡೆದುಕೊಂಡಿದ್ದಾರೆ.

ಹೆಚ್ ಕೆ ಪಾಟೀಲ್ ಹೇಳಿದ್ದೇನು?
ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಲಕ್ಕುಂಡಿಯಲ್ಲಿ ನೂರೊಂದು ಬಾವಿ, ನೂರೊಂದು ದೇವಾಲಯಗಳ ಹುಡುಕಾಟ ನಡೆಯುತ್ತಿದೆ. ರಾಜ್ಯ ಸರ್ಕಾರ ಬಹಳ ಆಸಕ್ತಿ ವಹಿಸಿ ಉತ್ಖನನ ಮಾಡುತ್ತಿದೆ. ಲಕ್ಕುಂಡಿ ಗ್ರಾಮದಲ್ಲಿರುವ ಬಾವಿ, ದೇವಾಲಗಳ ಹುಡುಕಾಟಕ್ಕೆ ತಂತ್ರಜ್ಞಾನ ಬಳಕೆ ಮಾಡಬೇಕು. ಹಾಗಾಗಿ ಇಂದಿನ ಸಭೆಯಲ್ಲಿ ಇಸ್ರೋದ ತಜ್ಞರ ಸಲಹೆ ಪಡೆದಿದ್ದೇವೆ. ಇಸ್ರೋದ ಮಾಜಿ ಅಧ್ಯಕ್ಷ ಕಿರಣ್ ಕುಮಾರ್ ಅವ್ರ ಜೊತೆ ಚರ್ಚೆ ಮಾಡಿದ್ದೇವೆ ಎಂದು ಸಚಿವರು ತಿಳಿಸಿದರು.
ದೇವಾಲಯಗಳ ಹುಡುಕಾಟ
ದೇವಾಲಯ, ಬಾವಿಗಳ ಹುಡುಕಾಟಕ್ಕೆ ಸ್ಯಾಟಲೈಟ್ ತಂತ್ರಜ್ಞಾನ ಬಳಕೆ ಮಾಡುತ್ತೇವೆ. ಈಗ 38 ಬಾವಿ ದೇವಾಲಯ ಪತ್ತೆ ಹಚ್ಚಿದ್ದೇವೆ. ಇನ್ನು 62 ದೇವಾಲಯ ಹುಡುಕಬೇಕಿದೆ ಎಂದು ಮಾಧ್ಯಮಗಳಿಗೆ ಸಚಿವರು ಮಾಹಿತಿ ನೀಡಿದರು. ಲಕ್ಕುಂಡಿ ಉತ್ಖನನಕ್ಕೆ ಡಿಸೆಂಬರ್ ವರೆಗೆ ಗಡುವು ನೀಡಲಾಗಿದೆ.
ಅಪರೂಪದ ವೀರಗಲ್ಲು ಅನಾವರಣ
ಇತ್ತೀಚಿನ ಉತ್ಖನನದ ವೇಳೆ ಲಕ್ಕುಂಡಿಯ ಕುಂಬಾರ ಬಾವಿಯ ಬಳಿ 9- 10ನೇ ಶತಮಾನದ ರಾಷ್ಟ್ರಕೂಟರ ಕಾಲದ ಅತ್ಯಂತ ಅಪರೂಪದ ವೀರಗಲ್ಲು ಪತ್ತೆಯಾಗಿದೆ. ಇದು ಕೇವಲ ಕಲ್ಲಲ್ಲ, ಅಂದಿನ ಶೌರ್ಯ ಮತ್ತು ಸಂಸ್ಕೃತಿಯ ಜೀವಂತ ಸಾಕ್ಷಿಯಾಗಿವೆ. ಈ ವೀರಗಲ್ಲು ನಾಲ್ಕು ಹಂತದ ಕೆತ್ತನೆಗಳನ್ನು ಹೊಂದಿದೆ. ಕೆಳಗಿನ ಪಟ್ಟಿಕೆಯಲ್ಲಿ ಯುದ್ಧದ ದೃಶ್ಯವಿದ್ದು (ಮಣ್ಣಿನಲ್ಲಿ ಹೂತಿದೆ), ಎರಡನೇ ಪಟ್ಟಿಕೆಯಲ್ಲಿ ಅಪ್ಸರೆಯರು ವೀರನನ್ನು ಸ್ವರ್ಗಕ್ಕೆ ಕರೆದೊಯ್ಯುತ್ತಿರುವ ಮನಮೋಹಕ ದೃಶ್ಯವಿದೆ.
ಇದನ್ನೂ ಓದಿ: ವಾರಂಗಲ್ ಹಿಂದಿಕ್ಕಿ, ಐತಿಹಾಸಿಕ ದಾಖಲೆ ಬರೆಯುತ್ತ ಹೆಜ್ಜೆಯಿಟ್ಟ ಲಕ್ಕುಂಡಿ
ಕೈಬೀಸಿ ಕರೆಯುತ್ತಿದೆ ಲಕ್ಕುಂಡಿ
ಒಟ್ಟಾರೆಯಾಗಿ ಲಕ್ಕುಂಡಿಯು ಕೇವಲ ಗದಗ ಜಿಲ್ಲೆಯ ಹೆಮ್ಮೆಯಷ್ಟೇ ಅಲ್ಲದೆ, ಭಾರತದ ಸಾಂಸ್ಕೃತಿಕ ಭೂಪಟದಲ್ಲಿ ಅಗ್ರಸ್ಥಾನಕ್ಕೇರಿದೆ. ಇಲ್ಲಿನ ಪ್ರತಿಯೊಂದು ಕಲ್ಲು ಈಗ ಇತಿಹಾಸದ ಕಥೆ ಹೇಳುತ್ತಿದ್ದು, ಪ್ರವಾಸಿಗರನ್ನು ಹಾಗೂ ಸಂಶೋಧಕರನ್ನು ಕೈಬೀಸಿ ಕರೆಯುತ್ತಿದೆ. ಇಲ್ಲಿನ ಮಣ್ಣಿನ ಹುದುಗಿ ಹೋಗಿರುವ ಇತಿಹಾಸ ಅಗೆದಷ್ಟು ಆಳಕ್ಕಿಳಿಯುತ್ತಿದೆ ಎಂದು ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.
ಇದನ್ನೂ ಓದಿ: ಲಕ್ಕುಂಡಿ ಚಿನ್ನದ ನಿಧಿ ಪ್ರಕರಣಕ್ಕೆ ಭಾರಿ ಟ್ವಿಸ್ಟ್: ಇದು ಎಂಟು ಕೋಟಿಯ ರಹಸ್ಯ! 2 ತಿಂಗಳ ಬಳಿಕ ನಡೆದದ್ದೇನು?

