MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಪ್ರೀತ್ಸೆ ಅಂತಾ ಪ್ರಾಣ ತಿನ್ನೋ ಆನೇಕಲ್ ಪ್ರೇಮಿ: ಪ್ರೇಯಸಿ ಮದುವೆಗೆ ನಿರಾಕರಿಸಿದ್ದಕ್ಕೆ ಹೈಟೆನ್ಷನ್ ಕಂಬ ಹತ್ತಿದ!

ಪ್ರೀತ್ಸೆ ಅಂತಾ ಪ್ರಾಣ ತಿನ್ನೋ ಆನೇಕಲ್ ಪ್ರೇಮಿ: ಪ್ರೇಯಸಿ ಮದುವೆಗೆ ನಿರಾಕರಿಸಿದ್ದಕ್ಕೆ ಹೈಟೆನ್ಷನ್ ಕಂಬ ಹತ್ತಿದ!

ಪ್ರೀತಿಸಿದ ಯುವತಿ ಮದುವೆಗೆ ನಿರಾಕರಿಸಿದಳೆಂಬ ಕಾರಣಕ್ಕೆ ಆನೇಕಲ್ ತಾಲ್ಲೂಕಿನ ಸೋಮಶೇಖರ್ ಎಂಬ ಯುವಕ ಹೈಟೆನ್ಷನ್ ವಿದ್ಯುತ್ ಕಂಬ ಹತ್ತಿ ಹೈಡ್ರಾಮಾ ಸೃಷ್ಟಿಸಿದ್ದಾನೆ. ಸ್ಥಳಕ್ಕೆ ಆಗಮಿಸಿದ ಪೊಲೀಸ್ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ, ಯುವಕನನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ.

2 Min read
Author : Sathish Kumar KH
Published : May 20 2026, 01:48 PM IST
Share this Photo Gallery
  • FB
  • TW
  • Linkdin
  • Whatsapp
19
ಹೈಟೆನ್ಷನ್ ಕಂಬ ಹತ್ತಿದ ಸೋಮಶೇಖರ್
Image Credit : Asianet News

ಹೈಟೆನ್ಷನ್ ಕಂಬ ಹತ್ತಿದ ಸೋಮಶೇಖರ್

ಬೆಂಗಳೂರು ಗ್ರಾಮಾಂತರ (ಮೇ 20): ಪ್ರೀತಿಯಲ್ಲಿ ಸೋತವರು ಏನೆಲ್ಲಾ ಮಾಡುತ್ತಾರೆ ಎಂಬುದಕ್ಕೆ ಆನೇಕಲ್ ತಾಲ್ಲೂಕಿನಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಪ್ರೀತಿಸಿದ ಯುವತಿ ಮದುವೆಗೆ ನಿರಾಕರಿಸಿದ್ದಾಳೆ ಎಂಬ ಕಾರಣಕ್ಕೆ ಯುವಕನೊಬ್ಬ ಹೈಟೆನ್ಷನ್ ವಿದ್ಯುತ್ ಕಂಬ ಹತ್ತಿ ಪ್ರಾಣದ ಹಂಗು ತೊರೆದು ಹೈಡ್ರಾಮಾ ಸೃಷ್ಟಿಸಿರುವ ಘಟನೆ ಆನೇಕಲ್ ತಾಲ್ಲೂಕಿನ ಚಿನ್ನಯ್ಯನಪಾಳ್ಯದಲ್ಲಿ ನಡೆದಿದೆ.

Add Asianetnews Kannada as a Preferred SourcegooglePreferred
29
ಏನಿದು ಘಟನೆ?
Image Credit : Asianet News

ಏನಿದು ಘಟನೆ?

ಚಿನ್ನಯ್ಯನಪಾಳ್ಯದ ನಿವಾಸಿಯಾದ ಸೋಮಶೇಖರ್ ಎಂಬ ಯುವಕ ಕಳೆದ 3 ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ. ಆದರೆ, ಸೋಮಶೇಖರ್ ಚಟಗಳ ದಾಸನಾಗಿದ್ದೇ ಆತನ ಪ್ರೀತಿಗೆ ಮುಳುವಾಗಿದೆ.

Related Articles

Related image1
ಮದುವೆಗೆ ವಧು ಸಿಗದ್ದಕ್ಕೆ ಕರೆಂಟ್ ಕಂಬ ಹತ್ತಿದ ಯುವಕ, ತಾಯಿ ಮುಂದೆಯೇ ಹೈಟೆನ್ಷನ್ ತಂತಿ ಮುಟ್ಟಿ ನೇತಾಡಿದ!
Related image2
ಮದುವೆ ಮಾಡಿಸುವಂತೆ ಹೈಟೆನ್ಷನ್ ಟವರ್ ಏರಿ 9 ಗಂಟೆ ಹೈಡ್ರಾಮಾ: ಯುವತಿಯ ಪ್ರೇಮ ಹಠಕ್ಕೆ ಪೊಲೀಸರು ಸುಸ್ತೋ ಸುಸ್ತು!
39
ಲವ್ ಬ್ರೇಕಪ್
Image Credit : Asianet News

ಲವ್ ಬ್ರೇಕಪ್

ಈತ ನಿರಂತರವಾಗಿ ಮದ್ಯಪಾನ ಮತ್ತು ಗಾಂಜಾ ಸೇವನೆ ಮಾಡುತ್ತಿದ್ದ ಎನ್ನಲಾಗಿದೆ. ಸೋಮಶೇಖರ್‌ನ ಈ ದುಶ್ಚಟಗಳಿಂದ ಬೇಸತ್ತಿದ್ದ ಯುವತಿ, ಇತ್ತೀಚೆಗೆ ಆತನೊಂದಿಗೆ ಲವ್ ಬ್ರೇಕಪ್ ಮಾಡಿಕೊಳ್ಳಲು ನಿರ್ಧರಿಸಿದ್ದಳು. ಅಲ್ಲದೆ, 'ನಿನ್ನನ್ನು ಮದುವೆಯಾಗಲು ಸಾಧ್ಯವಿಲ್ಲ' ಎಂದು ಖಡಾಖಂಡಿತವಾಗಿ ಹೇಳಿದ್ದಳು.

49
ಮನೆ ಧ್ವಂಸ ಮಾಡಿ ಕಂಬ ಹತ್ತಿದ ಪ್ರೇಮಿ:
Image Credit : Asianet News

ಮನೆ ಧ್ವಂಸ ಮಾಡಿ ಕಂಬ ಹತ್ತಿದ ಪ್ರೇಮಿ:

ಬುಧವಾರ ಬೆಳಿಗ್ಗೆ ಗಾಂಜಾ ಮತ್ತು ಎಣ್ಣೆ ಅಮಲಿನಲ್ಲಿ ತೇಲುತ್ತಿದ್ದ ಸೋಮಶೇಖರ್, ಪ್ರೇಯಸಿಗೆ ಫೋನ್ ಮಾಡಿದ್ದಾನೆ. ಈ ವೇಳೆ ಮತ್ತೆ ಮದುವೆಯ ಪ್ರಸ್ತಾಪ ಇಟ್ಟಾಗ ಯುವತಿ ನಿರಾಕರಿಸಿದ್ದಾಳೆ. ಇದರಿಂದ ಕೆರಳಿದ ಸೋಮಶೇಖರ್, ಮೊದಲು ಆಕೆಯ ಮನೆಯ ಶೀಟ್‌ಗಳನ್ನು ಹೊಡೆದು ಧ್ವಂಸಗೊಳಿಸಿ ದಾಂಧಲೆ ನಡೆಸಿದ್ದಾನೆ. ಅಲ್ಲಿಂದ ನೇರವಾಗಿ ಓಡಿ ಬಂದು ಮನೆ ಸಮೀಪವೇ ಇದ್ದ ಸಾವಿನ ದೂತನಂತಿರುವ ಹೈಟೆನ್ಷನ್ ವಿದ್ಯುತ್ ಕಂಬವನ್ನು ಹತ್ತಿದ್ದಾನೆ.

59
ಹುಡುಗಿ ಬರೋವರೆಗೂ ಕೆಳಗಿಳಿಯಲ್ಲ ಎಂದು ಹಠ:
Image Credit : Asianet News

ಹುಡುಗಿ ಬರೋವರೆಗೂ ಕೆಳಗಿಳಿಯಲ್ಲ ಎಂದು ಹಠ:

ಸಾವಿರಾರು ವೋಲ್ಟ್ ವಿದ್ಯುತ್ ಹರಿಯುವ ಕಂಬದ ತುತ್ತತುದಿಗೆ ಏರಿ ಕುಳಿತ ಸೋಮಶೇಖರ್, 'ನನ್ನ ಪ್ರೇಯಸಿ ಸ್ಥಳಕ್ಕೆ ಬರಬೇಕು, ಅವಳು ಮದುವೆಗೆ ಒಪ್ಪುವವರೆಗೆ ನಾನು ಕೆಳಗಿಳಿಯುವುದಿಲ್ಲ' ಎಂದು ಹಠ ಹಿಡಿದಿದ್ದಾನೆ. ಇದನ್ನು ಕಂಡ ಗ್ರಾಮಸ್ಥರು ಬೆಚ್ಚಿಬಿದ್ದಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸೋಮಶೇಖರ್‌ನ ತಂದೆಯೇ ಮಗನ ಈ ಹುಚ್ಚಾಟವನ್ನು ಕಂಡು ಪೊಲೀಸರಿಗೆ ದೂರು ನೀಡಿದ್ದಾರೆ.

69
ಸ್ಥಳಕ್ಕೆ ಪೊಲೀಸ್ ಮತ್ತು ಅಗ್ನಿಶಾಮಕ ದಳ ದೌಡು:
Image Credit : Asianet News

ಸ್ಥಳಕ್ಕೆ ಪೊಲೀಸ್ ಮತ್ತು ಅಗ್ನಿಶಾಮಕ ದಳ ದೌಡು:

ವಿಷಯ ತಿಳಿಯುತ್ತಿದ್ದಂತೆಯೇ ಆನೇಕಲ್ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಪೊಲೀಸರು ಎಷ್ಟೇ ಮನವೊಲಿಸಿದರೂ ಸೋಮಶೇಖರ್ ಮಾತ್ರ ಕೆಳಗಿಳಿಯಲು ಒಪ್ಪದೆ ಹಠ ಮುಂದುವರಿಸಿದ್ದಾನೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಪೊಲೀಸರು ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿದ್ದಾರೆ.

79
ನೂರಾರು ಜನರು ಜಮಾವಣೆ
Image Credit : Asianet News

ನೂರಾರು ಜನರು ಜಮಾವಣೆ

ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಯುವಕನನ್ನು ಸುರಕ್ಷಿತವಾಗಿ ಕೆಳಗಿಳಿಸಲು ಕಾರ್ಯಾಚರಣೆ ನಡೆಸಲಾಗುತ್ತಿದೆ. ಸ್ಥಳದಲ್ಲಿ ನೂರಾರು ಗ್ರಾಮಸ್ಥರು ಜಮಾಯಿಸಿದ್ದು, ಯುವಕನ ಹುಚ್ಚಾಟಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

89
ಯುವಕನ ಕೆಳಗಿಳಿಸಲು ಶತಪ್ರಯತ್ನ
Image Credit : Asianet News

ಯುವಕನ ಕೆಳಗಿಳಿಸಲು ಶತಪ್ರಯತ್ನ

ಪ್ರಾಣದ ಹಂಗು ತೊರೆದು ಈತ ಮಾಡುತ್ತಿರುವ ಹೈಡ್ರಾಮಾದಿಂದಾಗಿ ಇಡೀ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಯುವಕನನ್ನು ಕೆಳಗಿಳಿಸಲು ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಶತಪ್ರಯತ್ನ ನಡೆಸುತ್ತಿದ್ದಾರೆ.

99
ಕೊನೆಗೂ ಸುರಕ್ಷಿತವಾಗಿ ಕೆಳಗೆ ಬಂದ ಸೋಮಶೇಖರ್‌
Image Credit : Asianet News

ಕೊನೆಗೂ ಸುರಕ್ಷಿತವಾಗಿ ಕೆಳಗೆ ಬಂದ ಸೋಮಶೇಖರ್‌

ಅಗ್ನಿಶಾಮಕ ದಳದ ನಿರಂತರ ಪ್ರಯತ್ನದ ಬಳಿಕ ಹೈಟೆನ್ಷನ್ ಕಂಬದಿಂದ ಪಾಗಲ್ ಪ್ರೇಮಿ ಸೋಮಶೇಖರ್‌ನನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ. ಆತನನ್ನು ನಂತರ ಆಸ್ಪತ್ರೆಗೆ ಸಾಗಿಸಿದ್ದಾರೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಕರ್ನಾಟಕ ಸುದ್ದಿ
ಬೆಂಗಳೂರು
ಬೆಂಗಳೂರು ಗ್ರಾಮಾಂತರ

Latest Videos
Recommended Stories
Recommended image1
ಮೈಸೂರು: ಎಸ್​ ಟಿಜೆ ಗೋಲ್ಡ್​ ಮಾಲೀಕನಿಂದ 20 ಕೋಟಿಗೂ ಅಧಿಕ ವಂಚನೆ, ಗ್ರಾಹಕರು ಗಿರಿವಿ ಇಟ್ಟ ಚಿನ್ನ ಕರಗಿಸಿ ಗುಳುಂ!
Recommended image2
Wildlife Human Conflict ವನ್ಯಜೀವಿ-ಮಾನವ ಸಂಘರ್ಘ: ಐದೇ ವರ್ಷದಲ್ಲಿ 270 ಸಾವು!
Recommended image3
ಚಿಕ್ಕಮಗಳೂರು: ಅಪಘಾತಕ್ಕೀಡಾದ ಯುವಕನಿಗೆ ಚಿಕಿತ್ಸೆ ನಿರಾಕರಿಸಿದ ಆಸ್ಪತ್ರೆಗಳು. 24 ಗಂಟೆ ಆಂಬುಲೆನ್ಸ್‌ನಲ್ಲೇ ನರಳಾಟ!
Related Stories
Recommended image1
ಮದುವೆಗೆ ವಧು ಸಿಗದ್ದಕ್ಕೆ ಕರೆಂಟ್ ಕಂಬ ಹತ್ತಿದ ಯುವಕ, ತಾಯಿ ಮುಂದೆಯೇ ಹೈಟೆನ್ಷನ್ ತಂತಿ ಮುಟ್ಟಿ ನೇತಾಡಿದ!
Recommended image2
ಮದುವೆ ಮಾಡಿಸುವಂತೆ ಹೈಟೆನ್ಷನ್ ಟವರ್ ಏರಿ 9 ಗಂಟೆ ಹೈಡ್ರಾಮಾ: ಯುವತಿಯ ಪ್ರೇಮ ಹಠಕ್ಕೆ ಪೊಲೀಸರು ಸುಸ್ತೋ ಸುಸ್ತು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved