- Home
- Karnataka Districts
- ಬಾಗಿಲು ಮುರಿದಿಲ್ಲ, ಒಳಗೆ ಯಾರೂ ಹೋಗಿಲ್ಲ.. ಆದ್ರೂ 10 ಲಕ್ಷ ಮೌಲ್ಯದ ವಜ್ರಾಭರಣ ಮಾಯ! ಸಿಸಿಟಿವಿ ದೃಶ್ಯ ನೋಡಿ ಬೆಚ್ಚಿಬಿದ್ದ ಮಾಲೀಕ
ಬಾಗಿಲು ಮುರಿದಿಲ್ಲ, ಒಳಗೆ ಯಾರೂ ಹೋಗಿಲ್ಲ.. ಆದ್ರೂ 10 ಲಕ್ಷ ಮೌಲ್ಯದ ವಜ್ರಾಭರಣ ಮಾಯ! ಸಿಸಿಟಿವಿ ದೃಶ್ಯ ನೋಡಿ ಬೆಚ್ಚಿಬಿದ್ದ ಮಾಲೀಕ
Tumakuru Vishwas jewellery theft case: ಜ್ಯುವೆಲ್ಲರಿಗೆ ಸಾಮಾನ್ಯವಾಗಿ ಕಳ್ಳತನವಾದರೆ ಬಾಗಿಲು ಮುರಿದು ಕಳ್ಳತನ ಮಾಡ್ತಾರೆ, ಅವರ ಚಲನವಲನ ಸಿಸಿಟಿವಿಯಲ್ಲಿ ದಾಖಲಾಗಿರುತ್ತೆ. ಆದ್ರೆ ತುಮಕೂರಿನ ವಿಶ್ವಾಸ್ ಜ್ಯುವೆಲ್ಲರಿ ಶಾಪ್ ಚಿನ್ನಾಭರಣ ಕಳ್ಳತನ ವಿಚಿತ್ರವಾಗಿದೆ!

ತುಮಕೂರು ಜ್ಯುವೆಲ್ಲರಿ ಶಾಪ್ ವಜ್ರಾಭರಣ ನಾಪತ್ತೆ!
ಈ ಘಟನೆ ಸಿನಿಮಾ ಕಥೆಯನ್ನೇ ಮೀರಿಸುವಂತಿದೆ. ತುಮಕೂರಿನ ಪ್ರತಿಷ್ಠಿತ ಜ್ಯುವೆಲ್ಲರಿ ಶಾಪ್ ನಡೆದ ಕೃತ್ಯಕ್ಕೆ ಎಲ್ಲರೂ ಶಾಕ್ ಆಗಿದ್ದಾರೆ. ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಜ್ಯುವೆಲ್ಲರಿ ಶಾಪ್‌ನಲ್ಲಿ ಚಿನ್ನಾಭರಣ ಮಾಯ. ಬಾಗಿಲು ಮುರಿದಿಲ್ಲ. ಒಳಗೆ ಯಾರೂ ಹೋಗಿಲ್ಲ. ಆದ್ರೂ ಲಕ್ಷಾಂತರ ರೂಪಾಯಿ ಚಿನ್ನಾಭರಣ ಕಳ್ಳತನ ಆಗಿದೆ. ಇಂಥ ಕಳ್ಳತನ ಎಲ್ಲೂ ನಡೆದಿರಲಿಲ್ಲ.
10 ಲಕ್ಷ ರು. ಮೌಲ್ಯದ ಚಿನ್ನಾಭರಣ ಕದ್ದ ಇಲಿ!
ಸಾಮಾನ್ಯವಾಗಿ ಚಿನ್ನಾಭರಣ ಅಂಗಡಿಗಳಿಗೆ ಖದೀಮರು ಕನ್ನಹಾಕಿ ಚಿನ್ನ ದೋಚುತ್ತಾರೆ. ಆದರೆ ಇಲ್ಲಿ ಇಲಿಯೊಂದು ಜ್ಯುವೆಲ್ಲರಿ ಅಂಗಡಿಯಲ್ಲಿದ್ದ 10 ಲಕ್ಷ ರು. ಮೌಲ್ಯದ 50 ಗ್ರಾಂಗೂ ಅಧಿಕ ವಜ್ರ ಹಾಗೂ ಚಿನ್ನಾಭರಣವನ್ನು ಹೊತ್ತೊಯ್ದು ಬಿಲದಲ್ಲಿ ಅಡಗಿಸಿಟ್ಟಿದ್ದ ಅಪರೂಪದ ಘಟನೆ ತುಮಕೂರಿನ ವಿಶ್ವಾಸ ಜ್ಯುವೆಲ್ಲರಿ ಶಾಪ್‌ನಲ್ಲಿ ವರದಿಯಾಗಿದೆ.
ಅಂಗಡಿ ಬಾಗಿಲು ಮುರಿದಿಲ್ಲ, ಒಳಗೆ ಯಾರೂ ಹೋಗಿಲ್ಲ.. ಮಾಲೀಕರು ಶಾಕ್!
ಅಂಗಡಿ ಬಾಗಿಲು ಮುರಿದಿಲ್ಲ, ಒಳಗೆ ಯಾರೂ ಹೋಗಿಲ್ಲ. ಹೀಗಿದ್ದರೂ ಆಭರಣ ಕಳುವಾಗಿರುವ ಬಗ್ಗೆ ಶಾಪ್‌ನ ಸಿಬ್ಬಂದಿಗೆ ಅಚ್ಚರಿಯಾಗಿತ್ತು. ಈ ಸಂಬಂಧ ಪೊಲೀಸರಿಗೆ ದೂರು ನೀಡುವ ಮುನ್ನ ಅಂಗಡಿಯಲ್ಲಿದ್ದ ಸಿಸಿಟೀವಿ ನೋಡಿದಾಗ ಮಾಲೀಕರು ಹಾಗೂ ಸಿಬ್ಬಂದಿ ಬೆರಗಾಗಿದ್ದಾರೆ
ಸಿಸಿಟಿಯಲ್ಲಿ ಪತ್ತೆಯಾಯ್ತು ಕಳ್ಳ ಇಲಿ ಕೈಚಳಕ
ಇಲಿಯೊಂದು ಆಭರಣಗಳನ್ನು ಹೊತ್ತೊಯ್ದುತ್ತಿದ್ದ ದೃಶ್ಯ ಸಿಸಿಟೀವಿಯಲ್ಲಿ ಸೆರೆಯಾಗಿದೆ. ಸಿಸಿಟೀವಿ ವೀಕ್ಷಿಸಿದ ಬಳಿಕ ಅಂಗಡಿಯ ಸಿಬ್ಬಂದಿ ಇಲಿ ಜಾಡು ಹಿಡಿದು ಹೊರಟಾಗ ಆಭರಣಗಳು ಇಲಿಯ ಬಿಲದಲ್ಲಿ ಪತ್ತೆಯಾಗಿದೆ.
ಕೊನೆಗೂ ನಿಟ್ಟುಸಿರು ಬಿಟ್ಟ ಜ್ಯುವೆಲ್ಲರಿ ಶಾಪ್ ಮಾಲೀಕ!
10 ಉಂಗುರ ಹಾಗೂ 3 ಸರವನ್ನು ಇಲಿ ತನ್ನ ಬಿಲದಲ್ಲಿ ಅಡಗಿಸಿಟ್ಟಿತ್ತು. ಕೊನೆಗೂ ಆಭರಣ ಸಿಕ್ಕ ಬಳಿಕ ಜ್ಯುವೆಲ್ಲರಿ ಶಾಪ್ ಮಾಲೀಕ ಹಾಗೂ ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ.

