ಕಾಲಿಗೆ ಪೊರಕೆ ತಾಗಿದ್ದಕ್ಕೆ ಬೈದ ಗ್ರಾಹಕನ ಕಣ್ಣಿಗೆ ಖಾರದ ಪುಡಿ ಎರಚಿ ಥಳಿಸಿದ ಮಹಿಳೆ!
ರಾಯಚೂರಿನ ಕೇಂದ್ರ ಬಸ್ ನಿಲ್ದಾಣದ ಕ್ಯಾಂಟೀನ್‌ನಲ್ಲಿ, ಪೊರಕೆ ತಾಗಿದ್ದಕ್ಕೆ ಕೋಪಗೊಂಡ ಗ್ರಾಹಕನೊಬ್ಬ ಮಹಿಳಾ ಸಿಬ್ಬಂದಿಗೆ ಬೈದಿದ್ದಾನೆ. ಇದರಿಂದ ಕೆರಳಿದ ಮಹಿಳೆ, ಗ್ರಾಹಕನ ಕಣ್ಣಿಗೆ ಖಾರದ ಪುಡಿ ಎರಚಿ ಪೊರಕೆಯಿಂದಲೇ ಥಳಿಸಿದ್ದಾರೆ. ಈ ಬೀದಿ ಜಗಳದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರಾಯಚೂರಿನ ಕೇಂದ್ರ ಬಸ್ ನಿಲ್ದಾಣ
ರಾಯಚೂರಿನ ಕೇಂದ್ರ ಬಸ್ ನಿಲ್ದಾಣದ ಕ್ಯಾಂಟೀನ್ ಮಹಿಳಾ ಸಿಬ್ಬಂದಿ ಕಸ ಗುಡಿಸುತ್ತಿದ್ದಾಗ, ಅಲ್ಲಿಗೆ ಬಂದಿದ್ದ ಗ್ರಾಹಕನೊಬ್ಬನ ಕಾಲಿಗೆ ಆಕಸ್ಮಿಕವಾಗಿ ಪೊರಕೆ ತಾಗಿದೆ. ಇದರಿಂದ ಕೋಪಗೊಂಡ ಗ್ರಾಹಕ ಮಹಿಳಾ ಸಿಬ್ಬಂದಿಗೆ ಸಾರ್ವಜನಿಕರ ಎದುರೇ ಏಕವಚನದಲ್ಲಿ ಮನಬಂದಂತೆ ಬೈದಿದ್ದಾನೆ.
ಗ್ರಾಹಕನ ನಿಂದನೆ
ಗ್ರಾಹಕನ ನಿಂದನೆಯಿಂದ ಕೆಂಡಾಮಂಡಲವಾದ ಮಹಿಳಾ ಸಿಬ್ಬಂದಿ ತಿರುಮಲಾ ಎಂಬವವರು ತಕ್ಷಣ ಕ್ಯಾಂಟೀನ್‌ನ ಕಿಚನ್‌ಗೆ ಓಡಿಹೋಗಿ ಖಾರದ ಪುಡಿ ತಂದು ಗ್ರಾಹಕನ ಕಣ್ಣಿಗೆ ಎರಚಿದ್ದಾರೆ. ನಂತರ ಬಸ್ ನಿಲ್ದಾಣದಲ್ಲಿ ಅದೇ ಪೊರಕೆಯಿಂದ ಗ್ರಾಹಕನಿಗೆ ಥಳಿಸಿದ್ದಾರೆ.
ಕೇಂದ್ರ ಬಸ್ ನಿಲ್ದಾಣ
ಇದರಿಂದ ಪರಿಸ್ಥಿತಿ ವಿಕೋಪಕ್ಕೆ ತಿರುಗಿ, ನೂರಾರು ಸಾರ್ವಜನಿಕರ ಮುಖಾಂತರವೇ ಇಬ್ಬರೂ ಬೀದಿ ಜಗಳಕ್ಕೆ ನಿಂತು ಪರಸ್ಪರ ಬಡಿದಾಡಿಕೊಂಡಿದ್ದಾರೆ. ಈ ಹೈಡ್ರಾಮಾ ನಡೆದಿರುವ ರಾಯಚೂರಿನ ಕೇಂದ್ರ ಬಸ್ ನಿಲ್ದಾಣವು ಸದರ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡುತ್ತದೆ.
ಇದನ್ನೂ ಓದಿ: 4 ವಿಧಗಳಲ್ಲಿ ತ್ಯಾಜ್ಯ ವಿಂಗಡಿಸದಿದ್ದರೆ ಪ್ರಕರಣ ದಾಖಲಿಸಿ ದಂಡ ಹಾಕಿ; ಮುಖ್ಯಾಧಿಕಾರಿ ಎಚ್ಚರಿಕೆ
ವಿಡಿಯೋ
ರಾಯಚೂರಿನ ಕೇಂದ್ರ ಬಸ್ ನಿಲ್ದಾಣದ ಕ್ಯಾಂಟೀನ್‌ನಲ್ಲಿ ಮೇ 24ರಂದು ಈ ಘಟನೆ ನಡೆದಿದ್ದು, ಸದ್ಯ ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಡೆ ವೈರಲ್ ಆಗಿದೆ. ಗ್ರಾಹಕನ ಹೆಸರು ತಿಳಿದು ಬಂದಿಲ್ಲ. ಸದ್ಯ ಈ ವಿಡಿಯೋ ರಾಯಚೂರು ಭಾಗದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ವರ್ಷಧಾರೆಗೆ ತುಂಬಿದ ನರೇಗಾ ಕಂದಕಗಳು: ಗಜೇಂದ್ರಗಡ ತಾಲೂಕಿನ ರೈತರ ಮೊಗದಲ್ಲಿ ಮಂದಹಾಸ!

