ರಾಯಚೂರು: ಮಂತ್ರಾಲಯದಲ್ಲಿ ಗುರುರಾಯರ ಉತ್ತರ ಆರಾಧನೆ ಸಂಭ್ರಮ
ರಾಯಚೂರು(ಆ.07): ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀಗುರುಸಾರ್ವಭೌಮರ 349ನೇ ಆರಾಧನಾ ಮಹೋತ್ಸವ ಸಪ್ತರಾತ್ರೋತ್ಸವದ ಉತ್ತರಾರಾಧನೆ ದಿನ ವಸಂತೋತ್ಸವ, ಪ್ರಹ್ಲಾದ ರಾಜರ ಉತ್ಸವ, ಪೀಠಾಧಿಪತಿಗಳ ಅನುಗ್ರಹ ಸಂದೇಶ, ಮಹಾರಥೋತ್ಸವಗಳು ಸಂಭ್ರಮದಿಂದ ಗುರುವಾರ ಜರುಗಿದವು.
ಶ್ರೀಮಠದಲ್ಲಿ ಬೆಳಗ್ಗೆ ನಿರ್ಮಲ್ಯ ವಿಸರ್ಜನೆ, ಗ್ರಂಥಗಳ ಪಾರಾಯಣ, ದಾಸವಾಣಿ, ಪ್ರವಚನಗಳು ನಡೆದವು
ಮೂಲವೃಂದಾವನಕ್ಕೆ ಪಂಚಾಮೃತ ಅಭಿಷೇಕ, ವಿವಿಧ ಬಗೆಯ ಹೂವುಗಳಿಂದ ವಿಶೇಷ ಅಲಂಕಾರ ಪೂಜೆ, ಶ್ರೀಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರಿಂದ ಮೂಲ ಶ್ರೀರಾಮದೇವರಿಗೆ ವಿಶೇಷ ಪೂಜೆ ನಡೆಸಲಾಯಿತು.
ಬಳಿಕ ಸುವರ್ಣ ಪಲ್ಲಕ್ಕಿಯಲ್ಲಿ ಪ್ರಹ್ಲಾದ ರಾಜರ ಉತ್ಸವ ಮೂರ್ತಿ ಇರಿಸಿ ಶ್ರೀಮಠದ ಪ್ರಾಕಾರದಲ್ಲಿ ಪ್ರದಕ್ಷಿಣೆ ಹಾಕಲಾಯಿತು.
ಮಂತ್ರಾಲಯದಲ್ಲಿ ರಾಯರ 349 ನೇ ಆರಾಧನಾ ಮಹೋತ್ಸವದ ಉತ್ತರಾರಾಧನೆ ನಿಮಿತ್ತ ಮಠದಲ್ಲಿ ಪಲ್ಲಕ್ಕಿಯಲ್ಲಿಟ್ಟು ಪ್ರಹ್ಲಾದ ರಾಜರ ಉತ್ಸವ ಮೂರ್ತಿಗೆ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಪೂಜೆ ಸಲ್ಲಿಸಿದರು.
ರಾಯರ ಮಠದಲ್ಲಿ ಸಂಭ್ರಮದಿಂದ ಜರುಗಿದ ಮಹಾರಥೋತ್ಸವಗಳು