ಒಂದೇ ಒಂದು ಮರ ಕಡಿಯದೆ ಚಪ್ಪರ, ಈ ಬ್ರಹ್ಮಕಲಶೋತ್ಸವ ಎಲ್ಲರಿಗೂ ಮಾದರಿ!

First Published 11, Mar 2020, 3:27 PM IST

ತುಮಕೂರಿನಲ್ಲಿ ಜಾತ್ರೋತ್ಸವದ ವೇಳೆ ರಥ ಸಾಗಿಸಲು ಸಮಸ್ಯೆಯಾಗುತ್ತದೆ ಎಂಬ ಕಾರಣಕ್ಕೆ ಆಗಸದೆತ್ತರಕ್ಕೆ ಬೆಳೆದು ನಿಂತಿದ್ದ ಮರಗಳನ್ನು ನೆಲಕ್ಕುರುಳಿಸಿರುವ ಘಟನೆ ಇಡೀ ರಾಜ್ಯಾದ್ಯಂತ ಸದ್ದು ಮಾಡಿದೆ. ಇಂತಹ ಆದೇಶ ನೀಡಿದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಗ್ರಾಮ ಲೆಕ್ಕಿಗನನ್ನು ಈಗಾಗಲೇ ಅಮಾನತ್ತು ಮಾಡಲಾಗಿದೆ. ಅಲ್ಲದೇ ಇಲ್ಲಿನ ತಹಶೀಲ್ದಾರ್ ಮಮತಾರನ್ನು ಸೇವೆಯಿಂ.ದ ಹಿಂಪಡೆಯಲಾಗಿದೆ. ಆದರೀಗ ಇಂತಹ ಅಮಾನವೀಯ ಘಟನೆ ಬೆನ್ನಲ್ಲೇ ದಕ್ಷಿಣ ಕನ್ನಡದಲ್ಲಿ ಮರಗಳನ್ನು ಕಡಿಯದೇ ಪರಿಸರ ಪ್ರೇಮ ಮೆರೆದು ನಡೆಸಿದ ಬ್ರಹ್ಮಕಲಶೋತ್ಸವ ಜನರ ಮನ ಗೆದ್ದಿದೆ. ಎಲ್ಲಿ? ಯಾವಾಗ? ಇಲ್ಲಿದೆ ಮುಂದಿದೆ ವಿವರ

ಸದ್ಯ ತುಮಕೂರಿನಲ್ಲಿ ವೃದ್ಧೆಯೊಬ್ಬಳು ಮಕ್ಕಳಂತೆ ಸಾಕಿದ್ದ, ಆಗಸದೆತ್ತರಕ್ಕೆ ಬೆಳೆದು ನಿಂತಿದ್ದ ತೆಂಗಿನ ಹಾಗೂ ಅಡಕೆ ಮರಗಳನ್ನು ಜಾತ್ರೆಗೆಂದು ಕಡಿದು ಹಾಕಿದ ಘಟನೆ ರಾಜ್ಯಾದ್ಯಂತ ಸದ್ದು ಮಾಡುತ್ತಿದೆ.

ಆದರೀಗ ತುಮಕೂರಿನಲ್ಲಿ ನಡೆದ ಈ ಅಮಾನವೀಯ ಘಟನೆ ಬೆನ್ನಲ್ಲೇ ಮರಗಳನ್ನು ಕಡಿಯದೇ ಕಾರ್ಯಕ್ರಮವೊಂದನ್ನು ನಡೆಸಿದ ಘಟನೆ ಜನರ ಮನ ಗೆದ್ದಿದೆ.

ಹೌದು ಈ ಪರಿಸರ ಸ್ನೇಹಿ ಘಟನೆ ನಡೆದಿದ್ದು, ದಕ್ಷಿಣ ಕನ್ನಡದ ಪುತ್ತೂರು ತಾಲೂಕಿನ ಹಿರೇಬಂಡಾಡಿ ಗ್ರಾಮದಲ್ಲಿ.

ಇಲ್ಲಿನ ಉಳಿತ್ತೋಡಿ ಶ್ರೀ ಷಣ್ಮುಖ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಜಮಕ್ಕೆ ಮರಗಳನ್ನು ಕಡಿಯದೆ ಚಪ್ಪರ ಹಾಕಲಾಗಿದೆ.

ಫೆ. 20 ರಿಂದ 29ರವರೆಗೆ ನಡೆದ ಈ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ವಿಧಾನಸಭಾ ಕ್ಷೇತ್ರದ ಸಂಜೀವ ಮಠಂದೂರು ವಹಿಸಿದ್ದರೆಂಬುವುದು ಉಲ್ಲೇಖನೀಯ.

ಬ್ರಹ್ಮಕಲಶೋತ್ಸವ ಕಾರ್ಯಕ್ರಮ ನಡೆಸಲು ಸ್ಥಳದ ಅಭಾವವಿತ್ತು. ಹೀಗೆಂದು ಇಲ್ಲಿನ ಜನರು ಬೆಳೆದು ನಿಂತಿದ್ದ ಮರಗಳನ್ನು ಕಡಿಯಲಿಲ್ಲ. ಬದಲಾಗಿ ಆ ಮರಗಳನ್ನೇ ಆಸರೆಯಾಗಿಟ್ಟುಕೊಂಡು ಸುಂದರವಾದ ಚಪ್ಪರ ನಿರ್ಮಿಸಿದ್ದಾರೆ.

ನೆಲದ ಮೇಲೆ ಕಾರ್ಪೆಟ್ ಹಾಸಿ ಅಡಿಕೆ ತೋಟದ ನಡುವೆಯೇ ಕಾರ್ಯಕ್ರಮ ನಡೆಸಿದ್ದಾರೆ.

ಅಡಿಗೆ ಸ್ಥಳವನ್ನೂ ಈ ತೋಟದ ನಡುವೆಯೇ ನಿರ್ಮಾಣ ಮಾಡಲಾಗಿತ್ತು.

ಖುದ್ದು ಶಾಸಕ ಮಠಂದೂರು ಎಲ್ಲಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.

ಸ್ಥಳದ ಕೊರತೆ ಇದೆ, ಮರಗಳಿದ್ದರೆ ಸಮಸ್ಯೆ ಆಗುತ್ತದೆ ಎಂದು ಮರಗಳ ಮರಣ ಹೋಮ ನಡೆಸುವ ಎಲ್ಲರಿಗೂ ಪರಿಸರ ಸ್ನೇಹಿಯಾಗಿ ಕಾರ್ಯಕ್ರಮ ನಡೆಸುವುದು ಹೇಗೆ ಎಂಬುವುದಕ್ಕೆ ಸೂಕ್ತ ಉದಾಹರಣೆಯಾಗಿದೆ.

loader