MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ನೀಲಕುರಂಜಿ: ವಿಶ್ವದ ಅಪರೂಪದ ಹೂ! 2030ಕ್ಕೆ ಅರಳಬೇಕಿದ್ದ ಹೂ 2026ರಲ್ಲೇ ಅರಳಿದೆ!

ನೀಲಕುರಂಜಿ: ವಿಶ್ವದ ಅಪರೂಪದ ಹೂ! 2030ಕ್ಕೆ ಅರಳಬೇಕಿದ್ದ ಹೂ 2026ರಲ್ಲೇ ಅರಳಿದೆ!

ಪಶ್ಚಿಮಘಟ್ಟದ ಮಂಜು ಮುಸುಕಿದ ಕುದುರೆಮುಖದ ಬೆಟ್ಟಗಳಲ್ಲಿ ಅಪರೂಪದ ನೀಲಕುರಂಜಿ ಹೂವುಗಳು ಅರಳಿದ್ದು, ಪ್ರಕೃತಿ ಪ್ರಿಯರ ಗಮನ ಸೆಳೆದಿವೆ. ಸಾಮಾನ್ಯವಾಗಿ 12 ವರ್ಷಗಳಿಗೊಮ್ಮೆ ಸಮೂಹವಾಗಿ ಅರಳುವ ಈ ಪುಷ್ಪ, ನಿರೀಕ್ಷೆಗಿಂತ ನಾಲ್ಕು ವರ್ಷ ಮುಂಚಿತವಾಗಿಯೇ ಕಾಣಿಸಿಕೊಂಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

2 Min read
Author : Ravi Janekal
Published : Sep 27 2026, 10:52 AM IST
Share this Photo Gallery
  • FB
  • TW
  • Linkdin
  • Whatsapp
13
4 ವರ್ಷ ಮುಂಚೆಯೇ ಅರಳಿ ಅಚ್ಚರಿ ಹುಟ್ಟಿಸಿದ ನೀಲಕುರಂಜಿ ಹೂಗಳು!
Image Credit : Google

4 ವರ್ಷ ಮುಂಚೆಯೇ ಅರಳಿ ಅಚ್ಚರಿ ಹುಟ್ಟಿಸಿದ ನೀಲಕುರಂಜಿ ಹೂಗಳು!

ಪಶ್ಚಿಮಘಟ್ಟದ ಮಂಜು ಮುಸುಕಿದ ಕುದುರೆಮುಖದ ಬೆಟ್ಟಗಳಲ್ಲಿ ಅಪರೂಪದ ನೀಲಕುರಂಜಿ ಹೂವುಗಳು ಅರಳಿದ್ದು, ಪ್ರಕೃತಿ ಪ್ರಿಯರ ಗಮನ ಸೆಳೆದಿವೆ. ಸಾಮಾನ್ಯವಾಗಿ 12 ವರ್ಷಗಳಿಗೊಮ್ಮೆ ಸಮೂಹವಾಗಿ ಅರಳುವ ಈ ಪುಷ್ಪ, ನಿರೀಕ್ಷೆಗಿಂತ ನಾಲ್ಕು ವರ್ಷ ಮುಂಚಿತವಾಗಿಯೇ ಕಾಣಿಸಿಕೊಂಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಗಂಗಡಿಕಲ್ಲು, ಚಿಟ್ಟೆಗುಡ್ಡ ಹಾಗೂ ಕುದುರೆಮುಖ ಪರ್ವತ ಪ್ರದೇಶಗಳ ಶೋಲಾ ಹುಲ್ಲುಗಾವಲುಗಳಲ್ಲಿ ಕಳೆದ ಒಂದು ತಿಂಗಳಿನಿಂದ ನೀಲಕುರಂಜಿ ಹೂವುಗಳು ಅರಳಿವೆ. 2018ರಲ್ಲಿ ಇಲ್ಲಿ ಸಮೂಹ ಅರಳುವಿಕೆ ಕಂಡುಬಂದ ಹಿನ್ನೆಲೆಯಲ್ಲಿ ಮುಂದಿನ ಪ್ರಮುಖ ಅರಳುವಿಕೆ 2030ರಲ್ಲಿ ನಿರೀಕ್ಷಿಸಲಾಗಿತ್ತು. ಆದರೆ 2026ರಲ್ಲೇ ಹೂವು ಕಾಣಿಸಿಕೊಂಡಿರುವುದು ವಿಶೇಷವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
23
ಹವಾಮಾನ ಬದಲಾವಣೆಯ ಪ್ರಭಾವವೇ?
Image Credit : Google

ಹವಾಮಾನ ಬದಲಾವಣೆಯ ಪ್ರಭಾವವೇ?

ನೀಲಕುರಂಜಿ ಮುಂಚಿತವಾಗಿ ಅರಳಿರುವುದಕ್ಕೆ ನಿಖರವಾದ ವೈಜ್ಞಾನಿಕ ಕಾರಣ ಇನ್ನೂ ದೃಢಪಟ್ಟಿಲ್ಲ. ಜಾಗತಿಕ ಹವಾಮಾನ ಬದಲಾವಣೆಯಿಂದ ಉಷ್ಣಾಂಶ, ಮಳೆ ಹಾಗೂ ಮಣ್ಣಿನ ತೇವಾಂಶದಲ್ಲಿ ಉಂಟಾಗುತ್ತಿರುವ ವ್ಯತ್ಯಾಸಗಳು ಸಸ್ಯಗಳ ಬೆಳವಣಿಗೆ ಮತ್ತು ಹೂಬಿಡುವಿಕೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಆದರೆ ಕುದುರೆಮುಖದಲ್ಲಿ ಈ ಬಾರಿ ನೀಲಕುರಂಜಿ ಮುಂಚಿತವಾಗಿ ಅರಳಿರುವುದಕ್ಕೆ ಹವಾಮಾನ ಬದಲಾವಣೆಯೇ ನೇರ ಕಾರಣ ಎಂದು ಹೇಳಲು ಸದ್ಯಕ್ಕೆ ವೈಜ್ಞಾನಿಕ ಪುರಾವೆ ಇಲ್ಲ.

ಸ್ಥಳೀಯ ಪರಿಸರ ಪರಿಸ್ಥಿತಿ ಹಾಗೂ ಸಸ್ಯದ ಬೆಳವಣಿಗೆ ಹಂತದಲ್ಲಿನ ವ್ಯತ್ಯಾಸವೂ ಕಾರಣವಾಗಿರಬಹುದು. ಹೀಗಾಗಿ ಈ ಅಸಾಮಾನ್ಯ ಮುಂಚಿತ ಅರಳುವಿಕೆಯ ಹಿಂದಿನ ಕಾರಣವನ್ನು ತಿಳಿಯಲು ಸಸ್ಯಶಾಸ್ತ್ರಜ್ಞರು ಹಾಗೂ ಪರಿಸರ ತಜ್ಞರಿಂದ ಹೆಚ್ಚಿನ ಅಧ್ಯಯನ ಅಗತ್ಯವಾಗಿದೆ.

ಪರಾಗಸ್ಪರ್ಶ ಜೀವಿಗಳಿಗೆ ಆಹಾರಧಾರೆ

ನೀಲಕುರಂಜಿ ಸಸ್ಯವು ಹಲವು ವರ್ಷಗಳ ಕಾಲ ಬೆಳವಣಿಗೆಯಲ್ಲಿ ಶಕ್ತಿ ಸಂಗ್ರಹಿಸಿ, ಬಳಿಕ ಹೂಬಿಟ್ಟು ಬೀಜ ಉತ್ಪಾದನೆಯ ನಂತರ ತನ್ನ ಜೀವನಚಕ್ರವನ್ನು ಪೂರ್ಣಗೊಳಿಸುತ್ತದೆ. ಹೂಬಿಡುವ ಅವಧಿಯಲ್ಲಿ ಜೇನುನೊಣ, ಚಿಟ್ಟೆ ಸೇರಿದಂತೆ ಹಲವು ಪರಾಗಸ್ಪರ್ಶ ಜೀವಿಗಳಿಗೆ ಹೂವುಗಳು ಆಹಾರ ಮತ್ತು ಪರಾಗದ ಪ್ರಮುಖ ಮೂಲವಾಗುತ್ತವೆ.ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನ ಕೆಲವು ಶೋಲಾ ಅರಣ್ಯ ಪ್ರದೇಶಗಳಲ್ಲಿ ಕಂಡುಬರುವ ಈ ಅಪರೂಪದ ಸಸ್ಯವು ಕುದುರೆಮುಖದ ಸೂಕ್ಷ್ಮ ಪರಿಸರ ವ್ಯವಸ್ಥೆಯಲ್ಲೂ ಮಹತ್ವದ ಪಾತ್ರ ಹೊಂದಿದೆ.

Related Articles

Related image1
Palash Flower Remedies: ಹಿಂದೂ ಧರ್ಮದಲ್ಲಿ ಮುತ್ತುಗದ ಹೂವುಗಳ ಪ್ರಾಮುಖ್ಯತೆ ಏನು ಗೊತ್ತಾ?
Related image2
Chikkamagaluru Neelakurinji ಬೆಟ್ಟಕ್ಕೆ ನೀಲಿ ರಗ್ಗು, ಅದು ನೀಲಕುರಿಂಜಿ ಹಿಗ್ಗು!
33
ಹೂವು ಕೀಳದಂತೆ ಅರಣ್ಯ ಇಲಾಖೆ ಮನವಿ
Image Credit : Google

ಹೂವು ಕೀಳದಂತೆ ಅರಣ್ಯ ಇಲಾಖೆ ಮನವಿ

ನೀಲಕುರಂಜಿ ಸೇರಿದಂತೆ ಯಾವುದೇ ಹೂವು ಅಥವಾ ಸಸ್ಯಗಳನ್ನು ಮುಟ್ಟುವುದು, ಕೀಳುವುದು ಅಥವಾ ಹಾನಿಗೊಳಿಸುವುದನ್ನು ಪ್ರವಾಸಿಗರು ತಪ್ಪಿಸಬೇಕು ಎಂದು ಕುದುರೆಮುಖ ವನ್ಯಜೀವಿ ವಿಭಾಗದ ಡಿಸಿಎಫ್ ರುಥ್ರೇನ್ ಸೂಚಿಸಿದ್ದಾರೆ.

ಅಪರೂಪದ ನೀಲಕುರಂಜಿ ಹೂವಿನ ಸೌಂದರ್ಯವನ್ನು ಪ್ರವಾಸಿಗರು ಕಣ್ತುಂಬಿಕೊಳ್ಳಲಿ. ಆದರೆ ಹೂವು ಅಥವಾ ಸಸ್ಯಗಳನ್ನು ಮುಟ್ಟುವುದು, ಕೀಳುವುದು ಹಾಗೂ ಹಾನಿಗೊಳಿಸುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕು. ಸಸ್ಯದ ಆವಾಸಸ್ಥಾನದ ಸಂರಕ್ಷಣೆಗೆ ಎಲ್ಲರೂ ಸಹಕರಿಸಬೇಕು. ಪ್ರದೇಶದಲ್ಲಿ ನಿರಂತರ ನಿಗಾ ವಹಿಸಲಾಗುತ್ತಿದ್ದು, ನಿಯಮ ಉಲ್ಲಂಘನೆಗೆ ಅವಕಾಶ ನೀಡುವುದಿಲ್ಲ.

— ರುಥ್ರೇನ್, ಡಿಸಿಎಫ್, ಕುದುರೆಮುಖ ವನ್ಯಜೀವಿ ವಿಭಾಗ, ಕಾರ್ಕಳ

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ದಕ್ಷಿಣ ಕನ್ನಡ
ಕರ್ನಾಟಕ ಸುದ್ದಿ
 

Latest Videos
Recommended Stories
Recommended image1
ಸರ್ಕಾರಿ ಶಾಲೆಯ ಮಕ್ಕಳ ಮುಖದಲ್ಲಿ ಮಂದಹಾಸ ಮೂಡಿಸಿದ ಹೆಡ್‌ಮಾಸ್ಟರ್ ನೀಡಿದ ಗಿಫ್ಟ್!
Recommended image2
ಕಾಂಕ್ರೀಟ್ ಗೋಡೆಗಳು ಕಲಾಕೃತಿಗಳಾದಾಗ..! ಸಿಲ್ಕ್‌ಬೋರ್ಡ್ ಫ್ಲೈಓವರ್‌ಗೆ ಹೊಸ ಲುಕ್; ಫೋಟೋ ಗ್ಯಾಲರಿ ನೋಡಿ!
Recommended image3
ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ನೂರುಲ್ಲಾ & ಮುಸ್ಲಿಂ ಮುಖಂಡರು; ಸ್ವಾಗತಿಸಿದ ಸಚಿವ ಪಿ.ಎಂ.ನರೇಂದ್ರಸ್ವಾಮಿ
Related Stories
Recommended image1
Palash Flower Remedies: ಹಿಂದೂ ಧರ್ಮದಲ್ಲಿ ಮುತ್ತುಗದ ಹೂವುಗಳ ಪ್ರಾಮುಖ್ಯತೆ ಏನು ಗೊತ್ತಾ?
Recommended image2
Chikkamagaluru Neelakurinji ಬೆಟ್ಟಕ್ಕೆ ನೀಲಿ ರಗ್ಗು, ಅದು ನೀಲಕುರಿಂಜಿ ಹಿಗ್ಗು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved