MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಗ್ಯಾಲರಿ
• ಮನರಂಜನೆ
• ಜ್ಯೋತಿಷ್ಯ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ಕ್ರೀಡೆ
• ಜೀವನಶೈಲಿ
• ವಾಣಿಜ್ಯ
• Home
• Karnataka Districts
• ಕಲಬುರಗಿ: ಭೀಮೆಯ ಆರ್ಭಟಕ್ಕೆ ಕಣ್ಣೀರಿಟ್ಟ ಮಣ್ಣೂರು ಜನ..!

ಕಲಬುರಗಿ: ಭೀಮೆಯ ಆರ್ಭಟಕ್ಕೆ ಕಣ್ಣೀರಿಟ್ಟ ಮಣ್ಣೂರು ಜನ..!

ಶೇಷಮೂರ್ತಿ ಅವಧಾನಿಮಣ್ಣೂರು (ಅಫಜಲ್ಪುರ):(ಅ.18): ಹಿಂಗ ಮಹಾಪುರ ಹೊಳಿಗೆ ಎಂದೂ ಬಂದಿರಲಿಲ್ಲ ಬಿಡ್ರಿ, ನೋಡುನೋಡೋದ್ರಾಗೇ ಹೊಳಿ ನೀರ ಹಾಂವ ಹರದ್ಹಂಗ ಹರ್ದು ನಮ್ಮೂರ ಮಂದಿ ಮನಿಗೊಳೋಳ್ಗ - ರೈತರ ಹೊಲದೊಳ್ಗ ಹೊಕ್ಕು ಬಕ್ಳ ಹೈರಾಣ ಮಾಡ್ಲಿಕತ್ತದ’

1 Min read
Author : Kannadaprabha News | Asianet News
Published : Oct 18 2020, 11:48 AM IST
Share this Photo Gallery
• FB
• TW
• Linkdin
• Whatsapp
18

ಅಫಜಲ್ಪುರ ತಾಲೂಕಿನ ಗಡಿ ಗ್ರಾಮ ಮಣ್ಣೂರು ಪ್ರವಾಹಕ್ಕೆ ಅಕ್ಷರಶಃ ತತ್ತರಿಸಿಹೋಗಿದೆ. ಭೀಮೆ ಕಲಬುರಗಿಗೆ ಕಾಲಿಡೋದೇ ಮಣ್ಣೂರಿನಿಂದ ಎನ್ನೋದು ವಿಶೇಷ.

28

ಪಕ್ಕದ ಮಹಾರಾಷ್ಟ್ರದವರು ಭೀಮೆಗೆ ಅಡ್ಡಲಾಗಿ ನಿರ್ಮಿಸಿರೋ ಹಿಳ್ಳಿ ಬಾಂದಾರಲ್ಲಿ ಉಕ್ಕೇರಿ ಭೀಮೆ ಕಲಬುರಗಿ ಪ್ರವೇಶಿಸುವ ದಾರಿಯಲ್ಲಿ ಬರುವ ಮೊದಲ ಊರು ಮಣ್ಣೂರು. ಹೀಗಾಗಿ ಭೀಮೆಯ ಹೊಡೆತ ಈ ಊರಿಗೆ ಎಲ್ಲ ಊರುಗಳಿಗಿಂತ ತುಸು ಹೆಚ್ಚಾಗಿದೆ. ಅದರಂತೆಯೇ ಈ ಊರಿನ ಪೂಜಾರಿ ಓಣಿ, ಕರಗೇರಿ, ಮಾಂಗ್‌ವಾಡಿ, ಪಜಾ ಸಮುದಾಯದವರು ವಾಸವಿರುವ ಬಡಾವಣೆಗಳು ಕಳೆದ 3 ದಿನದಿಂದ ಭೀಮೆಯ ನೀರಲ್ಲೇ ನಿಂತಿವೆ.

38

20 ಸಾವಿರ ಜನವಸತಿಯ ಮಣ್ಣೂರಿಗೆ ಭೀಮೆಯ ಪ್ರವಾಹ ಹೊಸತೇನಲ್ಲ, ಆದರೂ ಈ ಪರಿ ನೀರು ಉಕ್ಕೇರಿದ್ದು ಐದಾರು ದಶಕದ ನಂತರ ಎಂದು ಊರಿನ ಹಿರಿಯರು ಹೇಳುತ್ತಿದ್ದಾರೆ.

48

ಮಹಾರಾಷ್ಟ್ರ ಭೀಮೆಯ ಪ್ರವಾಹವನ್ನೇ ಸೀನಾ ನದಿಗೆ ಹೊರಳಿಸಿಕೊಂಡು ಹೆಚ್ಚುವರಿ ನೀರು ಬಳಸಲು ಮುಂದಾದ ದಿನದಿಂದಲೇ ಭೀಮೆಗೆ ಪ್ರವಾಹ ಅನ್ನೋದೆ ಇರಲಿಲ್ಲ. ಆದರೆ ಈ ಬಾರಿ ಭೀಮೆಯ ಉಗಮಸ್ಥಾನ ಪಶ್ಚಿಮ ಘಟ್ಟದಲ್ಲಿ ಹೆಚ್ಚಿನ ಮಳೆ, ಅದಕ್ಕೇ ಮತ್ತೆ ಪ್ರವಾಹ ಬರುತ್ತಿದೆ ಎನ್ನುವ ಊರವರು ಈ ಬಾರಿ ತೊಂದರೆಗೊಳಗಾಗಿದ್ದಾರೆ.

58

ಮಣ್ಣೂರು ಗ್ರಾಮದ 150 ಮನೆಗಳಿಗೆ ನೀರು ನುಗ್ಗಿದ್ದು, 200 ಮಂದಿ ಪ್ರವಾಹದಿಂದ ಪೀಡಿತರಾಗಿದ್ದಾರೆ. ಇಲ್ಲಿನ ಹೊಲಿ ಯಲ್ಲಮ್ಮ ದೇವಿ ಮಂದಿರ, ವೇದೇಶತೀರ್ಥ ವಿದ್ಯಾಪೀಠ, ಶ್ರೀ ಮಾಧವೀತರ್ಥರು, ಶ್ರೀ ವೇದೇಶತೀರ್ಥರ ವೃಂದಾವನಗಳು ಜಲಾವೃತವಾಗಿವೆ.

68

ಪೂಜಾರಿ ಓಣಿ, ಎಸ್ಸಿ ಬಡಾವಣೆಗಳಲ್ಲಿ ಹೆಚ್ಚಿನ ಮನೆಗಳಿಗೆ ನೀರು ನುಗ್ಗಿದ್ದರಿಂದ ಇಲ್ಲಿನವರು ಕಾಯಂ ಪುನಾವಸತಿಗೆ ಮೊರೆ ಇಡುತ್ತಿದ್ದಾರೆ. ಹೊಸ ಬಡಾವಣೆ ಎತ್ತರದಾಗ ಮಾಡಿ ಕೊಡ್ರಿ ಎಂದು ಆಗ್ರಹಿಸುತ್ತಿರುವ ಸಂತ್ರಸ್ತರು

78

ದಶಕದ ಹಿಂದೆ ಇಲ್ಲಿ 150 ಕುಟುಂಬಗಳ ಪುನಾವಸತಿ ಮಾಡಲಾಗಿತ್ತಾದರೂ ನದಿ ತೀರದಲ್ಲಿನ ಕುಟುಂಬವಾಸಿಗಳ ಸಂಖ್ಯೆ ಹೆಚ್ಚಿರೋದರಿಂದ ಪುನಾವಸತಿ ಬೇಡಿಕೆ ಈಗ ಇನ್ನೂ ಹೆಚ್ಚಿದೆ.

88

ನದಿ ತೀರದಲ್ಲಿರುವ ಮಣ್ಣೂರು, ಕುಡಿಗನೂರ್‌, ಬಾಬಾನಗರ, ಶೇಷಗಿರಿವಾಡಿ ಸುತ್ತಮುತ್ತ ಕಂಡಕಂಡಲ್ಲಿ ನದಿ ನೀರು ನುಗ್ಗಿದ್ದರಿಂದ ಇಲ್ಲಿ 20 ಸಾವಿರ ಹೆಕ್ಟರ್‌ಗೂ ಹೆಚ್ಚಿನ ತೊಗರಿ, ಕಬ್ಬು, ಸೂರ್ಯಕಾಂತಿ ಫಸಲು ನೀರುಪಾಲಾಗಿದೆ. ಈ ಹಾನಿ ಪ್ರಮಾಣ ಇನ್ನೂ ಹೆಚ್ಚುವ ಸಂಭವಗಳೇ ಇವೆ.

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.

Latest Videos
Recommended Stories
Recommended image1
ಭಾರತೀಯ ವಾಯುಪಡೆ ಅಚ್ಚರಿ ಮಾಹಿತಿ ನೀಡಿದ ಏರ್ ಮಾರ್ಷಲ್ ಇಂದರ್‌ಪಾಲ್ ಸಿಂಗ್ ವಾಲಿಯಾ
Recommended image2
ಜೈಲಲ್ಲಿದ್ದ ಶಾಸಕ ಸತೀಶ್ ಸೈಲ್ ಗಂಭೀರ ಅನಾರೋಗ್ಯ: ವೈದ್ಯಕೀಯ ಜಾಮೀನು ಕೊಟ್ಟ ಹೈಕೋರ್ಟ್!
Recommended image3
ಪೊಲೀಸ್ ಅಧಿಕಾರಿಗಳೇ ಸಂಚರಿಸಿದ ಸರ್ಕಾರಿ ವಾಹನಕ್ಕೆ ನಂಬರ್ ಪ್ಲೇಟ್ ಇಲ್ಲ! ನಿಜವಾಗಿ ಕಾನೂನು ಯಾರಿಗೆ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved