- Home
- Karnataka Districts
- ರಾಜ್ಯದ ಹಲವೆಡೆ ಭಾರೀ ಗಾಳಿ ಮಳೆಯಿಂದ ಅವಾಂತರ, ಸಿಡಿಲಿನ ಅಬ್ಬರಕ್ಕೆ ಹೊತ್ತಿ ಉರಿದ ತೆಂಗಿನ ಮರ
ರಾಜ್ಯದ ಹಲವೆಡೆ ಭಾರೀ ಗಾಳಿ ಮಳೆಯಿಂದ ಅವಾಂತರ, ಸಿಡಿಲಿನ ಅಬ್ಬರಕ್ಕೆ ಹೊತ್ತಿ ಉರಿದ ತೆಂಗಿನ ಮರ
ರಾಜ್ಯದ ಹಲೆವೆಡೆ ಇಂದು ಭಾರಿ ಮಳೆಯಾಗಿದೆ. ಹಲವೆಡೆ ಮರಗಳು ಉರುಳಿ ಬಿದ್ದಿದೆ. ಇತ್ತ ಸಿಡಿಲಿನ ಅಬ್ಬರಕ್ಕೆ ತೆಂಗಿನ ಮರ ಹೊತ್ತಿ ಉರಿದ ಘಟನೆಯೂ ನಡೆದಿದೆ. ರಸ್ತೆಗಳು ನೀರಿನೀಂದ ತುಂಬಿ ಹೋಗಿದ್ದು ವಾಹನ ಸವಾರರು ಪರದಾಡು ಪರಿಸ್ಥಿತಿ ನಿರ್ಮಾಣವಾಗಿದೆ.

ಕರ್ನಾಟಕ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ
ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದೆ. ಪೈಕಿ ಬಳ್ಳಾರಿ, ಯಾದಗಿರಿ, ಚಿಕ್ಕೋಡಿ ಸೇರದಿಂತೆ ಕೆಲವೆಡೆ ಭಾರಿ ಗಾಳಿ ಮಳೆಗೆ ಅವಾಂತರಗಳು ಸೃಷ್ಟಿಯಾಗಿದೆ. ಉತ್ತರ ಭಾರತ ಬಿಸಿಲಿನಿಂದ ಕಂಗೆಟ್ಟಿದ್ದರೆ, ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಮಳೆಗಿಂತ ಹೆಚ್ಚು ಬೀಸುತ್ತಿರುವ ಗಾಳಿ ಅತಂಕ ಹೆಚ್ಚಿಸುತ್ತಿದೆ.

ಸುಟ್ಟು ಹೋದ ತೆಂಗಿನ ಮರ
ಬಳ್ಳಾರಿಯ ಸಿರುಗುಪ್ಪ ತಾಲೂಕಿನಲ್ಲಿ ಗುಡುಗು ಸಿಡಿಲಿನ ಅಬ್ಬರಕ್ಕೆ ತೆಂಗಿನ ಮರ ಸುಟ್ಟು ಹೋಗಿದೆ. ದೇಶನೂರು ರಸ್ತೆಯ ಸುಂಕಲಮ್ಮ ಗುಡಿ ಹತ್ತಿರ ತೆಂಗಿನಕಾಯಿ ಮರಕ್ಕೆ ಸಿಡಿಲು ಬಡಿದಿದೆ. ಬೆಂಕಿ ಹೊತ್ತಿಕೊಂಡು ಉರಿದು ತೆಂಗಿನ ಮರ ಕ್ಷಣಾರ್ಧದಲ್ಲೇ ಸುಟ್ಟು ಹೋಗಿದೆ.
ರಸ್ತೆಯಲ್ಲೇ ಹರಿದು ನೀರು
ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಗೆ ಭಾರಿ ಅವಾಂತರ ಸೃಷ್ಟಿಯಾಗಿದೆ. ಭಾರಿ ಮಳೆಗೆ ಹತ್ತಿಕುಣಿ-ಕಟಗಿ ರಸ್ತೆ ಜಲಾವೃತಗೊಂಡಿದೆ. ಮಳೆ ನೀರು ರಸ್ತೆ ಮೇಲೆ ಹರಿಯುತ್ತಿದ್ದ ಪರಿಣಾಮ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಹಲವೆಡೆ ಬೃಹತ್ ಮರ, ವಿದ್ಯುತ್ ಕಂಬಗಳು ಧರೆಗುರುಳಿದೆ.
ಆಲಿಕಲ್ಲು ಮಳೆ
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಾದ್ಯಂತ ಭಾರಿ ಮಳೆಯಾಗಿದೆ. ಹಲವೆಡೆ ಮರಗಳು ಧರೆಗುರುಳಿ ಸಾರ್ವಜನಿಕರ ಪರದಾಡುವಂತಾಯಿತು. ಅಥಣಿ ತಾಲೂಕಿನ ಸಂಬರಗಿ,ಶಿರೂರು,ಜಂಬಗಿ, ಕಲ್ಲೂತ್ತಿ ಸೇರಿದಂತೆ ವಿವಿದೆಡೆ ಭಾರಿ ಮಳೆಯಾಗಿದೆ. ಏಕಾಏಕಿ ಸುರಿದ ಆಲಿಕಲ್ಲು ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ.
ಕೊಪ್ಪಳದಲ್ಲಿ ಭಾರಿ ಮಳೆ
ಕೊಪ್ಪಳ ನಗರ ಸೇರಿ ಗ್ರಾಮೀಣ ಭಾಗದಲ್ಲಿ ಭಾರೀ ಗಾಳಿ ಮಳೆಯಾಗಿದೆ. ಸುಮಾರು ಅರ್ದಗಂಟೆಗಳ ಸುರಿದ ಮಳೆಗೆ ಹಲೆವೆಡೆ ಜನರು ಕಂಗಾಲಾಗಿದ್ದಾರೆ. ಕೊಪ್ಪಳ ತಾಲೂಕಿನ ಇರಕಲಗಡ ಸೇರಿ ಹಲವು ಗ್ರಾಮಗಳಲ್ಲಿ ಮಳೆಯಾಗಿದೆ.

