MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • Varuna Mitra Helpline: ವರುಣ ಮಿತ್ರ ಸಹಾಯವಾಣಿಗೆ ರೈತರ ಕರೆಗಳು ಏಕೆ ಕಡಿಮೆಯಾದವು? ಕೆಎಸ್‌ಎನ್‌ಡಿಎಂಸಿ ನೀಡಿದ ಅಸಲಿ ಕಾರಣ ಏನು?

Varuna Mitra Helpline: ವರುಣ ಮಿತ್ರ ಸಹಾಯವಾಣಿಗೆ ರೈತರ ಕರೆಗಳು ಏಕೆ ಕಡಿಮೆಯಾದವು? ಕೆಎಸ್‌ಎನ್‌ಡಿಎಂಸಿ ನೀಡಿದ ಅಸಲಿ ಕಾರಣ ಏನು?

ವಿಶ್ವನಾಥ ಮಲೇಬೆನ್ನೂರುಮಳೆ ಕೊರತೆ, ಬರ, ಪ್ರವಾಹ ಸೇರಿದಂತೆ ನೈಸರ್ಗಿಕ ವಿಕೋಪದಂತಹ ಕೆಟ್ಟಸ್ಥಿತಿಯಲ್ಲಿ ರೈತರಿಗೆ, ಜನ ಸಾಮಾನ್ಯರಿಗೆ ಅಗತ್ಯ ಸಲಹೆ-ಸೂಚನೆ, ನೆರವು ನೀಡುತ್ತಿದ್ದ ‘ಕೆಎಸ್‌ಎನ್‌ಡಿಎಂಸಿ’ಯ ‘ವರುಣ ಮಿತ್ರ’ ಸಹಾಯವಾಣಿ ಕೇಂದ್ರದಲ್ಲಿ ಇದೀಗ ರೈತರ ಕರೆ ಸ್ವೀಕಾರ ಮಾಡುವವರೇ ಇಲ್ಲವಾಗಿದೆ

2 Min read
Author : Kannadaprabha News| Kannada Prabha
Published : Jun 27 2026, 09:06 AM IST
Share this Photo Gallery
  • FB
  • TW
  • Linkdin
  • Whatsapp
13
KSNDMC: ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನಿರ್ಲಕ್ಷ್ಯ
Image Credit : Asianet News

KSNDMC: ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನಿರ್ಲಕ್ಷ್ಯ

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಳೆ ಮುನ್ಸೂಚನೆ, ಪ್ರತಿ 15 ನಿಮಿಷಕ್ಕೆ ಮಳೆ ಮಾಪನ ಅಂಕಿ-ಅಂಶ ಸಂಗ್ರಹಣೆ, ವಿಪತ್ತು ನಿರ್ವಹಣೆಯಲ್ಲಿ ತಾಂತ್ರಿಕ ವಿಶ್ಲೇಷಣೆ, ವಿವರಣೆ ಹಾಗೂ ತಾಂತ್ರಿಕ ವರದಿ ಸಿದ್ಧಪಡಿಸುವಲ್ಲಿ ಇಡೀ ದೇಶದಲ್ಲಿ ಹೆಸರುವಾಸಿಯಾಗಿದ್ದ, ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಇದೀಗ ನಿರ್ಲಕ್ಷ್ಯಕ್ಕೀಡಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
23
ಸಹಾಯವಾಣಿ ಕರೆ ಸಂಖ್ಯೆ 2.38 ಲಕ್ಷಕ್ಕೆ ಇಳಿಕೆ
Image Credit : Asianet News

ಸಹಾಯವಾಣಿ ಕರೆ ಸಂಖ್ಯೆ 2.38 ಲಕ್ಷಕ್ಕೆ ಇಳಿಕೆ

ವರುಣ ಮಿತ್ರ ಕೇಂದ್ರದ ಕಾರ್ಯದ ಬಗ್ಗೆ ಪ್ರಧಾನಿ ಸಹ ಈ ಹಿಂದೆ ಶ್ಲಾಘಿಸಿದ್ದರು. 2011-12ರಲ್ಲಿ ಆರಂಭಗೊಂಡ ವರುಣ ಮಿತ್ರ ಸಹಾಯವಾಣಿ ಸೇವೆ ಈವರೆಗೆ ಬರೋಬ್ಬರಿ 1.70 ಕೋಟಿ ಗೂ ಅಧಿಕ ಕೆರೆ ಬಂದಿವೆ. 2023ರಲ್ಲಿ ಅತಿ ಹೆಚ್ಚು 22.49 ಲಕ್ಷ ಕರೆ ಸ್ವೀಕರವಾಗಿದ್ದು, 2024ರಲ್ಲಿ 17 ಲಕ್ಷಕ್ಕೆ ಇಳಿಕೆಯಾಗಿದ್ದು, 2025ರಲ್ಲಿ 11.59 ಲಕ್ಷಕ್ಕೆ ಕುಸಿದಿದೆ. ಪ್ರಸಕ್ತ 2026ರ ಮೇ ಅಂತ್ಯದ ವರೆಗೆ 2.38 ಲಕ್ಷ ಕೆರೆ ಮಾತ್ರ ಸ್ವೀಕಾರವಾಗಿವೆ.

ವಿಜ್ಞಾನಿಗಳಿಗೆ ಕರೆ ಸ್ವೀಕರಿಸುವ ಹೊಣೆ

ಗ್ರಾಪಂ ಮಟ್ಟದಲ್ಲಿ ಅಳವಡಿಸಿದ್ದ ಮಳೆ ಮಾಪನ ಸೆನ್ಸಾರ್‌ಗಳಿಂದ ಸಂಗ್ರಹವಾಗುವ ದತ್ತಾಂಶ ವಿಶ್ಲೇಷಣೆ ಮಾಡಿ ವರದಿ ಸಿದ್ಧಪಡಿಸುತ್ತಿದ್ದ ಕೆಎಸ್‌ಎನ್‌ಡಿಎಂಸಿಯ ವಿಜ್ಞಾನಿಗಳಿಗೆ ಇದೀಗ, ವರುಣ ಮಿತ್ರ ಕೇಂದ್ರದಲ್ಲಿ ದೂರು ಕೇಳುವ ಕೆಲಸ ವಹಿಸಲಾಗಿದೆ. ವರುಣ ಮಿತ್ರ ಕೇಂದ್ರದಲ್ಲಿ ಕಾರ್ಯವರ್ಹಿಸುತ್ತಿದ್ದ ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಿದ ಬಳಿಕ ವಿಜ್ಞಾನಿಗಳು ಈ ಕೆಲಸ ಮಾಡಬೇಕಾದ ಪರಿಸ್ಥಿತಿ ಕೆಎಸ್‌ಎನ್‌ಡಿಎಂಸಿಯಲ್ಲಿ ನಿರ್ಮಾಣಗೊಂಡಿದೆ.

8 ತಿಂಗಳಿಂದ ಸಿಬ್ಬಂದಿಗೆ ವೇತನವಿಲ್ಲ!

ಕೆಎಸ್‌ಎನ್‌ಡಿಎಂಸಿ ಕಚೇರಿಯಲ್ಲಿ ಕಾರ್ಯವಹಿಸುತ್ತಿರುವ ಸಿಬ್ಬಂದಿಗೆ ಕಳೆದ 8 ತಿಂಗಳಿನಿಂದ ವೇತನ ಪಾವತಿಸಿಲ್ಲ. ವೇತನ ಬಗ್ಗೆ ಪ್ರಶ್ನಿಸಿದಾಗ ರಾಜ್ಯ ಸರ್ಕಾರ ಅನುದಾನ ನೀಡಿಲ್ಲ ಎಂದು ಸಂಸ್ಥೆಯ ನಿರ್ದೇಶಕರು ಸಬೂಬು ಹೇಳಲಾಗುತ್ತಿದೆ ಎಂದು ಕೆಎಸ್‌ಎನ್‌ಡಿಎಂಸಿಯ ನೌಕರರು ಪತ್ರ ಬರೆದಿರುವುದು ‘ಕನ್ನಡಪ್ರಭ’ಕ್ಕೆ ಲಭ್ಯವಾಗಿದೆ.

ಒಂದು ತಿಂಗಳಲ್ಲಿ ಮಳೆ ಮಾಪನ ದುರಸ್ತಿ ಪೂರ್ಣ

ರಾಜ್ಯದಲ್ಲಿ ಗ್ರಾಪಂ ಮಟ್ಟದಲ್ಲಿರುವ ಮಳೆ ಮಾಪನ ಸೆನ್ಸರ್‌ಗಳ ಪೈಕಿ 1,044 ಸೆನ್ಸರ್‌ ದುರಸ್ತಿಗೆ ಈಗಾಗಲೇ ಕ್ರಮ ವಹಿಸಲಾಗಿದ್ದು, 452 ದುರಸ್ತಿ ಪೂರ್ಣಗೊಂಡಿದೆ. ಒಂದು ತಿಂಗಳಲ್ಲಿ ಎಲ್ಲ ಸೆನ್ಸರ್‌ ದುರಸ್ತಿ ಪೂರ್ಣವಾಗಲಿದೆ. ಉಳಿದಂತೆ 1950 ಹೊಸ ಸೆನ್ಸರ್‌ ಅಳವಡಿಕೆಗೆ ಕ್ರಮವಹಿಸಲಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ನಿರ್ದೇಶಕ ಎಂ.ಎಸ್‌. ದಿವಾಕರ್‌ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಕೆಎಸ್‌ಎನ್‌ಡಿಎಂಸಿ ಸಿಬ್ಬಂದಿಗೆ ಕಿರುಕುಳ?

ಸಂಸ್ಥೆಯ ನೌಕರರಿಗೆ ಪಿಎಫ್‌ ಕಡಿತಗೊಳಿಸದೇ ವೇತನ ನೀಡಲಾಗುತ್ತಿದೆ. ಹಾಲಿ ನಿರ್ದೇಶಕರ ನಿರ್ವಹಿಸಬೇಕಾದ ಇ- ಆಫೀಸ್‌ ಅನ್ನು ಕೇಂದ್ರದ ಆಡಳಿತಾಧಿಕಾರಿಯೇ ನಿರ್ವಹಿಸುತ್ತಿದ್ದು, ನಿರ್ದೇಶಕರ ಪರವಾಗಿ ಆಡಳಿತಾಧಿಕಾರಿಯೇ ಟಿಪ್ಪಣಿ ಬರೆಯುತ್ತಿದ್ದಾರೆ. ಆಡಳಿತಾಧಿಕಾರಿ ವಿನಾಕಾರಣ ನೌಕರರಿಗೆ ನೋಟಿಸ್‌ ನೀಡಿ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪವನ್ನು ಸಹ ನೌಕರರು ಮಾಡಿದ್ದಾರೆ.

Related Articles

Related image1
ಕರ್ನಾಟಕ ಮಾವು ಬೆಳೆಗಾರರಿಗೆ ಸಹಾಯಧನ ಘೋಷಿಸಿದ ಕೇಂದ್ರ, ಜೋಶಿ ಮನವಿಗೆ ಸ್ಪಂದಿಸಿದ ಕೃಷಿ ಸಚಿವ
Related image2
7 ಗಂಟೆಯಲ್ಲಿ 3 ದಿನದ ಕೆಲಸ ಮಾಡಿದ ಜೋಡೆತ್ತು; ರೈತರು ಬದಲಾದ್ರೂ ನೇಗಿಲು ಎಳೆದ ಎತ್ತುಗಳು
33
ಕೆಎಸ್‌ಎನ್‌ಡಿಎಂಸಿಗೆ ಇಲ್ಲ ಕಾಯಂ ನಿರ್ದೇಶಕರ ನೇಮಕ
Image Credit : Asianet News

ಕೆಎಸ್‌ಎನ್‌ಡಿಎಂಸಿಗೆ ಇಲ್ಲ ಕಾಯಂ ನಿರ್ದೇಶಕರ ನೇಮಕ

2020ರ ನಂತರ ಕೆಎಸ್‌ಎನ್‌ಡಿಎಂಸಿಗೆ ಕಾಯಂ ನಿರ್ದೇಶಕರನ್ನು ನೇಮಕ ಮಾಡದೇ ಸರ್ಕಾರ ಐಎಎಸ್‌ ಅಧಿಕಾರಿಗಳನ್ನು ನೇಮಿಸುತ್ತಿದೆ. ನಾಲ್ಕೈದು ತಿಂಗಳಿಗೆ ಈ ಐಎಎಸ್‌ ಅಧಿಕಾರಿಗಳ ಬದಲಾವಣೆಯಿಂದ ಕೆಎಸ್‌ಎನ್‌ಡಿಎಂಸಿ ಸಮರ್ಪಕವಾಗಿ ಕಾರ್ಯನಿರ್ವಹಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಐಎಎಸ್‌ ಅಧಿಕಾರಿಗಳು ಆಡಳಿತಾತ್ಮಕ ಕಾರ್ಯದಲ್ಲಿ ಮಾತ್ರ ಪರಿಣಿತರಾಗಿದ್ದು, ಕೆಎಸ್‌ಎನ್‌ಡಿಎಂಸಿಯ ಮೂಲ ಕಾರ್ಯದಲ್ಲಿ ತೊಡಗಿಸುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂಬ ಆರೋಪ ಸಹ ಕೇಳಿ ಬಂದಿವೆ. 

ವರುಣ ಮಿತ್ರ ಸಹಾಯವಾಣಿ ಕೇಂದ್ರಕ್ಕೆ ಏಜೆನ್ಸಿ ಮೂಲಕ ಸಿಬ್ಬಂದಿ ನೇಮಿಸಲಾಗಿತ್ತು. ಅವಧಿ ಮುಕ್ತಾಯವಾದರಿಂದ ಇತರೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ನಾನೂ ಸಹ ವರುಣ ಮಿತ್ರ ಸಹಾಯವಾಣಿಯಲ್ಲಿ ಹೋಗಿ ಕುಳಿತು ಕರೆ ಸ್ವೀಕಾರ ಮಾಡುತ್ತೇನೆ. ದಿನಕ್ಕೆ ಈಗಲೂ 4 ರಿಂದ 5 ಸಾವಿರ ಕರೆ ಸ್ವೀಕಾರ ಮಾಡಲಾಗುತ್ತಿದೆ. ಈ ಬಾರಿ ಮಳೆ ಕೊರತೆ, ವೆಬ್‌ಸೈಟ್‌, ಮೊಬೈಲ್‌ ಆ್ಯಪ್‌ನಲ್ಲಿ ಸಮಗ್ರ ಮಾಹಿತಿ ರೈತರಿಗೆ ದೊರೆಯುತ್ತಿರುವುದರಿಂದ ಸಹಾಯವಾಣಿಗೆ ಕರೆ ಮಾಡುವವರ ಸಂಖ್ಯೆ ಕಡಿಮೆಯಾಗಿದೆ.

-ಎಂ.ಎಸ್‌.ದಿವಾಕರ್‌, ನಿರ್ದೇಶಕರು, ಕೆಎಸ್‌ಎನ್‌ಡಿಎಂಸಿ.

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
ಚಿಕ್ಕಮಗಳೂರು
ಕೃಷಿ
ರೈತರು
ಮಾನ್ಸೂನ್
ಕರ್ನಾಟಕ ಸುದ್ದಿ

Latest Videos
Recommended Stories
Recommended image1
JDS Challenge pradeep eshwar: ''2028ರಲ್ಲಿ ನೀವು ಗೆದ್ರೆ ನಿಮ್ಮ ಮನೆ ವಾಚ್‌ಮ್ಯಾನ್ ಆಗ್ತೀನಿ, ಸೋತ್ರೆ ನೀವು..?
Recommended image2
ಬೆಂಗಳೂರಲ್ಲಿ ಹೊಟೆಲ್‌ಗೆ ನುಗ್ಗಿ ಧಮ್ಕಿ, ಸಹಾಯಕ್ಕಾಗಿ ಕರೆ ಮಾಡಿದ ಮಾಲೀಕನ ಮೇಲೆ ಪೊಲೀಸ್ ಕೆಂಡಾಮಂಡಲ
Recommended image3
ಕೊಪ್ಪಳ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವು, ಹಲವರಿಗೆ ಗಾಯ
Related Stories
Recommended image1
ಕರ್ನಾಟಕ ಮಾವು ಬೆಳೆಗಾರರಿಗೆ ಸಹಾಯಧನ ಘೋಷಿಸಿದ ಕೇಂದ್ರ, ಜೋಶಿ ಮನವಿಗೆ ಸ್ಪಂದಿಸಿದ ಕೃಷಿ ಸಚಿವ
Recommended image2
7 ಗಂಟೆಯಲ್ಲಿ 3 ದಿನದ ಕೆಲಸ ಮಾಡಿದ ಜೋಡೆತ್ತು; ರೈತರು ಬದಲಾದ್ರೂ ನೇಗಿಲು ಎಳೆದ ಎತ್ತುಗಳು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved