7 ಗಂಟೆಯಲ್ಲಿ 3 ದಿನದ ಕೆಲಸ ಮಾಡಿದ ಜೋಡೆತ್ತು; ರೈತರು ಬದಲಾದ್ರೂ ನೇಗಿಲು ಎಳೆದ ಎತ್ತುಗಳು
ಜೋಡೆತ್ತುಗಳು, ಮೂರು ದಿನಗಳಲ್ಲಿ ಮಾಡುವ ಕೃಷಿ ಕೆಲಸವನ್ನು ಕೇವಲ ಏಳು ಗಂಟೆಗಳಲ್ಲಿ ಪೂರ್ಣಗೊಳಿಸಿ ಇತಿಹಾಸ ನಿರ್ಮಿಸಿವೆ. ರೈತರು ಸುಸ್ತಾಗಿ ಬದಲಾದರೂ, ಎತ್ತುಗಳು ನಿರಂತರವಾಗಿ ಆರೂವರೆ ಎಕರೆ ಭೂಮಿಯನ್ನು ಹದಗೊಳಿಸಿವೆ. ಈ ಅಪರೂಪದ ಸಾಧನೆಗೆ ಗ್ರಾಮಸ್ಥರು ಎತ್ತುಗಳಿಗೆ ಮೆರವಣಿಗೆ ಮಾಡಿ ಸಂಭ್ರಮಿಸಿದರು.

ಮೂರು ದಿನ ಮಾಡುವ ಕೆಲಸ ಕೇವಲ ಏಳು ಗಂಟೆಯಲ್ಲಿ
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಸುರಳಿಕಲ್ ಗ್ರಾಮದ ಜೋಡೆತ್ತುಳಗಳು ಇತಿಹಾಸ ನಿರ್ಮಿಸಿವೆ. ಜೋಡೆತ್ತು ಮೂರು ದಿನ ಮಾಡುವ ಕೆಲಸವನ್ನು ಕೇವಲ ಏಳು ಗಂಟೆಯಲ್ಲಿ ಮಾಡಿ ಮುಗಿಸಿವೆ. ರೈತರು ಸುಸ್ತಾದ್ರೂ ಎತ್ತುಗಳು ಮಾತ್ರ ಕುಗ್ಗದೇ ಏಳು ಗಂಟೆ ನೇಗಿಲು ಎಳೆದಿವೆ.
ಎತ್ತುಗಳಿಗೆ ಗ್ರಾಮದಲ್ಲಿ ಮೆರವಣಿಗೆ
ಸುರುಳಿಕಲ್ ಗ್ರಾಮದ ಶಿವಬಸಪ್ಪ ಆಸಂಗಿ ಎಂಬವರು ಎತ್ತುಗಳು ದಾಖಲೆ ಬರೆದಿವೆ. ಮುಂಗಾರು ಬಿತ್ತನೆಗೆ ಕೃಷಿಭೂಮಿಯನ್ನು ಹದ ಮಾಡಲಾಗುತ್ತಿತ್ತು. ಒಟ್ಟು ಆರೂವರೆ ಎಕರೆ ಕೃಷಿಭೂಮಿಯನ್ನ ಏಳು ತಾಸಿನಲ್ಲಿ ಹದಗೊಳಿಸಲಾಗಿದೆ. ಎತ್ತುಗಳಿಗೆ ಬಣ್ಣ ಹಚ್ಚಿ ಗ್ರಾಮದಲ್ಲಿ ಮೆರವಣಿಗೆ ಮಾಡಲಾಗಿದೆ.
ಕೃಷಿಭೂಮಿ ಹದಗೊಳಿಸಿದ ಎತ್ತುಗಳು
ರೈತರಾದ ಮಂಜುನಾಥ್ ಉಣ್ಣಿಬಾವಿ, ಬಸಪ್ಪ ಕೆಲ್ಲೂರು, ಶೇಖಪ್ಪ ಹಂಡಿ, ಶಿವಪ್ಪ ಹುಣ್ಣಿಮೆ ಸೇರಿದಂತೆ ಐದಾರು ಜನರಿಂದ ನೇಗಿಲು ಹೊಡೆಯುವ ಕಾರ್ಯ ಮಾಡಿದ್ದಾರೆ. ರೈತರು ಬದಲಾದ್ರೂ ಎತ್ತುಗಳು ಮಾತ್ರ ಏಳು ಗಂಟೆ ನಿರಂತರವಾಗಿ ಕೆಲಸ ಮಾಡಿವೆ. ಎತ್ತುಗಳ ಸಾಹಸ ನೋಡಲು ಹೊಲದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಜಮಾಯಿಸಿದ್ದರು.
ಇದನ್ನೂ ಓದಿ: ಏರ್ಟೆಲ್ ಸಿಮ್ ಇದ್ದೋರಿಗೆ ಬರುತ್ತಿಲ್ಲ ಗೃಹಲಕ್ಷ್ಮಿ ಹಣ? ಏನಿದು ಅವ್ಯವಹಾರ- ಸರ್ಕಾರ ಹೇಳಿದ್ದೇನು
ಗ್ರಾಮಸ್ಥರಿಂದ ರೈತರಿಗೆ ಗೌರವ ಸಲ್ಲಿಕೆ
ಜೋಡೆತ್ತುಗಳ ಸಾಧನೆಗೆ ಮೆಚ್ಚುಗೆ ಸೂಚಿಸಿದ ಸುತ್ತಮುತ್ತಲಿನ ಗ್ರಾಮಸ್ಥರು.ನೇಗಿಲು ಹೊಡೆದ ರೈತರಿಗೆ ಬಣ್ಣ ಎರಚಿ ಸಂಭ್ರಮಿಸಿದರು. ಸ್ಥಳದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಲಾಯ್ತು. ಎತ್ತುಗಳಿಗೆ ಎತ್ತಿನ ಮಾಲೀಕನಿಗೆ,ಸಾಗುವಳಿ ಮಾಡಿದ ರೈತರಿಗೆ ಶಾಲು ಹೊದಿಸಿ ಗೌರವ ಸೂಚಿಸಲಾಯ್ತು.
ಇದನ್ನೂ ಓದಿ: ಕರಾವಳಿಯಲ್ಲಿ ಶೇ.54ರಷ್ಟು ಭಾರೀ ಕುಸಿದ ಮುಂಗಾರು, ಮಳೆಗಾಲದಲ್ಲೂ ಮುಂದುವರಿದ ಬೇಸಿಗೆ ಹವೆ, ಬತ್ತಿದ ನೇತ್ರಾವತಿ!

