MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಗೋವಿಂದಾ...ಗೋವಿಂದ....ಭದ್ರಾಮೇಲ್ದಂಡೆಗೆ ಎಳ್ಳು ನೀರು ಬಿಟ್ಟ ಸಿದ್ದರಾಮಯ್ಯ ಸರ್ಕಾರ, ಇಚ್ಚಾಶಕ್ತಿ ಕಳೆದುಕೊಂಡ ಜನ ಪ್ರತಿನಿಧಿಗಳು

ಗೋವಿಂದಾ...ಗೋವಿಂದ....ಭದ್ರಾಮೇಲ್ದಂಡೆಗೆ ಎಳ್ಳು ನೀರು ಬಿಟ್ಟ ಸಿದ್ದರಾಮಯ್ಯ ಸರ್ಕಾರ, ಇಚ್ಚಾಶಕ್ತಿ ಕಳೆದುಕೊಂಡ ಜನ ಪ್ರತಿನಿಧಿಗಳು

ವರದಿ: ಚಿಕ್ಕಪ್ಪನಹಳ್ಳಿ ಷಣ್ಮುಖಸಿದ್ದರಾಮಯ್ಯ ಸರ್ಕಾರವು ಭದ್ರಾ ಮೇಲ್ದಂಡೆ ಯೋಜನೆಗೆ ಕೇವಲ 150 ಕೋಟಿ ರೂ. ಅನುದಾನ ನೀಡಿ ನಿರ್ಲಕ್ಷ್ಯ ತೋರಿದೆ. ಸಾವಿರಾರು ಕೋಟಿ ಬಿಲ್ ಬಾಕಿ ಉಳಿದಿದ್ದು, ಗುತ್ತಿಗೆದಾರರು ಕಾಮಗಾರಿ ನಿಲ್ಲಿಸಿದ್ದಾರೆ. ಇದರಿಂದಾಗಿ, ಬಯಲು ಸೀಮೆಗೆ ನೀರು ಹರಿಸುವ ಮಹತ್ವಾಕಾಂಕ್ಷಿ  

2 Min read
Author : Gowthami K
Published : Mar 28 2026, 03:05 PM IST
Share this Photo Gallery
  • FB
  • TW
  • Linkdin
  • Whatsapp
16
ವಾರ್ಷಿಕ ಕೇವಲ 150 ಕೋಟಿ ರು.ಅನುದಾನ ಬಿಡುಗಡೆ
Image Credit : Asianet News

ವಾರ್ಷಿಕ ಕೇವಲ 150 ಕೋಟಿ ರು.ಅನುದಾನ ಬಿಡುಗಡೆ

 ಚಿತ್ರದುರ್ಗ: ಮಧ್ಯ ಕರ್ನಾಟಕದ ಬಯಲು ಸೀಮೆಗೆ ನೀರುಣಿಸುವ ಭದ್ರಾ ಮೇಲ್ದಂಡೆ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಎಳ್ಳು ನೀರು ಬಿಟ್ಟಂತೆ ಕಾಣಿಸುತ್ತಿದೆ. 2026-27ನೇ ಸಾಲಿಗೆ ಕೇವಲ 150 ಕೋಟಿ ರು. ಅನುದಾನ ಬಿಡುಗಡೆ ಮಾಡುವುದರ ಮೂಲಕ ಚರಮ ಗೀತೆಗೆ ಕೋರಸ್ ಒದಗಿಸಿದೆ. ಯೋಜನೆಗೆ ಕೇಂದ್ರ ಸರ್ಕಾರ ರಾಷ್ಟ್ರೀಯ ಮಾನ್ಯತೆ ನೀಡದಿದ್ದರೂ ಅನುದಾನ ಹಂಚಿಕೆ ಮಾಡುವಾಗ ಕೇಂದ್ರದ 600 ಕೋಟಿ ರು. ಅನುದಾನ ನಿರೀಕ್ಷಿಸಿ 150 ಕೋಟಿ ರು. ಮಾತ್ರ ಬಿಡುಗಡೆ ಮಾಡಲಾಗಿದೆ. ಕನ್ನಡಿಯೊಳಗಿನ ಗಂಟು ತೋರಿಸಿ ಬಯಲು ಸೀಮೆ ಜನರ ಏಮಾರಿಸಲಾಗಿದೆ.

26
ಫೆಬ್ರವರಿ ಅಂತ್ಯಕ್ಕೆ ಭೂ ಸ್ವಾಧೀನ ಸೇರಿ 2200 ಕೋಟಿ ರು. ಬಾಕಿಬಿಲ್‌
Image Credit : our own

ಫೆಬ್ರವರಿ ಅಂತ್ಯಕ್ಕೆ ಭೂ ಸ್ವಾಧೀನ ಸೇರಿ 2200 ಕೋಟಿ ರು. ಬಾಕಿಬಿಲ್‌

ಭದ್ರಾಮೇಲ್ದಂಡೆ ಯೋಜನೆ ಕಾಮಗಾರಿ ಪೂರ್ಣ ಪ್ರಮಾಣದಲ್ಲಿ ಬಾಕಿ ಬಿಲ್ ಭಾರಕ್ಕೆ ಕುಸಿದಿದೆ. 2026ರ ಫೆಬ್ರವರಿ ಅಂತ್ಯಕ್ಕೆ ಭೂ ಸ್ವಾಧೀನ ಸೇರಿ 2200 ಕೋಟಿ ರು. ಬಾಕಿಬಿಲ್‌ಗಳಿವೆ. ಒಂದೆಡೆ ಗುತ್ತಿಗೆದಾರರು ಬಿಲ್ ಬಾರದ ಕಾರಣ ಕೆಲಸ ನಿಲ್ಲಿಸಿದ್ದರೆ, ಮತ್ತೊಂದೆಡೆ ಬಾಕಿ ಬಿಲ್ ಬೇಡಿಕೆಯಿಂದಾಗಿ ಅಧಿಕಾರಿಗಳು ಕಚೇರಿಗೆ ಬಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಮಗಾರಿ ಸ್ಥಳಕ್ಕೆ ಭೇಟಿ ನೀಡದೆ ಕಚೇರಿಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಹಾಲಿ ಬಿಡುಗಡೆ ಮಾಡಲಾದ ಅನುದಾನ ಭವಿಷ್ಯದಲ್ಲಿ ಸಂಬಳಕ್ಕೆ ಸಾಕಾಗುತ್ತದೆಯೇ ಎಂಬ ಆತಂಕ ನೌಕರರಲ್ಲಿದೆ.

Related Articles

Related image1
ಕೇಂದ್ರ ಹಣ ನೀಡದಿದ್ದರೂ ಭದ್ರಾ ಮೇಲ್ದಂಡೆ ಯೋಜನೆಗಳ ಕಾಮಗಾರಿ ನಡೆಯುತ್ತೆ: ಸಿಎಂ
Related image2
ಅನುದಾನ ಕೊರತೆ ಸ್ಥಗಿತವಾದ ₹21 ಸಾವಿರ ಕೋಟಿ ಭದ್ರಾ ಮೇಲ್ದಂಡೆ ಯೋಜನೆ: ಕೆಲಸವೇ ಇಲ್ಲದೆ ಕಚೇರಿ ಕಾಯೋಕೆ ನೂರೆಂಟು ಮಂದಿ!
36
2026-27ನೇ ಸಾಲಿನಲ್ಲಿ 63 ಕೋಟಿ ರು. ನಷ್ಟು ಅನುದಾನ ನಿರೀಕ್ಷೆ
Image Credit : Asianet News

2026-27ನೇ ಸಾಲಿನಲ್ಲಿ 63 ಕೋಟಿ ರು. ನಷ್ಟು ಅನುದಾನ ನಿರೀಕ್ಷೆ

ಭದ್ರಾ ಮೇಲ್ದಂಡೆಯ ಎರಡು ವೃತ್ತ, ವಲಯ, ಮುಖ್ಯ ಎಂಜಿನಿಯರ್ ಕಚೇರಿ ಸೇರಿ ವಾರ್ಷಿಕವಾಗಿ 60 ಕೋಟಿಗೂ ಹೆಚ್ಚು ಅನುದಾನದ ಬೇಡಿಕೆಯಿದೆ. ಸಂಬಳ ಭತ್ಯೆ, ಸ್ಟೇಷನರಿ, ಜೆರಾಕ್ಸ್ ಸೇರಿದಂತೆ ಆಡಳಿತಾತ್ಮಕ ವೆಚ್ಚಕ್ಕೆ 2025-26ನೇ ಸಾಲಿಗೆ 61.64 ಕೋಟಿ ರು. ಭರಿಸಲಾಗಿದೆ. 2026-27ನೇ ಸಾಲಿಗೆ ತುಟ್ಟಿ ಭತ್ಯೆ ಸೇರಿದಂತೆ ಹಲವು ವೆಚ್ಚಗಳು ಜಾಸ್ತಿಯಾಗುವುದರಿಂದ 63 ಕೋಟಿ ರು. ನಷ್ಟು ಅನುದಾನ ನಿರೀಕ್ಷಿಸಲಾಗಿದೆ.

46
128.91 ಕೋಟಿ ಯಷ್ಟು ವಿದ್ಯುತ್ ಬಿಲ್ ಬಾಕಿ
Image Credit : Asianet News

128.91 ಕೋಟಿ ಯಷ್ಟು ವಿದ್ಯುತ್ ಬಿಲ್ ಬಾಕಿ

ಭದ್ರಾಮೇಲ್ದಂಡೆ ಯೋಜನೆಯಡಿ ಹಾಲಿ ವಿವಿ ಸಾಗರ ಜಲಾಶಯಕ್ಕೆ ಲಿಫ್ಟ್ ಮಾಡಿ 27 ಟಿಎಂಸಿ ನೀರು ಹರಿಸಲಾಗಿದೆ. ಭದ್ರಾ ಜಲಾಶಯದಿಂದ ಕಾಲುವೆಗೆ ನೀರು ಹಾಯಿಸಿ ಶಾಂತಿಪುರ ಹಾಗೂ ಬೆಟ್ಟದಾವರೆಕೆರೆ ಪಂಪ್ ಹೌಸ್‌ನಿಂದ ನೀರು ಲಿಫ್ಟ್ ಮಾಡಲಾಗುತ್ತದೆ. 2025 ಜನವರಿಯಿಂದ 2026 ಫೆಬ್ರವರಿ ಅಂತ್ಯದವರೆಗೆ ಶಾಂತಿಪುರ ಪಂಪ್ ಹೌಸ್‌ದು 67.51 ಕೋಟಿ ರು. ಹಾಗೂ ಬೆಟ್ಟದಾವರೆಕೆರೆ 61.40 ಕೋಟಿ ಸೇರಿದಂತೆ 128.91 ಕೋಟಿ ಯಷ್ಟು ವಿದ್ಯುತ್ ಬಿಲ್ ಬಾಕಿ ಇದೆ. ಸಂಬಳ ಹಾಗೂ ಬಾಕಿ ವಿದ್ಯುತ್ ಬಿಲ್ ಸೇರಿದರೆ ಹೆಚ್ಚು ಕಡಿಮೆ 186 ಕೋಟಿ ರು.ಗಳಷ್ಟಾಗುತ್ತದೆ. ಭದ್ರಾ ಮೇಲ್ದಂಡೆ ಯೋಜನೆಗೆ ರಾಜ್ಯ ಸರ್ಕಾರ 150 ಕೋಟಿ ರು.ಅನುದಾನ ನೀಡಿದೆ. ಕಾಮಗಾರಿ ಪೂರ್ಣಗೊಳಿಸುವುದು ಒತ್ತಟ್ಟಿಗಿರಲಿ, ಸಂಬಳಕ್ಕೂ ಕೊರತೆ ಯಾಗುವ ಸಾಧ್ಯತೆಗಳು ಗೋಚರಿಸಿವೆ.

56
ಈ ಬಾರಿಯ ಬಜೆಟ್ ಸಿಎಂ ಘೋಷಣೆ ಏನಾಗಿತ್ತು
Image Credit : Asianet News

ಈ ಬಾರಿಯ ಬಜೆಟ್ ಸಿಎಂ ಘೋಷಣೆ ಏನಾಗಿತ್ತು

2026-27ನೇ ಸಾಲಿನಲ್ಲಿ ಚಿತ್ರದುರ್ಗ ಶಾಖಾ ಕಾಲುವೆಯ 157 ಕಿಮೀ ಕಾಮಗಾರಿ ಪೂರ್ಣಗೊಳಿಸಿ ಗೋನೂರು ಕೆರೆವರೆಗೆ ನೀರು ಹಾಯಿಸಲಾಗುವುದೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಬಾರಿಯ ಬಜೆಟ್ ಭಾಷಣದಲ್ಲಿ ಘೋಷಣೆ ಮಾಡಿದ್ದರು. ಈ ಕೆಲಸಗಳ ಮುಗಿಸಲು ಕನಿಷ್ಟ ಶೇ.25 ರಷ್ಟಾದರೂ ಬಾಕಿ ಬಿಲ್ ಕೊಟ್ಟಿದ್ದರೆ ಅಂದರೆ 500 ಕೋಟಿ ಕೊಟ್ಟಿದ್ದರೆ ಗುತ್ತಿಗೆದಾರರೂ ಕೆಲಸ ಮಾಡುತ್ತಿದ್ದರು. ಆದರೆ 150 ಕೋಟಿ ಕೊಟ್ಟಿದೆ. ಕಾದ ಹೆಂಚಿನ ಮೇಲೆ ನೀರು ಚುಮುಕಿಸುವಷ್ಟಾದರೂ ಅನುದಾನವಿಲ್ಲದಂತಾಗಿದೆ. ಬಜೆಟ್ ಘೋಷಣೆಗೂ ದ್ರೋಹ ಎಸಗಲಾಗಿದೆ.

66
ಮಾತನಾಡುವುದನ್ನೇ ಬಿಟ್ಟ ಜನ ಪ್ರತಿನಿಧಿಗಳು
Image Credit : Asianet News

ಮಾತನಾಡುವುದನ್ನೇ ಬಿಟ್ಟ ಜನ ಪ್ರತಿನಿಧಿಗಳು

ಕಳೆದ ಡಿಸೆಂಬರ್ ನಲ್ಲಿ ಭದ್ರಾ ಮೇಲ್ಡಂಡೆ ಕಾಮಗಾರಿ ವೀಕ್ಷಿಸಿದ್ದ ಸಚಿವ ಡಿ.ಸುಧಾಕರ್ ನೇತೃತ್ವದ ಶಾಸಕರ ತಂಡ ಗಣರಾಜ್ಯೋತ್ಸವದ ವೇಳೆಗೆ ಗೋನೂರು ಕೆರೆಗೆ ನೀರು ಹಾಯಿಸಲಾಗುವುದು. ಇದಕ್ಕಾಗಿ ಸರ್ಕಾರದ ಮೇಲೆ ಒತ್ತಡ ಹೇರಿ 200 ಕೋಟಿ ರು. ಅನುದಾನ ಬಿಡುಗಡೆ ಮಾಡಿಸಲಾಗುವುದು ಎಂದಿದ್ದರು. ನಂತರ ಹೇಳಿಕೆಗಳು ಗಣರಾಜ್ಯೋತ್ಸವದಿಂದ ಶಿವರಾತ್ರಿ, ತರುವಾಯ ಯುಗಾದಿ ಹಬ್ಬದ ವರೆಗೆ ವಿಸ್ತರಣೆ ಆದವು. ಇದೀಗ ಜನ ಪ್ರತಿನಿಧಿಗಳು ಈ ಬಗ್ಗೆ ಮಾತನಾಡುವುದನ್ನೇ ಬಿಟ್ಟಿದ್ದಾರೆ. ಕೇವಲ 200 ಕೋಟಿ ರು. ಅನುದಾನ ತರುವಷ್ಟು ಇಚ್ಚಾಶಕ್ತಿ ಜನಪ್ರತಿನಿಧಿಗಳಿಂದ ಪ್ರದರ್ಶನವಾಗದಂತಾಗಿದೆ.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಕರ್ನಾಟಕ ಸುದ್ದಿ
ಸಿದ್ದರಾಮಯ್ಯ
ಚಿತ್ರದುರ್ಗ
Latest Videos
Recommended Stories
Recommended image1
Raichur: ಜ್ವರಕ್ಕೆ ಇಂಜೆಕ್ಷನ್; ನಕಲಿ ವೈದ್ಯನ ಎಡವಟ್ಟಿಗೆ 9ನೇ ತರಗತಿ ಬಾಲಕಿ ಸಾವು!
Recommended image2
ಬೆಂಗಳೂರು: ತರಗತಿಯಲ್ಲಿ ಪಾಠ ಮಾಡುತ್ತಿದ್ದ ವೇಳೆ ವಿದ್ಯಾರ್ಥಿಗೆ ಉಗ್ರನ ಪಟ್ಟ ಕಟ್ಟಿ ಅವಮಾನಿಸಿದ ಪ್ರೊಫೆಸರ್!
Recommended image3
Bagalkote Bypolls: ನೆತ್ತಿ ಸುಡುವ ಬಿಸಿಲಿನ ಮಧ್ಯೆ ಕಾವೇರಿದ ಉಪಕದನ: ಕಾಂಗ್ರೆಸ್‌ನ ಮೇಟಿ, ಬಿಜೆಪಿಯ ಚರಂತಿಮಠ ಪರ ನಾಯಕರ ಭರ್ಜರಿ ಮತಬೇಟೆ
Related Stories
Recommended image1
ಕೇಂದ್ರ ಹಣ ನೀಡದಿದ್ದರೂ ಭದ್ರಾ ಮೇಲ್ದಂಡೆ ಯೋಜನೆಗಳ ಕಾಮಗಾರಿ ನಡೆಯುತ್ತೆ: ಸಿಎಂ
Recommended image2
ಅನುದಾನ ಕೊರತೆ ಸ್ಥಗಿತವಾದ ₹21 ಸಾವಿರ ಕೋಟಿ ಭದ್ರಾ ಮೇಲ್ದಂಡೆ ಯೋಜನೆ: ಕೆಲಸವೇ ಇಲ್ಲದೆ ಕಚೇರಿ ಕಾಯೋಕೆ ನೂರೆಂಟು ಮಂದಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved