ಬೆಳಗಾವಿ ಗಡಿಯಲ್ಲಿ ಕನ್ನಡ ಡಿಂಡಿಮ, ನಿಪ್ಪಾಣಿಯಲ್ಲಿ ತಾಲೂಕು ಸಾಹಿತ್ಯ ಸಮ್ಮೇಳನ
ಬೆಳಗಾವಿ (ಡಿ.12): ನಾವ್ ಕರ್ನಾಟಕ ಪ್ರವೆಶ ಮಾಡ್ತಿವಿ ಬೆಳಗಾವಿ ನಮ್ದು ಅನ್ನೊ ಮಹಾ ನಾಯಕರ ಹುಚ್ಚಾಟದ ಹೇಳಿಕೆಗಳ ನಡುವೆ ಗಡಿಯಲ್ಲಿಯೇ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ ಮಾಡುವುದರ ಮೂಲಕ ಗಡಿಯಲ್ಲಿ ಕನ್ನಡದ ಮನಸುಗಳು ಗಟ್ಟಿಯಾಗಿವೆ ಎಂಬ ಸಂದೇಶ ಸಾರಿದ್ದಾರೆ. ಚಿಕ್ಕೋಡಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಹಾಗೂ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಖ್ಯಾತ ಹಿರಿಯ ನಟ ನಿರ್ದೇಶಕ ಟಿ ಎಸ್ ನಾಗಾಭರಣ ಭಾಗವಹಿಸಿದ್ದರು. ನಿಪ್ಪಾಣಿಯ ಪ್ರಥಮಾಚಾರ್ಯ ಶಾಂತಿಸಾಗರ ಪ್ರಜ್ಞಾಸಾಗರ ಸಭಾ ಮಂಟಪದಲ್ಲಿ ನಡೆದ ಸಮ್ಮೇಳನದಲ್ಲಿ ಸಹಸ್ರಾರು ಕನ್ನಡದ ಮನಸುಗಳು ಒಗ್ಗೂಡಿದ್ದವು. ಈ ವೇಳೆ ಸಚಿವೆ ಶಶಿಕಲಾ ಜೊಲ್ಲೆ ಹಚ್ಚೇವು ಕನ್ನಡದ ದೀಪ ಹಾಡು ಹಾಡಿ ನೆರೆದ ಕನ್ನಡ ಮನಸುಗಳನ್ನು ಹುರಿದುಂಬಿಸಿದರು.. ನಿಪ್ಪಾಣಿ ತಾಲೂಕಿನ ಭೋಜ ಗ್ರಾಮದಲ್ಲಿ ನಡೆದ ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನದ ಒಂದು ಝಲಕ್ ಇಲ್ಲಿದೆ ನೋಡಿ...
ಕನ್ನಡ ಶಲ್ಯ ಹಾಕಿ ನೃತ್ಯ ಮಾಡುತ್ತಿರುವ ಶಾಲಾ ಮಕ್ಕಳು, ಮಂಗಳ ವಾಧ್ಯಗಳೊಂದಿಗೆ ಹೊರಟಿರುವ ಭವ್ಯ ಮರೆವಣಿಗೆ. ಛದ್ಮವೇದಶಾರಿಗಳಾಗಿ ಸಾರೋಟಿನಲ್ಲಿ ಆಸೀನರಾಹಿರುವ ಪುಟಾಣಿ ಮಕ್ಕಳು ಈ ದೃಶ್ಯಗಳು ಕಂಡು ಬಂದಿದ್ದು ಬೆಳಗಾವಿ ಜಿಲ್ಲೆಯ ಗಡಿ ತಾಲೂಕು ನಿಪ್ಪಾಣಿಯ ಭೋಜ ಗ್ರಾಮದಲ್ಲಿ ಪದೇ ಪದೇ ಕನ್ನಡದ ಅಸ್ಮಿತೆಯನ್ನು ಕೆಣಕುವ ಪ್ರಯತ್ನ ಮಾಡುತ್ತಿರುವ ಮಹಾ ನಾಯಕರಿಗೆ ದಿಟ್ಟ ಉತ್ತರ ನೀಡಲು ಈ ಬಾರಿ ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನವನ್ನು ಗಡಿಯ ಭೋಜ ಗ್ರಾಮದಲ್ಲಿ ಆಯೋಜನೆ ಮಾಡಲಾಗಿತ್ತು.
ಇನ್ನು ಸಮ್ಮೇಳನದಲ್ಲಿ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಗಡಿಯಲ್ಲಿ ಕನ್ನಡ ಮಾಧ್ಯಮಗಳು ಪ್ರಬಲವಾಗಬೇಕು. ಬೆಳಗಾವಿ ನಿಪ್ಪಾಣಿ ಎಂದೆಂದಿಗೂ ಕನ್ನಡದ ನೆಲ. ಇಲ್ಲಿ ಕನ್ನಡವೇ ಸಾವ೯ಭೌಮ. ಗಡಿಯಲ್ಲಿರುವ ಕನ್ನಡ ಕೆಲಸಮಾಡುವ ಯುವಕ ಸಂಘ ಸಂಸ್ಥೆಗಳಿಗೆ ಸರ್ಕಾರದ ಹೆಚ್ಚು ಅನುದಾನ ನೀಡುವುದು ಬೆಲೆ ಪಡಿಸುವುದು. ಗಡಿಯಲ್ಲಿರುವ ಕನ್ನಡ ಶಾಲೆಗಳಿಗೆ ವಿಶೇಷ ಅನುದಾನ ನೀಡಿ ಹೈಟೆಕ್ ಶಾಲೆಯಾಗಿ ಪರಿವತಿ೯ಸುವುದು. ಸೇರಿದಂತೆ ಗಡಿಯ ವಿಷಯದಲ್ಲಿ ಸರಕಾರ ನ್ಯಾಯಾಲಯದಲ್ಲಿ ಪ್ರಬಲ ವಾದ ಮಂಡಿಸಬೇಕು ಎಂಬ ಐದು ನಿರ್ಣಯಗಳನ್ನು ಸಮ್ಮೇಳನದಲ್ಲಿ ಕೈಗೊಂಡು ಸರ್ಕಾರಕ್ಕೆ ಕಳುಹಿಸಲಾಗಿದೆ.
ಇನ್ನು ಸಮ್ಮೇಳನದಲ್ಲಿ ಭಾಗಿಯಾಗಿ ಮಾಧ್ಯಮಗಳ ಜತೆಗೆ ಮಾತನಾಡಿದ ಹಿರಿಯ ನಿರ್ದೇಶಕ ಟಿ ಎಸ್ ನಾಗಾಭರಣ ಅವರು ಮಹಾರಾಷ್ಟ್ರ ನಾಯಕರು ಕೇವಲ ಭಾವನೆಗಳನ್ನಿಟ್ಟುಕೊಂಡು ಹೇಳಿಕೆ ಕೊಡುವುದು ಹಾಗು ಕಾಲ್ಕೆರೆದು ಜಗಳಕ್ಕೆ ಬರುವುದು ಮಾಡುತ್ತಿದ್ದಾರೆ. ಅವರ ಉದ್ದೇಶವೇ ರಾಜಕೀಯ ರಾಜಕೀ ಬಿಟ್ಟು ಅವರಿಗೆ ಬೇರೆನೂ ಬೇಕಿಲ್ಲ ಎಂದರು ಅಷ್ಟೆ ಅಲ್ಲದೆ ಆನೆ ನಡೆಯುತ್ತಿದ್ದರೆ ನಾಯಿಗಳು ಬೊಗಳುತ್ತಿರುತ್ತವೆ ಎಂದು ಕಟುವಾಗಿ ಮಹಾ ನಾಯಕರನ್ನು ಕುಟುಕಿದರು.
ಒಟ್ಟಿನಲ್ಲಿ ಗಡಿಯಲ್ಲಿ ಕನ್ನಡ ಹಾಗೂ ಕನ್ನಡದ ಅಸ್ಮಿತೆಯ ಪ್ರಶ್ನೆಗಳು ಬಂದಾಗ ಇಂತಹ ಸಮ್ಮೇಳನಗಳ ಆಯೋಜನೆ ಹಾಗೂ ಕನ್ನಡ ಮನಸುಗಳ ಒಟ್ಟುಗೂಡುವಿಕೆಯೂ ರಾಜಕೀಯಕ್ಕಾಗಿ ಹೇಳಿಕೆ ಕೊಡುವ ಮಹಾ ನಾಯಕರ ನಿದ್ದೆಗಡಿಸುವುದಂತೂ ಸತ್ಯ..