ಬೆಂಗಳೂರು: ಸ್ವಾಮಿ ವಿವೇಕಾನಂದ ವಿದ್ಯಾಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ
ಬೆಂಗಳೂರು(ಜೂ.21): ತ್ರಿಶೂಲ ಟ್ರಸ್ಟ್ ಹಾಗೂ ಸ್ವಾಮಿ ವಿವೇಕಾನಂದ ವಿದ್ಯಾಶಾಲಾ ಸಹಯೋಗದೊಂದಿಗೆ ಇಂದು(ಬುಧವಾರ) ಸ್ವಾಮಿ ವಿವೇಕಾನಂದ ವಿದ್ಯಾಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನ ಆಚರಣೆ ಮಾಡಲಾಗಿದೆ.
14

ಸ್ವಾಮಿ ವಿವೇಕಾನಂದ ವಿದ್ಯಾಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
24
ಬೆಳಗ್ಗೆ 9 ಗಂಟೆಗೆ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ್ದ ಎಲ್ಲ ವಿದ್ಯಾರ್ಥಿಗಳು ಸಾಮೂಹಿಕವಾಗಿ ಯೋಗ ಮಾಡುವ ಮೂಲಕ ಯೋಗದ ಮಹತ್ವವನ್ನ ಸಾರಿದ್ದಾರೆ.
34
ಇದೇ ಸಂದರ್ಭದಲ್ಲಿ ಯೋಗ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ 500 ವಿದ್ಯಾರ್ಥಿಗಳಿಗೆ ಪುಸ್ತಕ, ಪೆನ್ ಹಾಗೂ ಸ್ವೀಟ್ಸ್ ವಿತರಣೆ ಮಾಡಲಾಗಿದೆ.
44
ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮುಖ್ಯಅತಿಥಿಗಳಾಗಿ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಡಾ.ಆರ್.ವಿ. ಮಮತದೇವರಾಜ್, ಬಸವನಗುಡಿ ಶಾಸಕ ಎಲ್.ಎ. ರವಿ ಸುಬ್ರಮಣ್ಯ, ಯೋಗ ಗುರು ಡಾ. ಎನ್.ಆರಾಧ್ಯ, ಎಚ್.ವಿ. ಶಂಕರ್, ಎಸ್‌ವಿವಿಎಸ್ ಪ್ರಾಂಶುಪಾಲ ವಿ.ಬಸವರಾಜ ಹಾಗೂ ಸಂಜೀವಿನಿ ಫೌಂಡೇಷನ್ಸ್ ಸಂಸ್ಥಾಪಕರು ಭಾಸ್ಕರ್ ಚಂದಾವರ್ ಅವರು ಭಾಗವಹಿಸಿದ್ದರು.
Latest Videos