25 ರೂಪಾಯಿ ಪಿಂಚಣಿಗೆ 100 ರೂ. ಲಂಚ ಕೊಟ್ಟಿದ್ರು ಮಹಾಂತೇಶ್ ಬೀಳಗಿಯವರ ತಾಯಿ
ಕಾರ್ ಅಪಘಾತದಲ್ಲಿ ನಿಧನರಾದ ಜನಪ್ರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ, ತಮ್ಮ ತಾಯಿಗೆ ವಿಧವಾ ಪಿಂಚಣಿಗಾಗಿ ಆದ ಅನ್ಯಾಯದಿಂದ ಪ್ರೇರಿತರಾಗಿ ಅಧಿಕಾರಿಯಾದವರು. ಜಿಲ್ಲಾಧಿಕಾರಿಯಾಗಿ, ಅವರು 'ಪಿಂಚಣಿ ಅದಾಲತ್' ನಂತಹ ಜನಪರ ಯೋಜನೆಗಳನ್ನು ಜಾರಿಗೆ ತಂದು ಜನರ ಮನೆ ಬಾಗಿಲಿಗೆ ಸೇವೆ ತಲುಪಿಸಿದ್ದರು.

ಜನಪ್ರಿಯ ಅಧಿಕಾರಿ ಮಹಾಂತೇಶ್ ಬೀಳಗಿ
ಕರ್ನಾಟಕದ ಜನಪ್ರಿಯ ಅಧಿಕಾರಿ ಮಹಾಂತೇಶ್ ಬೀಳಗಿ ಕಾರ್ ಅಪಘಾತದಲ್ಲಿ ಮೃತರಾಗಿದ್ದು, ಅವರ ಹೇಳಿಕೆಗಳು ಮತ್ತು ಮಾಡಿದ ಉತ್ತಮ ಕೆಲಸಗಳು ಮುನ್ನಲೆಗೆ ಬರುತ್ತಿವೆ. ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಮಹಾಂತೇಶ್ ಬೀಳಗಿ ತಾವೇಕೆ ಐಎಎಸ್ ಅಧಿಕಾರಿಯಾದೆ ಎಂಬುದರ ಬಗ್ಗೆ ಹೇಳಿದ್ದರು.
100 ರೂ. ಲಂಚ
25 ರೂಪಾಯಿ ವಿಧವಾ ಪಿಂಚಣಿ ಪಡೆಯಲು ನನ್ನ ತಾಯಿ ಅಂದು ಸರ್ಕಾರಿ ಅಧಿಕಾರಿಗಳಿಗೆ 100 ರೂ. ಲಂಚ ನೀಡಿದ್ದರು. ಪಿಂಚಣಿಗಾಗಿ ಮಹಾಂತೇಶ್ ಬೀಳಗಿ ಅವರ ತಾಯಿಯನ್ನು ಹಲವು ದಿನಗಳ ಅಲೆದಾಡಿಸಿ, ಕೊನೆಗೆ 100 ರೂಪಾಯಿ ಲಂಚ ಪಡೆದು ಮಾಸಿಕ 25 ರೂ. ಪಿಂಚಣಿಯ ಆದೇಶ ಪತ್ರವನ್ನು ನೀಡಿದ್ದರು. ಮಹಾಂತೇಶ್ ಬೀಳಗಿ ಅವರು 5ನೇ ವಯಸ್ಸಿನಲ್ಲಿದ್ದಾಗಲೇ ಅವರ ತಂದೆ ಮೃತರಾಗಿರುತ್ತಾರೆ.
ತಾಯಿಗಾದ ಅನ್ಯಾಯ
ಇದೆಲ್ಲವನ್ನು ಗಮನಿಸಿದ್ದ ಮಹಾಂತೇಶ್ ಬೀಳಗಿ ತಮ್ಮ ತಾಯಿಗಾದ ಅನ್ಯಾಯ ಸಮಾಜದ ಬೇರೆ ಯಾರಿಗೂ ಆಗಬಾರದು ಎಂದು ಸಂಕಲ್ಪ ಮಾಡಿದ್ದರು. ಅಂದಿನಿಂದಲೇ ಬಡತನವಿದ್ರೂ ಶ್ರದ್ಧೆಯಿಂದ ಓದಿ ಐಎಎಸ್ ಅಧಿಕಾರಿಯಾಗುತ್ತಾರೆ. ಜಿಲ್ಲಾಧಿಕಾರಿಯಾಗ್ತಿದ್ದಂತೆ ಪಿಂಚಣಿ ಸಂಬಂಧ ವಿಶೇಷ ಕಾರ್ಯಕ್ರಮವನ್ನು ಮಹಾಂತೇಶ್ ಬೀಳಗಿ ಜಾರಿಗೆ ತಂದಿದ್ದರು.
ಪಿಂಚಣಿ ಅದಾಲತ್
ಜಿಲ್ಲಾಧಿಕಾರಿಯಾದ ತಕ್ಷಣವೇ ನಾನು ಪಿಂಚಣಿ ಅದಾಲತ್ ಎಂಬ ಕಾರ್ಯಕ್ರಮವನ್ನು ಜಾರಿಗೆ ತಂದೆ. ತಹಶೀಲ್ದಾರ್ ಕಚೇರಿ ಜನರ ಮನೆಬಾಗಿಲಿಗೆ ಈ ಕಾರ್ಯಕ್ರಮದ ಉದ್ದೇಶವಾಗಿದೆ. ಅಧಿಕಾರಿಗಳೇ ಜನರ ಮನೆ ಬಾಗಿಲಿಗೆ ತೆರಳಿ ಅರ್ಹ ಫಲಾನುಭವಿಗಳಿಗೆ ವಿವಿಧ ಪಿಂಚಣಿ ಯೋಜನೆಗಳನ್ನು ತಲುಪಿಸೋದಾಗಿ ಎಂದು ಮಹಾಂತೇಶ್ ಬೀಳಗಿ ಹೇಳಿದ್ದರು.
ಇದನ್ನೂ ಓದಿ: ಮಹಾಂತೇಶ್ ಬೀಳಗಿ ಸಾವು; ಚಾಲಕ ಆಂಥೋನಿ ರಾಜ ವಿರುದ್ಧ FIR ದಾಖಲು
ಜನಪ್ರಿಯ ಕೆಲಸ
ಇದೇ ರೀತಿಯಲ್ಲಿ ಮಹಾಂತೇಶ್ ಬೀಳಗಿಯವರ ಜನಪ್ರಿಯ ಕೆಲಸಗಳ ಬಗ್ಗೆ ಜನರು ಮಾತನಾಡುತ್ತಿದ್ದಾರೆ. ತಾನೋರ್ವ ಹಿರಿಯ ಅಧಿಕಾರಿ ಅಂತ ತಿಳಿಯದೇ ಸಾಮಾನ್ಯ ಜನರೊಂದಿಗೆ ಬೆರೆಯುತ್ತಿದ್ದರು. ಇಂದು ರಾಮದುರ್ಗದಲ್ಲಿ ಮಹಾಂತೇಶ್ ಬೀಳಗಿಯವರ ಅಂತ್ಯಕ್ರಿಯೆ ನಡೆಯಲಿದೆ.
ಇದನ್ನೂ ಓದಿ: ಪಕ್ಕಾ ಆರಾಮ ಮಸ್ತ್ ಇದ್ದೀನಿ, ಸುಳ್ಳು ಸುದ್ದಿ ನಂಬಬೇಡಿ: ವೈರಲ್ ಆಯ್ತು ಮಹಾಂತೇಶ್ ಬೀಳಗಿ ಹಳೆ ವಿಡಿಯೋ

