ಚಿಕ್ಕಮಗಳೂರು: ಗೋಶಾಲೆಗಳಿಗೆ ಕಾಂಗ್ರೆಸ್ ಸರ್ಕಾರದಿಂದ ಬಾರದ ಅನುದಾನ!
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಅ.18): ಗೋವನ್ನ ವಿಶ್ವಮಾತೆ ಅಂತಾರೆ. ಗೋವುಗಳು ರಾಷ್ಟ್ರೀಯ ಸಂಪತ್ತು. ಅವುಗಳನ್ನ ಉಳಿಸಬೇಕು ಅನ್ನೋದು ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ವಾದ. ಗೋವುಗಳನ್ನ ಗೋ ಶಾಲೆಯಲ್ಲಿ ಸಾಕೋಕೆ. ಬಿಡಾಡಿ ದನಗಳಾಗಿ ರಸ್ತೆಯಲ್ಲಿ ನಾನಾ ಸಮಸ್ಯೆ ಉಂಟು ಮಾಡೋದು ಬೇಡ. ಗೋ ಹಂತಕರ ಕೈಗೆ ಸಿಗದಂತೆ ಕಾಪಾಡಲು ಕಳೆದ ಬಿಜೆಪಿ ಅವಧಿಯಲ್ಲಿ ಸರ್ಕಾರವೇ ಗೋಶಾಲೆ ತೆರೆದು, ಖಾಸಗಿಯವ್ರಿಗೂ ಅನುಮತಿ ನೀಡಿತ್ತು. ಗೋಶಾಲೆಗನ್ನ ರಿಜಿಸ್ಟರ್ ಕೂಡ ಮಾಡಲಾಯ್ತು. ಚಿಕ್ಕಮಗಳೂರು ಜಿಲ್ಲೆಯಲ್ಲಿ ಏಳು ಗೋಶಾಲೆಗಳು ನೋಂದಣಿಯಾಗಿವೆ. ಇಲ್ಲಿ ನೂರಾರು ಗೋವುಗಳನ್ನ ಸಾಕಲಾಗ್ತಿದೆ. ಗೋವುಗಳ ನಿರ್ವಹಣೆಗೆಂದೇ ಸರ್ಕಾರ ಒಂದು ಗೋವಿಗೆ ದಿನಕ್ಕೆ 17 ರೂಪಾಯಿಯಂತೆ ನಿಗದಿ ಮಾಡ್ತು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಣ ಕೂಡ ಬಂತು. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಗೋವುಗಳ ನಿರ್ವಹಣೆಯ ಹಣವೇ ಬಂದಿಲ್ಲ.
ಪ್ರಸ್ತುತ ಕಾಂಗ್ರೆಸ್ ಸರ್ಕಾರ ಗೋವುಗಳ ನಿರ್ವಹಣೆಗೆ ಹಣ ನೀಡದೆ. ಗೋಮಾತೆ ರಕ್ಷಣೆಗೆ ಮೀನಾಮೇಷ ಎಣಿಸ್ತಿದೆ ಎಂದು ಗೋಶಾಲೆ ಮುಖ್ಯಸ್ಥರು ಆರೋಪಿಸಿದ್ದಾರೆ. ಗೋವುಗಳು ಕಸಾಯಿ ಖಾನೆಗೆ ಹೋಗ್ತಿದ್ವು. ರಸ್ತೆಯಲ್ಲಿ ವಾಹನಗಳಿಗೆ ಸಿಕ್ಕಿ ಸಾಯ್ತಿತ್ವು. ಜನರನ್ನೂ ಸಾಯಿಸ್ತಿದ್ವು. ಇದಕ್ಕೆಲ್ಲಾ ಬ್ರೇಕ್ ಹಾಕ್ಬೇಕು ಅಂತಾನೆ ಸರ್ಕಾರವೇ ಕಸಾಯಿ ಖಾನೆ ಓಪನ್ ಮಾಡ್ತು. ಸರ್ಕಾರದ ಗೋಶಾಲೆ ಜೊತೆ ಖಾಸಗಿಯವ್ರು ಗೋ ಶಾಲೆ ಓಪನ್ ಮಾಡಿದ್ರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಒಂದು ಗೋವಿನ ನಿರ್ವಹಣೆಗೆ ಇಷ್ಟು ಹಣ ಅಂತ ಫಿಕ್ಸ್ ಮಾಡ್ತು. ಆ ಹಣ ಬಂತು. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಗೋವುಗಳ ನಿರ್ವಹಣೆಗೆ ಸರ್ಕಾರದಿಂದ ಬರ್ತಿದ್ದ ಹಣ ನಿಂತೇ ಹೊಯ್ತು. 2 ವರ್ಷದಿಂದ ಆ ಹಣವೇ ಬಂದಿಲ್ಲ.
ಸರ್ಕಾರ ಒಂದು ಗೋವಿನ ನಿರ್ವಹಣೆಗೆ 17 ರೂಪಾಯಿ ನಿಗದಿ ಮಾಡಲಾಗಿತ್ತು. ಆದರೆ, ಈಗ ಆ ಹಣ ಬಂದಿಲ್ಲ. ಮಲೆನಾಡಲ್ಲಿ ಮೇವಿಗೂ ಕೊರತೆ ಇಲ್ಲ. ಗೋಶಾಲೆಯವರು ಗೋವುಗಳಿಗೆ ಹಸಿ ಹುಲ್ಲನ್ನೇ ತಂದು ಮೇವು ನೀಡ್ತಿದ್ದಾರೆ. ಸದ್ಯಕ್ಕೆ 88 ಲಕ್ಷ ಹಣ ಬೇಕೆಂದು ಅಂದಾಜು ಮಾಡಲಾಗಿದೆ. ಬಂದಿರೋ ಹಣವನ್ನ ನೀಡಿದ್ದೇವೆ. ಇನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಹಣ ಬರಬೇಕು. ನೂರು ರೂಪಾಯಿ ಡಿಮ್ಯಾಂಡ್ ಇದ್ರೆ, ಇಪ್ಪತ್ತು ರೂಪಾಯಿ ಬಂದಿದೆ. ಆ ಇಪತ್ತು ರೂಪಾಯಿ ಹಣವನ್ನ ನೀಡಿದ್ದೇವೆ. 80 ರೂ. ಬಂದ ತಕ್ಷಣ ಕೊಡ್ತೀವಿ ಅಂತಿದ್ದಾರೆ ಅಧಿಕಾರಿಗಳು.
ಒಟ್ಟಾರೆ, ಸರ್ಕಾರ ಗೋ ಮಾತೆಯ ರಕ್ಷಣೆಗೆನೋ ಗೋ ಶಾಲೆಗಳನ್ನ ಆರಂಭ ಮಾಡ್ತು. ಹಿಂದಿನ ಸರ್ಕಾರ ಕೊಟ್ಟ ಇಂದಿನ ಸರ್ಕಾರವೂ ನಡೆದುಕೊಳ್ಳಬೇಕಿತ್ತು. ಆದ್ರೆ, ಆಯಾ ಸರ್ಕಾರದ ಯೋಜನೆಗಳು ಆಯಾ ಕಾಲಘಟ್ಟಕ್ಕೆ ಮಾತ್ರಾನಾ, ಸರ್ಕಾರ ಬದಲಾದಂತೆ ಯೋಜನೆಗಳು ಬದಲಾಗುತ್ತಾ ಎಂಬ ಪ್ರಶ್ನೆ ಮೂಡಿದೆ.
ಈಗ ಗೋ ಶಾಲೆಗಳನ್ನ ತೆರೆದವರು ಸರ್ಕಾರದ ಅನುದಾನ ಇರಲಿ, ಇಲ್ಲದಿರಲಿ ಗೋವುಗಳನ್ನಂತು ಸಾಕ್ತಿದ್ದಾರೆ, ಜೊತೆಗೆ ಈಗೀನ ಸರ್ಕಾರದ ವಿರುದ್ಧ ಅಸಮಾಧಾನ ಕೂಡ ಹೊರಹಾಕ್ತಿದ್ದಾರೆ. ಸರ್ಕಾರ ಮುಂದೇನು ಮಾಡುತ್ತೆ ಅನ್ನೋದನ್ನ ಕಾದುನೋಡ್ಬೇಕು.