MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಬೆಂಗಳೂರು-ಹುಬ್ಬಳ್ಳಿ ಸೂಪರ್ ಫಾಸ್ಟ್ ರೈಲನ್ನು ಕುಷ್ಟಗಿಯವರೆಗೆ ವಿಸ್ತರಿಸಲು ಹೆಚ್ಚಿದ ಒತ್ತಾಯ, ಪ್ರಯೋಜನವೇನು?

ಬೆಂಗಳೂರು-ಹುಬ್ಬಳ್ಳಿ ಸೂಪರ್ ಫಾಸ್ಟ್ ರೈಲನ್ನು ಕುಷ್ಟಗಿಯವರೆಗೆ ವಿಸ್ತರಿಸಲು ಹೆಚ್ಚಿದ ಒತ್ತಾಯ, ಪ್ರಯೋಜನವೇನು?

ಬೆಂಗಳೂರು-ಹುಬ್ಬಳ್ಳಿ ಸೂಪರ್ ಫಾಸ್ಟ್ ರೈಲನ್ನು ಗದಗ, ತಳಕಲ್ ಜಂಕ್ಷನ್ ಮೂಲಕ ಕುಷ್ಟಗಿಯವರೆಗೆ ವಿಸ್ತರಿಸುವಂತೆ ಕುಷ್ಟಗಿ ರೈಲ್ವೆ ಹೋರಾಟ ಸಮಿತಿಯು ನೈಋತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದೆ. ಈ ವಿಸ್ತರಣೆಯು ಕುಷ್ಟಗಿ ಹಾಗೂ ಸುತ್ತಮುತ್ತಲಿನ ತಾಲೂಕುಗಳ ಜನರಿಗೆ ಅನುಕೂಲವಾಗಲಿದೆ.

2 Min read
Author : Gowthami K
Published : May 27 2026, 09:37 AM IST
Share this Photo Gallery
  • FB
  • TW
  • Linkdin
  • Whatsapp
15
ಕುಷ್ಟಗಿಯವರೆಗೆ ವಿಸ್ತರಿಸುವಂತೆ ಒತ್ತಾಯ
Image Credit : x

ಕುಷ್ಟಗಿಯವರೆಗೆ ವಿಸ್ತರಿಸುವಂತೆ ಒತ್ತಾಯ

ಕುಷ್ಟಗಿ: ಬೆಂಗಳೂರು-ಹುಬ್ಬಳ್ಳಿ ಸೂಪರ್ ಫಾಸ್ಟ್ ರೈಲನ್ನು ಗದಗ, ತಳಕಲ್ ಜಂಕ್ಷನ್ ಮೂಲಕ ಕುಷ್ಟಗಿಯವರೆಗೆ ವಿಸ್ತರಿಸುವಂತೆ ಒತ್ತಾಯಿಸಿ ನೈಋತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಬೇಲಾಮೀನಾ ಅವರಿಗೆ ಕುಷ್ಟಗಿ ರೈಲ್ವೆ ಹೋರಾಟ ಸಮಿತಿಯವರು ಮನವಿ ಸಲ್ಲಿಸಿದರು. ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿರೇಶ ಬಂಗಾರಶೆಟ್ಟರ ಮಾತನಾಡಿ, ಬೆಂಗಳೂರು ಹುಬ್ಬಳ್ಳಿ ಚಲಿಸುವ ಸೂಪರ್ ಫಾಸ್ಟ್ ರೈಲನ್ನು ಗದಗ, ತಳಕಲ್ ಜಂಕ್ಷನ್ ಮೂಲಕ ಕುಷ್ಟಗಿಯವರೆಗೆ ವಿಸ್ತರಿಸಬೇಕು ಎಂದರು.

Add Asianetnews Kannada as a Preferred SourcegooglePreferred
25
ತಳಕಲ್ ಜಂಕ್ಷನ್ ಮೂಲಕ ಕುಷ್ಟಗಿಗೆ ವಿಸ್ತರಣೆ
Image Credit : Asianet News

ತಳಕಲ್ ಜಂಕ್ಷನ್ ಮೂಲಕ ಕುಷ್ಟಗಿಗೆ ವಿಸ್ತರಣೆ

ಗದಗ ರೈಲ್ವೆ ಹೋರಾಟ ಸಮಿತಿಯವರು ಈಗಾಗಲೇ ಆಂದೋಲನ ಪ್ರಾರಂಭಿಸಿದ್ದು, ಈ ರೈಲನ್ನು ಗದಗಕ್ಕೆ ವಿಸ್ತರಿಸುವಂತೆ ಒತ್ತಾಯಿಸಿ ಹಲವಾರು ಮನವಿ ಸಲ್ಲಿಸಿದ್ದಾರೆ. ಮುಂದಿನ ಹಂತವಾಗಿ, ಈ ರೈಲನ್ನು ತಳಕಲ್ ಜಂಕ್ಷನ್ ಮೂಲಕ ಕುಷ್ಟಗಿಗೆ ವಿಸ್ತರಿಸಬೇಕೆಂಬುದು ನಮ್ಮ ಬೇಡಿಕೆಯಾಗಿದೆ ಎಂದರು.ಈ ಸೌಲಭ್ಯ ಕುಷ್ಟಗಿ ತಾಲೂಕು ಮಾತ್ರವಲ್ಲದೆ,ಗಜೇಂದ್ರಗಡ, ಇಲಕಲ್, ಯಲಬುರ್ಗಾ, ಕುಕನೂರು ಮತ್ತು ಗದಗ ಜಿಲ್ಲೆಯ ಜನರಿಗೂ ಪ್ರಯೋಜನ ನೀಡುತ್ತದೆ. ಇದು ವೈದ್ಯಕೀಯ ಅಗತ್ಯ, ಹೈಕೋರ್ಟ್, ಶಿಕ್ಷಣ ಮತ್ತು ವ್ಯವಹಾರಕ್ಕೆ ಅನುಕೂಲಕರವಾಗಲಿದೆ ಕಾರ್ಮಿಕರಿಗೂ ಇದು ಪ್ರಯೋಜನ ನೀಡುತ್ತದೆ ಎಂದರು.

Related Articles

Related image1
ಗೋಲ್ಡನ್ ಚಾರಿಯಟ್ ಐಷಾರಾಮಿ ರೈಲು ನವೀಕರಣ: ಕರ್ನಾಟಕದಿಂದ 2026-27ರ ಮೂರು ಪ್ರವಾಸ IRCTCಯಿಂದ ಭರ್ಜರಿ ಆಫರ್!
Related image2
ಮೈಸೂರಿನಿಂದ ಐತಿಹಾಸಿಕ ರೈಲು ಪಯಣ: ಒಡಿಶಾಗೆ ದೇಶೀಯ ಖನಿಜ ರವಾನೆಯ ಮೊದಲ ರೈಲು ಯಶಸ್ವಿ ಪ್ರಾಯೋಗಿಕ ಚಾಲನೆ!
35
ಕುಷ್ಟಗಿ-ಬೆಂಗಳೂರು ಸಂಪರ್ಕದ ಬೇಡಿಕೆ ಹೆಚ್ಚಳ
Image Credit : Asianet News

ಕುಷ್ಟಗಿ-ಬೆಂಗಳೂರು ಸಂಪರ್ಕದ ಬೇಡಿಕೆ ಹೆಚ್ಚಳ

ಹಬ್ಬಗಳ ಸಮಯದಲ್ಲಿ ಖಾಸಗಿ ಬಸ್‌ಗಳಿಂದ ಅಕ್ರಮವಾಗಿ ಅಧಿಕ ಶುಲ್ಕ ವಿಧಿಸುವುದನ್ನು ಇದು ತಡೆಯುತ್ತದೆ. ಬೆಂಗಳೂರು-ಹುಬ್ಬಳ್ಳಿ ರೈಲನ್ನು ಗದಗ ಮೂಲಕ ಕುಷ್ಟಗಿಗೆ ವಿಸ್ತರಿಸುವುದರಿಂದ ಹೆಚ್ಚು ಪ್ರಯೋಜನಕಾರಿಯಾಗಲಿದೆ. ಸರ್ಕಾರಿ ಮತ್ತು ಖಾಸಗಿ ಬಸ್‌ಗಳಲ್ಲಿ ಬೆಂಗಳೂರಿಗೆ ಪ್ರತಿ ದಿನ ಪ್ರಯಾಣಿಸುವ ಜನರಿಗೆ ಸಹಕಾರಿಯಾಗಲಿದೆ ಎಂದರು. ಕಳೆದ ವರ್ಷ ಮೇ 15ರಂದು ಗದಗ-ವಾಡಿ ರೈಲ್ವೆ ಯೋಜನೆ ಕುಷ್ಟಗಿಯಿಂದ ಹುಬ್ಬಳ್ಳಿಗೆ ರೈಲು ಸಂಪರ್ಕ ಸಕ್ರಿಯಗೊಳಿಸಿದ ನಂತರ, ಕುಷ್ಟಗಿ-ಬೆಂಗಳೂರು ಸಂಪರ್ಕದ ಬೇಡಿಕೆ ಬಲವಾಗಿ ಕೇಳಿಬರುತ್ತಿದ್ದು, ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣಗೆ ಹಲವಾರು ಮನವಿ ಸಲ್ಲಿಸಲಾಗಿದೆ. ಕುಷ್ಟಗಿಗೆ ರೈಲು ಸೇವೆ ಆರಂಭವಾಗಿ ವರ್ಷ ಕಳೆದರೂ ಮತ್ತೊಂದು ರೈಲು ಸಂಪರ್ಕ ಪಡೆಯುವ ಕನಸು ಇನ್ನೂ ನನಸಾಗಿಲ್ಲ ಎಂದರು.

45
ಕುಷ್ಟಗಿಯಿಂದ ಹುಬ್ಬಳ್ಳಿಗೆ ಒಂದೇ ಒಂದು ರೈಲು
Image Credit : Asianet News

ಕುಷ್ಟಗಿಯಿಂದ ಹುಬ್ಬಳ್ಳಿಗೆ ಒಂದೇ ಒಂದು ರೈಲು

ಕುಷ್ಟಗಿಯಿಂದ ಹುಬ್ಬಳ್ಳಿಗೆ ಒಂದೇ ಒಂದು ರೈಲು ಚಲಿಸುತ್ತದೆ. ಕೋಟ್ಯಂತರ ವೆಚ್ಚದಲ್ಲಿ ನಿರ್ಮಿಸಲಾದ ಈ ರೈಲು ನಿಲ್ದಾಣ ಬೆಳಗ್ಗೆ 6-7 ಮತ್ತು ರಾತ್ರಿ 8-9 ರವರೆಗೆ ಮಾತ್ರ ಪ್ರಯಾಣಿಕರು ಇರುತ್ತಿದ್ದು ಉಳಿದ ಸಮಯಗಳಲ್ಲಿ ನಿರ್ಜನ ಪ್ರದೇಶವಾಗಿರುತ್ತದೆ. ಆದ್ದರಿಂದ ಕುಷ್ಟಗಿಯಿಂದ ಹುಬ್ಬಳ್ಳಿಗೆ ಮತ್ತೊಂದು ರೈಲು ಮತ್ತು ಕುಷ್ಟಗಿಯಿಂದ ಬೆಂಗಳೂರಿಗೆ ರೈಲು ಸಂಪರ್ಕದ ಕುರಿತು ಸೂಕ್ತ ಕ್ರಮಕ್ಕೆ ಮುಂದಾಗಬೇಕು ಈ ಕುರಿತು ಈಗಾಗಲೆ ಸಂಬಂಧಿಸಿದ ಸಚಿವರಿಗೆ ಹಾಗೂ ಸಂಸದರಿಗೂ ಮನವಿ ಪತ್ರ ಸಲ್ಲಿಸಲಾಗಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಪ್ರಮುಖರಾದ ಶ್ರೀಧರ ಘೋರ್ಪಡೆ, ಮಂಜುನಾಥ ಮಹಾಲಿಂಗಪೂರ, ಬಸವರಾಜ ಸಾಲಿಮಠ ಸೇರಿದಂತೆ ಅನೇಕರು ಇದ್ದರು.

55
ರೈಲು ನಿಲ್ದಾಣದಲ್ಲಿ ಮೂಲಸೌಲಭ್ಯಕ್ಕೆ ಒತ್ತಾಯ
Image Credit : Perplexity AI

ರೈಲು ನಿಲ್ದಾಣದಲ್ಲಿ ಮೂಲಸೌಲಭ್ಯಕ್ಕೆ ಒತ್ತಾಯ

ಕುಷ್ಟಗಿ ರೈಲು ನಿಲ್ದಾಣದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಕಾಡುತ್ತಿದ್ದು, ಕುಡಿಯುವ ನೀರಿನ ಸೌಲಭ್ಯ, ಕಳ್ಳತನ ಪ್ರಕರಣಗಳ ತಡೆಗೆ ಭದ್ರತಾ ಸಿಬ್ಬಂದಿ ವ್ಯವಸ್ಥೆ ಮಾಡಬೇಕಿದೆ, ರೈಲ್ವೆ ಪೊಲೀಸರನ್ನು ನಿಯೋಜಿಸಬೇಕು ಮತ್ತು ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕಿದೆ, ನಿರಂತರ ವಿದ್ಯುತ್ ಒದಗಿಸುವುದು, ಕುಷ್ಟಗಿಯಿಂದ ಹುಬ್ಬಳ್ಳಿಗೆ ಬೆಳಗ್ಗೆ 7 ಗಂಟೆಗೆ ರೈಲು ಓಡಿಸಬೇಕಿದೆ, ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಮೊದಲನೆ ಪ್ಲಾಟ್ ಫಾರಂಗೆ ನಿಲ್ಲುವಂತೆ ಸೇರಿದಂತೆ ಅನೇಕ ಬೇಡಿಕೆಗಳ ಈಡೇರಿಕೆಗಾಗಿ ಮನವಿ ಸಲ್ಲಿಸಿದರು.

ಕುಷ್ಟಗಿ ಬೆಂಗಳೂರು ರೈಲು ಸೇವೆ ಹಾಗೂ ಕುಷ್ಟಗಿ ಹುಬ್ಬಳ್ಳಿ ಇನ್ನೊಂದು ರೈಲು ಸೇವೆ ಜತೆಗೆ ಕುಷ್ಟಗಿ ರೈಲು ನಿಲ್ದಾಣದಲ್ಲಿ ಮೂಲಭೂತ ಸೌಲಭ್ಯ ಕುರಿತು ಕೊಪ್ಪಳ ಸಂಸದರು ಒತ್ತಾಯಿಸಿದ್ದಾರೆ. ಆದಷ್ಟು ಬೇಗ ಈ ಬಗ್ಗೆ ತುರ್ತು ಸಭೆ ಮಾಡಿ ಸಾಧಕ ಭಾಧಕ ಚರ್ಚೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಹುಬ್ಬಳ್ಳಿ ನೈಋತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಬೇಲಾಮೀನಾ ತಿಳಿಸಿದ್ದಾರೆ.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಬೆಂಗಳೂರು
ಹುಬ್ಬಳ್ಳಿ
ಭಾರತೀಯ ರೈಲ್ವೆ
ಗದಗ
ರೈಲು

Latest Videos
Recommended Stories
Recommended image1
28 ವರ್ಷಗಳ ನಂತ್ರ ಒಂದೆಡೆ ಸೇರಿ ಶಿಕ್ಷಕರಿಗೆ ಪಾದಪೂಜೆ ನೆರವೇರಿಸಿದ ವಿದ್ಯಾರ್ಥಿಗಳು
Recommended image2
Uttara Kannada ಮುಂಡಗೋಡ ಆಕಾಶದಲ್ಲಿ ಏಕಾಏಕಿ ಪೈಟರ್ ಜೆಟ್‌ ಹಾರಾಟ: ಜನರಲ್ಲಿ ಗೊಂದಲ
Recommended image3
ಮಂಡ್ಯ ಜಿಲ್ಲೆಯ ಕೆರೆಗಳ ಅಭಿವೃದ್ಧಿಗೆ 130 ಕೋಟಿ ರು ಬಿಡುಗಡೆ; ಶಾಸಕರಿಂದ ಮಾಹಿತಿ
Related Stories
Recommended image1
ಗೋಲ್ಡನ್ ಚಾರಿಯಟ್ ಐಷಾರಾಮಿ ರೈಲು ನವೀಕರಣ: ಕರ್ನಾಟಕದಿಂದ 2026-27ರ ಮೂರು ಪ್ರವಾಸ IRCTCಯಿಂದ ಭರ್ಜರಿ ಆಫರ್!
Recommended image2
ಮೈಸೂರಿನಿಂದ ಐತಿಹಾಸಿಕ ರೈಲು ಪಯಣ: ಒಡಿಶಾಗೆ ದೇಶೀಯ ಖನಿಜ ರವಾನೆಯ ಮೊದಲ ರೈಲು ಯಶಸ್ವಿ ಪ್ರಾಯೋಗಿಕ ಚಾಲನೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved