MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಚಿಕ್ಕಮಗಳೂರು: ₹1 ಕೋಟಿ ಮೌಲ್ಯದ 'ಎರಡು ತಲೆ ಹಾವು' ಮಾರಾಟಕ್ಕೆ ಯತ್ನ; ಐವರು ಖದೀಮರು ಅರಣ್ಯ ದಳದ ಬಲೆಗೆ!

ಚಿಕ್ಕಮಗಳೂರು: ₹1 ಕೋಟಿ ಮೌಲ್ಯದ 'ಎರಡು ತಲೆ ಹಾವು' ಮಾರಾಟಕ್ಕೆ ಯತ್ನ; ಐವರು ಖದೀಮರು ಅರಣ್ಯ ದಳದ ಬಲೆಗೆ!

ಚಿಕ್ಕಮಗಳೂರಿನಲ್ಲಿ 1 ಕೋಟಿ ರೂ. ಮೌಲ್ಯದ ಅಪರೂಪದ ಎರಡು ತಲೆ ಹಾವನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಜಾಲವನ್ನು ಸಿಐಡಿ ಅರಣ್ಯ ದಳ ಭೇದಿಸಿದೆ. ಗ್ರಾಹಕರ ಸೋಗಿನಲ್ಲಿ ದಾಳಿ ನಡೆಸಿದ ಪೊಲೀಸರು, ಆಂಧ್ರಪ್ರದೇಶ ಮೂಲದವರೂ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

2 Min read
Author : Sathish Kumar KH
Published : May 12 2026, 03:53 PM IST
Share this Photo Gallery
  • FB
  • TW
  • Linkdin
  • Whatsapp
16
ಎರಡು ತಲೆ ಹಾವು
Image Credit : Asianet News

ಎರಡು ತಲೆ ಹಾವು

ಚಿಕ್ಕಮಗಳೂರಿನಲ್ಲಿ ಅಕ್ರಮವಾಗಿ ವನ್ಯಜೀವಿ ಮಾರಾಟಕ್ಕೆ ಮುಂದಾಗಿದ್ದ ಜಾಲವನ್ನು ಸಿಐಡಿ ಅರಣ್ಯ ಸಂಚಾರಿ ದಳದ ಪೊಲೀಸರು ಭೇದಿಸಿದ್ದಾರೆ. ಸುಮಾರು 1 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಅಪರೂಪದ 'ಎರಡು ತಲೆ ಹಾವು' (Red Sand Boa) ಮಾರಾಟ ಮಾಡಲು ಯತ್ನಿಸುತ್ತಿದ್ದ ಐವರು ಆರೋಪಿಗಳನ್ನು ಸಿನಿಮೀಯ ಶೈಲಿಯಲ್ಲಿ ದಾಳಿ ನಡೆಸಿ ಬಂಧಿಸಲಾಗಿದೆ.

Add Asianetnews Kannada as a Preferred SourcegooglePreferred
26
ಕಾರ್ಯಾಚರಣೆ ನಡೆದಿದ್ದು ಎಲ್ಲಿ?
Image Credit : Asianet News

ಕಾರ್ಯಾಚರಣೆ ನಡೆದಿದ್ದು ಎಲ್ಲಿ?

ಚಿಕ್ಕಮಗಳೂರು ನಗರದ ವಾಜಪೇಯಿ ಲೇಔಟ್ ಬಡಾವಣೆಯಲ್ಲಿ ಈ ಅಕ್ರಮ ವ್ಯವಹಾರ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಸಿಐಡಿ ಅರಣ್ಯ ಸಂಚಾರಿ ದಳದ ಅಧಿಕಾರಿಗಳಿಗೆ ಲಭಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಅಧಿಕಾರಿಗಳು, ಗ್ರಾಹಕರ ಸೋಗಿನಲ್ಲಿ ದಾಳಿ ನಡೆಸಿ, ಹಾವನ್ನು ಕೈಬದಲಾಯಿಸುವ ವೇಳೆ ಆರೋಪಿಗಳನ್ನು ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾರೆ.

Related Articles

Related image1
ವಿಷಪೂರಿತ ಹಾವು ನಿಮ್ಮ ಮನೆಗಳಿಗೆ ಬರುತ್ತಿದ್ರೆ ಅಡುಗೆಮನೆಯಲ್ಲಿರುವ ಈ ಪದಾರ್ಥ ಮನೆಯ ಸುತ್ತಲೂ ಸಿಂಪಡಿಸಿ
Related image2
ಹಾವು ಹಿಡಿಯಲು ಬಂದ ಉರಗ ತಜ್ಞ ರಜಾಕ್ ಶಾ ಹೊಟ್ಟೆಗೆ ಕಚ್ಚಿದ 15 ಅಡಿ ಉದ್ದದ ಹೆಬ್ಬಾವು; ಮುಂದೇನಾಯ್ತು ನೋಡಿ!
36
ಬಂಧಿತ ಆರೋಪಿಗಳ ವಿವರ
Image Credit : Asianet News

ಬಂಧಿತ ಆರೋಪಿಗಳ ವಿವರ

ಈ ಪ್ರಕರಣದಲ್ಲಿ ಅಂತರರಾಜ್ಯ ಸಂಪರ್ಕ ಹೊಂದಿರುವ ಐವರನ್ನು ಬಂಧಿಸಲಾಗಿದೆ:

ವಂಶಿಕೃಷ್ಣ (ಆಂಧ್ರಪ್ರದೇಶ ಮೂಲದವನು)

ಆರೀಫ್ ಬಾಷಾ (ಆಂಧ್ರಪ್ರದೇಶ ಮೂಲದವನು)

ಯತೀಶ್ (ಶಿವಮೊಗ್ಗ ಜಿಲ್ಲೆ - ಈತನನ್ನೇ ಪ್ರಕರಣದ ಕಿಂಗ್‌ಪಿನ್ ಎನ್ನಲಾಗಿದೆ)

ಷಫಿ (ತುಮಕೂರು ಮೂಲದವನು)

ಆರೀಫ್ ಬಾಷಾ (ತುಮಕೂರು ಮೂಲದವನು)

46
ಕಾರು, ಮೊಬೈಲ್‌ಗಳು ಜಪ್ತಿ
Image Credit : Asianet News

ಕಾರು, ಮೊಬೈಲ್‌ಗಳು ಜಪ್ತಿ

ಇನ್ನು ಈ ಪ್ರಕರಣ ಬೇಧಿಸಿದ ನಂತರ ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಒಂದು ಸ್ವಿಫ್ಟ್ ಕಾರು, ಒಂದು ವ್ಯಾಗನರ್ ಕಾರು ಹಾಗೂ ಐದು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

56
ವಿದೇಶಕ್ಕೆ ಸ್ಮಗ್ಲಿಂಗ್ ಮಾಡಲು ಸ್ಕೆಚ್!
Image Credit : Asianet News

ವಿದೇಶಕ್ಕೆ ಸ್ಮಗ್ಲಿಂಗ್ ಮಾಡಲು ಸ್ಕೆಚ್!

ಪ್ರಾಥಮಿಕ ತನಿಖೆಯ ಪ್ರಕಾರ, ಈ ಅಪರೂಪದ ಹಾವನ್ನು ಚಿತ್ರದುರ್ಗ ಜಿಲ್ಲೆಯ ಚನ್ನಗಿರಿ ಭಾಗದಲ್ಲಿ ಸೆರೆಹಿಡಿಯಲಾಗಿತ್ತು. ಅಲ್ಲಿಂದ ಚಿಕ್ಕಮಗಳೂರಿಗೆ ತಂದು, ಆಂಧ್ರಪ್ರದೇಶದ ಏಜೆಂಟರ ಮೂಲಕ ವಿದೇಶಕ್ಕೆ ಕೋಟಿಗಟ್ಟಲೆ ಹಣಕ್ಕೆ ಕಳ್ಳಸಾಗಣೆ ಮಾಡಲು ಆರೋಪಿಗಳು ಸಂಚು ರೂಪಿಸಿದ್ದರು. ಈ ಹಾವಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಿದ್ದು, ಔಷಧೀಯ ಉದ್ದೇಶ ಹಾಗೂ ವಾಮಾಚಾರದ ನಂಬಿಕೆಗಳಿಗಾಗಿ ಇದನ್ನು ಬಳಸಲಾಗುತ್ತದೆ ಎಂಬ ವದಂತಿಗಳೇ ಈ ಅಕ್ರಮ ವ್ಯವಹಾರಕ್ಕೆ ಕಾರಣ ಎನ್ನಲಾಗಿದೆ.

66
ವನ್ಯಜೀವಿ ಕಾಯ್ದೆಯಡಿ ಪ್ರಕರಣ
Image Credit : Asianet News

ವನ್ಯಜೀವಿ ಕಾಯ್ದೆಯಡಿ ಪ್ರಕರಣ

ಎರಡು ತಲೆ ಹಾವು (ಮಣ್ಣು ಮುಕ್ಕುವ ಹಾವು) ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಸಂರಕ್ಷಿತ ಜೀವಿಯಾಗಿದೆ. ಇದರ ಮಾರಾಟ ಅಥವಾ ಸಾಗಾಟ ಶಿಕ್ಷಾರ್ಹ ಅಪರಾಧ. ಸದ್ಯ ಸಿಐಡಿ ಪೊಲೀಸರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದು, ಈ ಜಾಲದ ಹಿಂದೆ ಇನ್ನೂ ಯಾರಿದ್ದಾರೆ ಎಂಬ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.

ಅರಣ್ಯ ಇಲಾಖೆ ಮನವಿ: 'ವನ್ಯಜೀವಿಗಳ ಅಕ್ರಮ ವ್ಯಾಪಾರ ಪ್ರಕೃತಿಯ ಸಮತೋಲನಕ್ಕೆ ಧಕ್ಕೆ ತರುತ್ತದೆ. ಇಂತಹ ಕಾನೂನುಬಾಹಿರ ಚಟುವಟಿಕೆಗಳು ಕಂಡುಬಂದಲ್ಲಿ ಸಾರ್ವಜನಿಕರು ತಕ್ಷಣ ಅರಣ್ಯ ಇಲಾಖೆ ಅಥವಾ ಪೊಲೀಸರಿಗೆ ಮಾಹಿತಿ ನೀಡಬೇಕು' ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವರದಿ : ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ‌ನ್ಯೂಸ್

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಚಿಕ್ಕಮಗಳೂರು
ಕರ್ನಾಟಕ ಸುದ್ದಿ
ಹಾವು
ವ್ಯವಹಾರ

Latest Videos
Recommended Stories
Recommended image1
ಬೆಂಗಳೂರು ಉಪನಗರ ರೈಲಿಗೆ 153 ಎಸಿ ಬೋಗಿ ಪೂರೈಕೆಗೆ ಐಸಿಎಫ್‌ ಗ್ರೀನ್‌ ಸಿಗ್ನಲ್‌: ರಾಜಧಾನಿಯಲ್ಲಿ ಸಂಚಾರ ಕ್ರಾಂತಿ
Recommended image2
ಶ್ರೀಲಂಕಾದಿಂದ ಭಾರತಕ್ಕೆ ರಾಮಸೇತು ಮಾರ್ಗದಲ್ಲಿ ಈಜಿದ ಮೊದಲ ಜೋಡಿ, ಬೆಂಗಳೂರು ಐಟಿ ದಂಪತಿಯ ಸಾಹಸಗಾಥೆ!
Recommended image3
Karnataka Rains: ಕರಾವಳಿಯಲ್ಲಿ ನಾಳೆಯಿಂದ ಭಾರೀ ಮಳೆ ಮುನ್ಸೂಚನೆ; ಹವಾಮಾನ ಇಲಾಖೆ ನೀಡಿದ ವಾರ್ನಿಂಗ್ ಏನು?
Related Stories
Recommended image1
ವಿಷಪೂರಿತ ಹಾವು ನಿಮ್ಮ ಮನೆಗಳಿಗೆ ಬರುತ್ತಿದ್ರೆ ಅಡುಗೆಮನೆಯಲ್ಲಿರುವ ಈ ಪದಾರ್ಥ ಮನೆಯ ಸುತ್ತಲೂ ಸಿಂಪಡಿಸಿ
Recommended image2
ಹಾವು ಹಿಡಿಯಲು ಬಂದ ಉರಗ ತಜ್ಞ ರಜಾಕ್ ಶಾ ಹೊಟ್ಟೆಗೆ ಕಚ್ಚಿದ 15 ಅಡಿ ಉದ್ದದ ಹೆಬ್ಬಾವು; ಮುಂದೇನಾಯ್ತು ನೋಡಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved