MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಗಂಗಾವತಿ: ಹೇಮಗುಡ್ಡದಲ್ಲಿ ಸಂಭ್ರಮದ ಅಂಬಾರಿ ಮೆರವಣಿಗೆ

ಗಂಗಾವತಿ: ಹೇಮಗುಡ್ಡದಲ್ಲಿ ಸಂಭ್ರಮದ ಅಂಬಾರಿ ಮೆರವಣಿಗೆ

ಗಂಗಾವತಿ(ಅ.16): ತಾಲೂಕಿನ ಐತಿಹಾಸಿಕ ಹೇಮಗುಡ್ಡದಲ್ಲಿ ದಸರಾ ಉತ್ಸವ ಅತ್ಯಂತ ಸಂಭ್ರಮದಿಂದ ಜರುಗಿತು. ಅಂಬಾರಿ ಮೆರವಣಿಗೆಗೆ ಮಾಜಿ ಸಂಸದ ಎಚ್‌.ಜಿ. ರಾಮುಲು ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶಾಸಕ ಪರಣ್ಣ ಮುನವಳ್ಳಿ, ವಿಪ ಮಾಜಿ ಸದಸ್ಯ ಎಚ್‌.ಆರ್‌. ಶ್ರೀನಾಥ ಪೂಜೆ ಸಲ್ಲಿಸಿದರು.

2 Min read
Author : Kannadaprabha News | Asianet News
Published : Oct 16 2021, 01:23 PM IST
Share this Photo Gallery
  • FB
  • TW
  • Linkdin
  • Whatsapp
15

ಹೇಮಗುಡ್ಡದ ದುರ್ಗಾ ಪರಮೇಶ್ವರಿ ದೇವಸ್ಥಾನದಿಂದ ಪ್ರಾರಂಭಗೊಂಡ ಮೆರವಣಿಗೆ ಕೊಪ್ಪಳ ಮುಖ್ಯ ರಸ್ತೆ ಹಾಗೂ ಬೈ ಪಾಸ್‌ ರಸ್ತೆ ಮೂಲಕ ಸುಮಾರು 3 ಗಂಟೆಗಳ ಕಾಲ ನಡೆಯಿತು. ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಶಹನಾಯಿ, ನಂದಿ ಕೋಲು ಕುಣಿತ, ಹಲಗಿ ಮೇಳ ಸೇರಿದಂತೆ ವೈವಿಧ್ಯಮಯ ಜಾನಪದ ನೃತ್ಯ ತಂಡಗಳು ಭಾಗವಹಿಸಿದ್ದವು. ನಗರಸಭೆ ಮಾಜಿ ಅಧ್ಯಕ್ಷ ಜೋಗದ ಹನುಮಂತಪ್ಪ ನಾಯಕ, ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ, ಸಿಪಿಐ ಉದಯ ರವಿ, ಡಾ. ಇಲಿಯಾಸ್‌ ಬಾಬಾ, ವಿರೂಪಾಕ್ಷಪ್ಪ ಸಿಂಗನಾಳ, ಸಂತೋಷ ಕೆಲೋಜಿ, ಸಿ.ಎಚ್‌. ರಾಮಕೃಷ್ಣ ಸಿದ್ದಪ್ಪ ನೀರಲೋಟಿ, ರೆಡ್ಡಿ ಶ್ರೀನಿವಾಸ, ಅಮರೇಶ ಹೇರೂರು ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.

25

ಮೈಸೂರು ದಸರಾ ಮಾದರಿಯಲ್ಲಿಯೇ ಹೇಮಗುಡ್ಡದಲ್ಲಿ 9 ದಿನಗಳ ದಸರಾ ಉತ್ಸವ ಜರುಗಿತು. ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ 9 ದಿನಗಳ ಕಾಲ ನವರಾತ್ರಿ ಉತ್ಸವದಲ್ಲಿ ದುರ್ಗಾ ಅಲಂಕಾರ, ಆರ್ಯ ದುರ್ಗ ಪೂಜೆ, ಅಂಬಿಕಾ ಪೂಜೆ, ಶ್ರೀ ಲಲಿತ ಪೂಜೆ, ಮಹಿಷಾಸುರ ಮರ್ದಿನಿ ಪೂಜೆ, ದುರ್ಗಾಷ್ಟಮಿ ಪೂಜೆ, ಶತಚಂಡಿಯಾಗ, ಪೂರ್ಣಾಹುತಿ, ಕುಮಾರಿಕ ಪೂಜೆಗಳು ಜರುಗಿದವು. ದಿನನಿತ್ಯ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ, ದೇವಿ ಪುರಾಣ, ಪಲ್ಲಕ್ಕಿ ಸೇವೆ ಮತ್ತು ದೇವಸ್ಥಾನದ ಒಳಗೆ ರಥೋತ್ಸವ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ನಿತ್ಯದ ಉತ್ಸವಕ್ಕೆ ಬರುವ ಭಕ್ತರಿಗೆ ಪ್ರಸಾದ ವಿತರಣೆ ನಡೆಯಿತು.

35

ತಾಲೂಕಿನ ಐತಿಹಾಸಿಕ ಪ್ರಸಿದ್ಧ ಹೇಮಗುಡ್ಡದ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಾಮೂಹಿಕ ವಿವಾಹ ಜರುಗಿದವು. ವಿವಾಹ ಮಹೋತ್ಸವದ ರುವಾರಿ ವಿಪ ಮಾಜಿ ಸದಸ್ಯ ಎಚ್‌.ಆರ್‌. ಶ್ರೀನಾಥ ನೇತ್ರತ್ವದಲ್ಲಿ 14 ಜೋಡಿಗಳ ಸಾಮೂಹಿಕ ವಿವಾಹ ಜರುಗಿದವು.

45

ಈ ಸಂದರ್ಭದಲ್ಲಿ ಶ್ರೀನಾಥ ಮಾತನಾಡಿ, ಸಾಮೂಹಿಕ ವಿವಾಹದಿಂದ ಈ ಭಾಗದ ಬಡ ಕುಟುಂಬಗಳಿಗೆ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಕುಟಂಬವು ಕಳೆದ 37 ವರ್ಷಗಳಿಂದ ವಿವಾಹ ಮಹೋತ್ಸವ ಏರ್ಪಡಿಸುತ್ತಾ ಬಂದಿರುತ್ತೇವೆ. ದುರ್ಗಾ ಪರಮೇಶ್ವರಿ ದೇವಿಯು ಎಲ್ಲರಿಗೂ ಆಶೀರ್ವದಿಸಲಿ. ಕಳೆದ ಎರಡು ವರ್ಷಗಳಿಂದ ಕೊರೋನಾ ಮಹಾ ಮಾರಿ ರೋಗಕ್ಕೆ ದೇಶದಲ್ಲಿ ಬಹಳಷ್ಟುಜನರು ಸಾವು- ನೋವು ಅನುಭವಿಸಿದ್ದಾರೆ. ದೇವಿಯು ರೋಗವನ್ನು ನಿವಾರಣೆ ಮಾಡಿ ಎಲ್ಲರಿಗೂ ರಕ್ಷಣೆ ಮಾಡಲಿ ಎಂದರು.

55

ಮಾಜಿ ಸಂಸದ ಎಚ್‌.ಜಿ. ರಾಮುಲು, ಜೋಗದ ಹನುಮಂತಪ್ಪ ನಾಯಕ, ಕೃಷ್ಣಪ್ಪ ನಾಯಕ, ಜೋಗದ ದುರಗಪ್ಪನಾಯಕ, ಡಾ. ಇಲಿಯಾಸ್‌ ಬಾಬಾ, ಸಿ.ಎಚ್‌. ರಾಮಕೃಷ್ಣ, ರೆಡ್ಡಿ ಶ್ರೀನಿವಾಸ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.

Latest Videos
Recommended Stories
Recommended image1
ಬಿಎಂಟಿಸಿ ಬಸ್ ಅಡ್ಡಗಟ್ಟಿ ಮಿಡಲ್ ಫಿಂಗರ್ ತೋರಿಸಿದ ಯುವಕ; ಪೊಲೀಸರು ಕೊಟ್ರು ನೋಡಿ ಟ್ವಿಸ್ಟೆಡ್ ಶಾಕ್!
Recommended image2
'ಗ್ರಾಮೀಣ ಜ್ಞಾನ ಸಮುಚ್ಚಯ' ಪುಸ್ತಕ ಲೋಕಾರ್ಪಣೆ: ರಾಜೇಂದ್ರಕುಮಾರ್ ಆಡಳಿತದ ಸಾಧನೆ ಕೊಂಡಾಡಿದ ಹೊರಟ್ಟಿ
Recommended image3
ಚಂದ್ರ ಗ್ರಹಣದ ದಿನವೇ ಚಿಕ್ಕಮಗಳೂರಿನಲ್ಲಿ ಹೊತ್ತಿ ಉರಿದ ಸರ್ಕಾರಿ ಬಸ್: 32 ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪಾರು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved