- Home
- Karnataka Districts
- Bengaluru Power Cut: ಬೆಂಗಳೂರಿನಲ್ಲಿ ಮೇ 31ರವರೆಗೆ ವಿದ್ಯುತ್ ಕಡಿತ: ನಿಮ್ಮ ಏರಿಯಾ ಇದೆಯಾ ನೋಡಿಕೊಳ್ಳಿ
Bengaluru Power Cut: ಬೆಂಗಳೂರಿನಲ್ಲಿ ಮೇ 31ರವರೆಗೆ ವಿದ್ಯುತ್ ಕಡಿತ: ನಿಮ್ಮ ಏರಿಯಾ ಇದೆಯಾ ನೋಡಿಕೊಳ್ಳಿ
ಬೆಸ್ಕಾಂ ನಿರ್ವಹಣೆ ಕಾರ್ಯಗಳಿಂದಾಗಿ ಮೇ 31ರವರೆಗೆ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ. ಹೊಸಕೋಟೆ ಮತ್ತು ವಿಜಯಪುರದಲ್ಲಿ ನಡೆಯುತ್ತಿರುವ ಕಾಮಗಾರಿಗಳಿಂದಾಗಿ ಈ ವ್ಯತ್ಯಯ ಉಂಟಾಗಲಿದ್ದು, ಬೆಸ್ಕಾಂ ಮಿತ್ರ ಆಪ್ ಮೂಲಕ ದೂರು ನೀಡಬಹುದು.

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ನಿರ್ವಹಣೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಕೆಲಸಗಳನ್ನು ಕೈಗೊಂಡಿರುವ ಹಿನ್ನೆಲೆಯಲ್ಲಿ, ಮೇ 31ರವರೆಗೆ ನಗರದ ಹಲವಾರು ಪ್ರಮುಖ ಭಾಗಗಳಲ್ಲಿ ನಿಗದಿತವಾಗಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಕಡಿತವಾಗಲಿದೆ. ಇದಕ್ಕೆ ಹೊಸಕೋಟೆಯಲ್ಲಿ ಭೂಗತ ವಿದ್ಯುತ್ ಕೇಬಲ್ ಅಳವಡಿಕೆ ಹಾಗೂ ವಿಜಯಪುರದಲ್ಲಿ ನಡೆಯುತ್ತಿರುವ ರಸ್ತೆ ವಿಸ್ತರಣೆ ಯೋಜನೆಗಳು ಕಾರಣವಾಗಿವೆ ಎಂದು ಬೆಸ್ಕಾಂ ತಿಳಿಸಿದೆ.
ಈ ಸಮಯದಲ್ಲಿ ದೂರವಾಣಿ ವಿನಿಮಯ ಕೇಂದ್ರ, ಕೋರ್ಟ್ ಏರಿಯಾ, ಅಯ್ಯಪ್ಪಸ್ವಾಮಿ ದೇವಸ್ಥಾನ ಪ್ರದೇಶ, ಡಿಗ್ರಿ ಕಾಲೇಜು ರಸ್ತೆ, ಮಜ್ಜಿಗೆ ಕುಂಟಿ, ಕಠ್ಮಂಡು ಲೇಔಟ್, ತ್ಯಾಗರಾಜ ಲೇಔಟ್, ದೊಡ್ಡಗಟ್ಟಿಗಾನ ರಸ್ತೆ, ನಂದಶ್ರೀ ಪ್ರದೇಶ, ಹಿಂದೂ ಸ್ಮಶಾನ, ಕಣ್ಣೂರಹಳ್ಳಿ ರಸ್ತೆ, ಸೋಮಸುಂದರ್ ಲೇಔಟ್, ಅನ್ನಪೂರ್ಣೇಶ್ವರಿ ನಗರ, ಮಿಲನ್ ಕಲ್ಯಾಣ ಮಂಟಪ ವಲಯಗಳು ಸೇರಿದಂತೆ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುವ ನಿರೀಕ್ಷೆಯಿದ್ದು, ನಿವಾಸಿಗಳು ಮೊಬೈಲ್ ಹಾಗೂ ಲ್ಯಾಪ್‌ಟಾಪ್‌ಗಳನ್ನು ಮುಂಚಿತವಾಗಿ ಚಾರ್ಜ್‌ಮಾಡಿ, ಲಿಫ್ಟ್‌ಗಳ ಬಳಕೆಯನ್ನು ತಕ್ಕಮಟ್ಟಿಗೆ ನಿರ್ಬಂಧಿಸಿ, ವ್ಯಾಪಾರ ಅಥವಾ ದೂರಸ್ಥ ಕೆಲಸಗಳಿಗೆ ಪರ್ಯಾಯ ಯೋಜನೆಗಳನ್ನು ರೂಪಿಸಬೇಕು ಮತ್ತು ವಿದ್ಯುತ್ ಕಳೆದುಹೋದರೆ 'ಬೆಸ್ಕಾಂ ಮಿತ್ರ' ಮೊಬೈಲ್ ಅಪ್ಲಿಕೇಶನ್ ಮುಖಾಂತರ ದೂರು ನೀಡಬಹುದು.
ಇನ್ನು ಮೇ 30 ಪ್ರದೇಶವಾರು ವಿದ್ಯುತ್ ಕಡಿತದ ವೇಳಾಪಟ್ಟಿ ಇಂತಿದೆ. ಹಿಂದೂ ಸ್ಮಶಾನ ಪ್ರದೇಶ, ಕಣ್ಣೂರು ಹಳ್ಳಿ ರಸ್ತೆ, ಸೋಮಸುಂದರ್ ಲೇಔಟ್, ಅನ್ನಪೂರ್ಣೇಶ್ವರಿ ನಗರ, ಮಿಲನ್ ಕಲ್ಯಾಣ ಮಂಟಪ ಪ್ರದೇಶ (ಹೊಸಕೋಟೆ). ವಿಜಯಪುರದಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ವ್ಯತ್ಯಯ ಇರಲಿದೆ.
ಒಂದು ವೇಳೆ ಘೋಷಿಸದ ನಿಮ್ಮ ಏರಿಯಾಗಳಲ್ಲಿ ವಿದ್ಯುತ್ ಕಡಿತ ಮಾಡಿದರೆ, ನೀವು ಅದನ್ನು ಸುಲಭವಾಗಿ ತಿಳಿಸಬಹುದು. ಅದಕ್ಕಾಗಿ ಬೆಸ್ಕಾಂ ಮಿತ್ರ ಮೊಬೈಲ್ ಆಪ್ (ಆಂಡ್ರಾಯ್ಡ್ ಮತ್ತು ಐಒಎಸ್ ಎರಡರಲ್ಲೂ ಲಭ್ಯವಿದೆ) ಬಳಸಬಹುದು ಅಥವಾ ಬೆಸ್ಕಾಂ ಸಹಾಯವಾಣಿ ಸಂಖ್ಯೆ 1912 ಗೆ ಕರೆ ಮಾಡಬಹುದು. ಕರೆ ಮಾಡುವಾಗ ನಿಮ್ಮ ಮೀಟರ್ ಸಂಖ್ಯೆ ಅಥವಾ ಖಾತೆ ಐಡಿ ಸಿದ್ಧವಾಗಿರಲಿ. ಬೆಸ್ಕಾಂ ಬೆಂಗಳೂರಿನಲ್ಲಿ ವಿದ್ಯುತ್ ವ್ಯವಸ್ಥೆ ಉತ್ತಮಗೊಳಿಸಲು ಕೆಲಸ ಮಾಡುತ್ತಿರುವುದರಿಂದ, ಕೆಲ ದಿನಗಳ ಕಾಲ ಅಯಾಯ ಪ್ರದೇಶಕ್ಕೆ ತಕ್ಕಂತೆ ವಿದ್ಯುತ್ ಕಡಿತವಾಗುವ ಸಾಧ್ಯತೆ ಇದೆ.