MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಬೆಂಗಳೂರು: ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿದ ಮರುದಿನವೇ ರೋಗಿಯ ಚಿನ್ನಾಭರಣ ಕದ್ದ ಖತರ್ನಾಕ್ ಮಹಿಳೆ ಅರೆಸ್ಟ್!

ಬೆಂಗಳೂರು: ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿದ ಮರುದಿನವೇ ರೋಗಿಯ ಚಿನ್ನಾಭರಣ ಕದ್ದ ಖತರ್ನಾಕ್ ಮಹಿಳೆ ಅರೆಸ್ಟ್!

ಬೆಂಗಳೂರಿನ ಹೆಣ್ಣೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ, ಶಸ್ತ್ರಚಿಕಿತ್ಸೆಗಾಗಿ ದಾಖಲಾಗಿದ್ದ ಮಹಿಳಾ ರೋಗಿಯ ಚಿನ್ನಾಭರಣಗಳನ್ನು ಹೌಸ್ ಕೀಪಿಂಗ್ ಸಿಬ್ಬಂದಿ ಕಳವು ಮಾಡಿದ್ದಾಳೆ. ಕೆಲಸಕ್ಕೆ ಸೇರಿದ ಮರುದಿನವೇ ಈ ಕೃತ್ಯ ಎಸಗಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

2 Min read
Author : Sathish Kumar KH
Published : May 08 2026, 04:40 PM IST
Share this Photo Gallery
  • FB
  • TW
  • Linkdin
  • Whatsapp
14
ಮೊದಲ ದಿನವೇ ಪಂಗನಾಮ
Image Credit : Asianet News

ಮೊದಲ ದಿನವೇ ಪಂಗನಾಮ

ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಮಹಿಳೆಯೊಬ್ಬಳು ಮೊದಲ ದಿನವೇ ಪಂಗನಾಮ ಹಾಕಿದ ಘಟನೆ ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗಾಗಿ ದಾಖಲಾಗಿದ್ದ ಮಹಿಳಾ ರೋಗಿಯ ಚಿನ್ನಾಭರಣಗಳನ್ನು ಕಳವು ಮಾಡಿದ್ದ ಹೌಸ್ ಕೀಪಿಂಗ್ ಸಿಬ್ಬಂದಿಯನ್ನು ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬಂಧಿಸಿದ್ದಾರೆ.

24
ಘಟನೆಯ ವಿವರ:
Image Credit : Asianet News

ಘಟನೆಯ ವಿವರ:

ಹೆಣ್ಣೂರು ಮೂಲದ ಸ್ವಪ್ನ ಎಂಬ ಮಹಿಳೆ ಕಳೆದ 1ನೇ ತಾರೀಖಿನಂದು ಶಸ್ತ್ರಚಿಕಿತ್ಸೆಗಾಗಿ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆಪರೇಷನ್ ಥಿಯೇಟರ್‌ಗೆ ಕರೆದೊಯ್ಯುವ ಮುನ್ನ ವೈದ್ಯಕೀಯ ನಿಯಮದಂತೆ ಆಸ್ಪತ್ರೆಯ ಸಿಬ್ಬಂದಿ ಅವರ ಮೈಮೇಲಿದ್ದ ಆಭರಣಗಳನ್ನು ತೆಗೆಯುವಂತೆ ಸೂಚಿಸಿದ್ದರು. ಅದರಂತೆ ಸ್ವಪ್ನ ಅವರು ತಮ್ಮ ಮಾಂಗಲ್ಯ ಸರ, ಕಿವಿಯೋಲೆ ಹಾಗೂ ಕಾಲುಂಗುರಗಳನ್ನು ತೆಗೆದು ಪಕ್ಕದ ರೂಮಿನಲ್ಲಿಟ್ಟಿದ್ದರು. ಇದೇ ಸಂದರ್ಭವನ್ನು ಹೊಂಚು ಹಾಕುತ್ತಿದ್ದ ಆಸ್ಪತ್ರೆಯ ಹೌಸ್ ಕೀಪಿಂಗ್ ಕೆಲಸದವಳು ತನ್ನ ಕೈಚಳಕ ತೋರಿಸಿದ್ದಾಳೆ.

Related Articles

Related image1
ಬೆಂಗಳೂರಿನ ಭಲೇ ಕಳ್ಳಿ ಅರೆಸ್ಟ್: ಬಂಗಾರದ ಅಂಗಡಿಗೆ ಹೋಗಿ ಉಂಗುರ ಕದ್ದು ಸಿಕ್ಕಿಬಿದ್ದ ಆಕಾಂಶ!
Related image2
ಮನೆಮುಂದೆ ಮೂರು ಬಾರಿ ಓಡಾಡಿದ ಮಹಿಳೆ: ಮಕ್ಕಳ ಕಳ್ಳಿ ಎಂದು ಮನಸೋ ಇಚ್ಛೆ ಥಳಿಸಿದ ಜನ!
34
ಕೆಲಸಕ್ಕೆ ಸೇರಿದ ಮರುದಿನವೇ ಕಳ್ಳತನ!
Image Credit : Asianet News

ಕೆಲಸಕ್ಕೆ ಸೇರಿದ ಮರುದಿನವೇ ಕಳ್ಳತನ!

ಬಂಧಿತ ಆರೋಪಿಯನ್ನು ವನಜಾಕ್ಷಿ ಎಂದು ಗುರುತಿಸಲಾಗಿದೆ. ಈಕೆ ಈ ಆಸ್ಪತ್ರೆಗೆ ಹೌಸ್ ಕೀಪಿಂಗ್ ಕೆಲಸಕ್ಕೆ ಸೇರಿ ಕೇವಲ ಒಂದು ದಿನವಷ್ಟೇ ಆಗಿತ್ತು. ಕೆಲಸ ಸಿಕ್ಕ ಮರುದಿನವೇ ಈಕೆ ತನ್ನ ನೈಜ ಗುಣವನ್ನು ಪ್ರದರ್ಶಿಸಿದ್ದಾಳೆ. ರೋಗಿ ಶಸ್ತ್ರಚಿಕಿತ್ಸೆಗೆ ಹೋದ ಸಮಯ ನೋಡಿ, ನೆಲ ವರೆಸುವ ನೆಪದಲ್ಲಿ ರೂಮ್ ಒಳಗೆ ನುಗ್ಗಿದ ವನಜಾಕ್ಷಿ, ಕ್ಷಣಾರ್ಧದಲ್ಲಿ ಬೆಲೆಬಾಳುವ ಚಿನ್ನಾಭರಣಗಳನ್ನು ಗುಳುಂ ಮಾಡಿದ್ದಾಳೆ.

ಸಿಸಿಟಿವಿಯಲ್ಲಿ ಬಯಲಾದ ಖತರ್ನಾಕ್ ಕಳ್ಳಾಟ:

ಶಸ್ತ್ರಚಿಕಿತ್ಸೆ ಮುಗಿಸಿ ಬಂದ ಸ್ವಪ್ನ ಅವರಿಗೆ ತಮ್ಮ ಒಡವೆಗಳು ಕಾಣದಿದ್ದಾಗ ಆತಂಕಕ್ಕೊಳಗಾಗಿ ಆಸ್ಪತ್ರೆ ಆಡಳಿತ ಮಂಡಳಿಗೆ ತಿಳಿಸಿದ್ದಾರೆ. ಕೂಡಲೇ ಹೆಣ್ಣೂರು ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ವನಜಾಕ್ಷಿ ನೆಲ ವರೆಸುತ್ತಾ ರೂಮ್ ಒಳಗೆ ಹೋಗಿ, ಯಾರಿಗೂ ಅನುಮಾನ ಬರದಂತೆ ಒಡವೆಗಳನ್ನು ಕದ್ದು ತನ್ನ ಜೇಬಿಗೆ ಹಾಕಿಕೊಳ್ಳುವುದು ಸ್ಪಷ್ಟವಾಗಿ ಸೆರೆಯಾಗಿದೆ.

44
ತುಮಕೂರಿನಲ್ಲಿತ್ತು ಒಡವೆ:
Image Credit : Asianet News

ತುಮಕೂರಿನಲ್ಲಿತ್ತು ಒಡವೆ:

ಕಳ್ಳತನ ಮಾಡಿದ ಬಳಿಕ ಕೆಲಸಕ್ಕೆ ಬಾರದೆ ತಲೆಮರೆಸಿಕೊಂಡಿದ್ದ ವನಜಾಕ್ಷಿಯನ್ನು ಪೊಲೀಸರು ತಾಂತ್ರಿಕ ಕಾರ್ಯಾಚರಣೆಯ ಮೂಲಕ ಪತ್ತೆ ಹಚ್ಚಿದ್ದಾರೆ. ತನಿಖೆಯ ವೇಳೆ ಈಕೆ ಕದ್ದ ಚಿನ್ನಾಭರಣಗಳನ್ನು ತುಮಕೂರಿನ ಹಣಕಾಸು ಸಂಸ್ಥೆಯೊಂದರಲ್ಲಿ ಅಡವಿಟ್ಟಿರುವುದು ತಿಳಿದುಬಂದಿದೆ. ಸದ್ಯ ಆರೋಪಿಯನ್ನು ಬಂಧಿಸಿರುವ ಹೆಣ್ಣೂರು ಪೊಲೀಸರು, ಆಕೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಆಸ್ಪತ್ರೆಗಳು ಕೆಲಸಕ್ಕೆ ಸಿಬ್ಬಂದಿಯನ್ನು ನೇಮಿಸಿಕೊಳ್ಳುವಾಗ ಅವರ ಹಿನ್ನೆಲೆಯನ್ನು ಸರಿಯಾಗಿ ಪರಿಶೀಲಿಸಬೇಕು ಎಂಬುದಕ್ಕೆ ಈ ಘಟನೆ ಮತ್ತೊಂದು ಸಾಕ್ಷಿಯಾಗಿದೆ. ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಬೆಂಗಳೂರು
ಆಭರಣಗಳು
ಆಸ್ಪತ್ರೆ

Latest Videos
Recommended Stories
Recommended image1
ನಮ್ಮ ಮೆಟ್ರೋ ಪ್ರಯಾಣಿಕರೇ ಗಮನಿಸಿ: ಮೇ 10ರ ಭಾನುವಾರ ನೇರಳೆ ಮಾರ್ಗದಲ್ಲಿ ಸಂಚಾರ ವ್ಯತ್ಯಯ
Recommended image2
ಕೊಪ್ಪಳದ ಅಂಜನಾದ್ರಿ ಹನುಮನಿಗೆ 2.5 ಕೋಟಿ ರೂ ಮೌಲ್ಯದ ಚಿನ್ನದ ಆಭರಣ ದೇಣಿಗೆ ನೀಡಿದ ಹೈದರಾಬಾದ್ ಉದ್ಯಮಿ!
Recommended image3
ರಾತ್ರಿಯ ಕಗ್ಗತ್ತಲು, ಸುರಿವ ಮಳೆಯಲ್ಲಿ ಹಳ್ಳದಲ್ಲಿ ಕಳೆದ ಹೋದ ಮಗು; 12 ಗಂಟೆ ಬಳಿಕ ಕಂದಮ್ಮ ಪತ್ತೆ!
Related Stories
Recommended image1
ಬೆಂಗಳೂರಿನ ಭಲೇ ಕಳ್ಳಿ ಅರೆಸ್ಟ್: ಬಂಗಾರದ ಅಂಗಡಿಗೆ ಹೋಗಿ ಉಂಗುರ ಕದ್ದು ಸಿಕ್ಕಿಬಿದ್ದ ಆಕಾಂಶ!
Recommended image2
ಮನೆಮುಂದೆ ಮೂರು ಬಾರಿ ಓಡಾಡಿದ ಮಹಿಳೆ: ಮಕ್ಕಳ ಕಳ್ಳಿ ಎಂದು ಮನಸೋ ಇಚ್ಛೆ ಥಳಿಸಿದ ಜನ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved