ಆಕ್ಸಿಜನ್ ಟ್ಯಾಂಕರ್‌ಗೆ ಗ್ರೀನ್ ಕಾರಿಡಾರ್.. ಪೊಲೀಸರ ಮಾದರಿ ಕಾರ್ಯ
ಬೆಂಗಳೂರು (ಏ.22) ಎಲ್ಲಿ ನೋಡಿದರೂ ಕೊರೋನಾ ಆರ್ಭಟ. ಆಕ್ಸಿಜನ್ ಸಿಗುತ್ತಿಲ್ಲ. ಬೆಡ್ ಸಿಗುತ್ತಿಲ್ಲ ಇಂಥ ಸುದ್ದಿಗಳೇ ತುಂಬಿ ಹೋಗಿವೆ. ಅದರ ನಡುವೆ ಬೆಂಗಳೂರು ಪೊಲೀಸರು ಒಂದು ಮಾದರಿ ಕೆಲಸ ಮಾಡಿದ್ದಾರೆ.
ಸರ್ಕಾರ ಸಹ ಆಕ್ಸಿಜನ್ ಪೂರೈಕೆ ಮಾಡುವ ವಾಹನಗಳನ್ನು ಆಂಬುಲೆನ್ಸ್ ಎಂದು ಪರಿಗಣಿಸಿ ಎಂದು ತಿಳಿಸಿತ್ತು.
ಆಕ್ಸಿಜನ್ ಸಾಗಿಸುವ ಟ್ಯಾಂಕರ್ ಗೆ ಗ್ರೀನ್ ಕಾರಿಡಾರ್ ನಿರ್ಮಾಣ ಮಾಡಿಕೊಟ್ಟಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿಯಿಂದ ಶಿವಾಜಿನಗರ ಎಚ್‌ಬಿಎಸ್ ಆಸ್ಪತ್ರೆಗೆ ಗ್ರೀನ್ ಕಾರಿಡಾರ್ ನಿರ್ಮಾಣ ಮಾಡಿಕೊಡಲಾಗಿತ್ತು.
ಬೆಂಗಳೂರು ಪೊಲೀಸರ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಕರ್ನಾಟಕದಲ್ಲಿ ಕೊರೋನಾ ಎರಡನೆ ಅಲೆ ಅಬ್ಬರಿಸುತ್ತಿದ್ದು ಒಂದೇ ದಿನ 25 ಸಾವಿರ ಪ್ರಕರಣಗಳು ದಾಖಲಾಗಿವೆ.