MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • Bengaluru: ಡಿವೈಡರ್ ಹಾರಿ ಎದುರು ಬರ್ತಿದ್ದ ಬಸ್‌ಗೆ ಡಿಕ್ಕಿ ಹೊಡೆದ ಕಾರ್; ಐವರು ವಿದ್ಯಾರ್ಥಿಗಳ ಸಾವು

Bengaluru: ಡಿವೈಡರ್ ಹಾರಿ ಎದುರು ಬರ್ತಿದ್ದ ಬಸ್‌ಗೆ ಡಿಕ್ಕಿ ಹೊಡೆದ ಕಾರ್; ಐವರು ವಿದ್ಯಾರ್ಥಿಗಳ ಸಾವು

ಬೆಂಗಳೂರಿನ ಹೊರವಲಯದ ತುಮಕೂರು ರಸ್ತೆಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಐವರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅತಿಯಾದ ವೇಗದಿಂದ ಬಂದ ಕಾರು ಸಾರಿಗೆ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದ್ದು, ಮೃತರಲ್ಲಿ ಇಬ್ಬರನ್ನು ಲಲಿತ್ ಮತ್ತು ಹರ್ಷಿತ್ ಎಂದು ಗುರುತಿಸಲಾಗಿದೆ.

1 Min read
Author : Mahmad Rafik
Published : Feb 15 2026, 07:53 AM IST
Share this Photo Gallery
  • FB
  • TW
  • Linkdin
  • Whatsapp
16
ಭೀಕರ ಅಪಘಾತ
Image Credit : Asianet News

ಭೀಕರ ಅಪಘಾತ

ಬೆಂಗಳೂರು: ಹೊಸಕೋಟೆ ದುರಂತ ಮಾಸುವ ಮುನ್ನವೇ ಮತ್ತೊಂದು ಭೀಕರ ಅಪಘಾತ ಬೆಂಗಳೂರಿನ ಹೊರವಲಯದಲ್ಲಿ ನಡೆದಿದ್ದು, ಐವರು ವಿದ್ಯಾರ್ಥಿಗಳು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ತುಮಕೂರು ರಸ್ತೆಯ ನವಯುಗ ಟೋಲ್ ಸಮೀಪದ ಜಿಂದಾಲ್ ಆಸ್ಪತ್ರೆ ಯ ಫ್ಲೈ ಓವರ್ ಮೇಲೆ ಅಪಘಾತ ಸಂಭವಿಸಿದೆ.

26
ಬೆಂಗಳೂರಿನ ನೆಲಮಂಗಲ ಟೋಲ್ ಬಳಿ ಅಪಘಾತ
Image Credit : Asianet News

ಬೆಂಗಳೂರಿನ ನೆಲಮಂಗಲ ಟೋಲ್ ಬಳಿ ಅಪಘಾತ

ಬೆಂಗಳೂರಿನ ನೆಲಮಂಗಲ ಟೋಲ್ ಬಳಿ TATA INDICA ಕಾರ್ ಅಪಘಾತಕ್ಕೊಳಗಾಗಿದೆ. ಸಾರಿಗೆ ಬಸ್‌ಗೆ ಡಿಕ್ಕಿ ಹೊಡೆದ ರಭಸಕ್ಕೆ ಕಾರ್‌ನಲ್ಲಿದ್ದವರು ಸ್ಥಳದಲ್ಲಿಯೇ ಅಸುನೀಗಿದ್ದಾರೆ. ತುಮಕೂರು ಡಿಪೋಗೆ ಸೇರಿದ್ದ ಸಾರಿಗೆ ಬಸ್ ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೊರಟಿತ್ತು. ಅಪಘಾತದ ಬಳಿಕ ಪ್ರಯಾಣಿಕರನ್ನು ಮತ್ತೊಂದು ಬಸ್ ಮೂಲಕ ಕಳುಹಿಸಿ ಕೊಡಲಾಗಿದೆ. ಬಸ್ ಮುಂಭಾಗದ ಆಸನದಲ್ಲಿ ಕುಳಿತಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

Related Articles

Related image1
ಮಲೆ ಮಹದೇಶ್ವರ ಬೆಟ್ಟದ ತಿರುವಿನಲ್ಲಿ ಕೆಎಸ್‌ಆರ್‌ಟಿಸಿ-ಖಾಸಗಿ ಬಸ್ ಮುಖಾಮುಖಿ ಡಿಕ್ಕಿ; 10ಕ್ಕೂ ಹೆಚ್ಚು ಮಂದಿಗೆ ಗಾಯ
Related image2
ಹೊಸಕೋಟೆ ದುರಂತ: ಸಿದ್ದಿಸಲಿಲ್ವಾ ಶಾಂತಿ ಹೂಮ, ಪೂಜೆಯ ಹೂವು ಬಾಡುವ ಮುನ್ನವೇ ಅದೇ ಜಾಗದಲ್ಲಿ 7 ಜನರ ಬಲಿ!
36
ಅತಿಯಾದ ವೇಗ
Image Credit : Getty

ಅತಿಯಾದ ವೇಗ

ಕಾರಿನ ಅತಿಯಾದ ವೇಗವೇ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಡಿಕ್ಕಿ ರಭಸಕ್ಕೆ ಕಾರ್‌ನಲ್ಲಿಯೇ ಶವಗಳು ಅಪ್ಪಚ್ಚಿಯಾಗಿ ಸಿಲುಕಿಕೊಂಡಿವೆ. ಅಪಘಾತದ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಮೃತದೇಹಗಳನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡಿ, ಟ್ರಾಫಿಕ್ ಕ್ಲಿಯರ್ ಮಾಡಿದ್ದಾರೆ.

46
ಬಿಕಾಂ ಓದುತ್ತಿದ್ದ ಲಲಿತ್
Image Credit : Getty

ಬಿಕಾಂ ಓದುತ್ತಿದ್ದ ಲಲಿತ್

ಮೃತ ಐವರಲ್ಲಿ ಇಬ್ಬರ ಹೆಸರು ಮಾತ್ರ ತಿಳಿದು ಬಂದಿದೆ. ಆ ಇಬ್ಬರನ್ನು ಲಲಿತ್ ಮತ್ತು ಹರ್ಷಿತ್ ಎಂದು ಗುರುತಿಸಲಾಗಿದೆ. ಮೃತ ಐವರು ವಿದ್ಯಾರ್ಥಿಗಳಾಗಿದ್ದರು. ಲಲಿತ್ ದೊಡ್ಡಬಳ್ಳಾಪುರದ ನಿವಾಸಿಯಾಗಿದ್ದು, ಬೆಂಗಳೂರಿನ ರಾಜನಕುಂಟೆಯ ಖಾಸಗಿ ಕಾಲೇಜಿನಲ್ಲಿ ಬಿಕಾಂ ಓದುತ್ತಿದ್ದನು.

56
ತಾಯಿ ಕಣ್ಣೀರು
Image Credit : Asianet News

ತಾಯಿ ಕಣ್ಣೀರು

ಶನಿವಾರ ರಾತ್ರಿ ಸುಮಾರು 8ಕ್ಕೆ ಲಲಿತ್ ಮನೆಗೆ ಬಂದಿದ್ದನು. ಸ್ನೇಹಿತನ ಮನೆಗೆ ಹೋಗುತ್ತಿರೋದಾಗಿ ತಾಯಿ ಬಳಿ ಹೇಳಿದ್ದನು. ರಾತ್ರಿ ಹೋಗಿದ್ದ ಮಗ ಈಗ ಶವವಾಗಿರೋದನ್ನು ಕಂಡು ತಾಯಿ ಕಣ್ಣೀರು ಹಾಕುತ್ತಿದ್ದಾರೆ. 

ಇದನ್ನೂ ಓದಿ: ಮಗಳೇ ಪ್ರಪಂಚ ಅಂದುಕೊಂಡಿದ್ದ ತಾಯಿಗೆ ಸಿಕ್ಕಿದ್ದು ಘೋರ ಸಾವು; ನಿದ್ರೆಯಲ್ಲೇ ಹೆತ್ತವಳನ್ನು ಚಿತೆಗೇರಿಸಿದ ಪಾಪಿ ಮಗಳು!

66
ಮರಣೋತ್ತರ ಶವ ಪರೀಕ್ಷೆ
Image Credit : Asianet News

ಮರಣೋತ್ತರ ಶವ ಪರೀಕ್ಷೆ

ಮರಣೋತ್ತರ ಶವ ಪರೀಕ್ಷೆ ಬಳಿಕ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ .

ಇದನ್ನೂ ಓದಿ: ಹೊಸಕೋಟೆ ಭೀಕರ ಅಪಘಾತದ ಇಂಪ್ಯಾಕ್ಟ್, PWD-ನ್ಯಾಷನಲ್ ಹೈವೆ ಅಥಾರಿಟಿ-ಪೊಲೀಸರಿಂದ ಜಂಟಿ ಸರ್ವೆ

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಅಪಘಾತ
ಬೆಂಗಳೂರು
ವಿದ್ಯಾರ್ಥಿ

Latest Videos
Recommended Stories
Recommended image1
Siddaramaiah statue: 6.5 ಅಡಿ ಎತ್ತರದ ಸಿದ್ದರಾಮಯ್ಯ ಪ್ರತಿಮೆ ಅನಾವರಣ; ತಮ್ಮದೇ ಪ್ರತಿಮೆ ನೋಡಿ ಸಿದ್ದು ದಿಲ್‌ಖುಷ್!
Recommended image2
Mahashivaratri 2026: ಕಾಡುಮಲ್ಲೇಶ್ವರ ದೇವಾಲಯದಲ್ಲಿ ಬ್ರಹ್ಮರಥೋತ್ಸವಕ್ಕೆ ಸಿದ್ಧತೆ
Recommended image3
Mahashivaratri: ಶಿವರಾತ್ರಿಗೆ ನಗರದ ದೇಗುಲಗಳು ಸಜ್ಜು, ಇಂದಿನ ಹೂ, ಹಣ್ಣುಗಳ ಬೆಲೆ ಎಷ್ಟಿದೆ?
Related Stories
Recommended image1
ಮಲೆ ಮಹದೇಶ್ವರ ಬೆಟ್ಟದ ತಿರುವಿನಲ್ಲಿ ಕೆಎಸ್‌ಆರ್‌ಟಿಸಿ-ಖಾಸಗಿ ಬಸ್ ಮುಖಾಮುಖಿ ಡಿಕ್ಕಿ; 10ಕ್ಕೂ ಹೆಚ್ಚು ಮಂದಿಗೆ ಗಾಯ
Recommended image2
ಹೊಸಕೋಟೆ ದುರಂತ: ಸಿದ್ದಿಸಲಿಲ್ವಾ ಶಾಂತಿ ಹೂಮ, ಪೂಜೆಯ ಹೂವು ಬಾಡುವ ಮುನ್ನವೇ ಅದೇ ಜಾಗದಲ್ಲಿ 7 ಜನರ ಬಲಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved