MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಚಾಲೆಂಜರ್ 2026 ಭರ್ಜರಿ ತಾಲೀಮು, 3000 ಸಿಬ್ಬಂದಿಗಳಿಂದ ತುರ್ತು ಕಾರ್ಯಾಚರಣೆ

ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಚಾಲೆಂಜರ್ 2026 ಭರ್ಜರಿ ತಾಲೀಮು, 3000 ಸಿಬ್ಬಂದಿಗಳಿಂದ ತುರ್ತು ಕಾರ್ಯಾಚರಣೆ

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 'ಚಾಲೆಂಜರ್ 2026' ಎಂಬ ಬೃಹತ್ ತುರ್ತು ಪರಿಸ್ಥಿತಿ ಅಭ್ಯಾಸವನ್ನು ಯಶಸ್ವಿಯಾಗಿ ನಡೆಸಲಾಯಿತು. 3,000ಕ್ಕೂ ಹೆಚ್ಚು ಸಿಬ್ಬಂದಿ ಭಾಗವಹಿಸಿದ್ದ ಈ ತಾಲೀಮಿನಲ್ಲಿ, ವಿಮಾನ ಅಪಘಾತದ ಸನ್ನಿವೇಶವನ್ನು ಸೃಷ್ಟಿಸಲಾಯಿತು.

2 Min read
Author : Gowthami K
Published : May 21 2026, 04:36 PM IST
Share this Photo Gallery
  • FB
  • TW
  • Linkdin
  • Whatsapp
16
ತುರ್ತು ಪರಿಸ್ಥಿತಿಯಲ್ಲಿ 3,000 ಸಿಬ್ಬಂದಿಗಳಿಂದ ಕಾರ್ಯಾಚರಣೆ
Image Credit : Asianet News

ತುರ್ತು ಪರಿಸ್ಥಿತಿಯಲ್ಲಿ 3,000 ಸಿಬ್ಬಂದಿಗಳಿಂದ ಕಾರ್ಯಾಚರಣೆ

ಬೆಂಗಳೂರು: ವಿಮಾನ ನಿಲ್ದಾಣದಲ್ಲಿ ದಿಢೀರ್ ಅಂತ ಏನಾದರೂ ಅವಘಡ ಸಂಭವಿಸಿದರೆ ಪರಿಸ್ಥಿತಿಯನ್ನು ನಿಭಾಯಿಸುವುದು ಹೇಗೆ? ಪ್ರಯಾಣಿಕರ ಪ್ರಾಣ ರಕ್ಷಣೆ ಹೇಗೆ ಮಾಡಬೇಕು? ಇಂತಹ ತುರ್ತು ಪರಿಸ್ಥಿತಿಗಳನ್ನು ಎದುರಿಸುವ ಸಾಮರ್ಥ್ಯವನ್ನು ಪರೀಕ್ಷಿಸಿಕೊಳ್ಳಲು, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 'ಚಾಲೆಂಜರ್ 2026' ಎಂಬ ಮಹಾ ಅಭ್ಯಾಸವನ್ನು ಯಶಸ್ವಿಯಾಗಿ ನಡೆಸಲಾಯಿತು. ಡಿಜಿಸಿಎ ಮತ್ತು ಐಸಿಎಒ ಮಾರ್ಗಸೂಚಿಗಳ ಅನ್ವಯ, ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ಈ ಪೂರ್ಣ ಪ್ರಮಾಣದ ತಾಲೀಮು, ವಿಮಾನ ನಿಲ್ದಾಣದ ಸುರಕ್ಷತೆ ಮತ್ತು ಬಿಕ್ಕಟ್ಟು ನಿರ್ವಹಣೆಯ ಬದ್ಧತೆಯನ್ನು ಮತ್ತೊಮ್ಮೆ ತೋರಿಸಿದೆ.

Add Asianetnews Kannada as a Preferred SourcegooglePreferred
26
ಏರ್‌ಪೋರ್ಟ್ ಇತಿಹಾಸದಲ್ಲೇ ಅತಿದೊಡ್ಡ ತಾಲೀಮು!
Image Credit : Asianet News

ಏರ್‌ಪೋರ್ಟ್ ಇತಿಹಾಸದಲ್ಲೇ ಅತಿದೊಡ್ಡ ತಾಲೀಮು!

ಇದು ಕೆಂಪೇಗೌಡ ವಿಮಾನ ನಿಲ್ದಾಣದ ಇತಿಹಾಸದಲ್ಲಿ ನಡೆದ ಅತಿದೊಡ್ಡ ತುರ್ತು ಪರಿಸ್ಥಿತಿ ಅಭ್ಯಾಸವಾಗಿದೆ. ಈ ತಾಲೀಮಿನಲ್ಲಿ ವಿಮಾನಯಾನ ಸಂಸ್ಥೆಗಳು, ರಾಜ್ಯ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ, ಆಸ್ಪತ್ರೆಗಳು, ಭಾರತೀಯ ವಾಯುಪಡೆ, ಸೇನಾ ಹಾಗೂ ಅರೆಸೇನಾ ಪಡೆಗಳು, ಮತ್ತು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಸೇರಿದಂತೆ ಬರೋಬ್ಬರಿ 100ಕ್ಕೂ ಹೆಚ್ಚು ಸಂಸ್ಥೆಗಳು ಹಾಗೂ 3,000ಕ್ಕೂ ಅಧಿಕ ಸಿಬ್ಬಂದಿ ಪಾಲ್ಗೊಂಡಿದ್ದರು.

Related Articles

Related image1
ರಕ್ಷಣಾ ವಲಯದಲ್ಲಿ ಭಾರತದ ಐತಿಹಾಸಿಕ ಮೈಲಿಗಲ್ಲು, ಮೊದಲ ಸ್ವದೇಶಿ ಸೇನಾ ವಿಮಾನ ವಡೋದರದಲ್ಲಿ ಹಾರಾಟಕ್ಕೆ ರೆಡಿ
Related image2
ಚೀನಾ ನಿರ್ಮಿತ ಪಾಕಿಸ್ತಾನದ ತರಬೇತಿ ಜೆಟ್‌ ಪತನ ಪಂಜಾಬ್‌ನಲ್ಲಿ ಪತನ, ಪತನವಾದ 7ನೇ ವಿಮಾನ ಇದು!
36
ಏನೆಲ್ಲಾ ಕಸರತ್ತು?
Image Credit : Asianet News

ಏನೆಲ್ಲಾ ಕಸರತ್ತು?

ಈ ಅಭ್ಯಾಸದಲ್ಲಿ ವಿಮಾನ ಅಪಘಾತದಂತಹ ಸಂಕೀರ್ಣ ಸನ್ನಿವೇಶವನ್ನು ಸೃಷ್ಟಿಸಲಾಗಿತ್ತು. ತಕ್ಷಣವೇ ಅಲರ್ಟ್ ಸಿಸ್ಟಮ್ ಆನ್ ಮಾಡುವುದು, ಅಗ್ನಿಶಾಮಕ ದಳದ ಆಗಮನ, ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ, ಮತ್ತು ಗಾಯಾಳುಗಳನ್ನು ತ್ವರಿತವಾಗಿ ಆಸ್ಪತ್ರೆಗೆ ಸಾಗಿಸಲು ಜೀರೋ-ಟ್ರಾಫಿಕ್ 'ಗ್ರೀನ್ ಕಾರಿಡಾರ್' ವ್ಯವಸ್ಥೆ ಮಾಡುವುದು... ಹೀಗೆ ಪ್ರತಿಯೊಂದು ಹಂತವನ್ನೂ ಅಚ್ಚುಕಟ್ಟಾಗಿ ಪರೀಕ್ಷಿಸಲಾಯಿತು. ವಿಶೇಷವಾಗಿ, ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಮೂಲಕ ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ಏರ್-ಲಿಫ್ಟ್ ಮಾಡುವ ತಾಲೀಮು ಎಲ್ಲರ ಗಮನ ಸೆಳೆಯಿತು.

46
 ನೈಜ ಸವಾಲು ಮತ್ತು ಎಐ ತಂತ್ರಜ್ಞಾನದ ಬಳಕೆ
Image Credit : Asianet News

ನೈಜ ಸವಾಲು ಮತ್ತು ಎಐ ತಂತ್ರಜ್ಞಾನದ ಬಳಕೆ

ಈ ಬಾರಿಯ 'ಚಾಲೆಂಜರ್ 2026' ತಾಲೀಮಿನ ಅತಿ ದೊಡ್ಡ ಸವಾಲು ಎಂದರೆ, ವಿಮಾನ ನಿಲ್ದಾಣದ ಎರಡನೇ ರನ್‌ವೇಯಲ್ಲಿ ನೈಜ ವಿಮಾನಗಳ ಹಾರಾಟ ನಡೆಯುತ್ತಿದ್ದಾಗಲೇ ಈ ಅಣಕು ಪ್ರದರ್ಶನವನ್ನು ಯಶಸ್ವಿಯಾಗಿ ನಿರ್ವಹಿಸಿದ್ದು! ಇದು ವಿವಿಧ ಸಂಸ್ಥೆಗಳ ನಡುವಿನ ನಿಖರವಾದ ಸಂವಹನ ಮತ್ತು ಸಮಯಪಾಲನೆಯನ್ನು ಸಾಬೀತುಪಡಿಸಿತು. ಜೊತೆಗೆ, ರಕ್ಷಣಾ ಕಾರ್ಯಾಚರಣೆ ನಡೆಸುವ ತಂಡಗಳಿಗೆ ತ್ವರಿತವಾಗಿ ಮಾರ್ಗದರ್ಶನ ನೀಡಲು ಇದೇ ಮೊದಲ ಬಾರಿಗೆ ಕೃತಕ ಬುದ್ಧಿಮತ್ತೆ ಆಧಾರಿತ ಟೂಲ್‌ಗಳನ್ನು ಬಳಸಲಾಯಿತು. ಘಟನೆಯ ಕ್ಷಣಕ್ಷಣದ ಮಾಹಿತಿಯನ್ನು ರಿಯಲ್-ಟೈಮ್‌ನಲ್ಲಿ ಟ್ರ್ಯಾಕ್ ಮಾಡಲು ಹೊಸ ಡಿಜಿಟಲ್ ವೇದಿಕೆಯನ್ನು ಅಳವಡಿಸಲಾಗಿತ್ತು.

56
ವಿಮಾನಗಳ ಓಡಾಟದ ನಡುವೆಯೇ ಈ ತಾಲೀಮನ್ನು ಯಶಸ್ವಿ
Image Credit : Asianet News

ವಿಮಾನಗಳ ಓಡಾಟದ ನಡುವೆಯೇ ಈ ತಾಲೀಮನ್ನು ಯಶಸ್ವಿ

ಈ ಯಶಸ್ವಿ ಅಭ್ಯಾಸದ ಬಗ್ಗೆ ಮಾತನಾಡಿದ ಬಿಐಎಎಲ್ ಎಂಡಿ ಹಾಗೂ ಸಿಇಒ ಹರಿ ಮರಾರ್, "ವಿಮಾನ ನಿಲ್ದಾಣದ ಕಾರ್ಯಾಚರಣೆಗಳು ದಿನೇ ದಿನೇ ವಿಸ್ತಾರವಾಗುತ್ತಿವೆ. ಹಾಗಾಗಿ, ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ನಾವು ಸದಾ ಸಿದ್ಧರಾಗಿರಬೇಕು. ಸಂಸ್ಥೆಗಳ ನಡುವಿನ ಸಮನ್ವಯ ಮತ್ತು ಚುರುಕುತನವನ್ನು ಪರೀಕ್ಷಿಸಲು ಈ ಅಭ್ಯಾಸವನ್ನು ರೂಪಿಸಲಾಗಿತ್ತು. ವಿಮಾನಗಳ ಓಡಾಟದ ನಡುವೆಯೇ ಈ ತಾಲೀಮನ್ನು ಯಶಸ್ವಿಯಾಗಿ ಮುಗಿಸಿದ್ದು ನಮ್ಮ ಸುರಕ್ಷತಾ ವ್ಯವಸ್ಥೆಯ ಸಾಮರ್ಥ್ಯವನ್ನು ತೋರಿಸುತ್ತದೆ," ಎಂದು ಹರ್ಷ ವ್ಯಕ್ತಪಡಿಸಿದರು.

66
ದೇಶದ ಮೂರನೇ ಅತಿದೊಡ್ಡ ವಿಮಾನ ನಿಲ್ದಾಣ
Image Credit : Social Media

ದೇಶದ ಮೂರನೇ ಅತಿದೊಡ್ಡ ವಿಮಾನ ನಿಲ್ದಾಣ

ಬೆಂಗಳೂರು ವಿಮಾನ ನಿಲ್ದಾಣವು ದಕ್ಷಿಣ ಭಾರತದ ಅತಿ ದೊಡ್ಡ ಹಾಗೂ ದೇಶದ ಮೂರನೇ ಅತಿದೊಡ್ಡ ವಿಮಾನ ನಿಲ್ದಾಣವಾಗಿದೆ. 2025-26ನೇ ಆರ್ಥಿಕ ವರ್ಷದಲ್ಲಿ 4.44 ಕೋಟಿಗೂ ಹೆಚ್ಚು ಪ್ರಯಾಣಿಕರಿಗೆ ಸೇವೆ ಒದಗಿಸಿರುವ ಇದು, 2026ರ ಏಪ್ರಿಲ್ ವೇಳೆಗೆ ಒಟ್ಟು 40 ಕೋಟಿ ಪ್ರಯಾಣಿಕರನ್ನು ನಿರ್ವಹಿಸಿದ ಮೈಲಿಗಲ್ಲನ್ನು ತಲುಪಿದೆ. ಸರಕು ಸಾಗಣೆಯಲ್ಲಿಯೂ, ಅದರಲ್ಲೂ ವಿಶೇಷವಾಗಿ ಬೇಗನೆ ಹಾಳಾಗುವ ವಸ್ತುಗಳ ಸಾಗಣೆಯಲ್ಲಿ ಸತತ ಐದನೇ ವರ್ಷವೂ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಬೆಂಗಳೂರು ವಿಮಾನ ನಿಲ್ದಾಣ
ಬೆಂಗಳೂರು
ವಿಮಾನ ನಿಲ್ದಾಣ

Latest Videos
Recommended Stories
Recommended image1
ಗಂಗಾವತಿ ಕಾಂಗ್ರೆಸ್‌ನಲ್ಲಿ ಹೆಚ್ಚಿದ ಗುಂಪುಗಾರಿಕೆ: ತ್ರಿಶಂಕು ಸ್ಥಿತಿಯಲ್ಲಿ ಕಾರ್ಯಕರ್ತರು
Recommended image2
ಲಕ್ಕುಂಡಿಯ ಗುಪ್ತ ಸತ್ಯ: ದೇವಾಲಯಗಳ ಪತ್ತೆಗೆ ಸ್ಯಾಟಲೈಟ್ ಬಳಕೆ, ಲಕ್ಕುಂಡಿಯ ನೂರೊಂದು ಬಾವಿ, ದೇಗುಲ ಶೀಘ್ರ ಅನಾವರಣ
Recommended image3
ಗದಗ: ಪ್ರೀತಿಸಿ ಮದುವೆಯಾದ ಗಂಡನಿಗೆ ಬೆಡ್ ರೂಂ ನಲ್ಲಿ ಕಬ್ಬಿಣದ ಸಲಾಕೆಯಿಂದ ಹೊಡೆದು ಚಟ್ಟ ಕಟ್ಟಿದ ಹೆಂಡತಿ!
Related Stories
Recommended image1
ರಕ್ಷಣಾ ವಲಯದಲ್ಲಿ ಭಾರತದ ಐತಿಹಾಸಿಕ ಮೈಲಿಗಲ್ಲು, ಮೊದಲ ಸ್ವದೇಶಿ ಸೇನಾ ವಿಮಾನ ವಡೋದರದಲ್ಲಿ ಹಾರಾಟಕ್ಕೆ ರೆಡಿ
Recommended image2
ಚೀನಾ ನಿರ್ಮಿತ ಪಾಕಿಸ್ತಾನದ ತರಬೇತಿ ಜೆಟ್‌ ಪತನ ಪಂಜಾಬ್‌ನಲ್ಲಿ ಪತನ, ಪತನವಾದ 7ನೇ ವಿಮಾನ ಇದು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved