MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ತನ್ನದೇ ಚಿನ್ನದಂಗಡಿಗೆ ಕನ್ನ ಹಾಕಿ ತಗ್ಲಾಕೊಂಡ ಮಾಲೀಕ ಕೃಷ್ಣಾನಂದ ಹಿಂಡಲಗಾ ಜೈಲಿಗೆ ಶಿಫ್ಟ್

ತನ್ನದೇ ಚಿನ್ನದಂಗಡಿಗೆ ಕನ್ನ ಹಾಕಿ ತಗ್ಲಾಕೊಂಡ ಮಾಲೀಕ ಕೃಷ್ಣಾನಂದ ಹಿಂಡಲಗಾ ಜೈಲಿಗೆ ಶಿಫ್ಟ್

ಬೆಳಗಾವಿಯಲ್ಲಿ ತನ್ನದೇ ಚಿನ್ನದಂಗಡಿಯಲ್ಲಿ ಕಳ್ಳತನವಾಗಿದೆ ಎಂದು ದೂರು ನೀಡಿದ್ದ ಮಾಲೀಕ ಕೃಷ್ಣಾನಂದ ವೇರ್ಣೇಕರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಜನರಿಗೆ ಮೋಸ ಮಾಡುವ ಉದ್ದೇಶದಿಂದ ಕಳ್ಳತನದ ನಾಟಕವಾಡಿದ್ದು, ಆತನ ಸ್ಕೂಟಿಯಲ್ಲೇ ಚಿನ್ನಾಭರಣ ಹಾಗೂ ನಗದು ಪತ್ತೆಯಾಗಿದೆ.

1 Min read
Author : Mahmad Rafik
Published : Jul 21 2026, 09:17 AM IST
Share this Photo Gallery
  • FB
  • TW
  • Linkdin
  • Whatsapp
15
ಚಿನ್ನದ ವ್ಯಾಪಾರಿ ಬಂಧನ
Image Credit : Asianet News

ಚಿನ್ನದ ವ್ಯಾಪಾರಿ ಬಂಧನ

ತನ್ನದೇ ಚಿನ್ನದಂಗಡಿಗೆ ಕನ್ನ ಹಾಕಿದ್ದ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ. ಕೃಷ್ಣಾನಂದ ವೇರ್ಣೇಕರ್ ಬಂಧಿತ ಚಿನ್ನದ ವ್ಯಾಪಾರಿ. ಕೃಷ್ಣಾನಂದ ವೇರ್ಣೇಕರ್ ಎಂಬಾತ ಬೆಳಗಾವಿ ರಾಮದೇವ ಗಲ್ಲಿಯಲ್ಲಿ ಚಿನ್ನದಂಗಡಿ ಹೊಂದಿದ್ದು, ಚಿನ್ನದ ಸಾಲ ನೀಡುವ ಕೆಲಸ ಮಾಡಿಕೊಂಡಿದ್ದನು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ದೂರು ದಾಖಲಿಸಿದ್ದ ಚಿನ್ನದಂಗಡಿ ಮಾಲೀಕ
Image Credit : Asianet News

ದೂರು ದಾಖಲಿಸಿದ್ದ ಚಿನ್ನದಂಗಡಿ ಮಾಲೀಕ

ಜುಲೈ 17ರಂದು ಖಡೇಬಜಾರ್ ಪೊಲೀಸ್ ಠಾಣೆಗೆ ಬಂದ ಕೃಷ್ಣಾನಂದ್, 376 ಗ್ರಾಂ ಚಿನ್ನ, 4 ಕೆಜಿ ಬೆಳ್ಳಿ ಮತ್ತು ನಗದು ಕಳ್ಳತನವಾಗಿದೆ ಎಂದು ದೂರು ದಾಖಲಿಸಿದ್ದನು. ದೂರು ದಾಖಲಿಸಿಕೊಂಡ ಪೊಲೀಸರು ಸ್ಥಳಕ್ಕೆ ಶ್ವಾನದಳದ ಜೊತೆ ತೆರಳಿದ್ದರು. ಹಾಗೆಯೇ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದೆ. ಪೊಲೀಸರ ಆರಂಭದ ತನಿಖೆಯಲ್ಲಿ ನಂಬರ್ ಪ್ಲೇಟ್ ಇಲ್ಲದ ಸ್ಕಾರ್ಪಿಯೋ ಕಾರ್ ಅಂಗಡಿ ಬಳಿ ಆಗಮಿಸಿರೋದು ಪತ್ತೆಯಾಗಿತ್ತು.

Related Articles

Related image1
ಹಾವೇರಿ ಬೆಳಗಾವಿ ಬಳಿಕ ಮತ್ತೆರಡು ಜಿಲ್ಲೆಗಳಲ್ಲಿ ಮೋಡ ಬಿತ್ತನೆಗೆ ಚಿಂತನೆ, ಜಲಾಶಯಗಳ ಇಂದಿನ ನೀರಿನ ಮಟ್ಟ ಎಷ್ಟು?
Related image2
ಬೆಳಗಾವಿ ಕಸದ ತಿಪ್ಪೆಯಿಂದ ಕೇಳಿಬಂತು ಹಸುಗೂಸು ಅರ್ತನಾದ! ಕುರಿಗಾಹಿಯಿಂದ ಗಂಡು ಮಗುವಿನ ರಕ್ಷಣೆ
35
ಸ್ಕೂಟಿಯಲ್ಲಿಯೇ ಚಿನ್ನಾಭರಣ ಪತ್ತೆ
Image Credit : Asianet News

ಸ್ಕೂಟಿಯಲ್ಲಿಯೇ ಚಿನ್ನಾಭರಣ ಪತ್ತೆ

ಪೊಲೀಸರ ತನಿಖೆಯಲ್ಲಿ ಕೃಷ್ಣಾನಂದ ವೇರ್ಣೇಕರ್ ಸ್ಕೂಟಿಯಲ್ಲಿಯೇ ಚಿನ್ನಾಭರಣ ಪತ್ತೆಯಾಗಿದೆ. ಆರೋಪಿಯಿಂದ 45 ಸಾವಿರ ಮೌಲ್ಯದ ಬೈಕ್, 62 ಲಕ್ಷ ಮೌಲ್ಯದ 519.8 ಗ್ರಾಂ ಚಿನ್ನಾಭರಣ, 6000 ಮೌಲ್ಯದ 31 ಗ್ರಾಂ ಬೆಳ್ಳಿ ಆಭರಣ, 2,83,010 ರೂಪಾಯಿ ನಗದು ವಶಕ್ಕೆ ಪಡೆದುಕೊಳ್ಳಲಾಗಿದೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

45
ಬೆಳಗಾವಿ ಪೊಲೀಸ್ ಕಮೀಷನರ್ ಭೂಷಣ್ ಬೊರಸೆ ಮಾಹಿತಿ
Image Credit : Asianet News

ಬೆಳಗಾವಿ ಪೊಲೀಸ್ ಕಮೀಷನರ್ ಭೂಷಣ್ ಬೊರಸೆ ಮಾಹಿತಿ

ಪ್ರಕರಣದ ಕುರಿತು ಮಾಹಿತಿ ನೀಡಿರುವ ಬೆಳಗಾವಿ ಪೊಲೀಸ್ ಕಮೀಷನರ್ ಭೂಷಣ್ ಬೊರಸೆ, ಆರೋಪಿಯು ಕಳೆದ ಕೆಲವು ವರ್ಷಗಳಿಂದ ಚಿನ್ನದಂಗಡಿ ನಡೆಸುತ್ತಿದ್ದನು. ಜನರಿಂದ ಚಿನ್ನ ಪಡೆದು ಸಾಲ ನೀಡುವ ಬಡ್ಡಿ ವ್ಯವಹಾರ ನಡೆಸುತ್ತಿದ್ದನು. ಚಿನ್ನ-ಬೆಳ್ಳಿ ಕಳ್ಳತನವಾಗಿದೆ ಎಂದು ಜನರಿಗೆ ಮೋಸ ಮಾಡುವ ಸಂಚು ರೂಪಿಸಿರುವ ಅನುಮಾನಗಳಿವೆ.

55
ಚಾರ್ಜ್‌ಶೀಟ್ ಫೈಲ್
Image Credit : Asianet News

ಚಾರ್ಜ್‌ಶೀಟ್ ಫೈಲ್

ಇನ್ನು ಅಂದು ರಾತ್ರಿ ಮಳಿಗೆ ಬಳಿ ಬಂದ ಸ್ಕಾರ್ಪಿಯೋ ಕಾರ್ ಯಾರದ್ದು? ಕಾರ್‌ನಲ್ಲಿ ಬಂದವರು ಯಾರು ಎಂಬುದನ್ನು ಶೀಘ್ರದಲ್ಲಿಯೇ ಪತ್ತೆ ಮಾಡಲಾಗುವುದು. ದೂರು ದಾಖಲಿಸಿದ್ದ ಕೃಷ್ಣಾನಂದ ವೇರ್ಣೇಕರ್ ವಿರುದ್ಧ ಚಾರ್ಜ್‌ಶೀಟ್ ಫೈಲ್ ಮಾಡಲಾಗುತ್ತದೆ ಎಂದು ಭೂಷಣ್ ಬೊರಸೆ ಮಾಹಿತಿ ನೀಡಿದ್ದಾರೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಬೆಳಗಾವಿ
ಕ್ರೈಮ್ ನ್ಯೂಸ್
ಕಳ್ಳತನ ಪ್ರಕರಣ

Latest Videos
Recommended Stories
Recommended image1
ವಿದ್ಯುತ್ ವ್ಯತ್ಯಯ, ಮೆಟ್ರೋ ಸೇವೆ ತಾತ್ಕಾಲಿಕವಾಗಿ ಸ್ಥಗಿತ: BMRCL ಪ್ರಕಟಣೆ
Recommended image2
CJP Protest: ಶಿಕ್ಷಣ ಮಂತ್ರಿ ರಾಜೀನಾಮೆ ಪಡೆಯಲಾದ ಮೋದಿ ದುರ್ಬಲ ಪ್ರಧಾನಿ, ದುಷ್ಟರ ರಕ್ಷಕ -ಸಿದ್ದರಾಮಯ್ಯ ಕಿಡಿ
Recommended image3
Bagalkote : 19 ವರ್ಷ ವಯೋಮಿತಿಯ KSCA ಕ್ರಿಕೆಟ್‌ಗೆ ಮಹಾಲಿಂಗಪುರದ ದಿಶಾ ಶಿರೋಳ ಆಯ್ಕೆ
Related Stories
Recommended image1
ಹಾವೇರಿ ಬೆಳಗಾವಿ ಬಳಿಕ ಮತ್ತೆರಡು ಜಿಲ್ಲೆಗಳಲ್ಲಿ ಮೋಡ ಬಿತ್ತನೆಗೆ ಚಿಂತನೆ, ಜಲಾಶಯಗಳ ಇಂದಿನ ನೀರಿನ ಮಟ್ಟ ಎಷ್ಟು?
Recommended image2
ಬೆಳಗಾವಿ ಕಸದ ತಿಪ್ಪೆಯಿಂದ ಕೇಳಿಬಂತು ಹಸುಗೂಸು ಅರ್ತನಾದ! ಕುರಿಗಾಹಿಯಿಂದ ಗಂಡು ಮಗುವಿನ ರಕ್ಷಣೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved