- Home
- Karnataka Districts
- ಬಳ್ಳಾರಿ ಗಲಾಟೆಗೆ ಬಿಗ್ ಟ್ವಿಸ್ಟ್ , ರಸ್ತೆ ಬದಿ ಸಿಕ್ತು ಬುಲೆಟ್, ರಾಜಶೇಖರ್ ಮರಣೋತ್ತರ ಪರೀಕ್ಷೆ 2 ಸಲ ಮಾಡಿದ್ಯಾಕೆ?
ಬಳ್ಳಾರಿ ಗಲಾಟೆಗೆ ಬಿಗ್ ಟ್ವಿಸ್ಟ್ , ರಸ್ತೆ ಬದಿ ಸಿಕ್ತು ಬುಲೆಟ್, ರಾಜಶೇಖರ್ ಮರಣೋತ್ತರ ಪರೀಕ್ಷೆ 2 ಸಲ ಮಾಡಿದ್ಯಾಕೆ?
ಬಳ್ಳಾರಿಯಲ್ಲಿ ನಡೆದ ಬ್ಯಾನರ್ ಗಲಾಟೆ ಮತ್ತು ಫೈರಿಂಗ್ ಪ್ರಕರಣವು ಹೊಸ ತಿರುವುಗಳನ್ನು ಪಡೆದುಕೊಂಡಿದೆ. ಘಟನಾ ಸ್ಥಳದಲ್ಲಿ ಬುಲೆಟ್ ಪತ್ತೆಯಾಗಿದ್ದು, ರಾಜಶೇಖರ ಎಂಬುವವರ ಸಾವಿನ ಕುರಿತು ಎರಡು ಬಾರಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ಫೈಯರಿಂಗ್ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್?
ಬಳ್ಳಾರಿ: ಬಳ್ಳಾರಿ : ಬಳ್ಳಾರಿಯಲ್ಲಿ ನಡೆದ ಬ್ಯಾನರ್ ಗಲಾಟೆ ಪ್ರಕರಣ. ಫೈಯರಿಂಗ್ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್? ಘಟನಾ ಸ್ಥಳದಲ್ಲಿ ಬಾಂಬ್ ನಿಷ್ಕ್ರಿಯ ಸ್ಥಳದಲ್ಲಿ ಬುಲೆಟ್ ಪತ್ತೆ ಮಾಡಿದ್ದು, ಬುಲೆಟ್ ಸಿಕ್ಕಿರುವ ಜಾಗದಲ್ಲಿ ಭರತ್ ರೆಡ್ಡಿ ಮೊದಲು ಅಲ್ಲಿಯೇ ನಿಂತಿದ್ರು. ಭರತ್ ರೆಡ್ಡಿ ಕಡೆಗೂ ಹಾರಿತ್ತಾ ಗುಂಡು? ಅನ್ನೋ ಪ್ರಶ್ನೆ ಕಾಡ್ತಿದೆ. ಜನಾರ್ದನ ರೆಡ್ಡಿ ಮನೆ ಕಡೆಯಿಂದಲೂ ಹಾರಿತ್ತಾ ಬುಲ್ಲೆಟ್? ಕಾಂಗ್ರೆಸ್ ಹಾರಿಸಿದ್ದ ಗುಂಡಾಗಿದ್ರೇ ಅದು ಜನಾರ್ದನ ರೆಡ್ಡಿ ಮನೆ ಕಡೆಗೆ ಬಳಿ ಸಿಗಬೇಕಿತ್ತು. ಆದ್ರೇ ಬುಲೆಟ್ ಸಿಕ್ಕಿರೋದು ಕಾಂಗ್ರೆಸ್ ನವರು ನಿಂತ ರಸ್ತೆ ಬಳಿ ಈಗ ಬುಲೆಟ್ ಪತ್ತೆಯಾಗಿರೋದು ಸಾಕಷ್ಟು ಅನುಮಾನಕ್ಕೆ ಕಾಣವಾಗಿದೆ.
ಬಾಂಬ್ ನಿಷ್ಕ್ರಿಯ ದಳದಿಂದ ವ್ಯಾಪಕ ಪರಿಶೀಲನೆ
ಫೈರಿಂಗ್ ಪ್ರಕರಣದ ಗಂಭೀರತೆಯನ್ನು ಗಮನಿಸಿ, ಹುಬ್ಬಳ್ಳಿಯಿಂದ ಬಾಂಬ್ ನಿಷ್ಕ್ರಿಯ ದಳ, ಬ್ಯಾಲಿಸ್ಟಿಕ್ ತಜ್ಞರು ಹಾಗೂ ಫಾರೆನ್ಸಿಕ್ (SUCO/FSL) ತಂಡಗಳನ್ನು ಕರೆಸಲಾಗಿದೆ. ಘಟನಾ ಸ್ಥಳದಲ್ಲಿ ಒಟ್ಟು ಏಳು ರೌಂಡ್ ಫೈರಿಂಗ್ ನಡೆದಿದೆ ಎನ್ನಲಾಗಿದ್ದು, NLJD ಮತ್ತು DSMD ಯಂತ್ರಗಳ ಮೂಲಕ ಸ್ಥಳದ ಇಂಚಿಂಚು ಪರಿಶೀಲನೆ ನಡೆಸಲಾಗಿದೆ. ಪೊಲೀಸರು ಸೀನ್ ರಿಕ್ರಿಯೇಟ್ ಮಾಡಿ, ಘಟನೆ ನಡೆದ ದಿನ ಏನೆಲ್ಲ ಸಂಭವಿಸಿತು ಎಂಬುದನ್ನು ಪುನರ್ ನಿರ್ಮಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಐಜಿ ವರ್ತಿಕಾ ಅವರಿಂದ ಮಾಹಿತಿ ಪಡೆದು ತನಿಖಾ ತಂಡ ಕಾರ್ಯಾಚರಣೆ ನಡೆಸಿದೆ. ಜನಾರ್ದನ ರೆಡ್ಡಿ ಮನೆಗೆ ಹೋಗುವ ದಾರಿಯನ್ನು ಸಂಪೂರ್ಣ ಬಂದ್ ಮಾಡಿ, ಯಾರನ್ನೂ ಒಳಗೆ ಬಿಡದೇ ಪರಿಶೀಲನೆ ನಡೆಸಲಾಗಿದೆ. ಮನೆ ಎದುರು ನೆಲಕ್ಕೆ ಬಿದ್ದಿದ್ದ ಕಾರ್ಟ್ರಿಜ್ ಹಾಗೂ ಗುಂಡಿನ ತುಣುಕುಗಳನ್ನು ವಶಕ್ಕೆ ಪಡೆದು ಪರಿಶೀಲನೆಗೆ ಕಳುಹಿಸಲಾಗಿದೆ. 9 MM ಬುಲೆಟ್ ಸ್ಥಳದಲ್ಕೇ ಪತ್ತೆಯಾಗಿದ್ದು, ಈ ಸಾಕ್ಷ್ಯಗಳು ಪೊಲೀಸರ ತನಿಖೆಗೆ ಮಹತ್ವದ ದಾಖಲೆಗಳಾಗಿವೆ.
ರಾಜಶೇಖರ ಮೃತ್ಯು: ಎರಡು ಬಾರಿ ಪೋಸ್ಟ್ ಮಾರ್ಟಮ್
ಬಳ್ಳಾರಿ ಗಲಾಟೆ ವೇಳೆ ಸಾವನ್ನಪ್ಪಿದ ರಾಜಶೇಖರ ಅವರ ಸಾವಿನ ಕುರಿತು ಕೂಡ ಮತ್ತೊಂದು ಸ್ಪೋಟಕ ಮಾಹಿತಿ ಹೊರಬಿದ್ದಿದೆ. ಜನವರಿ 1ರ ರಾತ್ರಿ ನಡೆದ ಘಟನೆಯಲ್ಲಿ ರಾಜಶೇಖರ ಮೃತಪಟ್ಟಿದ್ದು, ಜನವರಿ 2ರ ಬೆಳಗ್ಗೆ 6 ಗಂಟೆಗೆ ಮೊದಲ ಪೋಸ್ಟ್ ಮಾರ್ಟಮ್ ನಡೆಸಲಾಗಿದೆ. ಆದರೆ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡ ಹಿನ್ನೆಲೆಯಲ್ಲಿ ಬೆಳಗ್ಗೆ 10 ಗಂಟೆಗೆ ಮತ್ತೆ ಪೋಸ್ಟ್ ಮಾರ್ಟಮ್ ಮಾಡಲಾಗಿದೆ. ಈ ವೇಳೆ ಎದೆ ಭಾಗದಿಂದ ತೆಗೆದ ಬುಲೆಟ್ ತುಂಡುಗಳನ್ನು ಫಾರೆನ್ಸಿಕ್ ಲ್ಯಾಬ್‌ಗೆ ಕಳುಹಿಸಲಾಗಿದೆ. ಪೋಸ್ಟ್ ಮಾರ್ಟಮ್ ಅನ್ನು ಡಾ. ಯೋಗೇಶ್ ಅವರು ನಡೆಸಿದ್ದು, ವರದಿಯನ್ನು ಫೊರೆನ್ಸಿಕ್ ವಿಭಾಗದ ಮುಖ್ಯಸ್ಥ ಡಾ. ಚೈತನ್ಯ ಅವರು ನೀಡಿದ್ದಾರೆ.
ಗುಂಡು ಸತೀಶ್ ರೆಡ್ಡಿ ಗನ್‌ನದ್ದೇ ಶ್ರೀರಾಮುಲು ಹೇಳಿಕೆ
ಈ ಕುರಿತು ಪ್ರತಿಕ್ರಿಯಿಸಿದ ಸಚಿವ ಬಿ. ಶ್ರೀರಾಮುಲು, “ರಾಜಶೇಖರ ಎದೆಗೆ ಹೊಕ್ಕ ಗುಂಡು ಸತೀಶ್ ರೆಡ್ಡಿ ಅವರ ಗನ್‌ನದ್ದೇ ಎಂದು ಸಾಬೀತಾಗಿದೆ. ಈಗಾಗಲೇ ಹಲವು ತಂಡಗಳು ತನಿಖೆ ನಡೆಸುತ್ತಿವೆ. ಪ್ರಕರಣದಲ್ಲಿ ಎಲ್ಲ ಅಂಶಗಳನ್ನೂ ಪರಿಶೀಲಿಸಲಾಗುತ್ತಿದೆ” ಎಂದು ಹೇಳಿದ್ದಾರೆ.
ಬ್ಯಾನರ್ ಗಲಾಟೆ: ಹೊಸ ವಿಡಿಯೋ ಬಹಿರಂಗ
ಬ್ಯಾನರ್ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೊಂದು ವಿಡಿಯೋ ಬಹಿರಂಗವಾಗಿದ್ದು, ಪ್ರಚೋದನೆ ನೀಡಿದ್ದು ಜನಾರ್ದನ ರೆಡ್ಡಿ ಬೆಂಬಲಿಗರೇ ಎಂಬ ಆರೋಪ ಕೇಳಿಬಂದಿದೆ. ಜನಾರ್ದನ ರೆಡ್ಡಿ ಮನೆಯ ಮುಂದೆ ಬ್ಯಾನರ್ ತೆರವು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ಮುಖಂಡರ ಮೇಲೆ ಮೊದಲು ದಾಳಿ ನಡೆಸಿದ್ದು ಜನಾರ್ದನ ರೆಡ್ಡಿ ಕಡೆಯವರೇ ಎನ್ನಲಾಗಿದೆ. ಈ ವೇಳೆ ಮಾಜಿ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಹಾಗೂ ಪಾಲಿಕೆ ಸದಸ್ಯ ಶ್ರೀನಿವಾಸ ಮೋತ್ಕರ್ ಪ್ರಚೋದನೆ ನೀಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
ದಶಕದ ವೈಷಮ್ಯ ಮರೆತು ತಮ್ಮನ ಮನೆಗೆ ಬಂದ ಕರುಣಾಕರ ರೆಡ್ಡಿ
ಈ ನಡುವೆ, ದಶಕಕ್ಕೂ ಹೆಚ್ಚು ಕಾಲ ದೂರವಾಗಿದ್ದ ಹಿರಿಯ ಸಹೋದರ ಗಾಲಿ ಕರುಣಾಕರ ರೆಡ್ಡಿ, ಘಟನೆ ಹಿನ್ನೆಲೆಯಲ್ಲಿ ಜನಾರ್ದನ ರೆಡ್ಡಿ ಮನೆಗೆ ಭೇಟಿ ನೀಡಿದ್ದಾರೆ. ಜನಾರ್ದನ ರೆಡ್ಡಿ ಬಂಧನದ ನಂತರ ಇಬ್ಬರ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿದ್ದರೂ, ಇತ್ತೀಚೆಗೆ ನಡೆದ ದಾಳಿಯ ಹಿನ್ನೆಲೆ ಕುಟುಂಬದ ಹಿರಿಯರಾಗಿ ಕರುಣಾಕರ ರೆಡ್ಡಿ ಮನೆಗೆ ಬಂದಿದ್ದಾರೆ. ಈ ಕುರಿತು ಮಾತನಾಡಿದ ಅವರು, ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಸಹಜ. ಐದು ಬೆರಳು ಒಂದೇ ರೀತಿ ಇರೋದಿಲ್ಲ. ಆದರೆ ಇಂತಹ ಕೆಟ್ಟ ಘಟನೆ ನಡೆಯಬಾರದ್ದಾಗಿತ್ತು ಎಂದು ಹೇಳಿದ್ದಾರೆ.

