Bagalkote: ನೇಣಿಗೆ ಶರಣಾದ 19 ವರ್ಷದ ಭೂಮಿಕಾ; ಡೋಂಗ್ರಿ ಜೊತೆಗಿನ ಹಿಜಾಬ್ ಫೋಟೋ ವೈರಲ್
19 ವರ್ಷದ ಭೂಮಿಕಾ ಎಂಬ ಯುವತಿ ನೇಣಿಗೆ ಶರಣಾಗಿದ್ದಾಳೆ. ಅನ್ಯಕೋಮಿನ ಯುವಕನ ಕಿರುಕುಳವೇ ಸಾವಿಗೆ ಕಾರಣ ಎಂದು ಪೋಷಕರು ಆರೋಪಿಸಿದ್ದು, ಹಿಂದೂ ಸಂಘಟನೆಗಳು ಇದನ್ನು ಲವ್ ಜಿಹಾದ್ ಎಂದು ಕರೆದಿವೆ. ಯುವತಿ ಹಿಜಾಬ್ ಧರಿಸಿದ ಫೋಟೋ ವೈರಲ್ ಆಗಿದ್ದು, ಪ್ರಕರಣವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

19 ವರ್ಷದ ಭೂಮಿಕಾ ಸಾವು
ಬಾಗಲಕೋಟೆಯಲ್ಲಿ 19 ವರ್ಷದ ಭೂಮಿಕಾ ತಿಪ್ಪಣ್ಣವರ್ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದು, ಇದಕ್ಕೆ ಅನ್ಯಕೋಮಿನ ಯುವಕನ ಕಿರುಕುಳ ಎಂಬ ಆರೋಪ ಕೇಳಿ ಬಂದಿದೆ. ಇದು ಲವ್ ಜಿಹಾದ್ ಎಂದು ಹಿಂದೂ ಸಂಘಟನೆಗಳು ಗಂಭೀರ ಆರೋಪವನ್ನು ಮಾಡಿವೆ. ಇದೆಲ್ಲದರ ನಡುವೆ ಭೂಮಿಕಾ ಹಿಜಾಬ್ ಧರಿಸಿರುವ ಫೋಟೋ ಸಹ ವೈರಲ್ ಆಗುತ್ತಿದೆ. ಏನಿದು ಪ್ರಕರಣ ಎಂಬುದರ ಮಾಹಿತಿ ಇಲ್ಲಿದೆ.
ಏನಿದು ಪ್ರಕರಣ?
ನವನಗರದ ಸೆಕ್ಟೇರ್ 48ರ ನಿವಾಸಿಯಾಗಿದ್ದ ಭೂಮಿಕಾ, ಡಿಪ್ಲೋಮಾ ಓದಿಕೊಂಡಿದ್ದು, ಟೈರ್ ಮಾರಾಟ ಅಂಗಡಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದಳು. ಬಾಗಲಕೋಟೆಯಲ್ಲಿ ಆಟೋ ಓಡಿಸಿಕೊಂಡಿದ್ದ ಡೋಂಗ್ರಿಸಾಬ್ ಎಂಬಾತನೊಂದಿಗೆ ಎರಡ್ಮೂರು ವರ್ಷದಿಂದ ಸಂಪರ್ಕದಲ್ಲಿದ್ದಳು. ಈ ಡೋಂಗ್ರಿಸಾಬ್ ನೀಡಿದ ಕಿರುಕಳದಿಂದಲೇ ಭೂಮಿಕಾ ಪ್ರಾಣ ಕಳೆದುಕೊಂಡಿದ್ದಾಳೆ ಎಂದು ಪೋಷಕರು ಕಣ್ಣೀರು ಹಾಕುತ್ತಿದ್ದಾರೆ.
ನವನಗರ ಪೊಲೀಸ್ ಠಾಣೆ
ಡೋಂಗ್ರಿಸಾಬ್ ವಿರುದ್ಧ ನವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಭೂಮಿಕಾ ತಾಯಿ ಸಂಗೀತಾ, ಮಗಳು ಭೂಮಿಕಾಗೆ ಡೋಂಗ್ರಿಸಾಬ ಪರಿಚಯ ಇತ್ತು. ಡೋಂಗ್ರಿಸಾಬ ಅಟೋ ಡ್ರೈವರ್ ಆಗಿದ್ದು, ಕಳೆದ 4 ವರ್ಷಗಳಿಂದ ಸಂಪರ್ಕದಲ್ಲಿದ್ದನು. ಮಗಳಿಗೆ ಆಗಾಗ್ಗೆ ಫೋನ್ ಮಾಡುತ್ತಿದ್ದನು. ಒಮ್ಮೆ ಮನೆಗೆ ಬಂದು ಮಗಳನ್ನು ತನ್ನೊಂದಿಗೆ ಮದುವೆ ಮಾಡಿಕೊಡುವಂತೆ ಕೇಳಿದ್ದನು. ಆದ್ರೆ ನಾವು ಒಪ್ಪಿರಲಿಲ್ಲ ಎಂದು ಹೇಳಿದ್ದಾರೆ.
ಮಗಳು ನಮ್ಮ ಮಾತು ಕೇಳಲಿಲ್ಲ
ಭೂಮಿಕಾ ನಮಗೆ ಒಬ್ಬಳೇ ಮಗಳಾಗಿದ್ದು, ಹೀಗಾಗಿ ಒಳ್ಳೆಯ ಹುಡುಗನ ನೋಡಿ ಮದುವೆ ಮಾಡಬೇಕು ಎಂದು ಯೋಚಿಸಿದ್ದೀವಿ. ಹಾಗೆಯೇ ಮಗಳಿಗೆ ಆ ಡೋಂಗ್ರಿ ಸಹವಾಸ ಬೇಡ ಎಂದು ಹೇಳಿದ್ರೂ ಆಕೆ ನಮ್ಮ ಮಾತು ಕೇಳಿರಲಿಲ್ಲ. ಈಗ ಏಕಾಏಕಿ ಇಂದು ನೇಣು ಹಾಕಿಕೊಂಡಿದ್ದಾಳೆ. ಡೋಂಗ್ರಿ ವಿರುದ್ಧ ಕಂಪ್ಲೇಂಟ್ ಮಾಡಿದ್ದೇವೆ. ನಮ್ಮ ಮಗಳ ಸಾವಿಗೆ ನ್ಯಾಯ ಕೊಡಿಸಿ ಎಂದು ಸಂಗೀತಾ ಮನವಿ ಮಾಡಿಕೊಂಡಿದ್ದಾರೆ.
ಕಿರುಕಳದಿಂದಲೇ ಆತ್ಮ*ಹತ್ಯೆ
ಭೂಮಿಕಾ ಅತ್ತೆ ಲಕ್ಷ್ಮೀ ಮಾತನಾಡಿ, ಆತ ನಿತ್ಯ ಟಂಟಂ ತಂದು ನಮ್ಮ ಮನೆ ಮುಂದೆ ನಿಲ್ಲಿಸುತ್ತಿದ್ದನು. ಆಕೆಗೆ ಕರೆ ಮಾಡಿ, ಮೆಸೇಜ್ ಮಾಡಿ ಮಾತನಾಡುವಂತೆ ಪೀಡಿಸುತ್ತಿದ್ದನು. ತನ್ನೊಂದಿಗೆ ಓಡಾಡಲು ಬರುವಂತೆ ಹೇಳ್ತಿದ್ದನು. ರಾತ್ರಿ 12 ರಿಂದ 1 ಗಂಟೆಯವರೆಗೂ ಇಬ್ಬರು ಫೋನನಲ್ಲೇ ಮಾತನಾಡ್ತಿದ್ರು. ಮದುವೆ ಬೇಡ ಆದ್ರೆ ತನ್ನೊಂದಿಗೆ ಇರು ಅಂತ ಕಿರುಕಳ ಕೊಡ್ತಿದ್ದನು. ಅವನ ಕಿರುಕಳದಿಂದಲೇ ಈಕೆ ಆತ್ಮ*ಹತ್ಯೆ ಮಾಡಿಕೊಂಡಿದ್ದಾಳೆ. ಇದಕ್ಕೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: 'ತಮ್ಮದು ರಾಧಾಕೃಷ್ಣ ಲವ್ ಸ್ಟೋರಿ..' ಎಂದಿದ್ದ ಕುಂಭಮೇಳ ಗರ್ಲ್ ಮೋನಾಲಿಸಾ ಅಪ್ರಾಪ್ತೆ; ಮುಸ್ಲಿಂ ಪತಿಯ ವಿರುದ್ಧ ಪೋಕ್ಸೋ ಕೇಸ್
ಹಿಂದೂ ಸಂಘಟನೆ ಆಕ್ರೋಶ
ಇದೊಂದು ಪಕ್ಕಾ ಲವ್ ಜಿಹಾದ್ ಪ್ರಕರಣ. ನವನಗರದಲ್ಲಿ ಮುಸ್ಲಿಂ ಕಿಡಿಗೇಡಿಗಳು ಇದನ್ನೇ ದಂಧೆ ಮಾಡಿಕೊಂಡಿದ್ದಾರೆ. 46 ಗ್ಯಾಂಗ್ ಅಂತ ಮಾಡಿಕೊಂಡು ಗದ್ದಲ ಗಲಾಟೆ ಮಾಡ್ತಾರೆ. ಕಳೆದ ನಾಲ್ಕೈದು ವರ್ಷದಿಂದ ಯುವತಿ ಜೊತೆ ಡೋಂಗ್ರಿಸಾಬ್ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದನು. ರಸ್ತೆಯ ಮಧ್ಯೆ ಅಡ್ಡ ಹಾಕಿ ಕಾಡಿಸುತ್ತಿದ್ದನು. ಮುಸ್ಲಿಂ ಧರ್ಮಕ್ಕೆ ಮತಾಂತರವಾಗು ಎಂದು ಪ್ರಚೋದನೆ ಮಾಡ್ತಿದ್ದನು ಎಂದು ಹಿಂದೂ ಜಾಗರಣ ವೇದಿಕೆ ಮುಖಂಡ ಕುಮಾರಸ್ವಾಮಿ ಹಿರೇಮಠ ಹೇಳಿದ್ದಾರೆ.
ಇದನ್ನೂ ಓದಿ: Koppal: ಮುಸ್ತಾಫಾನ ಮೊಬೈಲ್ ರೀಸೆಟ್ ಮಾಡಿದ್ಯಾರು? ಕಡು ಬಡವನಾಗಿದ್ರೂ ಹೈಫೈ ಜೀವನಶೈಲಿ
ಪೊಲೀಸರ ವಿರುದ್ಧ ಗಂಭೀರ ಆರೋಪ
ಇತ್ತೀಚಿಗೆ ರಂಜಾನ್ ವೇಳೆ ಹಿಜಾಬ್ ಬುರ್ಖಾ ಹಾಕಿಸಿ ಕರೆದುಕೊಂಡು ಓಡಾಡ್ತಿದ್ದನು. ಇದನ್ನೆಲ್ಲಾ ನೋಡಿದ್ರೆ ಇದೊಂದು ಪಕ್ಕಾ ಲವ್ ಜಿಹಾದ್ ಪ್ರಕರಣ ಎನಿಸುತ್ತೆ. ಯುವತಿ ಡೆತ್ ನೋಟು ಬರೆದಿದ್ದಳು ಅನ್ನೋ ಮಾಹಿತಿ ಇದೆ. ಆದ್ರೆ ಅಧಿಕಾರಿಗಳು ಅದನ್ನ ತೆಗೆದಿರಿಸಿದ್ದಾರೆನ್ನುವ ಸಂಶಯ ಇದೆ. ಈ ಬಗ್ಗೆ ಹಿಂದೂಪರ ಸಂಘಟನೆಗಳೆಲ್ಲಾ ಸೇರಿ ಮುಂದಿನ ಹೋರಾಟ ನಿರ್ಧಾರ ಮಾಡ್ತೇವೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
28ರ ಜಿಮ್ ಟ್ರೈನರ್‌ಗೆ 42ರ ಮಹಿಳೆ ಜೊತೆ ಸಂಬಂಧ? ಯುವಕನ ಸಾವಿನ ಹಿಂದೆ ಆಂಟಿ ಕರಿನೆರಳು#Bengaluruhttps://t.co/Rdk2MdjyRP
— Asianet Suvarna News (@AsianetNewsSN) April 12, 2026

