MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Asian Games 2026
Today's Horoscope
Srirangapatna Dasara 2026
Shivamogga Rain Deficit
Karnataka Power Crisis
Satish Jarkiholi ED Probe
Sharavathi Back Water Muppane
Yeswantpur-Mangaluru Vande Bharat
Kasturi Rangan Report
Siddaramaiah vs Dr HC Mahadevappa
Actress Krishi Thapanda
  • Home
  • Karnataka Districts
  • ಬಾಗಲಕೋಟೆ: 16 ವರ್ಷ ಪೂರ್ಣ, ಕುಡಚಿ ರೈಲು ಮಾರ್ಗ ಅಪೂರ್ಣ! ಭೂಮಿ ಕಳಕೊಂಡ ರೈತರು ಕೋರ್ಟ್ ಮುಂದೆ

ಬಾಗಲಕೋಟೆ: 16 ವರ್ಷ ಪೂರ್ಣ, ಕುಡಚಿ ರೈಲು ಮಾರ್ಗ ಅಪೂರ್ಣ! ಭೂಮಿ ಕಳಕೊಂಡ ರೈತರು ಕೋರ್ಟ್ ಮುಂದೆ

ವರದಿ: ಶ್ರೀನಿವಾಸ ಬಬಲಾದಿ2011ರಲ್ಲಿ ಬಾಗಲಕೋಟೆ-ಕುಡಚಿ ರೈಲು ಮಾರ್ಗ ಕಾಮಗಾರಿಯು ಭೂಸ್ವಾಧೀನ ವಿಳಂಬ ಮತ್ತು ಸರ್ಕಾರದ ನಿರ್ಲಕ್ಷ್ಯದಿಂದಾಗಿ ಆಮೆಗತಿಯಲ್ಲಿ ಸಾಗುತ್ತಿದೆ. 142ಕಿ.ಮೀ. ಪೈಕಿ ಕೇವಲ 38ಕಿ.ಮೀ. ಪೂರ್ಣಗೊಂಡಿದ್ದು, ರೈಲು ಸಂಚಾರ ಆರಂಭವಾಗದ ಕಾರಣ ಸ್ಥಳೀಯ ಸಂಘಟನೆಗಳು ಹೋರಾಟದ ಎಚ್ಚರಿಕೆ ನೀಡಿವೆ.

2 Min read
Author : Gowthami K
Published : May 22 2026, 11:22 AM IST
Share this Photo Gallery
  • FB
  • TW
  • Linkdin
  • Whatsapp
16
ಬಾಗಲಕೋಟೆ ಕುಡಚಿ ರೈಲು ಮಾರ್ಗದ ಕಾಮಗಾರಿ ಆಮೆಗತಿ
Image Credit : Asianet News

ಬಾಗಲಕೋಟೆ-ಕುಡಚಿ ರೈಲು ಮಾರ್ಗದ ಕಾಮಗಾರಿ ಆಮೆಗತಿ

ಬಾಗಲಕೋಟೆ: ಕೇಂದ್ರ ಬಜೆಟ್‌ನಲ್ಲಿ ಘೋಷಣೆಯಾಗಿ ರಾಜ್ಯದ ಆರ್ಥಿಕ ಸಹಾಯದೊಂದಿಗೆ ನಿರ್ಮಾಣಗೊಳ್ಳುತ್ತಿರುವ ಬಾಗಲಕೋಟೆ-ಕುಡಚಿ ರೈಲು ಮಾರ್ಗದ ಕಾಮಗಾರಿ ಆಮೆಗತಿಯಲ್ಲಿ ನಡೆದಿದೆ. ಬಾಗಲಕೋಟೆಯಿಂದ ಕುಡಚಿವರೆಗಿನ 142 ಕಿ.ಮೀ ಉದ್ದದ ರೈಲ್ವೆ ಮಾರ್ಗದ ಕಾಮಗಾರಿಗೆ 2011 ರಲ್ಲಿ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಇಲ್ಲಿಯವರೆಗೆ 38 ಕಿಮೀ ಮಾತ್ರ ಪೂರ್ಣಗೊಂಡಿದೆ. 108ಕಿ.ಮೀ ಕಾಮಗಾರಿ ಬಾಕಿ ಇದೆ. ಮಾರ್ಗ ನಿರ್ಮಾಣಕ್ಕೆ ಬೇಕಾದ ಭೂಸ್ವಾಧಿನದ ವೆಚ್ಚ ಹಾಗೂ ಕಾಮಗಾರಿಯ ಶೇ.50 ರಷ್ಟು ವೆಚ್ಚ ಭರಿಸುವ ವಾಗ್ದಾನದೊಂದಿಗೆ ಕೇಂದ್ರದ ಸಹಯೋಗದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಭೂಸ್ವಾಧೀನ ಮಾಡಿಕೊಡಬೇಕಾದ ರಾಜ್ಯದ ಅಧಿಕಾರಿಗಳ ವಿಳಂಬದಿಂದಾಗಿ ಕಾಮಗಾರಿಗೆ ವೇಗ ಸಿಗುತ್ತಿಲ್ಲ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಬಹುತೇಕ ಭೂಮಿ ಸ್ವಾಧೀನ, ಕೋರ್ಟಿಗೆ ಹೋದ ಮಾಲೀಕರು
Image Credit : Asianet News

ಬಹುತೇಕ ಭೂಮಿ ಸ್ವಾಧೀನ, ಕೋರ್ಟಿಗೆ ಹೋದ ಮಾಲೀಕರು

ಈ ಮಾರ್ಗ ಪೂರ್ಣಗೊಂಡರೆ ಸಿಮೆಂಟ್, ಲೈಮ್ ಸ್ಟೋನ್, ಸಕ್ಕರೆ ಸಾಗಾಣಿಕೆ ಸರಳವಾಗಲಿದ್ದು ವಾಣಿಜ್ಯ ಚಟುವಟಿಕೆಗೆ ಉತ್ತೇಜನ ಸಿಗಲಿದೆ. ರಾಜ್ಯದ ನಿರ್ಲಕ್ಷದಿಂದಾಗಿ ಈ ಮಾರ್ಗ ನಿರ್ಮಾಣದ ಕಾರ್ಯ ನಿರೀಕ್ಷಿತ ಪ್ರಮಾಣದಲ್ಲಿ ವೇಗ ಪಡೆದಿಲ್ಲ. ರೈಲ್ವೆ ಮಾರ್ಗ ನಿರ್ಮಿಸಲು ಒಟ್ಟು 2,460 ಎಕರೆ ಭೂಮಿ ಬೇಕಿದ್ದು, ಬಹುತೇಕ ಭೂಮಿ ಸ್ವಾಧೀನಗೊಂಡಿದೆ. ಆದರೆ, ಸ್ವಾಧೀನಪಡಿಸಿಕೊಂಡು ಭೂಮೀಯ ಮಾಲೀಕರು ನ್ಯಾಯಾಲಗಳ ಮೊರೆ ಹೋಗಿದ್ದಾರೆ.

Related Articles

Related image1
ತುಮಕೂರು-ಯಶವಂತಪುರ ಮೆಮು ರೈಲು ಸಮಯ ಬದಲಾವಣೆ ಸಾಧ್ಯತೆ: KSRಗೆ ವಿಸ್ತರಣೆ ಆಗುತ್ತಾ?
Related image2
ತಿರುವನಂತಪುರ-ಕಾಸರಗೋಡು ಸೆಮಿ ಹೈಸ್ಪೀಡ್‌ ರೈಲು ಯೋಜನೆ ರದ್ದು, 530 ಕಿಮೀ ಸಿಲ್ವರ್‌ಲೈನ್ ಪ್ರಾಜೆಕ್ಟ್ ಕಮರಿತು
36
ಭೂ ಸ್ವಾಧೀನಕ್ಕೆ ಎಷ್ಟು?
Image Credit : Asianet News

ಭೂ ಸ್ವಾಧೀನಕ್ಕೆ ಎಷ್ಟು?

ಬಾಗಲಕೋಟೆ ಜಿಲ್ಲೆಯ ಭೂ ಸ್ವಾಧೀನಕ್ಕೆ ₹365 ಕೋಟಿ, ಬೆಳಗಾವಿ ಜಿಲ್ಲೆಗೆ ₹160 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. 142 ಕಿ.ಮೀ ಮಾರ್ಗದ ಕಾಮಗಾರಿಗೆ 2010-11 ರಲ್ಲಿ ₹986 ಕೋಟಿ ವೆಚ್ಚಾಗುತ್ತದೆ ಎಂದು ಅಂದಾಜಿಸಲಾಗಿತ್ತು. ಈಗ ಅದರ ಮೊತ್ತ ₹3,128 ಕೋಟಿ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಇಲ್ಲಿಯವರೆಗೆ ಶೇ.39 ರಷ್ಟು ಭೌತಿಕ ಪ್ರಗತಿಯಾಗಿದ್ದರೆ, ಶೇ.30 ರಷ್ಟು ಆರ್ಥಿಕ ಪ್ರಗತಿಯಾಗಿದೆ. ಈಗಾಗಲೇ ಪೂರ್ಣಗೊಂಡಿರುವ ಮಾರ್ಗದಲ್ಲಿ ಗೂಡ್ಸ್ ರೈಲು ಸಂಚಾರ ಆರಂಭಿಸಿದೆ. ದಾದನಟ್ಟಿ-ಯಾದವಾಡ ನಡುವಿನ 15ಕಿ.ಮೀ ಮಾರ್ಗದಲ್ಲಿ ಬರುವ ಒಂಭತ್ತು ಸಣ್ಣ ಸೇತುವೆ, ಏಳು ಕೇಳಸೇತುವೆ, ಒಂದು ಬೃಹತ್ ಸೇತುವೆ ನಿರ್ಮಾಣ ಕಾಮಗಾರಿ ಆರಂಭಗೊಂಡಿದೆ. ಯಾದವಾಡ-ಜಮಖಂಡಿ ನಡುವೆ ಶೇ.96 ರಷ್ಟು ಜಮಖಂಡಿ-ಜಗದಾಳ ನಡುವೆ ಶೇ.93 ರಷ್ಟು, ಜಗದಾಳ-ಹಾರೂಗೇರಿ ನಡುವಿನ ಶೇ.91 ರಷ್ಟು ಹಾಗೂ ಹಾರೂಗೇರಿ-ಕುಡಚಿ ನಡುವೆ ಶೇ.60 ರಷ್ಟು ಭೂಸ್ವಾಧಿನ ಆಗಿದೆ. ಲೋಕಾಪುರದಿಂದ ಯಾದವಾಡವರೆಗಿನ 21 ಕಿ.ಮೀ ಮಾರ್ಗದ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ.

46
2027ರ ಹೊತ್ತಿಗೆ ಯೋಜನೆ ಪೂರ್ಣಗೊಳಿಸುವ ಭರವಸೆ ನೀಡಿದ್ದ ಸಚಿವ
Image Credit : our own

2027ರ ಹೊತ್ತಿಗೆ ಯೋಜನೆ ಪೂರ್ಣಗೊಳಿಸುವ ಭರವಸೆ ನೀಡಿದ್ದ ಸಚಿವ

ಕೆಲ ತಿಂಗಳುಗಳ ಹಿಂದೆ ರೈಲ್ವೆ ಮಾರ್ಗ ವೀಕ್ಷಣೆಗೆ ಬಂದಿದ್ದ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ 2027ರ ಹೊತ್ತಿಗೆ ಯೋಜನೆ ಪೂರ್ಣಗೊಳಿಸಲಾಗುವುದು ಎಂದಿದ್ದರು. ಆದರೆ, ಈಗ ನಡೆದಿರುವ ಕಾಮಗಾರಿ ವೇಗೆ ನೋಡಿದರೆ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಈಗಾಗಲೇ ಸರಕು ಸಾಗಣೆಗೆಯ ಗೂಡ್ಸ್ ರೈಲು ಸಂಚಾರ ಆರಂಭಗೊಂಡಿದೆ. ಆದರೆ, 2025 ಮಾರ್ಚನಿಂದ ಆರಂಭಗೊಳ್ಳಲಿದೆ ಎಂದು ಸಚಿವರೇ ಹೇಳಿದ್ದ ಪ್ಯಾಸೆಂಜರ್ ರೈಲು ಸಂಚಾರ ಆರಂಭಗೊಂಡಿಲ್ಲ, ಪ್ರಯಾಣಿಕರ ಅನುಕೂಲಕ್ಕಾಗಿ ಪ್ರಯಾಣಿಕರ ರೈಲು ಸಂಚಾರ ಕೂಡ ಆರಂಭಿಸಬೇಕು ಎಂಬ ಕೂಗಿಗೆ ಮನ್ನಣೆ ಸಿಕ್ಕಿಲ್ಲ. ನೆನೆಗುದಿಗೆ ಬಿದ್ದು ಶತಮಾನದ ಅಂಚಿಗೆ ಬಂದು ನಿಂತ ಕುಡಚಿ-ಬಾಗಲಕೋಟ ರೈಲು ಮಾರ್ಗಕ್ಕೆ ಇನ್ನೂ ಯಾವಾಗ ಸಮಯ ಕೂಡಿಬರುತ್ತದೆಯೋ ಗೊತ್ತಾಗುತ್ತಿಲ್ಲ.

56
ಸರ್ಕಾರಕ್ಕೆ ವಿವಿಧ ಸಂಘಟನೆಗಳ ಎಚ್ಚರಿಕೆ
Image Credit : Social Media

ಸರ್ಕಾರಕ್ಕೆ ವಿವಿಧ ಸಂಘಟನೆಗಳ ಎಚ್ಚರಿಕೆ

ರೈಲ್ವೆ ಇಲಾಖೆಗೆ ಪ್ರಥಮವಾಗಿ ಪ್ಯಾಸೆಂಜರ್‌ ರೈಲು ಪ್ರಾರಂಭಿಸಲು ಮನವಿ ಮಾಡಲಾಗಿದೆ. ರೈಲ್ವೆ ಇಲಾಖೆ ಮೊಂಡ ಸ್ವಭಾವ ಬಿಟ್ಟು ಜಿಲ್ಲೆಯ ಜನರ ಅಪೇಕ್ಷೆಯಂತೆ ಪ್ಯಾಸೆಂಜರ್‌ ರೈಲು ಪ್ರಾರಂಭಿಸಿ ನಂತರ ಸರಕು ಸಾಗಾಣಿಕೆ ವ್ಯವಹಾರ ನಡೆಸುವುದು ಒಳ್ಳೆಯದು. ಇಲ್ಲದಿದ್ದರೇ ಹೋರಾಟ ಸಮಿತಿಯು ಜಿಲ್ಲೆಯ ಪ್ರಗತಿಪರ ಸಂಘಟನೆಗಳ ಬೆಂಬಲದೊಂದಿಗೆ ಪಕ್ಷಾತಿತ ಹೋರಾಟ ಮಾಡಿ ರೈಲ್ವೆ ಇಲಾಖೆಗೆ ಬಿಸಿ ತಟ್ಟಿಸಬೇಕಾಗುತ್ತದೆ ಎಂದು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

66
ಹಿರಿಯ ನಾಗರಿಕರ ವೇದಿಕೆಯಿಂದ ಒತ್ತಾಯ
Image Credit : Getty

ಹಿರಿಯ ನಾಗರಿಕರ ವೇದಿಕೆಯಿಂದ ಒತ್ತಾಯ

ಬಾಗಲಕೋಟೆ- ಮೈಸೂರು (ಬಸವ ಎಕ್ಸ್‌ಪ್ರೆಸ್‌) ರೈಲನ್ನು ಲೋಕಾಪುರ ರೈಲು ನಿಲ್ದಾಣದಿಂದಲೇ ಆರಂಭಿಸಬೇಕು. ಇದರಿಂದ ಲೋಕಾಪುರ ಹಾಗೂ ಸುತ್ತಲಿನ ಗ್ರಾಮಗಳ ಜನರಿಗೆ ಅನುಕೂಲವಾಗುತ್ತದೆ. ಬೆಂಗಳೂರು ಆಸ್ಪತ್ರೆ, ಉದ್ಯೋಗ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ, ವಿವಿಧ ಪುಣ್ಯಕ್ಷೇತ್ರಗಳಿಗಾಗಿ ತೆರಳುವವರಿಗೆ ಅನುಕೂಲ, ಮೈಸೂರಿನಿಂದ ಬಾಗಲಕೋಟೆ ಬೆಳಗ್ಗೆ 11.15ಕ್ಕೆ ರೈಲು ಬರುತ್ತದೆ. ಮಧ್ಯಾಹ್ನ 2.20 ಮರಳಿ ಹೋಗುತ್ತದೆ ಆ ನಡುವೆ 3 ಗಂಟೆ ಸಮಯವಿರುವುದರಿಂದ ಲೋಕಾಪುರವರೆಗೆ ವಿಸ್ತರಿಸಬೇಕೆಂದು ಹಿರಿಯ ನಾಗರಿಕರ ವೇದಿಕೆ ಪದಾಧಿಕಾರಿಗಳು ರೈಲ್ವೆ ಅಧಿಕಾರಿಗಳಿಗೆ ಮನವಿ ಮಾಡಿ ಒತ್ತಾಯಿಸಿದ್ದಾರೆ.

ಬಾಗಲಕೋಟೆ-ಲೋಕಾಪುರ ನಡುವೆ ಡೆಮೊ ರೈಲು ಆರಂಭಿಸುವ ಘೋಷಣೆ ಮಾಡಲಾಗಿದೆ. ಆದರೆ, ಇನ್ನೂ ಆರಂಭವಾಗಿಲ್ಲ. ಬಾಗಲಕೋಟೆ-ಲೋಕಾಪುರ ಮಾತ್ರ ಆರಂಭಿಸಿದರೇ ಉಪಯೋಗವಿಲ್ಲ, ದೂರದ ಊರುಗಳಿಗೂ ಸಂಪರ್ಕ ಕಲ್ಪಿಸಬೇಕು. ರೈಲ್ವೆ ಮಾರ್ಗ ಶೀರ್ಘ ಪೂರ್ಣಗೊಳ್ಳಬೇಕು. ಇದು ಈಡೇರುವವರೆಗೆ ಹೋರಾಟ ನಿಲ್ಲದು.

-ಕುತುಬುದ್ಧೀನ್ ಖಾಜಿ, ಕರ್ನಾಟಕ ರಾಜ್ಯ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷರು

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಬಾಗಲಕೋಟೆ
ಭಾರತೀಯ ರೈಲ್ವೆ
ಕರ್ನಾಟಕ ಸುದ್ದಿ
ರೈಲು
ಭೂ ಒತ್ತುವರಿ
ವಿ. ಸೋಮಣ್ಣ
 

Latest Videos
Recommended Stories
Recommended image1
ಮುಂಬೈ-ಅಹಮದಾಬಾದ್‌ ಬುಲೆಟ್‌ ಟ್ರೇನ್‌ ಪ್ರಾಜೆಕ್ಟ್‌ನಲ್ಲಿ ₹5400 ಕೋಟಿ ಒಪ್ಪಂದ ಪಡೆದುಕೊಂಡ ಬೆಂಗಳೂರಿನ BEML
Recommended image2
KPSC ಹಗರಣವನ್ನು ಎಸ್ಐಟಿಯಿಂದ ಸಿಬಿಐಗೆ ಹಸ್ತಾಂತರ ಅಷ್ಟು ಸುಲಭವಲ್ಲವೆ? ಎನು ಹೇಳುತ್ತದೆ ಕಾನೂನು!
Recommended image3
ಚಾರ್ಮಾಡಿ ಘಾಟ್‌ ರಸ್ತೆ ಅಗಲೀಕರಣ ಮಾಡಲು 7500ಕ್ಕೂ ಅಧಿಕ ಮರಗಳ ಮಾರಣಹೋಮ
Related Stories
Recommended image1
ತುಮಕೂರು-ಯಶವಂತಪುರ ಮೆಮು ರೈಲು ಸಮಯ ಬದಲಾವಣೆ ಸಾಧ್ಯತೆ: KSRಗೆ ವಿಸ್ತರಣೆ ಆಗುತ್ತಾ?
Recommended image2
ತಿರುವನಂತಪುರ-ಕಾಸರಗೋಡು ಸೆಮಿ ಹೈಸ್ಪೀಡ್‌ ರೈಲು ಯೋಜನೆ ರದ್ದು, 530 ಕಿಮೀ ಸಿಲ್ವರ್‌ಲೈನ್ ಪ್ರಾಜೆಕ್ಟ್ ಕಮರಿತು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved