ರಾಜಸ್ಥಾನ ರಾಯಲ್ಸ್-ಮುಂಬೈ ಇಂಡಿಯನ್ಸ್ ಪಂದ್ಯದಲ್ಲಿ ಕಂಡುಬಂದ ದಿ ಬೆಸ್ಟ್ ಮೀಮ್ಸ್‌ಗಳಿವು..!
ಬೆಂಗಳೂರು: ರಾಜಸ್ಥಾನ ರಾಯಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಹೈಸ್ಕೋರಿಂಗ್ ಪಂದ್ಯದಲ್ಲಿ ಸ್ಟೀವ್ ಸ್ಮಿತ್ ನೇತೃತ್ವದ ರಾಜಸ್ಥಾನ ರಾಯಲ್ಸ್ ತಂಡ 8 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ. ಅಬುಧಾಬಿಯ ಶೇಕ್ ಜಾಯೆದ್ ಮೈದಾನದಲ್ಲಿ ನಡೆದ ಪಂದ್ಯ ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಒನ್ ಮ್ಯಾನ್ ಶೋಗೆ ಸಾಕ್ಷಿಯಾಯಿತು.
ಮೊದಲು ಬ್ಯಾಟಿಂಗ್ ಮಾಡಿದ್ದ ಮುಂಬೈ ಇಂಡಿಯನ್ಸ್ ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ಅಬ್ಬರದ ಬ್ಯಾಟಿಂಗ್ ನೆರವಿನಿಂದ 5 ವಿಕೆಟ್ ಕಳೆದುಕೊಂಡು 195 ರನ್ ಕಲೆ ಹಾಕಿತ್ತು. ಇದಕ್ಕುತ್ತರವಾಗಿ ಬೆನ್ ಸ್ಟೋಕ್ಸ್ ಕೆಚ್ಚೆದೆಯ ಅಜೇಯ ಶತಕ ಹಾಗೂ ಸಂಜು ಸ್ಯಾಮ್ಸನ್ ಆಕರ್ಷಕ ಅರ್ಧಶತಕದ ನೆರವಿನಿಂದ ರಾಜಸ್ಥಾನ ಸುಲಭ ಗೆಲುವನ್ನು ದಾಖಲಿಸಿದೆ. ಈ ಪಂದ್ಯ ವೀಕ್ಷಿಸಿದ ಬಳಿಕ ಟ್ರೆಂಡ್ ಆದ ಟಾಪ್ 10 ಮೀಮ್ಸ್‌ಗಳು ಇಲ್ಲಿವೆ ನೋಡಿ.
ಸಂಜು-ಸ್ಟೋಕ್ಸ್ ಬ್ಯಾಟಿಂಗ್ ನೋಡಿದ ಮುಂಬೈ ಇಂಡಿಯನ್ಸ್ ಅಭಿಮಾನಿಗಳ ಪ್ರತಿಕ್ರಿಯೆ ಹೀಗಿತ್ತು
ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ನೋಡಿದ ಬಳಿಕ ಬೆನ್ ಸ್ಟೋಕ್ಸ್ ತಾನೂ ಹೀಗೆ ಬ್ಯಾಟಿಂಗ್ ಮಾಡಬೇಕು ಎನಿಸಿರಬಹುದು
ಬೆನ್ ಸ್ಟೋಕ್ಸ್ ನೀಡಿದ್ದ ಕ್ಯಾಚ್ ಬಿಡುವುದರೊಂದಿಗೆ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ಪಂದ್ಯವನ್ನೇ ಕೈಚೆಲ್ಲಿದರು.
ಪಂದ್ಯ ಮುಕ್ತಾಯದ ಬಳಿಕ ಬೆನ್ ಸ್ಟೋಕ್ಸ್ ಮುಂಬೈ ಇಂಡಿಯನ್ಸ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಗೆ ಸಮಾಧಾನ ಮಾಡುವಂತಿದೆ ಈ ಪೋಸ್ಟರ್.
ಬೆನ್ ಸ್ಟೋಕ್ಸ್ ಬ್ಯಾಟಿಂಗ್ ನಿಧಾನಕ್ಕೆ ಫಾರ್ಮ್‌ಗೆ ಬಂದ ಸಂಜು ಸ್ಯಾಮ್ಸನ್
ಬಹಳ ದಿನಗಳ ಬಳಿಕ ಸ್ಟೋಕ್ಸ್ ಸಿಕ್ಸರ್ ಬಾರಿಸಿದ್ದನ್ನು ನೋಡಿ ರಾಹುಲ್ ತಮ್ಮ ತಂಡದ ಸ್ಫೋಟಕ ಬ್ಯಾಟ್ಸ್‌ಮನ್‌ಗೆ ಕಿವಿ ಹಿಂಡುವಂತಿದೆ.
ಬರೋಬ್ಬರಿ 122 ಎಸೆತಗಳ ಬಳಿಕ ಸ್ಟೋಕ್ಸ್ ಮೊದಲ ಸಿಕ್ಸರ್ ಬಾರಿಸಿದ್ದನ್ನು ಕಂಡು ಅಭಿಮಾನಿಗಳು ಕೊನೆಗೂ ಆ ದಿನಗಳು ಬಂದವು ಎಂದು ಕೈ ಮುಗಿಯುವಂತಿದೆ.
ಅಂಕಿತ್ ರಜಪೂತ್ ಮುಂಬೈ ಎದುರು 4 ಓವರ್‌ನಲ್ಲಿ 60 ರನ್ ನೀಡಿದಾಗ ಅಶೋಕ್ ದಿಂಡಾ ಕಾಲ್ಪನಿಕ ಪ್ರತಿಕ್ರಿಯೆ
ದಿಂಡಾ ಅಕಾಡಮಿಗೆ ಹೊಸ ಸೇರ್ಪಡೆ ಕಾರ್ತಿಕ್ ತ್ಯಾಗಿ ಹಾಗೂ ಅಂಕಿತ್ ರಜಪೂತ್..!
ಮುಂಬೈ ವಿರುದ್ಧ ರಾಜಸ್ಥಾನ ರಾಯಲ್ಸ್ ಗೆಲ್ಲುವುದರೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಧಿಕೃತವಾಗಿ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಪ್ಲೇ ಆಫ್ ರೇಸಿನಿಂದ ಹೊರಬಿದ್ದಂತೆ ಆಗಿದೆ. ಆಗ ಸಿಎಸ್‌ಕೆ ಅಭಿಮಾನಿಗಳ ಪ್ರತಿಕ್ರಿಯೆ
ಮುಂಬೈ ಇಂಡಿಯನ್ಸ್ ಪರ ಹಾರ್ದಿಕ್ ಪಾಂಡ್ಯ ಕೇವಲ 21 ಎಸೆತಗಳಲ್ಲಿ 2 ಬೌಂಡರಿ ಹಾಗೂ 7 ಸಿಕ್ಸರ್ ನೆರವಿನಿಂದ ಅಜೇಯ 60 ರನ್ ಬಾರಿಸಿದ್ದರು.
ಇದಕ್ಕುತ್ತರವಾಗಿ ರಾಜಸ್ಥಾನ ರಾಯಲ್ಸ್ ಆರಂಭಿಕ ಆಘಾತದ ಹೊರತಾಗಿಯೂ ಬೆನ್ ಸ್ಟೋಕ್ಸ್ ಹಾಗೂ ಸಂಜು ಸ್ಯಾಮ್ಸನ್ ಮೂರನೇ ವಿಕೆಟ್‌ಗೆ 150+ ರನ್ ಜತೆಯಾಟವಾಡಿ ತಂಡವನ್ನು ಸುಲಭವಾಗಿ ಗೆಲುವಿನ ದಡ ಸೇರಿಸಿದರು
ಬೆನ್ ಸ್ಟೋಕ್ಸ್ ಕೇವಲ 60 ಎಸೆತಗಳಲ್ಲಿ 107 ರನ್ ಬಾರಿಸಿದರೆ, ಸಂಜು ಸ್ಯಾಮ್ಸನ್ 31 ಎಸೆತಗಳಲ್ಲಿ 54 ರನ್ ಬಾರಿಸಿ ತಂಡಕ್ಕೆ ವಿರೋಚಿತ ಗೆಲುವು ತಂದುಕೊಟ್ಟರು