ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ತಂಡದಲ್ಲಿ 1 ಬದಲಾವಣೆ?
ಅಬುಧಾಬಿ(ಅ.28): 13ನೇ ಆವೃತ್ತಿಯ ಐಪಿಎಲ್ ಟೂರ್ನಿಯ 48ನೇ ಪಂದ್ಯದಲ್ಲಿಂದು ಬಲಿಷ್ಠ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗುತ್ತಿದ್ದು, ಈ ಹೈವೋಲ್ಟೇಜ್ ಪಂದ್ಯಕ್ಕೆ ಅಬುಧಾಬಿಯ ಶೇಕ್ ಜಾಯೆದ್ ಮೈದಾನ ಆತಿಥ್ಯ ವಹಿಸಲಿದೆ.
ಕಳೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ 8 ವಿಕೆಟ್‌ಗಳ ಆಘಾತಕಾರಿ ಸೋಲು ಕಂಡಿದ್ದ ವಿರಾಟ್ ಕೊಹ್ಲಿ ಪಡೆ, ಮುಂಬೈ ವಿರುದ್ಧದ ಗೆದ್ದು ಪ್ಲೇ ಆಫ್‌ಗೇರುವ ಲೆಕ್ಕಾಚಾರದಲ್ಲಿದೆ. ಮುಂಬೈ ವಿರುದ್ಧದ ಪಂದ್ಯಕ್ಕೆ ಆರ್‌ಸಿಬಿ ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆ. ಆರ್‌ಸಿಬಿ ಸಂಭಾವ್ಯ ತಂಡ ಹೀಗಿದೆ ನೋಡಿ.
1. ಆ್ಯರೋನ್ ಫಿಂಚ್: ಆರಂಭಿಕ ಬ್ಯಾಟ್ಸ್‌ಮನ್, ಫಾರ್ಮ್‌ಗೆ ಮರಳಬೇಕಾದ ಒತ್ತಡದಲ್ಲಿರುವ ಆಸೀಸ್ ಸ್ಫೋಟಕ ಬ್ಯಾಟ್ಸ್‌ಮನ್
2. ದೇವದತ್ ಪಡಿಕ್ಕಲ್: ಮತ್ತೋರ್ವ ಎಡಗೈ ಆರಂಭಿಕ ಬ್ಯಾಟ್ಸ್‌ಮನ್. ದೊಡ್ಡ ಇನಿಂಗ್ಸ್ ಆಡುವ ನಿರೀಕ್ಷೆ ಹುಟ್ಟಿಸಿರುವ ಕರ್ನಾಟಕದ ಪ್ರತಿಭೆ
3. ವಿರಾಟ್ ಕೊಹ್ಲಿ: ನಾಯಕ, ಆರ್‌ಸಿಬಿ ತಂಡದ ರನ್ ಮಷೀನ್, ಉತ್ತಮ ಫಾರ್ಮ್‌ನಲ್ಲಿರುವ ನಾಯಕ
4. ಎಬಿ ಡಿವಿಲಿಯರ್ಸ್: ಮಿಸ್ಟರ್ 360 ಡಿಗ್ರಿ ಖ್ಯಾತಿಯ ಆಟಗಾರ. ಯಾವ ಕ್ಷಣದಲ್ಲಿ ಬೇಕಾದರೂ ರನ್ ವೇಗಕ್ಕೆ ಚುರುಕ ಮುಟ್ಟಿಸಬಲ್ಲ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್
5. ಗುರುಕೀರತ್ ಮನ್: ಮಧ್ಯಮ ಕ್ರಮಾಂಕದಲ್ಲಿ ಆರ್‌ಸಿಬಿ ತಂಡಕ್ಕೆ ಆಸರೆಯಾಗಬಲ್ಲ ಬ್ಯಾಟ್ಸ್‌ಮನ್
6. ಕ್ರಿಸ್ ಮೋರಿಸ್: ತಂಡದ ಸ್ಟಾರ್ ಆಲ್ರೌಂಡರ್, ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ನೆರವಾಗಬಲ್ಲ ಆಟಗಾರ
7. ವಾಷಿಂಗ್ಟನ್ ಸುಂದರ್: ಪ್ರಮುಖ ಆಫ್ ಸ್ಪಿನ್ನರ್, ಪವರ್ ಪ್ಲೇನಲ್ಲೇ ರನ್ ವೇಗಕ್ಕೆ ಕಡಿವಾಣ ಹಾಕಬಲ್ಲ ಆಟಗಾರ
8. ಇಸುರು ಉದಾನ: ಡೆತ್ ಓವರ್ ಸ್ಪೆಷಲಿಸ್ಟ್ ಬೌಲರ್. ಮೊಯಿನ್ ಅಲಿ ಬದಲಿಗೆ ಉದಾನ ತಂಡ ಕೂಡಿಕೊಳ್ಳುವ ಸಾಧ್ಯತೆ
9.ನವದೀಪ್ ಸೈನಿ: ಆರ್‌ಸಿಬಿ ತಂಡದ ಮಾರಕ ವೇಗಿ, ವಿಕೆಟ್ ಕಬಳಿಸಬಲ್ಲ ಬೌಲರ್
10. ಮೊಹಮ್ಮದ್ ಸಿರಾಜ್: ಮತ್ತೋರ್ವ ಆರ್‌ಸಿಬಿ ವೇಗಿ, ಕೆಕೆಆರ್ ವಿರುದ್ಧ ಅದ್ಭುತ ಬೌಲಿಂಗ್ ಮಾಡಿ ಮಿಂಚಿರುವ ವೇಗಿ
11. ಯುಜುವೇಂದ್ರ ಚಹಲ್: ಆರ್‌ಸಿಬಿ ತಂಡದ ಸ್ಪಿನ್ ಅಸ್ತ್ರ. ಉಪಯುಕ್ತ ಸಂದರ್ಭದಲ್ಲಿ ತಂಡಕ್ಕೆ ವಿಕೆಟ್ ಕಬಳಿಸಬಲ್ಲ ಲೆಗ್ ಸ್ಪಿನ್ನರ್.